ಗೂಗಲ್‌ ಮ್ಯಾಪ್ಸ್‌ನಲ್ಲಿ ಪಬ್ಲಿಕ್‌ ಪ್ರೊಫೈಲ್‌ನ್ನು ಸುಲಭವಾಗಿ ಎಡಿಟ್‌ ಮಾಡಿ..!

By Gizbot Bureau
|

ಗೂಗಲ್‌ ಮ್ಯಾಪ್ಸ್‌ ಪುಟದಲ್ಲಿ ಇತರೆ ಬಳಕೆದಾರರು ಏನನ್ನು ನೋಡಬಹುದು ಎಂಬುದರ ಮೇಲೆ ಬಳಕೆದಾರರಿಗೆ ಉತ್ತಮ ನಿಯಂತ್ರಣ ನೀಡುವ ಉದ್ದೇಶದಿಂದ ಪ್ರೊಫೈಲ್ ಚಿತ್ರ ಮತ್ತು ಬಯೋ ಮೇಲೆ ಹಿಡಿತ ಸಾಧಿಸಲು ಅನುವು ಮಾಡಿಕೊಡುವ ಅಪ್‌ಡೇಟ್‌ ಹೊರತಂದಿದೆ.

ಗೂಗಲ್‌ ಮ್ಯಾಪ್ಸ್‌ನಲ್ಲಿ ಪಬ್ಲಿಕ್‌ ಪ್ರೊಫೈಲ್‌ನ್ನು ಸುಲಭವಾಗಿ ಎಡಿಟ್‌ ಮಾಡಿ..!

ಸರ್ಚ್ ಎಂಜಿನ್ ದೈತ್ಯ ಗೂಗಲ್‌ ಬಳಕೆದಾರರಿಗೆ ತಮ್ಮ ಸಾರ್ವಜನಿಕ ಪ್ರೊಫೈಲ್‌ನ್ನು ಅಪ್ಲಿಕೇಶನ್‌ನಿಂದ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಹೊಸ ಮೈ ಪ್ರೊಫೈಲ್ ಟ್ಯಾಬ್‌ನೊಂದಿಗೆ ಮ್ಯಾಪ್‌ನಲ್ಲಿ ನಿಮ್ಮ ಕೊಡುಗೆಗಳನ್ನು ಇತರರು ಹೇಗೆ ನೋಡುತ್ತಾರೆ ಎಂಬುದರ ಕುರಿತು ನಿಮಗೆ ಹೆಚ್ಚಿನ ನಿಯಂತ್ರಣವಿದೆ ಎಂದು ಆಂಡ್ರಾಯ್ಡ್ ಪೊಲೀಸ್‌ ವರದಿ ಮಾಡಿದೆ.

ಇಲ್ಲಿಯವರೆಗೂ ಬಳಕೆದಾರರು, ತಮ್ಮ ಸ್ಥಳೀಯ ಮಾರ್ಗದರ್ಶಿ ಮಾಹಿತಿಯನ್ನು ಪಡೆದುಕೊಳ್ಳಲು ಅಪ್ಲಿಕೇಶನ್‌ನ ಸೈಡ್ ಬಾರ್‌ನಲ್ಲಿ ತಮ್ಮ "ನಿಮ್ಮ ಕೊಡುಗೆಗಳು" ಆಯ್ಕೆಯನ್ನು ಆರಿಸಿಕೊಳ್ಳಬಹುದು. ಅವರು ಭಾಗವಹಿಸಿದ್ದಾರೆಂದು ಭಾವಿಸಿ ನಂತರ ಟ್ರಿಪಲ್-ಡಾಟ್ ಮೆನುವಿನಿಂದ "ಸಾರ್ವಜನಿಕ ಪ್ರೊಫೈಲ್ ವೀಕ್ಷಿಸಿ" ಆಯ್ಕೆಯನ್ನು ಆಯ್ದುಕೊಳ್ಳಬೇಕು. ಇದು ಅವರ ಹೆಸರು, ಪ್ರೊಫೈಲ್ ಚಿತ್ರ ಮತ್ತು ವಿಮರ್ಶೆಗಳು ಹಾಗೂ ರೇಟಿಂಗ್‌ಗಳನ್ನು ಮಾತ್ರ ಪ್ರದರ್ಶಿಸುತ್ತದೆ.

ಹೊಸ ಪ್ರೊಫೈಲ್ ಪುಟವು ಗೂಗಲ್‌ ಮ್ಯಾಪ್ಸ್‌ ಬಳಕೆದಾರರಿಗೆ ಸರ್ವರ್-ಸೈಡ್ ಅನ್ನು ಹೊರತರುತ್ತಿದೆ, ಆದರೆ, ಇದು ಇತ್ತೀಚಿನ ಆವೃತ್ತಿಯಲ್ಲಿ (ಎಪಿಕೆ ಮಿರರ್‌ನಲ್ಲಿ v10.29.1) ಯಾವುದೇ ಬದಲಾವಣೆ ತರುವುದಿಲ್ಲ. ಹಲವಾರು ತಿಂಗಳುಗಳಿಂದ ಬೀಟಾದಲ್ಲಿರುವ ಕೊಡುಗೆಗಳ ಟ್ಯಾಬ್‌ನಲ್ಲಿನ ಹಳೆಯ ಇಂಟರ್‌ಫೇಸ್‌ನ್ನು ಸಂಪೂರ್ಣವಾಗಿ ತೆಗೆದುಹಾಕುವ ನಿರೀಕ್ಷೆಯು ಇದೆ.

Best Mobiles in India

Read more about:
English summary
Users Can Now Edit Public Profiles On Google Maps

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X