5G ಸೇವೆ ಶುರುವಾದ ನಂತರ ವಿ ಟೆಲಿಕಾಂ ಪ್ಲಾನ್‌ಗಳ ಬೆಲೆ ಹೆಚ್ಚಳ ಸಾಧ್ಯತೆ!

|

ಭಾರತದಲ್ಲಿ 5G ನೆಟ್‌ವರ್ಕ್‌ ಶೀಘ್ರದಲ್ಲೇ ಪ್ರಾರಂಭವಾಗುವುದಕ್ಕೆ ವೇದಿಕೆ ಸಿದ್ದವಾಗ್ತಿದೆ. 5G ತರಂಗಾಂತರದ ಹರಾಜಿನ ನಂತರ ಇದಕ್ಕೆ ಇನ್ನಷ್ಟು ವೇಗ ಸಿಕ್ಕಿದೆ. ಇನ್ನು ಟೆಲಿಕಾಂ ವಲಯದಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿರುವ ಏರ್‌ಟೆಲ್‌, ಜಿಯೋ ಮತ್ತು ವಿ ಟೆಲಿಕಾಂಗಳು 5G ನೆಟ್‌ವರ್ಕ್‌ ಸೇವೆ ನೀಡಲು ಮುಂದಾಗಿವೆ. ಈಗಾಗಲೇ ಏರ್‌ಟೆಲ್‌ ಟೆಲಿಕಾಂ ಇದೇ ಆಗಸ್ಟ್‌ ತಿಂಗಳ ಅಂತ್ಯದಲ್ಲಿ 5G ನೆಟ್‌ವರ್ಕ್‌ ಸೇವೆ ಪ್ರಾರಂಭಿಸುವುದಾಗಿ ಹೇಳಿದೆ. ಇದರ ನಡುವೆ ವಿ ಟೆಲಿಕಾಂ ಕಂಪೆನಿ ಕೂಡ 5G ಸೇವೆ ಪ್ರಾರಂಭಿಸಲು ಸಿದ್ಧತೆ ನಡೆಸಿದೆ.

ಟೆಲಿಕಾಂ

ಹೌದು, ವಿ ಟೆಲಿಕಾಂ ಕೂಡ ಭಾರತದಲ್ಲಿ 5G ಸೇವೆಯನ್ನು ನೀಡಲಿದೆ. ಆದರೆ ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ವಿ ಟೆಲಿಕಾಂ 4G ಸೇವೆಗಳಿಗೆ ಹೋಲಿಸಿದರೆ 5G ಸೇವೆಯ ಡೇಟಾ ಪ್ಲಾನ್‌ಗಳಿಗೆ ಹೆಚ್ಚಿನ ದರ ವಿಧಿಸಲಿದೆ ಎಂದು ವರದಿಯಾಗಿದೆ. ಇತ್ತೀಚೆಗೆ ನಡೆದ ಹರಾಜಿನಲ್ಲಿ 5G ಸ್ಪೆಕ್ಟ್ರಮ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಹೆಚ್ಚಿನ ಮೊತ್ತವನ್ನು ಖರ್ಚು ಮಾಡಿದೆ. ಆದರಿಂದ 5G ಸೇವೆಗಳಿಗೆ ಪ್ರೀಮಿಯಂ ಬೆಲೆಯನ್ನು ವಿಧಿಸಲಿದೆ ಎಂದು ಹೇಳಲಾಗಿದೆ. ಇದರ ಅಗತ್ಯದ ಬಗ್ಗೆ ವೊಡಾಫೋನ್ ಐಡಿಯಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವೀಂದರ್ ಟಕ್ಕರ್ ಹೇಳಿಕೊಂಡಿದ್ದಾರೆ.

ನೆಟ್‌ವರ್ಕ್‌

ಇನ್ನು ವಿ ಟೆಲಿಕಾಂ 5G ನೆಟ್‌ವರ್ಕ್‌ ಸೇವೆಗಳನ್ನು ಪ್ರಾರಂಭಿಸಿದ ನಂತರ ವರ್ಷಾಂತ್ಯದ ವೇಳೆಗೆ ಮೊಬೈಲ್ ಫೋನ್ ಸೇವೆಗಳ ಸುಂಕವನ್ನು ಹೆಚ್ಚಿಸುವ ನಿರೀಕ್ಷೆಯಿದೆ. 4G ಸೇವೆಗಿಂತ 5G ಸೇವೆಗೆ ಹೆಚ್ಚಿನ ಬೆಲೆಯನ್ನು ನಿಗದಿಪಡಿಸಲಿದೆ. 5G ನೆಟ್‌ವರ್ಕ್‌ನಲ್ಲಿ ಡೇಟಾ ಬಳಕೆಯ ಹೆಚ್ಚಳವು ಗ್ರಾಹಕರು ಅಭಿವೃದ್ಧಿಪಡಿಸಿದ ಮತ್ತು ಅಳವಡಿಸಿಕೊಳ್ಳುವ ಬಳಕೆಯ ಪ್ರಕರಣಗಳನ್ನು ಅವಲಂಬಿಸಿರುತ್ತದೆ ಎಂದು ರವೀಂದರ್ ಟಕ್ಕರ್ ಹೇಳಿದ್ದಾರೆ. ಹಾಗಾದ್ರೆ 5G ಸೇವೆ ಶುರುವಾದ ನಂತರ ವಿ ಟೆಲಿಕಾಂ ಯಾಕೆ ತನ್ನ ಟಾರಿಫ್‌ ಪ್ಲಾನ್‌ಗಳ ಬೆಲೆ ಬದಲಾಯಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಪೆಕ್ಟ್ರಮ್

5G ನೆಟ್‌ವರ್ಕ್‌ ಸ್ಪೆಕ್ಟ್ರಂ ಹರಾಜಿನಲ್ಲಿ VIL 18,800 ಕೋಟಿ ಮೌಲ್ಯದ ಸ್ಪೆಕ್ಟ್ರಮ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಇದು 5G ಸೇವೆಗಳಿಗಾಗಿ 17 ಆದ್ಯತಾ ವಲಯಗಳಲ್ಲಿ ಮಿಡ್‌-ಬ್ಯಾಂಡ್ (3300 MHz ಬ್ಯಾಂಡ್) ಮತ್ತು 16 ವಲಯಗಳಲ್ಲಿ 26 GHz ಬ್ಯಾಂಡ್‌ನಲ್ಲಿ ಸ್ಪೆಕ್ಟ್ರಮ್‌ನಲ್ಲಿ ರೇಡಿಯೊವೇವ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಕಂಪನಿಯು ಆಂಧ್ರಪ್ರದೇಶ, ಕರ್ನಾಟಕ ಮತ್ತು ಪಂಜಾಬ್‌ನ ಮೂರು ವಲಯಗಳಲ್ಲಿ ಹೆಚ್ಚುವರಿ 4G ಸ್ಪೆಕ್ಟ್ರಮ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಈ ಹೊಸ ಸ್ಪೆಕ್ಟ್ರಮ್ ಬಿಡ್‌ನಿಂದ ಕಂಪನಿಗೆ 1,680 ಕೋಟಿ ರೂಪಾಯಿಗಳ ವಾರ್ಷಿಕ ಕಂತಿನ ಹೊಣೆಗಾರಿಕೆ ಬೀಳಲಿದೆ.

ಈಗಾಗಲೇ

ವಿ ಟೆಲಿಕಾಂ ಈಗಾಗಲೇ ಜೂನ್ ತ್ರೈಮಾಸಿಕದಲ್ಲಿ 7,296.7 ಕೋಟಿ ರೂ. ಹಿಂದಿನ ವರ್ಷದ ತ್ರೈಮಾಸಿಕದಲ್ಲಿ 7,319.1ಕೋಟಿ ರೂ. ನಷ್ಟವನ್ನು ಅನುಭವಸಿದೆ. ಹಾಗಯೇ ಜೂನ್ 30, 2022 ರಂದು ಕೊನೆಗೊಂಡ ತ್ರೈಮಾಸಿಕದ ಕಾರ್ಯಾಚರಣೆಗಳಿಂದ VIL ನ ಆದಾಯವು ಸುಮಾರು 10,410 ಕೋಟಿ ರೂ.ಗೆ ಬೆಳೆದಿದೆ. ಇದು ಹಿಂದಿನ ವರ್ಷದ ಅವಧಿಗಿಂತ ಸುಮಾರು 14% ಸುಧಾರಿಸಿದೆ ಎನ್ನಲಾಗಿದೆ. ಏಪ್ರಿಲ್-ಜೂನ್ 2022 ರ ತ್ರೈಮಾಸಿಕದ ಅಂತ್ಯದಲ್ಲಿ, VIL ನ ಒಟ್ಟು ಒಟ್ಟು ಸಾಲ 1,99,080 ಕೋಟಿಗಳಷ್ಟಿದೆ. ಇದೇ ಕಾರಣಕ್ಕೆ ವೋಡಾಫೋನ್‌ ಐಡಿಯಾ 5G ಸೇವೆಗಳನ್ನು ಪ್ರೀಮಿಯಂ ದರದಲ್ಲಿ ನೀಡಲು ಪ್ಲಾನ್‌ ಮಾಡಿದೆ.

ಟೆಲಿಕಾಂ

ಈಗಾಗಲೇ ನಷ್ಟದಲ್ಲಿರುವ ವಿ ಟೆಲಿಕಾಂ 5G ಸೇವೆಗಳನ್ನು ನೀಡುವಾಗ ನಷ್ಟದ ಹಾದಿಯಿಂದ ಹೊರಬರುವ ಪ್ರಯತ್ನಕ್ಕೆ ಮುಂದಾಗಿದೆ. ಅಲ್ಲದೆ ವಾರ್ಷಿಕವಾಗಿ ತನ್ನ ಮೇಲೆ ಬೀಳೂವ ಹೆಚ್ಚುವರಿ ಹೊಣೆಗಾರಿಕೆಯ ಶುಲ್ಕದ ಭಾರ ಹೆಚ್ಚಾಗದಂತೆ ಮಾಡಲು ಪ್ರೀಮಿಯಂ ಪ್ಲಾನ್‌ಗಳನ್ನು ಪರಿಚಯಿಸಲಿದೆ ಎನ್ನಲಾಗಿದೆ. ಆದರೆ 5G ಸೇವೆಗಳನ್ನು ನೀಡುವ ಇತರೆ ಟೆಲಿಕಾಂಗಳು ಕಡಿಮೆ ಬೆಲೆಯಲ್ಲಿ ನೀಡಿದರೆ ವಿ ಟೆಲಿಕಾಂಗೆ ಹೊಡೆತ ಬೀಳುವ ಸಾಧ್ಯತೆ ಕೂಡ ಇದೆ. ಆದರೂ ವಿ ಟೆಲಿಕಾಂನ ಹೊಸ ಪ್ಲಾನ್‌ ಹೇಗೆ ವರ್ಕೌಟ್‌ ಆಗಲಿದೆ ಅನ್ನೊದಕ್ಕೆ ಕಾಲವೇ ಉತ್ತರಿಸಲಿದೆ.

5G

ಇನ್ನು 5G ಸೇವೆ ಗ್ರಾಹಕರಿಗೆ ಪ್ರಯಾಣದಲ್ಲಿರುವಾಗ ಗ್ರಾಹಕರ ಡೇಟಾ ಅನುಭವವನ್ನು ಸುಧಾರಿಸುತ್ತದೆ. ಗ್ರಾಹಕರಿಗೆ ಅವಶ್ಯವಿರುವ ಡೇಟಾ ಅಗತ್ಯಗಳನ್ನು ಹೆಚ್ಚು ಪರಿಣಾಮಕಾರಿ ಯಾಗಿ ಪೂರೈಸಲು 5G ಸಹಾಯ ಮಾಡಲಿದೆ, ಇದರಿಂದಾಗಿ ಒಟ್ಟಾರೆ ಗ್ರಾಹಕ ಅನುಭವವು ಉತ್ತಮವಾಗಿರುತ್ತದೆ. ಜೊತೆಗೆ ಸ್ಮಾರ್ಟ್ ಮತ್ತು ಹೆಚ್ಚು ಸಂಪರ್ಕಿತ ಜಗತ್ತನ್ನು ಸಕ್ರಿಯಗೊಳಿಸುತ್ತದೆ. ಇದರಿಂದ 5Gಯ ಆರಂಭಿಕ ಹಂತಗಳಲ್ಲಿ, ಸುಧಾರಿತ ಮೊಬೈಲ್ ಬ್ರಾಡ್‌ಬ್ಯಾಂಡ್ (eMBB) ಮತ್ತು ಸ್ಥಿರ ವೈರ್‌ಲೆಸ್ ಪ್ರವೇಶ (FWA) ವನ್ನು ಬಳಸಬೇಕಾಗುತ್ತದೆ. ಇವುಗಳು ಭಾರತದಲ್ಲಿ ಕಡಿಮೆ ಸ್ಥಿರ ಬ್ರಾಡ್‌ಬ್ಯಾಂಡ್ ಪೆನೆಟ್ರೇಷನ್ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ

5G

ಭಾರತದಲ್ಲಿ 5G ನೆಟ್‌ವರ್ಕ್‌ ಹೊಸ ಡಿಜಿಟಲ್‌ ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡಲಿದೆ. ಏಕೆಂದರೆ 5G ಸೇವೆಗಳು 4G ಗಿಂತ ಹತ್ತುಪಟ್ಟು ವೇಗವಾಗಿ ದೊರೆಯಲಿವೆ. ಇನ್ನು 5G ಸೇವೆ ಕೇವಲ ಬೆಳೆಯುತ್ತಿರುವ ನಿರ್ವಹಣೆ ಯನ್ನು ನಿರ್ವಾಹಕರಿಗೆ ಮಾತ್ರ ಸಕ್ರಿಯಗೊಳಿಸುವುದಿಲ್ಲ. ಬದಲಿಗೆ ಗ್ರಾಹಕರ ಡೇಟಾ ಅಗತ್ಯಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಮಾಡಲಿದೆ. ಅಲ್ಲದೆ ಭಾರತದಲ್ಲಿ ಸೇವಾ ಪೂರೈಕೆದಾರರಿಗೆ 5G ಸಕ್ರಿಯಗೊಳಿಸಿದ ಡಿಜಿಟಲೀಕರಣದ ಆದಾಯದ ಯೋಜಿತ ಮೌಲ್ಯವು 2030 ರ ವೇಳೆಗೆ ಸರಿಸುಮಾರು USD 17 ಶತಕೋಟಿ ಆಗಿರುತ್ತದೆ ಎಂದು ಅಂದಾಜಿಸಲಾಗಿದೆ.

ನೆಟ್‌ವರ್ಕ್‌

ಇದಲ್ಲದೆ 5G ನೆಟ್‌ವರ್ಕ್‌ ಮನರಂಜನೆಯನ್ನು ಪಡೆಯಲು ಸುರಕ್ಷಿತವಾದ ಮಾರ್ಗವನ್ನು ಕಲ್ಪಿಸಲಿದೆ. ಅಲ್ಲದೆ 5G ಆಗಮನದಿಂದ ಡೇಟಾ ಡೌನ್‌ಲೋಡ್ ವೇಗ ಹೆಚ್ಚಾಗಲಿದೆ. ಮೂರು ಪಟ್ಟು ಹೆಚ್ಚಿನ ಸ್ಪೆಕ್ಟ್ರಮ್ ದಕ್ಷತೆ ಮತ್ತು ಅತಿ ಕಡಿಮೆ ಸುಪ್ತತೆಯನ್ನು ಕಾಣಬಹುದಾಗಿದೆ. ಹಾಗೆಯೇ 5G ಸೇವೆ ಪಡೆದುಕೊಳ್ಳುವ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 4K ವೀಡಿಯೊವನ್ನು ವೀಕ್ಷಿಸಲು ಅವಕಾಶ ಪಡೆಯಲಿದ್ದಾರೆ. ಅಲ್ಲದೆ AR/ VR, ಮೊಬೈಲ್ ಗೇಮಿಂಗ್ ಅಪ್ಲಿಕೇಶನ್‌ಗಳು ಮತ್ತು ವಿವಿಧ ತಲ್ಲೀನಗೊಳಿಸುವ ಚಟುವಟಿಕೆಗಳು ಮತ್ತು ಹೊಸ ಅಪ್ಲಿಕೇಶನ್‌ಗಳನ್ನು ಬಳಸಲು ಅನುಮತಿಸುತ್ತದೆ.

Best Mobiles in India

Read more about:
English summary
Vodafone Idea expects 5G to be priced at a premium with more data

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X