Just In
Don't Miss
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Movies
Muddumanigalu:ಮಗಳ ಕಷ್ಟಕ್ಕೆ ಹೆಗಲಾಗಿ ಬಂದೇ ಬಿಟ್ಟಳು ಮುದ್ದುಲಕ್ಷ್ಮೀ.. ಮುಂದೇನು?
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿವೋ Y75s 5G ಸ್ಮಾರ್ಟ್‌ಫೋನ್ ಬಿಡುಗಡೆ! ಫುಲ್ ಹೆಚ್‌ಡಿ ವೀಡಿಯೊ ರೆಕಾರ್ಡ್ ಸಾಮರ್ಥ್ಯ!
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಿವೋ ಕಂಪೆನಿಯ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಕ್ಯಾಮೆರಾ ಕೇಂದ್ರಿತ ಫೀಚರ್ಸ್‌ಗಳಿಂದಾಗಿ ವಿವೋ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಗಮನಸೆಳೆದಿವೆ. ಸದ್ಯ ಇದೀಗ ವಿವೋ ಕಂಪೆನಿ ತನ್ನ ಹೊಸ ವಿವೋ Y75s 5G ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ 60Hz ರಿಫ್ರೆಶ್ ರೇಟ್ ಬೆಂಬಲಿಸುವ ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದೆ.

ಹೌದು, ವಿವೋ ಕಂಪೆನಿ ತನ್ನ ಹೊಸ ವಿವೋ Y75s 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ಫ್ಲ್ಯಾಶ್ ಚಾರ್ಜ್ ಅನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್‌ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಸಹ ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ರಚನೆ ಹೇಗಿದೆ?
ವಿವೋ Y75s 5G ಸ್ಮಾರ್ಟ್‌ಫೋನ್ 6.58 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080x2,408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 60Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ. ಡಿಸ್‌ಪ್ಲೇ 90.61% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದ್ದು, ವೀಡಿಯೊ ಕರೆಗಳು ಹಾಗೂ ವೀಡಿಯೊ ವೀಕ್ಷಣೆಗೆ ಯೋಗ್ಯವಾದ ಮಾದರಿಯನ್ನು ಹೊಂದಿದೆ.

ಪ್ರೊಸೆಸರ್ ಯಾವುದು?
ವಿವೋ Y75s 5G ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್ ಬಲವನ್ನು ಹೊಂದಿದೆ. ಇದು ಮಾಲಿ-G57 GPU ಸಪೋರ್ಟ್ ಪಡೆದಿದ್ದು, ಆಂಡ್ರಾಯ್ಡ್ 11 ಆಧಾರಿತ OriginOS ಓಷನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 12GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಸೆಟ್‌ಅಪ್ ಎಷ್ಟಿದೆ?
ವಿವೋ Y75s 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ರಿಯರ್ ಕ್ಯಾಮೆರಾ ಸೆಟಪ್ ಫುಲ್ ಹೆಚ್‌ಡಿ ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿವೆ.

ಬ್ಯಾಟರಿ ಮತ್ತು ಇತರೆ
ಈ ಸ್ಮಾರ್ಟ್‌ಫೋನ್ 18W ಫ್ಲ್ಯಾಶ್ ಚಾರ್ಜ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ v5.1 ಸಂಪರ್ಕ, ಹಾಟ್‌ಸ್ಪಾಟ್, ವೈಫೈ, 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಆಕ್ಸಿಲೆರೋ ಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್, ಗ್ಯಾವಿಟಿ ಸೆನ್ಸಾರ್, ಇ-ಕಂಪಾಸ್ ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ
ವಿವೋ Y75s 5G ಸ್ಮಾರ್ಟ್‌ಫೋನ್ ಸದ್ಯ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್ ಫೋನಿನ 8GB RAM + 256GB ಸ್ಟೋರೇಜ್ ರೂಪಾಂತರದ ಆಯ್ಕೆಯ ಬೆಲೆ CNY 1,899 (ಸುಮಾರು 22,000ರೂ)ಆಗಿದೆ. ಇದರ 12GB RAM + 256GB ಮಾದರಿಯ ಬೆಲೆ CNY 2,199 (ಸುಮಾರು 25,000ರೂ)ಆಗಿದೆ. ಈ ಸ್ಮಾರ್ಟ್‌ಫೋನ್ ಕಪ್ಪು ಮತ್ತು ಗ್ರೇಡಿಯಂಟ್ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಚೀನಾದಲ್ಲಿ ಖರೀದಿಸಲು ಲಭ್ಯವಿರುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಶೀಘ್ರದಲ್ಲೇ ಭಾರತವೂ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ಎಂಟ್ರಿ ನೀಡುವ ಸಾಧ್ಯತೆಯಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470