ಗೂಗಲ್ ಎಡವಟ್ಟು, ಆಧಾರ್‌ಗೆ ಪೆಟ್ಟು: ಈಗಲೇ ಈ ನಂಬರ್ ಡಿಲೀಟ್ ಮಾಡಿ..!

|

ಕಳೆದ ಎರಡು ಮೂರು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (UIDAI) ಹೆಲ್ಪ್‌ಲೈನ್ 1800-300-1947 ಸಂಖ್ಯೆಯ ಕುರಿತು ಹಲವು ಮಾಹಿತಿಗಳು ವರದಿಗಳು ಬರುತ್ತಿದೆ. ಈ ಕುರಿತು ಮಾಹಿತಿಯನ್ನು ನೀಡಿರುವ ವಿಶಿಷ್ಟ ಗುರುತು ಪ್ರಾಧಿಕಾರ ಈ ಪ್ರಮಾದ ನನ್ನಿಂದ ನಡೆದಿರುವುದಲ್ಲ ಎಂದಿದ್ದಾರೆ.

ಗೂಗಲ್ ಎಡವಟ್ಟು, ಆಧಾರ್‌ಗೆ ಪೆಟ್ಟು: ಈಗಲೇ ಈ ನಂಬರ್ ಡಿಲೀಟ್ ಮಾಡಿ..!

ಬಳಕೆದಾರರಿಗೆ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಈಗಾಗಲೇ ಬಂದು ಸೇರಿಕೊಂಡಿರುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (UIDAI) ಹೆಲ್ಪ್‌ಲೈನ್ 1800-300-1947 ಸಂಖ್ಯೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಕನ್ಪ್ಯೂಸ್ ಅನ್ನು ಮಾಡುತ್ತಿದೆ. ಇದು ನಮ್ಮ ಸ್ಮಾರ್ಟ್‌ಫೋನಿನಲ್ಲಿ ಹೇಗೆ ಬಂತು, ಟೆಲಿಕಾಂ ಕಂಪನಿ ಇಲ್ಲವೇ ಸ್ಮಾರ್ಟ್‌ಫೋನ್ ನಿರ್ಮಾಪಕರು ಸೇರಿಸಿದ್ದಾರೆಯೇ ಎಂದು ಯೋಚನೆ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಈಗ ಉತ್ತರವು ದೊರೆತಿದೆ.

ಇದು ಗೂಗಲ್ ಕಿತಾಪತಿ:

ಇದು ಗೂಗಲ್ ಕಿತಾಪತಿ:

ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಹೆಲ್ಪ್‌ಲೈನ್ 1800-300-1947 ಸಂಖ್ಯೆಯನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಸೇರಿಸಿದ್ದು ತಾನೇ ಎಂದು ಗೂಗಲ್ ತಿಳಿಸಿದೆ. ನಿನ್ನೇ ಆಧಾರ್ ಈ ಕುರಿತು ಮಾಹಿತಿಯನ್ನು ನೀಡಿ, ತಾನು ಯಾರಿಗೂ ಹೆಲ್ಪ್‌ಲೈನ್ ಸಂಖ್ಯೆಯನ್ನು ಆಡ್ ಮಾಡಿ ಎಂದು ಕೇಳಿಲ್ಲ. ಯಾರು ಮಾಡಿದ್ದಾರೆ ಎಂಬುದು ತನಗೆ ತಿಳಿದಿಲ್ಲ ಎಂದಿತ್ತು. ಆದರೆ ಈಗ ಗೂಗಲ್ ತನ್ನ ಕಾರ್ಯದ ಬಗ್ಗೆ ಬಾಯಿ ಬಿಟ್ಟಿದೆ.

2014 ರಿಂದಲೂ ಇದೆ:

2014 ರಿಂದಲೂ ಇದೆ:

ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಆಧಾರ್ ಹೆಲ್ಪ್‌ಲೈನ್ ಸಂಖ್ಯೆಯನ್ನು 2014 ರಿಂದಲೂ ಸೇರಿಸುತ್ತ ಬಂದಿರುವ ಬಗ್ಗೆ ಗೂಗಲ್ ಬಾಯಿ ಬಿಟ್ಟಿದೆ. ಇದು ನೆನ್ನೆ ಮೊನ್ನೆಯಿಂದ ಸೇರಿಸಿರುವುದಲ್ಲ, ಆದರೆ ಇದು ಈಗ ಮಾತ್ರವೇ ಬಳಕೆದಾರರ ಗಮನಕ್ಕೆ ಬಂದಿದೆ ಎನ್ನಲಾಗಿದೆ.

ಹಿಂದೆಯೇ ಮಾಹಿತಿ:

ಹಿಂದೆಯೇ ಮಾಹಿತಿ:

ಈ ಹಿಂದೆ 2014ರಲ್ಲೇ ಆಧಾರ್ ಹೆಲ್ಪ್‌ಲೈನ್ ಸಂಖ್ಯೆಯನ್ನು ಸೇರಿಸುವಂತೆ ಆಂಡ್ರಾಯ್ಡ್ ತಯಾರಕರಿಗೆ ಮಾಹಿತಿಯನ್ನು ನೀಡಿದ್ದಾಗಿ ತಿಳಿಸಿರುವ ಗೂಗಲ್, ಇದು ತಪ್ಪಿನಿಂದಾಗಿ ಸೇರಿಕೊಂಡಿದೆ. ಬಳಕೆದಾರರಿಗೆ ಅಗತ್ಯಕ್ಕೆ ಬೇಕಾಗಿರುವ ಹಲವು ಮಾದರಿಯ ಹೆಲ್ಪ್‌ಲೈನ್ ಸಂಖ್ಯೆಯನ್ನು ಸೇರಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಇದರಿಂದಾಗಿ ತೊಂದರೆ ಕ್ರಿಯೆಟ್ ಆಗಿದೆ.

ಕ್ಷಮೆ ಕೋರಿದ ಗೂಗಲ್:

ಕ್ಷಮೆ ಕೋರಿದ ಗೂಗಲ್:

ತನ್ನಿಂದ ತೊಂದರೆಯಾಗಿದೆ ಇದರಿಂದಾಗಿ ಬಳಕೆದಾರರು ಗೂಗಲ್ ಕ್ರಮವನ್ನು ಕ್ಷಮಿಸ ಬೇಕು ಎಂದು ಮನವಿ ಮಾಡಿದೆ ಎನ್ನಲಾಗಿದೆ. ನಮ್ಮಿಂದ ತಪ್ಪು ಆಗಿದೆ. ಇದಕ್ಕಾಗಿ ಕ್ಷಮೆ ಕೋರುತ್ತೇವೆ ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ.

ಯಾವುದೇ ಮಾಹಿತಿ ಲೀಕ್ ಆಗಿಲ್ಲ:

ಯಾವುದೇ ಮಾಹಿತಿ ಲೀಕ್ ಆಗಿಲ್ಲ:

ಈ ನಂಬರ್ ಸೇವ್ ಮಾಡಿರುವ ಕಾರಣದಿಂದಾಗಿ ಯಾವುದೇ ತೊಂದರೆಯಾಗಿಲ್ಲ, ಅಲ್ಲದೇ ಆಂಡ್ರಾಯ್ಡ್ ಬಳಕೆದಾರರ ಯಾವುದೇ ಮಾಹಿತಿಯೂ ಲೀಕ್ ಆಗಿಲ್ಲ ಇದಕ್ಕಾಗಿ ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಗೂಗಲ್ ತಿಳಿಸಿದೆ.

Best Mobiles in India

English summary
UIDAI row: Google apologises. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X