ಸ್ನ್ಯಾಪ್‌ಡೀಲ್‌ನಲ್ಲಿ ಸ್ಯಾಮ್‌ಸಂಗ್ ಬದಲಿಗೆ ವಿಮ್‌ಬಾರ್

Written By:

ಇ ಕಾಮರ್ಸ್ ಸೈಟ್‌ಗಳು ಯಾವಾಗಲೂ ಪ್ರಚಾರವನ್ನು ತಮ್ಮದಾಗಿಸುವಲ್ಲಿ ನಿಸ್ಸೀಮರು. ಇದೀಗ ಇಂತಹುದೇ ಒಂದು ಅಧಿಕೃತ ಘೋಷಣೆಯನ್ನು ಸ್ನ್ಯಾಪ್‌ಡೀಲ್ ಮಾಡಿದೆ. ಸ್ಯಾಮ್‌ಸಂಗ್ ಫೋನ್ ಮತ್ತು ವಿಮ್‌ಬಾರ್ ಡಿಶ್‌ವಾಶ್ ಅನ್ನು ಜೊತೆಯಾಗಿ ನೀಡಿ ಗ್ರಾಹಕರನ್ನು ಬೆಸ್ತು ಬೀಳಿಸಿದೆ.

ಇದನ್ನೂ ಓದಿ: ಅತ್ಯುತ್ತಮ ಫೋನ್ ಜಿಯೋನಿ ಮ್ಯಾರಥಾನ್ ಎಮ್3

ಮುಂಬೈನಲ್ಲಿ ವಾಸವಾಗಿರುವ ಲಕ್ಷ್ಮೀ ನಾರಾಯಣ ಕೃಷ್ಣಮೂರ್ತಿ, ಸ್ನ್ಯಾಪ್‌ಡೀಲ್‌ ಡಾಟ್ ಕಾಮ್‌ನಲ್ಲಿ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಅನ್ನು ಓರ್ಡರ್ ಮಾಡಿದ್ದರು. ಅವರು ಫೋನ್ ಬದಲಿಗೆ ವಿಮ್ ಬಾರ್ ಅನ್ನು ಪಡೆದುಕೊಂಡಿದ್ದಾರೆ.

ಸ್ಯಾಮ್‌ಸಂಗ್ ಬದಲಿಗೆ ವಿಮ್‌ಬಾರ್ ಕೊಡುಗೆ

ತಮಗೆ ದೊರೆತಿರುವಂತಹ ಈ ಕೊಡುಗೆಯನ್ನು ಲಕ್ಷ್ಮೀ ನಾರಾಯಣ ಅವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದು, ಸಾಮಾಜಿಕ ತಾಣದಲ್ಲಿ ಈ ಸುದ್ದಿ ಬಹುಬೇಗ ಹರಡಿದೆ. ಸ್ನ್ಯಾಪ್‌ಡೀಲ್ ಈ ಸುದ್ದಿ ಅರಿತ ತಕ್ಷಣವೇ ಕ್ಷಮೆಯನ್ನು ಕೋರಿದ್ದು ಈ ಫೋಸ್ಟ್ 20,000 ಶೇರ್‌ಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ವೈರಸ್ ದಾಳಿಗೆ ಸುಲಭ ಪರಿಹಾರಗಳು

ವಾರದ ನಂತರ, ಸ್ನ್ಯಾಪ್‌ಡೀಲ್ ಈ ಘಟನೆಯನ್ನು ಕುರಿತಂತೆ ಕ್ಷಮೆಯನ್ನು ಕೋರಿದ್ದು ಹ್ಯಾಂಡ್‌ಸೆಟ್‌ನ ಸಂಪೂರ್ಣ ಮೊತ್ತವನ್ನು ಮರುಹಿಂತಿರುಗಿಸಿದೆ. "ನನ್ನನ್ನು ತಕ್ಷಣವೇ ಸಂಪರ್ಕಿಸಿದ ಸ್ನ್ಯಾಪ್‌ಡೀಲ್ ಕಂಪೆನಿ ನನಗೆ ಸಂಪೂರ್ಣ ಹಣವನ್ನು ಹಿಂತಿರುಗಿಸಿದ್ದಾರೆ. ಮಾಧ್ಯಮ ತಂಡದವರು ನನ್ನನ್ನು ತಕ್ಷಣವೇ ಸಂಪರ್ಕಿಸಿದ್ದು ಈ ರೀತಿಯ ತಪ್ಪು ನಡೆದಿರುವುದಕ್ಕೆ ಕ್ಷಮೆಯನ್ನು ಕೋರಿದ್ದಾರೆ ಎಂದು ಲಕ್ಷ್ಮೀ ನಾರಾಯಣ್ ತಮ್ಮ ಫೋಸ್ಟ್‌ನಲ್ಲಿ ಪ್ರಕಟಿಸಿದ್ದಾರೆ".

ಇನ್ನು ಹಿಂದುಸ್ತಾನ್ ಯೂನಿಲಿವರ್ ಲಿಮಿಟೆಡ್‌ನ (ಎಚ್‌ಯುಎಲ್) ಉತ್ಪನ್ನವಾಗಿರುವ ವಿಮ್ ಬಾರ್‌ಗೆ ಪುಕ್ಕಟ ಪ್ರಚಾರ ದೊರೆತಂತಾಗಿದ್ದು ಇಂತಹ ಘಟನೆಗೆ ನಮ್ಮ ಉತ್ಪನ್ನವನ್ನು ಬಳಸಿರುವುದು ತಪ್ಪು ಎಂಬುದು ಕಂಪೆನಿಯ ವಾದವಾಗಿದೆ. ವಿಮ್ ನಮ್ಮ ಕಂಪೆನಿಯ ಹೆಮ್ಮೆಯ ಸಂಕೇತವಾಗಿದ್ದು ಈ ರಿತಿಯ ಅಪಮಾನ ನಿಜಕ್ಕೂ ಕ್ಷಮೆಗೆ ತಕ್ಕದುದಲ್ಲ ಎಂದು ತಿಳಿಸಿದ್ದಾರೆ.

ಇನ್ನು ವಿಮ್ ಬಾರ್ ಕೊಡುಗೆಯಾಗಿ ನೀಡಿರುವ ಹಿಂದುಸ್ತಾನ್ ಕಂಪೆನಿಗೆ ಅಭಾರಿಯಾಗಿರುವೆ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿರುವ ಲಕ್ಷ್ಮೀ ನಾರಾಯಣ ದೀಪಾವಳಿಯ ಬಂಪರ್ ಕೊಡುಗೆಯಾಗಿ ಇಂತಹ ಉತ್ಪನ್ನ ದೊರಕಿರುವುದು ನಿಜಕ್ಕೂ ಗ್ರೇಟ್ ಎಂದು ಕುಹಕವಾಡಿದ್ದಾರೆ.

English summary
This article tells about Vim Bar Covers up for Snapdeal: HUL Does the Unthinkable.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot