ಆಧಾರ್‌ ಕಾರ್ಡ್‌ ಹೊಂದಿರುವ ಪ್ರತಿಯೊಬ್ಬರೂ ಈ ಕೆಲಸವನ್ನು ಕೂಡಲೇ ಮಾಡಿರಿ!

|

ನೀವು ಆಧಾರ್‌ ಕಾರ್ಡ್‌ ಪಡೆದುಕೊಂಡು ಹತ್ತು ವರ್ಷ ಆಗಿದೆಯಾ ಹಾಗಾದ್ರೆ UIDAI ನೀಡಿರುವ ಈ ಸೂಚನೆಯನ್ನು ನೀವು ಪಾಲಿಸಲೇಬೇಕು. ಹತ್ತು ವರ್ಷಗಳ ನಂತರ ಆಧಾರ್‌ ಅನ್ನು ಅಪ್ಡೇಟ್‌ ಮಾಡುವುದು ಅತಿ ಅಗತ್ಯವಾಗಿದ್ದು, ನಿಮ್ಮ ಮಾಹಿತಿಯನ್ನು ಅಪ್ಡೇಟ್‌ ಮಾಡಿಸಲೇಬೇಕಿದೆ. ಇದಕ್ಕಾಗಿ UIDAI ದೇಶವಾಸಿಗಳಿಗೆ ಆಧಾರ್‌ ಅಪ್ಡೇಟ್‌ ಮಾಡುವಂತೆ ಸೂಚನೆ ನೀಡಿದೆ. ಸದ್ಯ ಪ್ರತಿಯೊಬ್ಬ ಭಾರತೀಯ ನಾಗರಿಕನು ಹೊಂದಿರಬೇಕಾದ ಅಗತ್ಯ ದಾಖಲೆಗಳಲ್ಲಿ ಆಧಾರ್‌ ಕಾರ್ಡ್‌ ಕೂಡ ಒಂದಾಗಿದೆ.

ಆಧಾರ್‌

ಹೌದು, ಆಧಾರ್‌ ಕಾರ್ಡ್‌ ಇಂದು ಸರ್ಕಾರದ ಪ್ರಯೋಜನಗಳನ್ನು ಪಡೆಯುವುದಕ್ಕೆ ಅಗತ್ಯ ದಾಖಲೆಯಾಗಿ ಗುರುತಿಸಿಕೊಂಡಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ಕೂಡ ಆಧಾರ್‌ ಕಾರ್ಡ್‌ ಹೊಂದುವುದು ಅತ್ಯವಶ್ಯಕವಾಗಿದೆ. ಆಧಾರ್‌ ಕಾರ್ಡ್‌ ಹೊಂದಿರುವ ದೇಶವಾಸಿಗಳಿಗೆ UIDAI ಅಪ್ಡೇಟ್‌ ಮಾಡುವಂತೆ ಸೂಚನೆ ನೀಡಿದ್ದು, ನೀವು ಕೂಡ ಅಪ್ಡೇಟ್‌ ಮಾಡಿಕೊಳ್ಳುವುದು ಸೂಕ್ತವಾಗಿದೆ. ಹಾಗಾದ್ರೆ ಆಧಾರ್‌ ಕಾರ್ಡ್‌ ಅನ್ನು ಯಾರೆಲ್ಲಾ ಅಪ್ಡೇಟ್‌ ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತೀಯ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್‌ ಕಾರ್ಡ್‌ ಪಡೆದುಕೊಂಡು 10 ವರ್ಷ ಆಗಿರುವವರು ಮತ್ತೊಮ್ಮೆ ಆಧಾರ್‌ ಅಪ್ಡೇಟ್‌ ಮಾಡುವಂತೆ ಸೂಚಕಿಸಿದೆ. ಯಾಕೆಂದರೆ ಇತ್ತೀಚಿಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಕಳೆದ 10 ವರ್ಷಗಳಲ್ಲಿ ತಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್‌ ಮಾಡಬೇಕು, ಭಾರತೀಯ ನಿವಾಸಿಗಳು ಸರ್ಕಾರಿ ಡೇಟಾಬೇಸ್‌ನಲ್ಲಿ ಮಾಹಿತಿಯ ನಿಖರತೆಯನ್ನು ಮುಂದುವರೆಸುವುದಕ್ಕೆ ಇದು ಅತ್ಯಗತ್ಯ ಎಂದು ಹೇಳಿದೆ.

ಆಧಾರ್‌

ಇನ್ನು ನಿಮ್ಮ ಆಧಾರ್‌ ಕಾರ್ಡ್‌ ಅನ್ನು ಅಪ್ಡೇಟ್‌ ಮಾಡುವುದಕ್ಕಾಗಿ ನೀವು ಮೈ ಆಧಾರ್‌ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಬೆಂಬಲಿತ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕಾಗುತ್ತದೆ. ಇಲ್ಲವೆ ನಿಮ್ಮ ಹತ್ತಿರದ ಆಧಾರ್‌ ಸೇವಾ ಸೆಂಟರ್‌ಗೆ ಬೇಟಿ ನೀಡುವ ಮೂಲಕ ತಮ್ಮ ಆಧಾರ್ ವಿವರಗಳನ್ನು ಅಪ್ಡೇಟ್‌ ಮಾಡಬಹುದಾಗಿದೆ. ಸರ್ಕಾರಿ ಮತ್ತು ಸರ್ಕಾರೇತರ ಸೇವೆಗಳು ಮತ್ತು ಪ್ರಯೋಜನಗಳನ್ನು ಪಡೆಯಲು ಇದು ನಿಮಗೆ ಅತಿ ಅಗತ್ಯವಾಗಿದೆ. ಇನ್ನು ನಿಮ್ಮ ಆಧಾರ್‌ ವಿವರಗಳನ್ನು ಆನ್‌ಲೈನ್‌ ಮೂಲಕ ಅಪ್ಡೇಟ್‌ ಮಾಡಿದರೆ 25ರೂ.ಶುಲ್ಕ ಪಾವತಿಸಬೇಕಾಗುತ್ತದೆ. ಹಾಗೆಯೇ ಆಫ್‌ಲೈನ್ ಮೂಲಕ ಮಾಹಿತಿ ಅಪ್ಡೇಟ್‌ ಮಾಡಿದರೆ 50ರೂ. ಶುಲ್ಕ ಪಾವತಿಸಬೇಕಾಗುತ್ತದೆ ಎಂದು UIDAI ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.

ಆಧಾರ್‌

ಆಧಾರ್‌ನಲ್ಲಿ ಯಾವೆಲ್ಲಾ ವಿವರಗಳನ್ನು ಅಪ್ಡೇಟ್‌ ಮಾಡಬೇಕು?
UIDAI ಹೇಳಿರುವಂತೆ ನಿಮ್ಮ ಆಧಾರ್‌ ವಿವರಗಳನ್ನು ಆನ್‌ಲೈನ್‌ನಲ್ಲಿ ಮೈ ಆಧಾರ್‌ ಪೋರ್ಟಲ್‌ ಮೂಲಕ ಅಪ್ಡೇಟ್‌ ಮಾಡಬಹುದು. ಇದರಲ್ಲಿ ನೀವು ಜನಸಂಖ್ಯಾ ವಿವರಗಳು ಅಂದರೆ ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ, ಇಮೇಲ್ ವಿವರಗಳನ್ನು ಅಪ್ಡೇಟ್‌ ಮಾಡಬೇಕು. ಅಲ್ಲದೆ ನಿಮ್ಮ ಬಯೋಮೆಟ್ರಿಕ್ಸ್ ಅಂದರೆ ಬೆರಳಚ್ಚುಗಳು, ಐರಿಸ್ ಮತ್ತು ಫೋಟೋಗ್ರಾಫ್ ವಿವರಗಳನ್ನು ಕೂಡ ನೀವು ಅಪ್ಡೇಟ್‌ ಮಾಡಬಯಸಿದರೆ ಅದನ್ನು ನಿಮ್ಮ ಹತ್ತಿರದ ಆಧಾರ್‌ ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಪ್ಡೇಟ್‌ ಮಾಡಬೇಕಾಗುತ್ತದೆ.

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್‌ ಮಾಡುವುದು ಹೇಗೆ?

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್‌ ಮಾಡುವುದು ಹೇಗೆ?

* ಮೊದಲಿಗೆ UIDAI ನ ಅಧಿಕೃತ ವೆಬ್‌ಸೈಟ್ uidai.gov.in ಗೆ ಭೇಟಿ ನೀಡಿ
* ಇದರಲ್ಲಿ 'ಮೈ ಆಧಾರ್' ಟ್ಯಾಬ್ ಟ್ಯಾಪ್‌ ಮಾಡಿ ನಂತರ 'ಅಪ್‌ಡೇಟ್ ಡೆಮೊಗ್ರಾಫಿಕ್ಸ್ ಡೇಟಾ ಮತ್ತು ಚೆಕ್ ಸ್ಟೇಟಸ್' ಮೇಲೆ ಕ್ಲಿಕ್ ಮಾಡಿ.
* ಇದೀಗ myaadhaar.uidai.gov.in/ ಗೆ ಮರುನಿರ್ದೇಶಿಸಲಾಗುತ್ತದೆ. ನಿಮ್ಮ ಗುರುತಿನ ದಾಖಲೆಗಳನ್ನು ಬಳಸಿಕೊಂಡು ವೆಬ್‌ಸೈಟ್‌ಗೆ ಲಾಗಿನ್ ಮಾಡಿ.
* ನಂತರ ನಿಮ್ಮ ಆಧಾರ್ ಸಂಖ್ಯೆ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
* ಈಗ 'ಸೆಂಡ್ OTP' ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ಬಾರಿಯ ಪಾಸ್‌ವರ್ಡ್ (OTP) ಕಳುಹಿಸಲಾಗುತ್ತದೆ.
* ಒಟಿಪಿ ಬಳಸಿಕೊಂಡು ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು. ನಂತರ, 'ಅಪ್ಡೇಟ್‌ ಆಧಾರ್ ಆನ್‌ಲೈನ್‌' ಕ್ಲಿಕ್ ಮಾಡಿ.

ನಂತರ

* ನಂತರ ಬರುವ ಸೂಚನೆಗಳನ್ನು ಅನುಸರಿಸುವ ಮೂಲಕ 'ಪ್ರೊಸಿಡ್‌ ಟು ಆಧಾರ್ ಅಪ್ಡೇಟ್‌' ಕ್ಲಿಕ್ ಮಾಡಿ.
* ಇದಿಗ ನೀವು ಅಪ್ಡೇಟ್‌ ಮಾಡಲು ಬಯಸುವ ಡೇಟಾವನ್ನು ಕ್ಲಿಕ್ ಮಾಡಿ.
* ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಅಪ್ಡೇಟ್‌ ಮಾಡಲು ಹೊಸ ವಿಳಾಸದ ಗುರುತಿನ ಪ್ರಮಾಣ ಪತ್ರಗಳನ್ನು ಅಪ್‌ಲೋಡ್‌ ಮಾಡಬೇಕಾಗುತ್ತದೆ.
* ಇದೀಗ 'Proceed to update Aadhaar' ಅನ್ನು ಕ್ಲಿಕ್ ಮಾಡಿ.
* ರಿಕ್ವೆಸ್ಟ್‌ ಸಲ್ಲಿಸಿ.
* ಇದಾದ ನಂತರ ಶುಲ್ಕ ಪಾವತಿ ಮಾಡಲು ಸೂಚಿಸಲಾಗುತ್ತದೆ. ಶುಲ್ಕ ಪಾವತಿಸಿ ರಶೀದಿಯನ್ನು ತೆಗೆದುಕೊಳ್ಳಬಹುದಾಗಿದೆ.

Best Mobiles in India

English summary
UIDAI: Aadhaar card users will need to update their card

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X