ಏರ್‌ಟೆಲ್‌ ನಂತರ ವಿ ಟೆಲಿಕಾಂನಿಂದ ಬೆಲೆ ಏರಿಕೆಯ ಶಾಕ್‌!

|

ವಿ ಟೆಲಿಕಾಂ ದೇಶದ ಟೆಲಿಕಾಂ ವಲಯದಲ್ಲಿ ಜಿಯೋ ಮತ್ತು ಏರ್‌ಟೆಲ್‌ ನಡುವೆ ಸಾಕಷ್ಟು ಪೈಪೋಟಿ ನೀಡುತ್ತಾ ಬಂದಿದೆ. ತನ್ನ ಗ್ರಾಹಕರಿಗಾಗಿ ವಿಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿ ಹಲವು ಪ್ರಿಪೇಯ್ಡ್‌ ಮತ್ತು ಪೋಸ್ಟ್‌ಪೇಯ್ಡ್‌ ಪ್ಲಾನ್ ಆಯ್ಕೆಗಳನ್ನು ಹೊಂದಿದೆ. ಸದ್ಯ ಇದೀಗ ವಿ ಟೆಲಿಕಾಂ ತನ್ನ ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆಯಲ್ಲಿ ದಿಢೀರ್‌ ಹೆಚ್ಚಳ ಮಾಡಿದೆ. ಈ ಮೂಲಕ ಏರ್‌ಟೆಲ್‌ ಬೆಲೆ ಏರಿಕೆ ಮಾಡಿದ ಒಂದು ನಂತರ ತನ್ನ ಗ್ರಾಹಕರಿಗೆ ಬಿಗ್‌ ಶಾಕ್‌ ನೀಡಿದೆ.

 ವಿ ಟೆಲಿಕಾಂ

ಹೌದು, ವಿ ಟೆಲಿಕಾಂ ತನ್ನ ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆಯಲ್ಲಿ ಏರಿಕೆ ಮಾಡಿದೆ. ಇದರಿಂದ ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯವನ್ನು (ARPU) ಸುಧಾರಿಸಲು ಸಹಾಯ ಮಾಡುತ್ತದೆ. ಇದರಿಂದ ವಿ ಟೆಲಿಕಾಂ ಎದುರಿಸುತ್ತಿರುವ ಆರ್ಥಿಕ ಒತ್ತಡವನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಟೆಲಿಕಾಂ ಆಪರೇಟರ್ ಹೇಳಿದ್ದಾರೆ. ಸದ್ಯ ಹೊಸ ಮೊಬೈಲ್ ದರಗಳು ಇದೇ ನವೆಂಬರ್ 25 ರಿಂದ ಜಾರಿಗೆ ಬರಲಿದೆ ಎನ್ನಲಾಗಿದೆ. ಹಾಗಾದ್ರೆ ಬೆಲೆ ಹೆಚ್ಚಳದ ನಂತರ ವಿ ಟೆಲಿಕಾಂನ ಯಾವೆಲ್ಲಾ ಪ್ಲಾನ್‌ಗಳಲ್ಲಿ ಬದಲಾವಣೆಯಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರಿಪೇಯ್ಡ್‌

ಏರ್‌ಟೆಲ್‌ ತನ್ನ ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆ ಹೆಚ್ಚಳ ಮಾಡಿದ ಒಂದು ದಿನದ ನಂತರ ವಿ ಟೆಲಿಕಾಂ ಕೂಡ ತನ್ನ ಪ್ರಿಪೇಯ್ಡ್ ಪ್ಲಾನ್‌ಗಳು ಬೆಲೆ ಹೆಚ್ಚಳ ಮಾಡಿದೆ. ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆ ಮಾತ್ರ ಹೆಚ್ಚಳವಾಗಿದ್ದು, ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸದ್ಯ ವಿ ಟೆಲಿಕಾಂ ಪ್ರಿಪೇಯ್ಡ್ ಯೋಜನೆಗಳ ರಿಜಿಗ್ ಪ್ರಕಾರ, 2,399 ರೂಗಳ ಅತ್ಯಧಿಕ ಮೌಲ್ಯದ ರೀಚಾರ್ಜ್ ಯೋಜನೆಯು ಈಗ ನಿಮಗೆ 2,899 ರೂ. ಬೆಲೆಗೆ ದೊರೆಯಲಿದೆ. ಇದು ದಿನಕ್ಕೆ 1.5GB ಮತ್ತು ದಿನಕ್ಕೆ 100 SMS ಜೊತೆಗೆ ಅನಿಯಮಿತ ಸ್ಥಳೀಯ, STD ಮತ್ತು ರೋಮಿಂಗ್ ಕರೆಗಳನ್ನು ನೀಡುತ್ತದೆ. ನೀವು ಈ ಯೋಜನೆಯನ್ನು ನವೆಂಬರ್ 25ಕ್ಕೂ ಮೊದಲು ರೀಚಾರ್ಜ್‌ ಮಾಡಿದರೆ 500ರೂ.ಗಳನ್ನು ಉಳಿತಾಯ ಮಾಡಬಹುದಾಗಿದೆ.

ಡೇಟಾ ಟಾಪ್‌ ಅಪ್‌ ಪ್ಲಾನ್‌ಗಳ ಬೆಲೆ ಹೆಚ್ಚಳ

ಡೇಟಾ ಟಾಪ್‌ ಅಪ್‌ ಪ್ಲಾನ್‌ಗಳ ಬೆಲೆ ಹೆಚ್ಚಳ

ಇನ್ನು ವಿ ಟೆಲಿಕಾಂ ಡೇಟಾ ಟಾಪ್-ಅಪ್ ಪ್ಲಾನ್‌ಗಳ ಬೆಲೆ ಇದೀಗ 67ರೂ.ಗಳಷ್ಟು ದುಬಾರಿಯಾಗಿದೆ. 48ರೂ.ಗಳ ಕಡಿಮೆ ಶ್ರೇಣಿಯು ಬೆಲೆ ಹೆಚ್ಚಳದ ನಂತರ 58ರೂ.ಬೆಲೆಗೆ ಲಭ್ಯವಾಗಲಿದೆ. ಇನ್ನು 351ರೂ.ಗಳ ಯೋಜನೆಯು ನವೆಂಬರ್ 25 ರ ನಂತರ 418ರೂ.ಬೆಲೆಗೆ ಲಭ್ಯವಾಗಲಿದೆ. ಎಲ್ಲಾ ಯೋಜನೆಗಳ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಪ್ರಯೋಜನಗಳು ಮಾತ್ರ ಹಿಂದಿನಂತಯೇ ಇರಲಿದೆ. ಇನ್ನು ಸರ್ಕಾರದ ಡಿಜಿಟಲ್ ಇಂಡಿಯಾ ದೃಷ್ಟಿಯ ಸಾಕ್ಷಾತ್ಕಾರವನ್ನು ವೇಗಗೊಳಿಸುವಲ್ಲಿ ತನ್ನ ಪಾತ್ರವನ್ನು ನಿರ್ವಹಿಸಲು Vi ಬದ್ಧವಾಗಿದೆ ಎಂದು ವೊಡಾಫೋನ್ ಐಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ಬೆಲೆ ಯಾವಾಗ ಜಾರಿಯಾಗಲಿದೆ

ಹೊಸ ಬೆಲೆ ಯಾವಾಗ ಜಾರಿಯಾಗಲಿದೆ

ವಿ ಟೆಲಿಕಾಂನ ಹೊಸ ದರ ಪರಿಷ್ಕರಣೆ ಇದೇ ನವೆಂಬರ್‌ 25ರಿಂದ ಜಾರಿಗೆ ಬರಲಿದೆ. ಇನ್ನು ಎರಡು ದಿನಗಳು ಮಾತ್ರ ಲಭ್ಯವಿದ್ದು, ಬೆಲೆ ಏರಿಕೆಯ ಬಿಸಿ ತಪ್ಪಿಸಿಕೊಳ್ಳಬೇಕಾದರೆ ಈಗಲೇ ರೀಚಾರ್ಜ್‌ ಮಾಡಿಸಿಕೊಳ್ಳುವುದು ಉತ್ತಮವಾಗಿದೆ. ಸದ್ಯ ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಏರ್‌ಟೆಲ್ ಕೂಡ ಈಗಾಗಲೇ ಮೊಬೈಲ್ ಸುಂಕ ಹೆಚ್ಚಳ ಮಾಡಿದ್ದು, ಇದು ಟೆಲಿಕಾಂ ಕಂಪನಿಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಪ್ರಯತ್ನ ಎಂದು ಹೇಳಿದೆ. ಈಗ ಏರ್‌ಟೆಲ್ ಮತ್ತು ವಿ ಟೆಲಿಕಾಂಗಳು ತಮ್ಮ ಮೊಬೈಲ್ ದರಗಳನ್ನು ಹೆಚ್ಚಿಸಿವೆ. ರಿಲಯನ್ಸ್ ಜಿಯೋ ಕೂಡ ಇದೇ ಹಾದಿಯಲ್ಲಿ ಮುಂದುವರೆಯುವ ಸಾದ್ಯತೆ ಇದೆ.

ಬೆಲೆ ಹೆಚ್ಚಳದ ನಂತರ ವಿ ಟೆಲಿಕಾಂ ಪ್ರಿಪೇಯ್ಡ್‌ ಪ್ಲಾನ್‌

ಬೆಲೆ ಹೆಚ್ಚಳದ ನಂತರ ವಿ ಟೆಲಿಕಾಂ ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂ ತನ್ನ ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆ ಹೆಚ್ಚಳದ ನಂತರ 79ರೂ.ಗಳ ಪ್ಲಾನ್‌ ಇದೀಗ 99ರೂ ಬೆಲೆಯನ್ನು ಪಡೆದಿದೆ. ಇನ್ನು ಈ ಪ್ಲಾನ್‌ 99ರೂ. ಟಾಕ್‌ಟೈಮ್‌ ಹಾಗೂ 200 MB + 1p/sec ವಾಯ್ಸ್‌ ಟಾರಿಫ್‌ ಪ್ರಯೋಜನವನ್ನು ನೀಡಲಿದೆ. ಇನ್ನು ವಿ ಟೆಲಿಕಾಂನ 149ರೂ.ಗಳ ಪ್ಲಾನ್‌ ಬೆಲೆ ಇದೀಗ 179ರೂ.ಗಳಿಗೆ ಏರಿಕೆಯಾಗಿದೆ. ಇನ್ನು ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌, 300 SMS ಹಾಗೂ 2GB Data ಪ್ರಯೋಜನ ದೊರೆಯಲಿದೆ. ಇದಲ್ಲದೆ 219ರೂ.ಬೆಲೆಯ ಪ್ಲಾನ್‌ ಇದೀಗ 269ರೂ.ಬೆಲೆ ಪಡೆದಿದೆ. ಇದರಲ್ಲಿ ಅನಿಯಮಿತ ಕರೆ, ದಿನಕ್ಕೆ 100 SMS ಹಾಗೂ ದೈನಂದಿನ 1GB ಡೇಟಾ ಪ್ರಯೋಜನ ದೊರೆಯಲಿದೆ. ಈ ಎಲ್ಲಾ ಪ್ಲಾನ್‌ಗಳು 28ದಿನಗಳ ಮಾನ್ಯತೆ ಪಡೆದಿವೆ. ಇದಲ್ಲದೆ ಎಲ್ಲಾ ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆ ಹೆಚ್ಚಳವಾಗಿದ್ದು, ಇದೇ ನವೆಂಬರ್‌ 25ರಿಂದ ಹೊಸ ಬೆಲೆ ಜಾರಿಗೆ ಬರಲಿದೆ.

Best Mobiles in India

Read more about:
English summary
Vi prepaid plan prices hiked: Here's a look at the full list of all the new prepaid recharge plans from Vodafone Idea.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X