Subscribe to Gizbot

ವಿದೇಶಿ ಉಪಗ್ರಹಗಳ ಉಡಾವಣೆಯಲ್ಲಿ 50 ದಾಟಲಿರುವ ಭಾರತ

Written By:

ಭಾರತ ತನ್ನ ಕೌಶಲ್ಯ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಈಗ ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡುವ ಸಂಖ್ಯೆಯಲ್ಲಿ ಅರ್ಧಶತಕ ದಾಟಲಿದೆ. ಹೌದು ಭಾರತ ಮುಂದಿನ ವಾರ ಆರು ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಲು ಸಜ್ಜು ಗೊಂಡಿದ್ದು, ಈ ಉಪಗ್ರಹಗಳನ್ನು ಸೆಪ್ಟೆಂಬರ್‌ 28 ರಂದು ಉಡಾವಣೆ ಮಾಡುವ ಮುಖಾಂತರ, ವಿದೇಶಿ ಉಪಗ್ರಹಗಳ ಉಡಾವಣೆಯಲ್ಲಿ ಅರ್ಧಶತಕ ದಾಟಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಗುರುವಾರ ಹೇಳಿದೆ.

ಓದಿರಿ:ಎಲ್ಲಾ ಕಾಲಕ್ಕೂ ಅನ್ವಯಿಸುವ ಜೀನಿಯಸ್‌ ಸಂಶೋಧನೆಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ASTROSAT

ASTROSAT

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ರಾಕೆಟ್‌ ಪೋಲಾರ್‌ ಉಪಗ್ರಹ ಉಡಾವಣಾ ವಾಹನ (ಪಿಎಸ್ಎಲ್‌ವಿ)ವು ಭಾರತದ 1,513 ಕೆಜಿಯ ASTROSAT ಅನ್ನು ಸೋಮವಾರ ಬೆಳಿಗ್ಗೆ 10 ಗಂಟೆಗೆ ಉಡಾವಣೆ ಮಾಡಲಿದ್ದು, ಅಮೇರಿಕದ 4 ಉಪಗ್ರಹಗಳು, ಕೆನಡಾ ಮತ್ತು ಇಂಡೋನೇಶಿಯಾದ ತಲಾ ಒಂದು ಉಪಗ್ರಹಗಳನ್ನು ಉಡಾವಣೆ ಮಾಡಲಿದೆ.

ಪಿಎಸ್ಎಲ್‌ವಿ

ಪಿಎಸ್ಎಲ್‌ವಿ

ಪಿಎಸ್ಎಲ್‌ವಿ ಒಟ್ಟಾರೆ 1631 ಕೆಜಿ ಒತ್ತೊಯ್ಯೋಲಿದೆ.

7 ಉಪಗ್ರಹಗಳ ಉಡಾವಣೆ

7 ಉಪಗ್ರಹಗಳ ಉಡಾವಣೆ

ಪಿಎಸ್‌ಎಲ್‌ವಿ ಇದೇ ಮೊದಲ ಬಾರಿಗೆ 44.4 ಮೀಟರ್‌ ಎತ್ತರ ಹಾಗೂ 320.2 ಟನ್‌ ತೂಕವಿರುವ 7 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ ಎಂದು ಇಸ್ರೊ ಹೇಳಿದೆ.

22 ನಿಮಿಷಗಳಲ್ಲಿ ASTROSAT ಉಪಗ್ರಹ ಹೊರಬೀಳಲಿದೆ

22 ನಿಮಿಷಗಳಲ್ಲಿ ASTROSAT ಉಪಗ್ರಹ ಹೊರಬೀಳಲಿದೆ

ರಾಕೆಟ್‌ 22 ನಿಮಿಷಗಳ ನಂತರ ಭೂಮಿಯ ಮೈಲ್ಮೈನ 650 ಕಿಲೋ ಮೀಟರ್‌ ಎತ್ತರದಲ್ಲಿ ASTROSAT ಉಪಗ್ರಹವನ್ನು ಹೊರಹಾಕಲಿದೆ.

 ಆರು ಉಪಗ್ರಹಗಳು ಆರ್‌ಬಿಟ್‌ಗೆ

ಆರು ಉಪಗ್ರಹಗಳು ಆರ್‌ಬಿಟ್‌ಗೆ

ASTROSAT ಉಪಗ್ರಹವನ್ನು ಹೊರಹಾಕಿದ ನಂತರದಲ್ಲಿ ಉಳಿದ ಆರು ಉಪಗ್ರಹಗಳನ್ನು ಆರ್‌ಬಿಟ್‌ನಲ್ಲಿ ಬಿಟ್ಟು ಕೇವಲ 25 ನಿಮಿಷಗಳಲ್ಲಿ ಮಿಷನ್‌ ಕೊನೆಗೊಳ್ಳಲಿದೆ.

 ASTROSAT ಐದು ವರ್ಷ ಅವಧಿಯ ಉಪಗ್ರಹ

ASTROSAT ಐದು ವರ್ಷ ಅವಧಿಯ ಉಪಗ್ರಹ

ASTROSAT ಐದು ವರ್ಷಗಳ ಅವಧಿಯ ಉಪಗ್ರಹವಾಗಿದ್ದು, ಬ್ರಹ್ಮಾಂಡದ ವೀಕ್ಷಣೆ ಮಾಡಿ ಮಾಹಿತಿ ತಿಳಿಯಲು ಅನುಕೂಲವಾಗಲಿದೆ. ಹಾಗೂ ಇದು ಭಾರತದ ಮೊದಲ ಬಹುತರಂಗಾಂತರದ ಖಗೋಳ ವೀಕ್ಷಣೆಯ ಉಪಗ್ರಹವಾಗಿದೆ.

ವಿಜ್ಞಾನ ಉಪಗ್ರಹಗಳ ರೀತಿಯಲ್ಲಿ ಕಾರ್ಯನಿರ್ವಹಣೆ

ವಿಜ್ಞಾನ ಉಪಗ್ರಹಗಳ ರೀತಿಯಲ್ಲಿ ಕಾರ್ಯನಿರ್ವಹಣೆ

ASTROSAT ವಿದ್ಯುತ್ಕಾಂತೀಯ ರೋಹಿತ, ಆಪ್ಟಿಕಲ್‌, ನೇರಳಾತೀತ, ಕಡಿಮೆ ಮತ್ತು ಹೆಚ್ಚಿನ ಸಾಮರ್ಥ್ಯದ ಎಕ್ಸ್‌ ರೇ ಅಂಶಗಳನ್ನು ಇತರೆ ವಿಜ್ಞಾನ ಉಪಗ್ರಹಗಳು ವೀಕ್ಷಿಸ ಬಹುದಾದಂತಹ ಎಲ್ಲಾ ಅಂಶಗಳನ್ನು ಗಮನಿಸಲಿದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.

LAPAN-A2

LAPAN-A2

ಇಂಡೋನೇಷಿಯಾದ LAPAN-A2 ಒಂದು ಸೂಕ್ಷ್ಮ ಉಪಗ್ರಹವಾಗಿದ್ದು, 76 ಕೆಜಿ ತೂಕ ಹೊಂದಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಪ್‌ ಏರೋನಾಟಿಕ್ಸ್ ಅಂಡ್ ಸ್ಪೇಸ್‌ನ ಈ ಉಪಗ್ರಹವು ಕರಾವಳಿ ತೀರದ ಮಾಹಿತಿಯನ್ನು ಸ್ವಯಂಚಾಲಿತವಾಗಿ ಗುರುತಿಸಲಿದೆ ಮತ್ತು ಹವ್ಯಾಸಿ ಸಮುದಾಯ ರೇಡಿಯೋಗಳಿಗೂ ವೀಡಿಯೊ ಮತ್ತು ಛಾಯಾಚಿತ್ರಗಳನ್ನು ವೀಕ್ಷಣೆ ಮೂಲಕ ನೀಡಲಿದೆ.

NLS-14 (Ev9)

NLS-14 (Ev9)

ಇದು ಕೆನಡಾದ ಟೊರೊಂಟೊ ವಿಶ್ವವಿದ್ಯಾನಿಲಯದ ಅಡ್ವಾನ್ಸ್ಡ್ ಸ್ಟಡೀಸ್ ಇನ್ಸ್ಟಿಟ್ಯೂಟ್‌ನ ಉಪಗ್ರಹವಾಗಿದ್ದು ಕಡಲ ತೀರದ ವೀಕ್ಷಣೆ ನಿಯಂತ್ರಣ ಮಾಡಲಿದೆ.

ಇತರೆ ನಾಲ್ಕು ಉಪಗ್ರಹಗಳು

ಇತರೆ ನಾಲ್ಕು ಉಪಗ್ರಹಗಳು

ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಅಮೇರಿಕಾದ ಉಪಗ್ರಹಗಳು ಸ್ಪೈರ್ ಗ್ಲೋಬಲ್‌ ಇಂಕ್‌ನ ಉಪಗ್ರಹಗಳಾಗಿವೆ. ಇವುಗಳು ಪ್ರಾಥಮಿಕವಾಗಿ ಕಡಲ ತೀರದ ಟ್ರ್ಯಾಕಿಂಗ್‌ ಗಳ ಮೇಲೆ ವೀಕ್ಷಣೆ ಕೈಗೊಳ್ಳಲಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
CHENNAI: In an indication of its prowess in launching satellites for a fee, India will in all likelihood cross the half century milestone next week as six foreign satellites are scheduled for launch on September 28 at one go, the Indian space agency said on Thursday.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot