'ವಿಯು' ಕಂಪೆನಿಯಿಂದ ಹೊಸ ಸರಣಿಯ ಸ್ಮಾರ್ಟ್‌ಟಿವಿ ಬಿಡುಗಡೆ! ಬೆಲೆ ಎಷ್ಟು?

|

ಭಿನ್ನ ಮಾದರಿಯ ಸ್ಮಾರ್ಟ್‌ಟಿವಿಗಳಿಗೆ ಹೆಸರುವಾಸಿಯಾದ ವಿಯು ಕಂಪೆನಿ ತನ್ನ ಹೊಸ ಸ್ಮಾರ್ಟ್‌ಟಿವಿ ಸರಣಿಯನ್ನು ಪರಿಚಯಿಸಿದೆ. ಭಾರತದ ಮಾರುಕಟ್ಟೆಯಲ್ಲಿ ತನ್ನ ಹೊಸ ವಿಯು ಗ್ಲೋ ಎಲ್‌ಇಡಿ ಅಲ್ಟ್ರಾ-ಹೆಚ್‌ಡಿ ಹೆಚ್‌ಡಿಆರ್‌ ಟಿವಿ ಶ್ರೇಣಿಯನ್ನು ಅನಾವರಣಗೊಳಿಸಿದೆ. ಈ ಶ್ರೇಣಿಯು 50, 55, ಮತ್ತು 65 ಇಂಚುಗಳ ಮೂರು ಗಾತ್ರಗಳಲ್ಲಿ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ಟಿವಿ ಸರಣಿಯು 'ಗ್ಲೋ' ಡಿಸ್ಪ್ಲೇ ಪ್ಯಾನೆಲ್ ಅನ್ನು ಹೊಂದಿದೆ ಎಂದು ವಿಯು ಹೇಳಿಕೊಂಡಿದೆ.

ವಿಯು

ಹೌದು, ವಿಯು ಕಂಪೆನಿ ಭಾರತದಲ್ಲಿ ತನ್ನ ಹೊಸ ವಿಯು ಗ್ಲೋ ಎಲ್‌ಇಡಿ ಟಿವಿ ಸರಣಿಯನ್ನು ಲಾಂಚ್‌ ಮಾಡಿದೆ. ಈ ಸರಣಿಯ ಸ್ಮಾರ್ಟ್‌ಟಿವಿಗಳ ಆರಂಭಿಕ ಬೆಲೆ 35,999ರೂ. ಗಳಿಂದ ಪ್ರಾರಂಭವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳು ಡಾಲ್ಬಿ ವಿಷನ್ ಫಾರ್ಮ್ಯಾಟ್‌ವರೆಗೆ HDR ಅನ್ನು ಬೆಂಬಲಿಸುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ ಈ ಸರಣಿಯ ಸ್ಮಾರ್ಟ್‌ಟಿವಿಗಳು ಆಂಡ್ರಾಯ್ಡ್‌ ಟಿವಿ ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಹಾಗಾದ್ರೆ 'ವಿಯು' ಕಂಪೆನಿಯ ಹೊಸ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಿಯು

ವಿಯು ಗ್ಲೋ ಎಲ್‌ಇಡಿ ಟಿವಿ ಸರಣಿಯು ಮೂರು ಗಾತ್ರದ ಆಯ್ಕೆಗಳಲ್ಲಿ ಎಂಟ್ರಿ ನೀಡಿದೆ. ಇನ್ನು ಈ ಎಲ್ಲಾ ಸ್ಮಾರ್ಟ್‌ಟಿವಿಗಳು ಅಲ್ಟ್ರಾ HD LED ಸ್ಕ್ರೀನ್‌ಗಳನ್ನು ಹೊಂದಿದ್ದು, 3840x2160-ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಹೊಂದಿದೆ. ಇದನ್ನು 'ಗ್ಲೋ' ಡಿಸ್ಪ್ಲೇ ಪ್ಯಾನೆಲ್ ಎಂದು ಹೆಸರಿಸಲಾಗಿದೆ. ಇನ್ನು ಈ ಟಿವಿಗಳು AI ಗ್ಲೋ ಪಿಕ್ಚರ್ ಪ್ರೊಸೆಸರ್‌ ಹೊಂದಿದ್ದು, TV ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಟಿವಿ ಗೂಗಲ್‌ ಟಿವಿ ಬಳಕೆದಾರ ಇಂಟರ್‌ಫೇಸ್ ಒಳಗೊಂಡಿದೆ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿ 400 ನಿಟ್ಸ್‌ ರೇಟ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ 104W ರೇಟ್‌ ಔಟ್‌ಪುಟ್‌ನೊಂದಿಗೆ ಇಂಟರ್‌ಬಿಲ್ಟ್‌ ಸಬ್‌ವೂಫರ್ ಅನ್ನು ಹೊಂದಿರುವ ಸೌಂಡ್‌ ಸಿಸ್ಟಂ ಅನ್ನು ಹೊಂದಿದೆ. ಹಾಗೆಯೇ 2GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಜೊತೆಗೆ ಹ್ಯಾಂಡ್ಸ್-ಫ್ರೀ ಗೂಗಲ್‌ ಅಸಿಸ್ಟೆಂಟ್‌ ಪ್ರವೇಶ, ಕ್ರಿಕೆಟ್‌ ವ್ಯೂ ಅನುಭವವನ್ನು ಅತ್ಯುತ್ತಮವಾಗಿಸಲು ಸುಧಾರಿತ ಕ್ರಿಕೆಟ್ ಮೋಡ್ ಮತ್ತು ಸರಿಹೊಂದಿಸಲು ಆಂಬಿಯೆಂಟ್ ಲೈಟ್ ಸೆನ್ಸರ್‌ನಂತಹ ಫೀಚರ್ಸ್‌ಗಳನ್ನು ಹೊಂದಿದೆ.

ಡೈನಾಮಿಕ್

ವಿಯು ಗ್ಲೋ ಎಲ್‌ಇಡಿ ಟಿವಿ ಡಾಲ್ಬಿ ವಿಷನ್ ಮತ್ತು HDR10 ಹೈ ಡೈನಾಮಿಕ್ ರೇಂಜ್ ಫಾರ್ಮ್ಯಾಟ್‌ಗಳಿಗೆ ಬೆಂಬಲವಿದೆ. ಹಾಗೆಯೇ ವೇರಿಯಬಲ್ ರಿಫ್ರೆಶ್ ರೇಟ್ ಮತ್ತು ಆಟೋ ಲೋ-ಲೇಟೆನ್ಸಿ ಮೋಡ್‌ನಂತಹ ಗೇಮಿಂಗ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದು ಹಳೆಯ ಸ್ಟಾಕ್ ಆಂಡ್ರಾಯ್ಡ್‌ TV UI ಗಿಂತ ಗಮನಾರ್ಹವಾಗಿ ಸುಧಾರಿತ ಕಾರ್ಯಕ್ಷಮತೆ ಮತ್ತು ಫೀಚರ್ಸ್‌ಗಳನ್ನು ನೀಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ವಿಯು ಗ್ಲೋ ಎಲ್‌ಇಡಿ ಟಿವಿ ಸರಣಿಯ 50 ಇಂಚಿನ ರೂಪಾಂತರಕ್ಕೆ 35,999ರೂ. ಬೆಲೆಯನ್ನು ಹೊಂದಿದೆ. ಇದರ 55 ಇಂಚಿನ ಆಯ್ಕೆಗೆ 40,999ರೂ. ಬೆಲೆ ನಿಗಧಿಪಡಿಸಲಾಗಿದೆ. ಹಾಗೆಯೇ ಈ ಸ್ಮಾರ್ಟ್‌ಟಿವಿಯ 65 ಇಂಚಿನ ಆಯ್ಕೆಗೆ 60,999ರೂ. ಬೆಲೆ ಹೊಂದಿದೆ. ಇದಲ್ಲದೆ ಮುಂದಿನ ದಿನಗಳಲ್ಲಿ ಇದೇ ಸರಣಿಯಲ್ಲಿ ಹೆಚ್ಚುವರಿಯಾಗಿ 43 ಇಂಚಿನ ರೂಪಾಂತರವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

ಆಫರ್‌ಗಳೇನು?

ಆಫರ್‌ಗಳೇನು?

ಸದ್ಯ ಬಿಡುಗಡೆಯಾಗಿರುವ ಎಲ್ಲಾ ಮೂರು ಗಾತ್ರದ ಸ್ಮಾರ್ಟ್‌ಟಿವಿಗಳು ಇದೀಗ ಫ್ಲಿಪ್‌ಕಾರ್ಟ್‌ ಮೂಲಕ ಸೇಲ್‌ ಆಗ್ತಿದೆ. ಮುಂದಿನ ದಿನಗಳಲ್ಲಿ ಡೆಲಿವರಿ ಮತ್ತು ಶಿಪ್ಪಿಂಗ್ ಪ್ರಾರಂಭವಾಗುವ ನಿರೀಕ್ಷೆಯನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿಯ ಬೆಲೆಯ ಮೇಲಿನ ಹೆಚ್ಚಿನ ರಿಯಾಯಿತಿಗಳಿಗಾಗಿ ಹೆಚ್ಚುವರಿ ಬ್ಯಾಂಕ್ ಕೊಡುಗೆಗಳನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Vu Glo LED Ultra-HD television series has been launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X