ಜಿಯೋಗೆ ಹೊಡೆತ ನೀಡುತ್ತಾ ವೊಡಾಫೋನ್ ಈ ಹೊಸ ಆಫರ್..!
ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೊ ಅಬ್ಬರ ಜೋರಾಗಿದ್ದು, ಇದೇ ಸಂದರ್ಭದಲ್ಲಿ ಹೊಸ ಹೊಸ ಆಫರ್ ಗಳನ್ನು ಲಾಂಚ್ ಮಾಡುವ ಮೂಲಕ ಮತ್ತಷ್ಟು ಜನರನ್ನು ಸೆಳೆಯಲು ಜಿಯೋ ಮುಂದಾಗಿದೆ. ಈ ಹಿನ್ನಲೆಯಲ್ಲಿ ಜಿಯೋಗೆ ಕೌಂಟರ್ ನೀಡುವ ಸಲುವಾಗಿ ವೊಡಾಫೋನ್ ತನ್ನದೇ ನೂತನ ಆಫರ್ ಗಳನ್ನು ಲಾಂಚ್ ಮಾಡದೆ. ಈ ಮೂಲಕ ಜಿಯೋಗೆ ನೇರ ಕೌಂಟರ್ ನೀಡಲು ಮುಂದಾಗಿದೆ.

ಓದಿರಿ: ಶೀಘ್ರವೇ ಜಿಯೋದಿಂದ ಹೊಸ ಸೇವೆ: ಟೆಲಿಕಾಂ ಕಂಪನಿಗಳಿಗೆ ಮತ್ತೊಂದು ಹೊಡೆತ..!
ಎರಡು ಹೊಸ ಆಫರ್ ಗಳನ್ನು ವೊಡಾಫೋನ್ ಲಾಂಚ್ ಮಾಡಿದ್ದು, ಈ ಮೂಲಕ ಹೆಚ್ಚಿನ ಜನರನ್ನು ಸೆಳೆಯುವ ಕ್ರಮಕ್ಕೆ ಮುಂದಾಗಿದೆ. ಈ ಎರಡು ಆಫರ್ ಗಳಲ್ಲಿ ಗ್ರಾಹಕರಿಗೆ ಹೆಚ್ಚಿನ ಡೇಟಾ, ಹೆಚ್ಚಿನ ವ್ಯಾಲಿಡಿಟಿ ಸೇರಿದಂತೆ ಹೆಚ್ಚಿನ ಲಾಭಗಳನ್ನು ಮಾಡಿಕೊಡಲಿದೆ ಎನ್ನಲಾಗಿದೆ.

ರೂ. 458 ಪ್ಲಾನ್:
ವೊಡಾಫೋನ್ ರೂ.458 ಪ್ಲಾನ್ ಲಾಂಚ್ ಮಾಡಿದ್ದು, ಇದರಲ್ಲಿ ಬಳಕೆದಾರರಿಗೆ 70 ದಿನಗಳ ವ್ಯಾಲಿಡಿಟಿಯನ್ನು ನೀಡಲಿದ್ದು, ಇದರೊಂದಿಗೆ 70GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದಲ್ಲದೇ ಇದರಲ್ಲಿ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ ಎನ್ನಲಾಗಿದೆ.

ರೂ. 509 ಆಫರ್:
ಇದಲ್ಲದೇ ಹೆಚ್ಚಿನ ಡೇಟಾ ಮತ್ತು ಕರೆಯ ಆಫರ್ ಬೇಕು ಎನ್ನುವವರಿಗಾಗಿ ವೊಡಾಫೋನ್ ಈ ಆಫರ್ ಅನ್ನು ಲಾಂಚ್ ಮಾಡಿದೆ. ಇದರಲ್ಲಿ ಗ್ರಾಹಕರು ಪ್ರತಿ ನಿತ್ಯ ಒಂದು GB ಡೇಟಾದಂತೆ 91GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಬಹುದು. ಅಲ್ಲದೇ ಇದರಲ್ಲಿಯೂ ಗ್ರಾಹಕರು ಅನಿಯಮಿತ.


ಜಿಯೋ ಕೌಂಟರ್:
ಜಿಯೋ ಸಹ ತನ್ನ ಬಳಕೆದಾರರಿಗೆ ಹೆಚ್ಚಿನ ವ್ಯಾಲಿಡಿಟಿಯೊಂದಿಗೆ ಡೇಟಾವನ್ನು ನೀಡಲು ಮುಂದಾಗಿತ್ತು. ವೊಡಾಫೋನ್ ಸಹ ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿದ್ದು, ತನ್ನ ಬಳಕೆದಾರರು ಜಿಯೋಗೆ ವಲಸೆ ಹೋಗುವುದುದನ್ನು ತಡೆಯಲು ಮುಂದಾಗಿದೆ ಎನ್ನಲಾಗಿದೆ.


Click it and Unblock the Notifications








