ವ್ಯೂಸಾನಿಕ್‌ನಿಂದ ಎರಡು ಹೊಸ ಮಾನಿಟರ್‌ ಲಾಂಚ್‌! ಜಬರ್ದಸ್ತ್‌ ಫೀಚರ್ಸ್‌!

|

ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ಗಳಲ್ಲಿ ವ್ಯೂಸಾನಿಕ್‌ ಕಂಪೆನಿ ಜನಪ್ರಿಯ ಬ್ರ್ಯಾಂಡ್‌ ಎನಿಸಿಕೊಂಡಿದೆ. ಸ್ಮಾರ್ಟ್‌ಟಿವಿ ಮಾತ್ರವಲ್ಲದೆ ಸ್ಮಾರ್ಟ್‌ ಮಾನಿಟರ್‌ಗಳ ಮೂಲಕವೂ ಸಾಕಷ್ಟು ಗಮನಸೆಳೆದಿದೆ. ಸದ್ಯ ಇದೀಗ ವ್ಯೂಸಾನಿಕ್ ಕಂಪೆನಿ ಎರಡು ಹೊಸ ಸ್ಮಾರ್ಟ್‌ ಮಾನಿಟರ್‌ಗಳನ್ನು ಪರಿಚಯಿಸಿದೆ. ಇವುಗಳನ್ನು ವ್ಯೂಸಾನಿಕ್‌ VA3209-MH ಮತ್ತು ವ್ಯೂಸಾನಿಕ್‌ VA3209-2K-MHD ಎಂದು ಹೆಸರಿಸಲಾಗಿದೆ. ಈ ಸ್ಮಾರ್ಟ್‌ ಮಾನಿಟರ್‌ಗಳು 32-ಇಂಚಿನ ಮಾನಿಟರ್‌ಗಳಾಗಿದ್ದು, ಸಾಮಾನ್ಯ ಬಳಕೆ ಮತ್ತು ಮದ್ಯಮ ಬಳಕೆಯನ್ನು ಗುರಿಯಾಗಿಸಿಕೊಂಡಿವೆ.

ಮಾನಿಟರ್‌

ಹೌದು, ವ್ಯೂಸಾನಿಕ್‌ ಕಂಪೆನಿ ಹೊಸದಾಗಿ VA3209-MH ಮತ್ತು VA3209-2K-MHD ಸ್ಮಾರ್ಟ್‌ ಮಾನಿಟರ್‌ಗಳನ್ನು ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ ಮಾನಿಟರ್‌ಗಳು 1,200:1 ರಚನೆಯ ಅನುಪಾತವನ್ನು ಪಡೆದಿವೆ. ಇವುಗಳಲ್ಲಿ ಅಡಾಪ್ಟಿವ್‌ ಸಿಂಕ್‌ ಫೀಚರ್ಸ್‌ ಅನ್ನು ಕೂಡ ನೀಡಲಾಗಿದೆ. ಇದರಿಂದ ಇಮೇಜ್‌ ಟಿಯರಿಂಗ್‌ ಅನ್ನು ಕಡಿಮೆ ಮಾಡಬಹುದಾಗಿದೆ. ಇನ್ನುಳಿದಂತೆ ಈ ಎರಡು ಹೊಸ ಮಾನಿಟರ್‌ಗಳ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೀಚರ್ಸ್‌ ಹೇಗಿದೆ?

ಫೀಚರ್ಸ್‌ ಹೇಗಿದೆ?

ವ್ಯೂಸೋನಿಕ್ VA3209-MH ಮತ್ತು VA3209-2K-MHD ಸ್ಮಾರ್ಟ್‌ ಮಾನಿಟರ್‌ಗಳು 32 ಇಂಚಿನ ಡಿಸ್‌ಪ್ಲೇಯನ್ನು ಹೊಂದಿವೆ. ಈ ಡಿಸ್‌ಪ್ಲೇ 1,200:1 ರಚನೆ ಅನುಪಾತವನ್ನು ಪಡೆದುಕೊಂಡಿವೆ. ಇದು 250 cd/m2 ಗರಿಷ್ಠ ಬ್ರೈಟ್‌ನೆಸ್‌ ಅನ್ನು ಒಳಗೊಂಡಿದೆ. ಇದಲ್ಲದೆ ಇಮೇಜ್ ಟಿಯರಿಂಗ್‌ ಕಡಿಮೆ ಮಾಡುವುದಕ್ಕಾಗಿ ಅಡಾಪ್ಟಿವ್ ಸಿಂಕ್ ಅನ್ನು ನೀಡಲಾಗಿದೆ ಎಂದು ವ್ಯೂಸೋನಿಕ್‌ ಕಂಪೆನಿ ಹೇಳಿಕೊಂಡಿದೆ. ಇನ್ನು ಈ ಎರಡೂ ಸ್ಮಾರ್ಟ್‌ ಮಾನಿಟರ್‌ಗಳಲ್ಲಿ ವಿಎ ಒಂದನ್ನು ಅಲ್ಲದೆ IPS ಪ್ಯಾನೆಲ್‌ಗಳನ್ನು ಬಳಸಲು ಆಯ್ಕೆಯನ್ನು ಕೂಡ ನೀಡಿದೆ.

ವ್ಯೂಸೋನಿಕ್‌

ಇದಲ್ಲದೆ ವ್ಯೂಸೋನಿಕ್‌ VA3209-MH ಮತ್ತು VA3209-2K-MHD ಮಾನಿಟರ್‌ ಡಿಸ್‌ಪ್ಲೇ 75Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ಇವುಗಳು 72% NTSC ಮತ್ತು 104% sRGB ಬಣ್ಣದ ಗ್ಯಾಮಟ್ ಕವರೇಜ್‌ಗಳನ್ನು ನೀಡಲಿವೆ. ಇದರಲ್ಲಿ VA3209-MH 16.7 ಮಿಲಿಯನ್ ಬಣ್ಣಗಳನ್ನು ಮಾತ್ರ ರಚಿಸುತ್ತದೆ. ಇದು 8-ಬಿಟ್ ಕಲರ್‌ ಡಿಸ್‌ಪ್ಲೇಯೊಂದಿಗೆ 1080 ಪಿಕ್ಸೆಲ್‌ ಸಾಂಧ್ರತೆಯನ್ನು ಹೊಂದಿದೆ. ಆದರೆ VA3209-2K-MHD 10-ಬಿಟ್ ಕಲರ್‌ ಪ್ಯಾಲ್‌ ಅನ್ನು ಪಡೆದುಕೊಂಡಿದೆ

ಇನ್ನು ವ್ಯೂಸೋನಿಕ್‌ VA3209-2K-MHD ಮಾನಿಟರ್‌ ಕನೆಕ್ಟಿವಿಟ ಆಯ್ಕೆಗಳಲ್ಲಿ HDMI ಪೋರ್ಟ್‌ಗಳು ಮತ್ತು ಸಿಂಗಲ್ ಡಿಸ್‌ಪ್ಲೇ ಪೋರ್ಟ್ ಅನ್ನು ಬೆಂಬಲಿಸಲಿದೆ. ಆದರೆ ವ್ಯೂಸೋನಿಕ್‌ VA3209-MH ಕನೆಕ್ಟಿವಿಟಿ ಆಯ್ಕೆಗಲ್ಲಿ ಸಿಂಗಲ್‌ HDMI ಮತ್ತು VGA ಪೋರ್ಟ್‌ಗಳನ್ನು ಹೊಂದಿದೆ. ಇದಲ್ಲದೆ ಈ ಎರಡೂ ಸ್ಮಾರ್ಟ್‌ಮಾನಿಟರ್‌ಗಳು 2.5 W ಸ್ಟಿರಿಯೊ ಸ್ಪೀಕರ್‌ಗಳು, ಹೊಂದಾಣಿಕೆ ಸ್ಟ್ಯಾಂಡ್‌ಗಳು ಮತ್ತು 100 x 100 mm VESA ಮೌಂಟ್‌ಗಳನ್ನು ಹೊಂದಿವೆ.

ಇನ್ನು ವ್ಯೂಸೋನಿಕ್‌ VA3209-2K-MHD ಮಾನಿಟರ್‌ ಕನೆಕ್ಟಿವಿಟ ಆಯ್ಕೆಗಳಲ್ಲಿ HDMI ಪೋರ್ಟ್‌ಗಳು ಮತ್ತು ಸಿಂಗಲ್ ಡಿಸ್‌ಪ್ಲೇ ಪೋರ್ಟ್ ಅನ್ನು ಬೆಂಬಲಿಸಲಿದೆ. ಆದರೆ ವ್ಯೂಸೋನಿಕ್‌ VA3209-MH ಕನೆಕ್ಟಿವಿಟಿ ಆಯ್ಕೆಗಲ್ಲಿ ಸಿಂಗಲ್‌ HDMI ಮತ್ತು VGA ಪೋರ್ಟ್‌ಗಳನ್ನು ಹೊಂದಿದೆ. ಇದಲ್ಲದೆ ಈ ಎರಡೂ ಸ್ಮಾರ್ಟ್‌ಮಾನಿಟರ್‌ಗಳು 2.5 W ಸ್ಟಿರಿಯೊ ಸ್ಪೀಕರ್‌ಗಳು, ಹೊಂದಾಣಿಕೆ ಸ್ಟ್ಯಾಂಡ್‌ಗಳು ಮತ್ತು 100 x 100 mm VESA ಮೌಂಟ್‌ಗಳನ್ನು ಹೊಂದಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಈ ಎರಡು ಸ್ಮಾರ್ಟ್‌ಮಾನಿಟರ್‌ಗಳು ಜಾಗತಿಕವಾಗಿ ಕೆಲವು ಆಯ್ದ ಮಾರುಕಟ್ಟೆಗಳಲ್ಲಿ ಮಾತ್ರ ಬಿಡುಗಡೆಯಾಗಿದೆ. ಇದರಲ್ಲಿ ವ್ಯೂಸೋನಿಕ್‌ VA3209-MH ಬೆಲೆ €199 (ಅಂದಾಜು 16,318ರೂ.) ಪಡೆದುಕೊಂಡಿದೆ. ಇನ್ನು ವ್ಯೂಸೋನಿಕ್‌ VA3209-2K-MHD ಬೆಲೆ €259 (ಅಂದಾಜು 21,238ರೂ.) ಬೆಲೆಯಲ್ಲಿ ಬರಲಿದೆ. ಇನ್ನು ಈ ಸ್ಮಾರ್ಟ್‌ ಮಾನಿಟರ್‌ ಯಾವೆಲ್ಲಾ ಕಲರ್‌ ಆಯ್ಕೆಗಳಲ್ಲಿ ಬರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ

ಮಾನಿಟರ್‌

ಇನ್ನು ಇತ್ತೀಚಿಗೆ ಮಾನಿಟರ್‌ ಮಾರುಕಟ್ಟೆಗೆ ಬೆಳವಣಿಗೆಯ ಹಾದಿಯಲ್ಲಿದೆ. ಇದೇ ಕಾರಣಕ್ಕೆ ಎಲ್‌ಜಿ ಕಂಪೆನಿ ಕೂಡ ತನ್ನ ಮೊದಲ ಮಾನಿಟರ್‌ ಪರಿಚಯಿಸಿದೆ. ಇದೇ ತಿಂಗಳಿನಲ್ಲಿ ಎಲ್‌ಜಿ ಕಂಪೆನಿ ಮೊದಲ ಸ್ಮಾರ್ಟ್‌ ಮಾನಿಟರ್‌ 32SQ780S ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದು ThinkQ ಹೋಮ್, ಮ್ಯಾಜಿಕ್ ರಿಮೋಟ್ ಸೇರಿದಂತೆ LG ಸ್ಮಾರ್ಟ್ ಟಿವಿಗಳಲ್ಲಿ ಲಭ್ಯವಿರುವ ಎಲ್ಲಾ ಮಾದರಿಯ ಫೀಚರ್ಸ್‌ಗಳನ್ನು ಕೂಡ ಒಳಗೊಂಡಿದೆ. ಜೊತೆಗೆ ಆಪಲ್‌ ಏರ್‌ಪ್ಲೇ 2 ಗೆ ಬೆಂಬಲವನ್ನು ಕೂಡ ನೀಡಲಿದೆ.

Best Mobiles in India

English summary
ViewSonic VA3209-MH and VA3209-2K-MHD with FHD & 2K resolutions launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X