Subscribe to Gizbot

ವೊಡಾಫೋನ್‌ನಿಂದ ಇತಿಹಾಸದ ಆಫರ್!..348 ರೂ.ಗೆ ಪ್ರತಿದಿನ 2GB ಡೇಟಾ, ಉಚಿತ ಕರೆ!!!

Written By:

ಜಿಯೋ, ಏರ್‌ಟೆಲ್ ಟೆಲಿಕಾಂ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಜೊತೆಗೆ ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯುವ ಉದ್ದೇಶದಿಂದ ವೊಡಾಫೋನ್ ಇತಿಹಾಸದ ಆಫರ್ ಒಂದನ್ನು ಬಿಡುಗಡೆ ಮಾಡಿದೆ.!! ಟೆಲಿಕಾಂ ಇತಿಹಾಸದಲ್ಲಿಯೇ ಇಲ್ಲಿಯವರೆಗೂ ಯಾರೂ ನೀಡದ ಈ ಅದ್ಭುತ ಆಫರ್ ಜನರನ್ನು ಸೆಳೆಯುತ್ತಿದೆ.!!

ಕೇವಲ 348 ರೂಪಾಯಿಗಳಿಗೆ ಪ್ರತಿದಿನ 2GB ಡೇಟಾ ಮತ್ತು ಉಚಿತ ಕರೆ ಆಫರ್ ಅನ್ನು ವೊಡಾಫೋನ್ ಪ್ರಕಟಿಸಿದ್ದು, 500 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಸಿಕ್ಕಿರುವ ಈ ಆಫರ್ ಮತ್ತೊಂದು ದರಸಮರಕ್ಕೆ ಕಾರಣವಾಗಲಿದೆ.!! ಹಾಗಾಗಿ, ಆಫರ್ ಬಗ್ಗೆ ಪೂರ್ಣ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇತಿಹಾಸದ ಆಫರ್!!

ಇತಿಹಾಸದ ಆಫರ್!!

ಟೆಲಿಕಾಂ ಕಂಪೆನಿಯಲ್ಲಿಯೇ ಯಾರೂ ನೀಡದ ಆಫರ್ ಅನ್ನು ಇಂದು ವೊಡಾಫೋನ್ ನೀಡಿದ್ದು, 348 ರೂಪಾಯಿಗಳ ಅತ್ಯಂತ ಕಡಿಮೆ ಬೆಲೆಗೆ ಪ್ರತಿದಿನ 2GB ಡೇಟಾ ಮತ್ತು ಉಚಿತ ಕರೆ ಆಫರ್ ಅನ್ನು ಪ್ರಕಟಿಸಿದೆ.! ಹಾಗಾಗಿ, ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆದಿರುವ ಈ ಆಫರ್ ಅನ್ನು ಇತಿಹಾಸದ ಆಫರ್ ಎನ್ನಬಹುದು.!!

348 ರೂ. ವೊಡಾಫೋನ್ ಆಫರ್!!

348 ರೂ. ವೊಡಾಫೋನ್ ಆಫರ್!!

ವೊಡಾಫೋನ್ ಬೋನಸ್ ಕಾರ್ಡ್ ಮೂಲಕ ತನ್ನ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಮತ್ತು ಉಚಿತ ಕರೆ ಆಫರ್ ಅನ್ನು ನೀಡಿದ್ದು, 348 ರೂಪಾಯಿಗಳನ್ನು ರೀಚಾರ್ಜ್ ಮಾಡಿಸಿಕೊಂಡರೆ ದೇಶದಾಧ್ಯಂತ ಉಚಿತ ಕರೆ ಮತ್ತು ಪ್ರತಿದಿನ 2GB ಡೇಟಾ ಪಡೆಯಬಹುದಾಗಿದೆ.!!

ಉಚಿತ ಕರೆಗೆ ಬ್ರೇಕ್ ಇದೆ.!!

ಉಚಿತ ಕರೆಗೆ ಬ್ರೇಕ್ ಇದೆ.!!

348 ರೂಪಾಯಿಗಳಿಗೆ ಪ್ರತಿದಿನ 2GB ಡೇಟಾ ಮತ್ತು ಉಚಿತ ಕರೆ ಆಫರ್ ನೀಡಿರುವ ವೊಡಾಫೋನ್ ಉಚಿತ ಕರೆಗೆ ಬ್ರೇಕ್ ಹಾಕಿದೆ. ಅನ್‌ಲಿಮಿಟೆಡ್ ಕರೆಗಳಿಗೆ ಬದಲಾಗಿ, ಪ್ರತಿದಿನ 250 ಉಚಿತ ಕರೆಗಳು ಹಾಗೂ ಪ್ರತಿವಾರಕ್ಕೆ 1000 ಕರೆಗಳಿಗೆ ಈ ಆಫರ್ ಅನ್ನು ಲಿಮಿಟ್ ಮಾಡಿದೆ.!!

ಈ ಆಫರ್ ವ್ಯಾಲಿಡಿಟಿ ಎಷ್ಟು?

ಈ ಆಫರ್ ವ್ಯಾಲಿಡಿಟಿ ಎಷ್ಟು?

348 ರೂಪಾಯಿಗಳ ಪ್ರತಿದಿನ 2GB ಡೇಟಾ ಮತ್ತು ಉಚಿತ ಕರೆಯ ಈ ಆಫರ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಪ್ರತಿದಿನ ಒಂದು ಜಿಬಿಗಿಂತಲೂ ಹೆಚ್ಚು ಡೇಟಾ ಬೇಕು ಎನ್ನುವ ಗ್ರಾಹಕರಿಗೆ ಈ ಆಫರ್ ಅತ್ಯುತ್ತಮವಾಗಿದೆ.!!

4G ಗ್ರಾಹಕರಿಗೆ ಮಾತ್ರ!!

4G ಗ್ರಾಹಕರಿಗೆ ಮಾತ್ರ!!

ವೊಡಾಫೋನ್ ನೀಡಿರುವ ಈ ಬೋನಸ್ ಕಾರ್ಡ್ ಆಫರ್ 4G ಗ್ರಾಹಕರಿಗೆ ಮಾತ್ರ ಲಭ್ಯವಿದೆ. 3G ಗ್ರಾಹಕರನ್ನು ಉಳಿಸಿಕೊಳ್ಳಲು ಈಗಾಗಲೇ ಟೆಲಿಕಾಂನಲ್ಲಿ ಯುದ್ದವೇ ಶುರುವಾಗಿದ್ದು, ಈ ಆಫರ್‌ 3G ಬಳಕೆದಾರರಿಗೆ ಸಿಗುವ ದಿನ ದೂರವಿಲ್ಲ ಎನ್ನಬಹುದು.!!

ಓದಿರಿ:ಜನಪ್ರಿಯ ಆಪ್ 'ಟ್ರೂ ಬ್ಯಾಲೆನ್ಸ್' ತಂದಿದೆ ಮೊಬೈಲ್ ವಾಲೆಟ್ ಸೇವೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Vodafone has upgraded its Rs. 348 pack for prepaid customers. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot