ವಿ ಟೆಲಿಕಾಂನಿಂದ ಎರಡು ಪ್ಲ್ಯಾನ್‌ ಲಾಂಚ್; ಅಧಿಕ ಡೇಟಾ ಬೇಕಿದ್ರೆ, ಈ ಪ್ಲ್ಯಾನ್ ಸೂಕ್ತ!

|

ಭಾರತೀಯ ಮೂರನೇ ಟೆಲಿಕಾಂ ಕಂಪೆನಿಗಳಲ್ಲಿ ವಿ ಟೆಲಿಕಾಂ ಗುರುತಿಸಿಕೊಂಡಿದೆ. ಚಂದಾದಾರರನ್ನು ತನ್ನ ಕಡೆಗೆ ಆಕರ್ಷಿಸುವುದಕ್ಕೆ ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸುತ್ತಲೇ ಮುನ್ನಡೆದಿದೆ. ಏರ್‌ಟೆಲ್‌, ಜಿಯೋ ಟೆಲಿಕಾಂಗಳ ಪೈಪೋಟಿ ಎದುರಿಸುತ್ತಿರುವ ವಿ ಟೆಲಿಕಾಂ ಇದೀಗ ಹೊಸದಾಗಿ ಎರಡು ಪ್ಲಾನ್‌ಗಳನ್ನು ಪರಿಚಯಿಸಿದ್ದು, ಅವುಗಳು 4G ಡೇಟಾ ವೋಚರ್‌ ಪ್ಲ್ಯಾನ್ ಆಗಿವೆ. ಹೆಚ್ಚುವರಿ ಡೇಟಾ ಅಗತ್ಯ ಇರುವ ಗ್ರಾಹಕರಿಗೆ ಟಾರ್ಗೆಟ್ ಮಾಡಿ ಈ ಯೋಜನೆ ಪರಿಚಯಿಸಲಾಗಿದೆ.

ನೂತನವಾಗಿ

ಹೌದು, ವಿ ಟೆಲಿಕಾಂ ನೂತನವಾಗಿ ಎರಡು 4G ಡೇಟಾ ವೋಚರ್‌ (4G Data Vouchers) ಪ್ಲಾನ್‌ಗಳನ್ನು ಪರಿಚಯಿಸಿದೆ. ಅವುಗಳು ಕ್ರಮವಾಗಿ ವಿ 25 ರೂ. ಮತ್ತು ವಿ 55 ರೂ. ಆಗಿವೆ. ಈ ಎರಡು ಪ್ಲಾನ್‌ಗಳು ಕ್ರಮವಾಗಿ 1.1GB ಮತ್ತು 3.3GB ದಿನಗಳ ವ್ಯಾಲಿಡಿಟಿಯನ್ನು ಪಡೆದಿವೆ. ಅಗ್ಗದ ಬೆಲೆಯಲ್ಲಿ ಅಧಿಕ ಹೆಚ್ಚುವರಿ ಡೇಟಾ ಬಯಸುವ ಗ್ರಾಹಕರಿಗೆ ಈ ಎರಡು 4G ಡೇಟಾ ವೋಚರ್‌ ಯೋಜನೆಗಳು ಅತ್ಯುತ್ತಮ ಎನಿಸುತ್ತವೆ. ಹಾಗಾದರೇ ವಿ 25 ರೂ. ಮತ್ತು ವಿ 55 ರೂ. ಪ್ಲಾನ್‌ಗಳ ಇತರೆ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ 25ರೂ. ಡೇಟಾ ವೋಚರ್ ಪ್ಲ್ಯಾನ್ ಪ್ರಯೋಜನಗಳು

ವಿ 25ರೂ. ಡೇಟಾ ವೋಚರ್ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂ ನೂತನವಾಗಿ ಪರಿಚಯಿಸಿರುವ ಎರಡು ಪ್ಲ್ಯಾನ್ ಗಳಲ್ಲಿ ವಿ 25ರೂ. 4G ಡೇಟಾ ವೋಚರ್ ಪ್ಲ್ಯಾನ್ ಒಟ್ಟು 1.1GB ಡೇಟಾವನ್ನು ಪಡೆದಿದೆ. ಈ ಯೋಜನೆಯು 24 ಗಂಟೆಗಳು ವ್ಯಾಲಿಡಿಟಿಯನ್ನು ಹೊಂದಿದೆ. ಹಾಗೆಯೇ ಈ ಯೋಜನೆಯು ಏಳು ದಿನಗಳ ದಿನಗಳವರೆಗೆ ಜಾಹೀರಾತು-ಮುಕ್ತ ಮ್ಯೂಸಿಕ್‌ ಅನ್ನು ನೀಡುತ್ತವೆ.

ವಿ 55ರೂ. ಡೇಟಾ ವೋಚರ್ ಪ್ಲ್ಯಾನ್ ಪ್ರಯೋಜನಗಳು

ವಿ 55ರೂ. ಡೇಟಾ ವೋಚರ್ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂ ನೂತನವಾಗಿ ಪರಿಚಯಿಸಿರುವ ಎರಡು ಪ್ಲ್ಯಾನ್ ಗಳಲ್ಲಿ ವಿ 55ರೂ. 4G ಡೇಟಾ ವೋಚರ್ ಪ್ಲ್ಯಾನ್ ಒಟ್ಟು 3.3GB ಡೇಟಾವನ್ನು ಪಡೆದಿದೆ. ಈ ಯೋಜನೆಯು 7 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಹಾಗೆಯೇ ಈ ಯೋಜನೆಯು ಒಂದು ತಿಂಗಳ ವರೆಗೂ ಜಾಹೀರಾತು-ಮುಕ್ತ ಮ್ಯೂಸಿಕ್‌ ಅನ್ನು ನೀಡುತ್ತವೆ.

ಇತರೆ ಡೇಟಾ ವೋಚರ್‌ ಪ್ಲ್ಯಾನ್‌ಗಳು

ಇತರೆ ಡೇಟಾ ವೋಚರ್‌ ಪ್ಲ್ಯಾನ್‌ಗಳು

ವಿ ಟೆಲಿಕಾಂ ಕೆಲವು ಡೇಟಾ ವೋಚರ್‌ ಪ್ಲ್ಯಾನ್‌ಗಳ ಆಯ್ಕೆ ಒಳಗೊಂಡಿದೆ. ಅವುಗಳಲ್ಲಿ ಮುಖ್ಯವಾಗಿ ವಿ 19ರೂ, ವಿ 29ರೂ, ವಿ 75ರೂ, ವಿ 108ರೂ ಹಾಗೂ ವಿ 151ರೂ. ಗಳ ಡೇಟಾ ವೋಚರ್‌ಗಳು ಹೆಚ್ಚು ಗಮನ ಸೆಳೆದಿವೆ.

ವಿ ಟೆಲಿಕಾಂನ 2,999ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ 2,999ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ 2,999ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ವಾರ್ಷಿಕ ವ್ಯಾಲಿಡಿಟಿ ಯೋಜನೆಯಾಗಿದ್ದು, 365 ದಿನಗಳ ವ್ಯಾಲಿಡಿಟಿ ಪಡೆದಿದೆ. ಈ ಯೋಜನೆಯು ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟಾರೇ 850 GB ಡೇಟಾ ಪ್ರಯೋಜನ ಲಭ್ಯ ಮಾಡಿದ್ದು, ಇದನ್ನು ದೈನಂದಿನ ಡೇಟಾಗೆ ಲೆಕ್ಕಾಚಾರ ಮಾಡಿದರೆ ಪ್ರತಿದಿನ 2.33GB ಆಗುತ್ತದೆ. ಹಾಗೆಯೇ 12 am ನಿಂದ 6 am ವರೆಗೂ ಅನಿಯಮಿತ ಡೇಟಾ ಬಳಕೆ ಮಾಡಬಹುದಾಗಿದೆ.

ಹಾಗೂ

ಇದರೊಂದಿಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸೌಲಭ್ಯ ಸಹ ಪಡೆದುಕೊಂಡಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್‌ನಲ್ಲಿ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಸಹ ದೊರೆಯಲಿದೆ. ಇದರೊಂದಿಗೆ ವಿ ಮ್ಯೂವಿಸ್‌ ಹಾಗೂ ವಿ ಕ್ಲಾಸಿಕ್‌ ಆಪ್ಸ್‌ಗಳು ಲಭ್ಯವಾಗಲಿವೆ. ದೀರ್ಘ ವ್ಯಾಲಿಡಿಟಿ ಜೊತೆಗೆ ಅಧಿಕ ಡೇಟಾ ಸೌಲಭ್ಯ ಬಯಸೋ ಗ್ರಾಹಕರಿಗೆ ಈ ಯೋಜನೆ ಸೂಪರ್ ಎನ್ನಬಹುದಾಗಿದೆ.

Best Mobiles in India

English summary
Vi Launches Two 4G Data Vouchers: check Benefits.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X