ಜಿಯೋ ಎಫೆಕ್ಟ್: ರೂ. 250ಕ್ಕೆ 4GB 4G ಡೇಟಾ ನೀಡಲು ಮುಂದಾದ ವೊಡೋಪೋನ್

|

ದೇಶದಲ್ಲಿ ವಿವಿಧ ಟೆಲಿಕಾಂ ಕಂಪನಿಗಳ ನಡುವೆ ದರ ಸಮರವು ಜೋರಾಗಿಯೇ ನಡೆಯುತ್ತಿದ್ದು, ಜಿಯೋ ಉಚಿತ ಸೇವೆಗಳ ಮುಂದೆ ಮಂಕಾಗಿದ್ದ ವಿವಿಧ ಕಂಪನಿಗಳು ತಮ್ಮ ಗ್ರಾಹಕರನ್ನು ಬಿಟ್ಟುಕೊಡದಿರುವ ಕಾರಣಕ್ಕೆ ತಮ್ಮ ದರಗಳ ಭಾರಿ ಕಡಿತವನ್ನು ಮಾಡುತ್ತಿದ್ದು, ಈ ಬಾರಿ ವೊಡೋಪೋನ್ ತನ್ನ ಗ್ರಾಹಕರಿಗೆ ರೂ. 250ಕ್ಕೆ 4GB 4G ಡೇಟಾ ನೀಡಲು ಮುಂದಾಗಿದೆ.

ಜಿಯೋ ಎಫೆಕ್ಟ್: ರೂ. 250ಕ್ಕೆ 4GB 4G ಡೇಟಾ ನೀಡಲು ಮುಂದಾದ ವೊಡೋಪೋನ್

ಓದಿರಿ..: ಪ್ಲಾಷ್ ಸೇಲ್‌ನಲ್ಲಿ ರೆಡ್‌ಮಿ ನೋಟ್ 4 ಖರೀದಿಸುವುದು ಹೇಗೆ..? ಇಲ್ಲಿದೆ ಸಿಂಪಲ್ ಟ್ರಿಕ್ಸ್.....!

ವಿವಿಧ ಮಾದರಿಯ ಡೇಟಾ ಪ್ಯಾಕ್‌ ಗಳನ್ನು ವೊಡೋಪೋನ್ ತನ್ನ ಗ್ರಾಹಕರಿಗಾಯೇ ನೀಡಿದ್ದು, 1GB 4G ಡೇಟಾ ಪ್ಯಾಕ್ ಅನ್ನು ರೂ.150ಕ್ಕೇ ನೀಡುತ್ತಿದ್ದು, 4GB 4G ಡೇಟಾ ಪ್ಯಾಕ್ ಅನ್ನು ರೂ. 250ಕ್ಕೆ, ಇನ್ನು 6GB 4G ಡೇಟಾ ಪ್ಯಾಕ್ ನ ಬೆಲೆಯನ್ನು ರೂ. 350 ನಿಗಧಿ ಮಾಡಿದೆ.

ಇದಲ್ಲದೇ ಇನ್ನು ಹೆಚ್ಚಿನ ಡೇಟಾ ಬೇಕು ಎನ್ನುವರಿಗಾಗಿ 9GB 4G ಡೇಟಾ ಪ್ಯಾಕ್‌ ಅನ್ನು ಕೇವಲ ರೂ. 450ಕ್ಕೆ ನೀಡಲು ಮುಂದಾಗಿರುವ ವೊಡೋಪೋನ್, 13GB 4G ಡೇಟಾ ಪ್ಯಾಕಿಗೆ ರೂ.650 ನಿಗಧಿ ಮಾಡಿದೆ. ಇಲ್ಲದೇ 22GB 4G ಡೇಟಾ ಪ್ಯಾಕ್‌ನ ಬೆಲೆ 999 ರೂಗಳಾಗಿದ್ದು, 35GB 4G ಡೇಟಾ ಪ್ಯಾಕ್ ಕೇವಲ 1,500 ರೂಗಳಿಗೆ ಲಭ್ಯವಿದೆ.

ಜಿಯೋ ಎಫೆಕ್ಟ್: ರೂ. 250ಕ್ಕೆ 4GB 4G ಡೇಟಾ ನೀಡಲು ಮುಂದಾದ ವೊಡೋಪೋನ್

ಓದಿರಿ..: ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ 5 ಮೆಮೊರಿ ಕಾರ್ಡ್‌ಗಳು (64GB)

ಆದರೆ ಈ ಆಫರ್ ಕೇವಲ 4G ಸರ್ಕಲ್ ನಲ್ಲಿ ಮಾತ್ರ ಲಭ್ಯವಿದ್ದು, ವಿವಿಧ ರಾಜ್ಯಗಳಲ್ಲಿ ಈ ಆಫರ್ ಬದಲಾಗಬಹುದು ಎಂದು ವೊಡೋಪೋನ್ ತಿಳಿಸಿದ್ದು, ಒಟ್ಟಿನಲ್ಲಿ ತನ್ನ 4G ಬಳಕೆಯ ಗ್ರಾಹಕರನ್ನು ಬಿಟ್ಟುಕೊಡದೆ ನಮ್ಮೊಂದಿಗೆ ಇರಲಿ ಎಂಬ ಕಾರಣ ವೊಡೋ ಪೋನ್ ತನ್ನ ದರಗಳಲ್ಲಿ ಇಷ್ಟು ಮಟ್ಟಕ್ಕೆ ಕಡಿತಗೊಳಿಸಲು ಮುಂದಾಗಿದೆ.

Best Mobiles in India

Read more about:
English summary
Now, a Rs. 150 data pack will offer 1GB of data a month, while a Rs. 1,500 data pack will offer 35GB of data a month. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X