ವಿಪಿಎನ್‌ ಸೇವೆ ನೀಡುವ ಕಂಪೆನಿಗಳಿಗೆ ಬಿಗ್‌ ಶಾಕ್‌ ಕೊಟ್ಟ ಭಾರತ ಸರ್ಕಾರ!

|

ಪ್ರಸ್ತುತ ದಿನಗಳಲ್ಲಿ ಆನ್‌ಲೈನ್‌ ಬ್ರೌಸಿಂಗ್‌ ಮಾಡುವ ಹೆಚ್ಚಿನ ಬಳಕೆದಾರರು ವಿಪಿಎನ್‌ ಸೇವೆಗಳನ್ನು ಬಳಸುತ್ತಾರೆ. ವಿಪಿಎನ್‌ ಸೇವೆ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡುವುದರಿಂದ ಹೆಚ್ಚು ಜನಪ್ರಿಯತೆ ಕೂಡ ಪಡೆದುಕೊಂಡಿದೆ. ಸದ್ಯ ಇದೀಗ ವಿಪಿಎನ್‌ ಸೇವೆ ನೀಡುವ ಕಂಪೆನಿಗಳಿಗೆ ಭಾರತ ಸರ್ಕಾರ ಹೊಸ ಆದೇಶ ನೀಡಿದೆ. ಭಾರತ ಸರ್ಕಾರದ ಐಟಿ ಸಚಿವಾಲಯ VPN ಕಂಪನಿಗಳಿಗೆ ಕನಿಷ್ಠ ಐದು ವರ್ಷಗಳ ಅವಧಿಗೆ ಬಳಕೆದಾರರ ಡೇಟಾವನ್ನು ಸಂಗ್ರಹಿಸುವುದಕ್ಕೇ ಆದೇಶ ಮಾಡಿದೆ.

ವಿಪಿಎನ್‌

ಹೌದು, ಭಾರತ ಸರ್ಕಾರದ ಐಟಿ ಸಚಿವಾಲಯ ವಿಪಿಎನ್‌ ಕಂಪೆನಿಗಳಿಗೆ ಐದು ವರ್ಷಗಳ ಅವಧಿಗೆ ಬಳಕೆದಾರರ ಡೇಟಾ ಸ್ಟೋರೇಜ್‌ ಮಾಡುವಂತೆ ಹೇಳಿದೆ. CERT-in ದೇಶದಲ್ಲಿ ಸೈಬರ್ ಭದ್ರತೆಗೆ ಸಂಬಂಧಿಸಿದ ಪ್ರತಿಕ್ರಿಯೆ ಚಟುವಟಿಕೆಗಳು ಮತ್ತು ತುರ್ತು ಕ್ರಮಗಳನ್ನು ಸಂಘಟಿಸುವುದಕ್ಕಾಗಿ ಈ ಆದೇಶ ಹೊರಬಿದ್ದಿದೆ. ಇದಕ್ಕಾಗಿ ಈ ಅವಧಿಯ ಬಳಕೆದಾರರ ಡೇಟಾವನ್ನು ಕಲೆಕ್ಟ್‌ ಮಾಡುವುದಕ್ಕೆ ಮತ್ತು ಸ್ಟೋರೇಜ್‌ ಮಾಡುವುದಕ್ಕೆ ಡೇಟಾ ಸೆಂಟರ್‌ ಮತ್ತು ಕ್ರಿಪ್ಟೋ ವಿನಿಮಯ ಕೇಂದ್ರಗಳನ್ನು ಕೇಳಿದೆ. ಹಾಗಾದ್ರೆ ಭಾರತ ಸರ್ಕಾರ ವಿಪಿಎನ್‌ ಸೇವೆಗಳಿಗೆ ಈ ರೀತಿಯ ಆದೇಶ ನೀಡುವುದಕ್ಕೆ ಕಾರಣ ಏನು? ವಿಪಿಎನ್‌ ಇಂಟರ್‌ನೆಟ್‌ ಬಳಕೆದಾರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿಪಿಎನ್‌

ಭಾರತ ಸಾರ್ಕರದ ಐಟಿ ಸಚಿವಾಲಯದ ವಿಪಿಎನ್‌ ಸೇವೆ ನೀಡುವ ಕಂಪೆನಿಗಳು ಬಳಕೆದಾರರ ಡೇಟಾವನ್ನು ಸಂಗ್ರಹಿಸುವಂತೆ ಕೇಳಿದೆ. ಭಾರತದ ಹೊಸ ಐಟಿ ನಿಯಮಗಳ ಅನ್ವಯ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಬೇಡಿಕೆಗಳನ್ನು ಪೂರೈಸಲು ವಿಫಲವಾದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಕೂಡ ಇದೆ. ಅಲ್ಲದೆ ಬಳಕೆದಾರರು ತಮ್ಮ ವಿಪಿಎನ್‌ ಸೇವೆಯ ಚಂದಾದಾರಿಕೆಯನ್ನು ರದ್ದುಗೊಳಿಸಿದ ನಂತರವೂ ಈ ಕಂಪನಿಗಳು ಬಳಕೆದಾರರ ದಾಖಲೆಗಳನ್ನು ಟ್ರ್ಯಾಕ್ ಮಾಡುವುದು ಅಗತ್ಯವಾಗಿದೆ.

ಇಂಟರ್‌ನೆಟ್ ಬಳಕೆದಾರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಇಂಟರ್‌ನೆಟ್ ಬಳಕೆದಾರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ವೆಬ್‌ ಬ್ರೌಸಿಂಗ್‌ನಲ್ಲಿ ಗೌಪ್ಯತೆಯನ್ನುಕಾಪಾಡಿಕೊಳ್ಳುವುದಕ್ಕಾಗಿ ವಿಪಿಎನ್‌ ಸೇವೆಯನ್ನು ಹೆಚ್ಚಿನ ಜನರು ಬಳಸುತ್ತಾರೆ. ವಿಪಿಎನ್‌ (ವರ್ಚುವಲ್ ಪ್ರಾಕ್ಸಿ ನೆಟ್‌ವರ್ಕ್‌)ಗಳು ಬಳಕೆದಾರರ ಲೊಕೇಶನ್‌ ಡೇಟಾವನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ ಟ್ರ್ಯಾಕರ್‌ಗಳಿಂದ ಮುಕ್ತವಾಗಿರಲು ಅವಕಾಶ ಮಾಡಿಕೊಡುತ್ತದೆ. ಇದರಿಂದ ನೀವು ಎಲ್ಲಿ ಕುಳಿತು ವೆಬ್‌ ಬ್ರೌಸಿಂಗ್‌ ಮಾಡುತ್ತಿದ್ದೀರಿ ಅನ್ನುವುದು ಬೇರೆಯವರಿಗೆ ತಿಳಿಯುವುದೇ ಇಲ್ಲ. ಇದಲ್ಲದೆ ನೀವು ಪಾವತಿಸಿದ VPN ಸೇವೆಗಳು ಮತ್ತು ಕೆಲವು ಉತ್ತಮ ಉಚಿತ ಸೇವೆಗಳು ಹಾಗೂ ನೋ-ಲಾಗಿಂಗ್ ನೀತಿಯನ್ನು ನೀಡುತ್ತವೆ. ಆದರೆ ಸರ್ಕಾರದ ಹೊಸ ಆದೇಶವನ್ನು ವಿಪಿಎನ್‌ ಕಂಪೆನಿಗಳು ಜಾರಿಗೊಳಿಸಿದರೆ ಬಳಕೆದಾರರ ಡೇಟಾವನ್ನು ಸ್ಟೋರೇಜ್‌ ಮಾಡಬೇಕಾಗುತ್ತದೆ. ಬಳಕೆದಾರರ ಡೇಟಾಗೆ ಲಾಗ್ ಇನ್ ಮಾಡಲು ಮತ್ತು ಕನಿಷ್ಠ ಐದು ವರ್ಷಗಳ ಅವಧಿಗೆ ಅದನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ.

ಹೊಸ ಬದಲಾವಣೆ ಯಾವಾಗ ಜಾರಿಯಾಗಲಿದೆ?

ಹೊಸ ಬದಲಾವಣೆ ಯಾವಾಗ ಜಾರಿಯಾಗಲಿದೆ?

ಸದ್ಯ ಹೊಸ ಕಾನೂನುಗಳು ಜಾರಿಯಾದ 60 ದಿನಗಳಿಂದ ಈ ಆದೇಶ ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿದೆ, ಅಂದರೆ ಇದೇ ಜುಲೈ 27, 2022 ರಿಂದ ಅವು ಪ್ರಾರಂಭವಾಗಬಹುದು ಎನ್ನಲಾಗಿದೆ. ಇದರಿಂದ ನವು ವಿಪಿಎನ್‌ ಸೇವೆ ಬಳಸುವಾಗಲು ನಿಮ್ಮ ಡೇಟಾವನ್ನುವಿಪಿಎನ್‌ ಕಲೆಕ್ಟ್‌ ಮಾಡಲಿದೆ.

VPN ಕಂಪನಿಗಳು ಯಾವ ಡೇಟಾವನ್ನು ಸರ್ಕಾರಕ್ಕೆ ಕಳುಹಿಸಬೇಕು?

VPN ಕಂಪನಿಗಳು ಯಾವ ಡೇಟಾವನ್ನು ಸರ್ಕಾರಕ್ಕೆ ಕಳುಹಿಸಬೇಕು?

ಸೊಶೀಯಲ್‌ ಮೀಡಿಯಾ ಅಕೌಂಟ್‌ಗಳಿಗೆ ಅನಧಿಕೃತ ಪ್ರವೇಶ ನೀಡುವ ವಿವವರ, ಐಟಿ ವ್ಯವಸ್ಥೆಗಳು, ಸರ್ವರ್‌ಗಳ ಮೇಲಿನ ದಾಳಿಗಳ ಬಗ್ಗೆ ಡೇಟಾವನ್ನು ನೀಡಬೇಕಾಗುತ್ತದೆ. ಒಟ್ಟು ಇಪ್ಪತ್ತು ದೋಷಗಳನ್ನು ವರದಿ ಮಾಡುವುದಕ್ಕೆ ವಿಪಿಎನ್‌ ಕಂಪೆನಿಗಳಿಗೆ ಸರ್ಕಾರ ಸೂಚಿಸಿದೆ.

Best Mobiles in India

Read more about:
English summary
The Indian IT Ministry has ordered VPN companies to collect and store users’ data for a period of at least five years.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X