Subscribe to Gizbot

ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಭರ್ಜರಿ ಆಫರ್ ನೀಡಿದ ವೊಡಾಫೋನ್..!!!

Written By:

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಭರಾಟೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನ್ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇದಲ್ಲದೇ ಮೊಬೈಲ್ ಫೋನಿನ ಮೇಲೆ ಲೆಕ್ಕವಿಲ್ಲದಷ್ಟು ಹಣವನ್ನು ಸುರಿಯಲು ಗ್ರಾಹಕರು ಸಿದ್ಧವಾಗಿದ್ದಾರೆ. ಇಂತಹವರ ಸ್ಮಾರ್ಟ್‌ಫೋನ್ ರಕ್ಷಣೆಗೆ ವೊಡಾಫೋನ್ ಹೊಸದೊಂದು ಆಫರ್ ಘೋಷಣೆ ಮಾಡಿದೆ.

ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಭರ್ಜರಿ ಆಫರ್ ನೀಡಿದ ವೊಡಾಫೋನ್..!!!

ಓದಿರಿ: ಖರ್ಚಿಲ್ಲದೇ ಒಂದೇ ದಿನದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಸಾಧ್ಯವೇ..? ಯಾಕಿಲ್ಲ ಇಲ್ಲಿದೇ ಸಂಪೂರ್ಣ ಮಾಹಿತಿ

ವೊಡಾಫೋನ್ ಹೊಸದಾಗಿ 'ವೊಡಾಫೋನ್ ರೆಡ್ ಶಿಲ್ಡ್' ಎನ್ನುವ ಹೊಸದೊಂದು ಸ್ಮಾರ್ಟ್‌ಫೋನ್ ಪ್ರೋಟೆಕ್ಷನ್ ಇನ್‌ಷ್ಯೂರೆನ್ಸ್ ಪಾಲಿಸಿಯನ್ನು ಪರಿಚಯಿಸಲು ಮುಂದಾಗಿದೆ. ಇದು 50,000ದ ವರೆಗೆ ಇನ್‌ಷ್ಯೂರೆನ್ಸ್ ಕವರ್ ಅನ್ನು ಹೊಸ ಸ್ಮಾರ್ಟ್‌ಫೋನ್‌ಗಳಿಗೆ ಹಾಗೂ 6 ತಿಂಗಳು ಹಳೇಯ ಫೋನ್‌ಗಳಿಗೂ ಸೇವೆಯನ್ನು ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೊಡಾಫೋನ್ ರೆಡ್ ಶಿಲ್ಡ್:

ವೊಡಾಫೋನ್ ರೆಡ್ ಶಿಲ್ಡ್:

ಸದ್ಯ ಈ ವೊಡಾಫೋನ್ ರೆಡ್ ಶಿಲ್ಡ್ ಆಫರ್ ಕೇವಲ ವೊಡಾಫೋನ್ ಪೋಸ್ಟ್ ಪೇಯ್ಡ್ ಬಳಕೆದಾರಿಗೆ ಮಾತ್ರವೇ ಲಭ್ಯವಿದ್ದು, ಅದರಲ್ಲೂ ವೊಡಾಪೋನ್ ರೆಡ್ ಬಳಕೆದಾರಿಗೆ ಕಂಪ್ಲಿಮೆಂಟ್ರಿಯಾಗಿ ಈ ಇನ್‌ಷ್ಯೂರೆನ್ಸ್ ಆಯ್ಕೆಯನ್ನು ನೀಡುತ್ತಿದೆ.

ಒಂದು ವರ್ಷ ವ್ಯಾಲಿಡಿಟಿ:

ಒಂದು ವರ್ಷ ವ್ಯಾಲಿಡಿಟಿ:

ವೊಡಾಫೋನ್ ರೆಡ್ ಶಿಲ್ಡ್ ಕೇವಲ ವೊಡಾಫೋನ್ ರೆಡ್ ಬಳಕೆದಾರಿಗೆ ಮಾತ್ರವೇ ದೊರೆಯಲಿದ್ದು, ಅದು ಒಂದು ವರ್ಷ ವ್ಯಾಲಿಡಿಟಿಯನ್ನು ಹೊಂದಿರಲಿದೆ. ಒಂದು ವರ್ಷದಲ್ಲಿ ಸ್ಮಾರ್ಟ್‌ಫೋನ್‌ಗೆ ಏನೇ ಆದರು ವೊಡಾಪೋನ್ ಕೇರ್ ಮಾಡಲಿದೆ.

ಪ್ಲೇ ಸ್ಟೋರ್‌ನಲ್ಲಿ ಆಪ್ ಲಭ್ಯ:

ಪ್ಲೇ ಸ್ಟೋರ್‌ನಲ್ಲಿ ಆಪ್ ಲಭ್ಯ:

ಸದ್ಯ ಆಂಡ್ರಾಯ್ಡ್ ಮತ್ತು ಐಎಸ್ಓ ಬಳಕೆದಾರರಿಗೆ ವೊಡಾಫೋನ್ ರೆಡ್ ಶಿಲ್ಡ್ ಆಪ್ ಬಳಕೆಗೆ ಮುಕ್ತವಾಗಿದ್ದು, ಇದರಲ್ಲಿ ಥಿಫ್ ಕವರ್, ಮಾಲ್ವೇರ್ ಪ್ರೋಟೆಕ್ಷನ್, ಅಲ್ಲದೇ ಸೆಕ್ಯೂರಿಟಿ ಫೀಚರ್ ಗಳು ಇರಲಿದೆ.

ಇದಕ್ಕಾಗಿ ದರವನ್ನು ವಿಧಿಸಲಿದೆ:

ಇದಕ್ಕಾಗಿ ದರವನ್ನು ವಿಧಿಸಲಿದೆ:

ವೊಡಾಫೋನ್ ರೆಡ್ ಶಿಲ್ಡ್ ಸೇವೆಯನ್ನು ಪಡೆದುಕೊಳ್ಳುವ ಗ್ರಾಹಕರಿಗೆ ವೊಡಾಫೋನ್ ವರ್ಷಕ್ಕೆ ರೂ.720 ದರವನ್ನು ವಿಧಿಸಲಿದ್ದು, ಪ್ರತಿ ತಿಂಗಳು 60 ರೂ.ನಂತೆ ಪ್ರತಿ ತಿಂಗಲ ಬಿಲ್ ನಲ್ಲಿ ಕಟ್ ಮಾಡಿಕೊಳ್ಳಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Vodafone India has introduced Vodafone Red Shield’, a device security solution with complimentary insurance for smartphones. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot