ಭಾರತದಲ್ಲಿ ವಿವೋ Y35 ಸ್ಮಾರ್ಟ್‌ಫೋನ್‌ ಬಿಡುಗಡೆ! ಬೆಲೆ ಎಷ್ಟು?

|

ವಿವೋ ಕಂಪೆನಿ ಭಾರತದಲ್ಲಿ ತನ್ನ ಹೊಸ ವಿವೋ Y35 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಮೂಲಕ ತನ್ನ Y ಸರಣಿಯ ಸ್ಮಾರ್ಟ್‌ಫೋನ್‌ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಿದೆ. ಈ ಸ್ಮಾರ್ಟ್‌ಫೋನ್‌ ಪ್ರೀಮಿಯಂ ವಿನ್ಯಾಸ ಮತ್ತು ಲುಕ್‌ ಅನ್ನು ಒಳಗೊಂಡಿದೆ. ಇದು ಸ್ನಾಪ್‌ಡ್ರಾಗನ್ 680 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 44W ಫ್ಲ್ಯಾಷ್ ಚಾರ್ಜ್‌ ಬೆಂಬಲಿಸುವ 5000mAh ಸಾಮರ್ಥ್ಯದ ಬ್ಯಾಟರಿ ಒಳಗೊಂಡಿದೆ. ಇದು ವಿಸ್ತೃತ 8GB RAM ಅನ್ನು ಹೊಂದಿದೆ. ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ ನೊಂದಿಗೆ ಸೆಟ್‌ ಮಾಡಲಾದ 50MP ಸೂಪರ್ ನೈಟ್ ಕ್ಯಾಮೆರಾವನ್ನು ಹೊಂದಿದೆ.

ಸ್ಮಾರ್ಟ್‌ಫೋನ್‌

ಇನ್ನು ವಿವೋ Y35 ಸ್ಮಾರ್ಟ್‌ಫೋನ್‌ 8GB+128GB ರೂಪಾಂತರದ ಆಯ್ಕೆಯ ಬೆಲೆ 18,499ರೂ. ಆಗಿದೆ. ವಿವೋ Y35 ವಿವೋ ಇಂಡಿಯಾ ಇ-ಸ್ಟೋರ್‌ ಮತ್ತು ಎಲ್ಲಾ ಪಾಲುದಾರ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಈ ಫೋನ್‌ ಅಗೇಟ್ ಬ್ಲ್ಯಾಕ್ ಮತ್ತು ಡಾನ್ ಗೋಲ್ಡ್ ಕಲರ್‌ ಆಯ್ಕೆಗಳಲ್ಲಿ ಬರಲಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ವಿಶೇಷ ಆಫರ್‌ನಲ್ಲಿ ಗ್ರಾಹಕರು ICICI/SBI/Kotak/OneCard ಮೂಲಕ ಖರೀದಿಸಿದರೆ 1,000ರೂ. ಕ್ಯಾಶ್‌ಬ್ಯಾಕ್ ಪಡೆಯಲು ಸಾಧ್ಯವಾಗುತ್ತದೆ. ಈ ಆಫರ್‌ 30ನೇ ಸೆಪ್ಟೆಂಬರ್, 2022 ರವರೆಗೆ ಲಭ್ಯವಾಗಲಿದೆ.

ಸ್ಟೈಲಿಶ್ ಮತ್ತು ಟ್ರೆಂಡಿ ವಿನ್ಯಾಸ

ಸ್ಟೈಲಿಶ್ ಮತ್ತು ಟ್ರೆಂಡಿ ವಿನ್ಯಾಸ

ವಿವೋ Y35 ಸ್ಮಾರ್ಟ್‌ಫೋನ್‌ 6.58 ಇಂಚಿನ ಫುಲ್‌ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, ಬ್ರೈಟ್‌ನೆಸ್‌ ಮತ್ತು ಎದ್ದು ಕಾಣುವ ಬಣ್ಣವನ್ನು ನೀಡಲಿದೆ. ಇದು 2.5D ಕರ್ವ್ ವಕ್ರತೆಯನ್ನು ಹೊಂದಿರುವ ಫ್ಲಾಟ್ ಫ್ರೇಮ್ ಅನ್ನು ಹೊಂದಿದೆ. ಅಲ್ಲದೆ, ಫ್ರಾಸ್ಟೆಡ್ ಆಂಟಿ-ಗ್ಲೇರ್ (AG) ಮೇಲ್ಮೈ ಸಾಫ್ಟ್‌ ಅಂದವಾದ ಸ್ಪರ್ಶವನ್ನು ನೀಡುತ್ತದೆ ಮತ್ತು ಗೀರುಗಳು ಮತ್ತು ಫಿಂಗರ್‌ಪ್ರಿಂಟ್‌ಗಳಿಗೆ ರೆಸಿಸ್ಟೆಟ್‌ ನೀಡಲಿದೆ. ಇದು ತ್ವರಿತ ಮತ್ತು ಪರಿಣಾಮಕಾರಿ ಅನ್‌ಲಾಕಿಂಗ್‌ಗಾಗಿ ಫೇಸ್ ವೇಕ್ ವೈಶಿಷ್ಟ್ಯದ ಜೊತೆಗೆ ಸೈಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ.

ಪವರ್‌ಫುಲ್‌ ಕಾರ್ಯಕ್ಷಮತೆ

ಪವರ್‌ಫುಲ್‌ ಕಾರ್ಯಕ್ಷಮತೆ

ವಿವೋ Y35 ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಆಂಡ್ರಾಯ್ಡ್‌ 12 ಅನ್ನು ಆಧರಿಸಿದ ಇತ್ತೀಚಿನ ಫನ್‌ಟಚ್‌ OS 12 ನಲ್ಲಿ ರನ್ ಆಗಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ವಿಸ್ತೃತ RAM 3.0 ವೈಶಿಷ್ಟ್ಯದೊಂದಿಗೆ 8GB ಹೆಚ್ಚುವರಿ RAM ಅನ್ನು ನೀಡಲಿದೆ. ಜೊತೆಗೆ ಮೆಮೊರಿ ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುಕೊಳ್ಳುವುದಕ್ಕೆ ಸಾಧ್ಯವಾಗಲಿದೆ.

ಸ್ಮಾರ್ಟ್ ಫೋಟೋಗ್ರಫಿ ಅನುಭವ

ಸ್ಮಾರ್ಟ್ ಫೋಟೋಗ್ರಫಿ ಅನುಭವ

ವಿವೋ Y35 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಬೊಕೆ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಹಿಂಬದಿಯ ಕ್ಯಾಮರಾ ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಮತ್ತು ಸ್ಥಿರವಾದ ಮತ್ತು ಸ್ಪಷ್ಟವಾದ ವೀಡಿಯೊಗಳನ್ನು ನೀಡುವ ಸ್ಥಿರೀಕರಣ ಕ್ರಮಾವಳಿಗಳನ್ನು ಸಹ ಬೆಂಬಲಿಸುತ್ತದೆ.

ಕ್ಯಾಮೆರಾ

ಹೆಚ್ಚುವರಿಯಾಗಿ, ಕ್ಯಾಮೆರಾ ಸಾಮರ್ಥ್ಯಗಳನ್ನು ಹೆಚ್ಚಿಸಲು, ಸ್ಮಾರ್ಟ್‌ಫೋನ್ ಸೂಪರ್ ನೈಟ್ ಕ್ಯಾಮೆರಾ ಮೋಡ್, ಮಲ್ಟಿ ಸ್ಟೈಲ್ ಪೋರ್ಟ್ರೇಟ್ ಮೋಡ್, ರಿಯರ್‌ ಕ್ಯಾಮೆರಾ ಬೊಕೆ ಫ್ಲೇರ್ ಪೋರ್ಟ್ರೇಟ್‌ಗಳಂತಹ ಹಲವು ಪ್ರಮುಖ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಿಂದ ನಿಮಗೆ ತಡೆರಹಿತ ಛಾಯಾಗ್ರಹಣ ಅನುಭವವನ್ನು ಪಡೆಯಲು ಸಾಧ್ಯವಾಗಲಿದೆ.

ದೀರ್ಘ ಬ್ಯಾಟರಿ ಬಾಳಿಕೆ

ದೀರ್ಘ ಬ್ಯಾಟರಿ ಬಾಳಿಕೆ

ವಿವೋ Y35 ಸ್ಮಾರ್ಟ್‌ಫೋನ್‌ 44W ಫ್ಲ್ಯಾಷ್ ಚಾರ್ಜಿಂಗ್‌ ಬೆಂಬಲಿಸುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಫೋನ್‌ ಮಲ್ಟಿ ಟರ್ಬೊ ಮತ್ತು ಅಲ್ಟ್ರಾ ಗೇಮ್ ಮೋಡ್‌ನೊಂದಿಗೆ ಬರುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ v5, ಜಿಪಿಎಸ್, ಗ್ಲೋನಾಸ್, ಒಟಿಜಿ, ಎಫ್‌ಎಂ ರೇಡಿಯೋ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿವೆ. ಮಂಡಳಿಯಲ್ಲಿನ ಸಂವೇದಕಗಳು ವೇಗವರ್ಧಕ, ಸುತ್ತುವರಿದ ಬೆಳಕಿನ ಸಂವೇದಕ, ಇ-ದಿಕ್ಸೂಚಿ, ಗೈರೊಸ್ಕೋಪ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಒಳಗೊಂಡಿದೆ.

Best Mobiles in India

English summary
Vivo Y35 was launched in India on Monday as the company's latest smartphone in its Y series portfolio.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X