ಆಂಡ್ರಾಯ್ಡ್‌ನಲ್ಲಿ ಭಾರೀ ಭದ್ರತಾ ಲೋಪ..! ಹ್ಯಾಕರ್‌ಗಳಿಂ ವಿಡಿಯೋ ರೆಕಾರ್ಡ್‌, ಫೋಟೋ ಕ್ಲಿಕ್..!

By Gizbot Bureau
|

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಮಾಲ್‌ವೇರ್‌ಗೆ ಗುರಿಯಾಗುತ್ತಿದ್ದು, ಪರಿಶೀಲಿಸಿದ ಡೆವಲಪರ್‌ಗಳಿಂದ ಪ್ರಕಟವಾದ ಅಪ್ಲಿಕೇಶನ್‌ಗಳನ್ನು ಬಳಸುವಂತೆ ಗ್ರಾಹಕರಿಗೆ ಸೂಚಿಸಲಾಗುತ್ತಿದೆ. ಆದರೆ, ಇತ್ತೀಚಿನ ಭದ್ರತಾ ವರದಿಯು ಗೂಗಲ್ ಸೇರಿ ಅನೇಕ ಕ್ಯಾಮೆರಾ ಆಪ್‌ಗಳಲ್ಲಿ ದುರ್ಬಲತೆ ಕಂಡುಬಂದಿದೆ. ಆಂಡ್ರಾಯ್ಡ್ ಕ್ಯಾಮೆರಾ ಆಪ್‌ನಲ್ಲಿನ ದೋಷಗಳ ಬಗ್ಗೆ ಚೆಕ್‌ಮಾರ್ಕ್ಸ್‌ನ ಭದ್ರತಾ ಸಂಶೋಧಕ ಎರೆಜ್ ಯಾಲೋನ್ ಗೂಗಲ್‌ಗೆ ಮಾಹಿತಿ ನೀಡಿದ್ದಾರೆ. ಫೋನ್ ಲಾಕ್ ಆಗಿದ್ದರೂ ಸಹ ಆಪ್‌ಗಳಿಗೆ ವಿಡಿಯೋ ರೆಕಾರ್ಡ್ ಮಾಡಲು ಮತ್ತು ರಹಸ್ಯವಾಗಿ ಫೋಟೋ ಕ್ಲಿಕ್ಕಿಸಲು ಅವಕಾಶ ಮಾಡಿಕೊಟ್ಟಿದ್ದು, ದುರ್ಬಲತೆಯನ್ನು ಪರ್ಮಿಷನ್‌ ಬೈಪಾಸ್ ಸಮಸ್ಯೆಗಳಿಗೆ ಲಿಂಕ್ ಮಾಡಲಾಗಿದೆ ಎಂದು ಹೇಳಲಾಗುತ್ತದೆ.

ಪಿಕ್ಸೆಲ್‌ ಫೋನ್‌ನಲ್ಲಿ ಬಹಿರಂಗ

ಪಿಕ್ಸೆಲ್‌ ಫೋನ್‌ನಲ್ಲಿ ಬಹಿರಂಗ

ಸಂಶೋಧಕರು ತಮ್ಮ ಹೇಳಿಕೆಯನ್ನು ಪರೀಕ್ಷಿಸಲು ಗೂಗಲ್ ಪಿಕ್ಸೆಲ್ 2 ಎಕ್ಸ್‌ಎಲ್ ಮತ್ತು ಪಿಕ್ಸೆಲ್ 3 ಅನ್ನು ಬಳಸಿದರು. ಮತ್ತು ಅನುಮತಿ ಬೈಪಾಸ್ ಸಮಸ್ಯೆಗಳಿಂದ ಉಂಟಾಗುವ ಅನೇಕ ದೋಷಗಳನ್ನು ಕಂಡುಕೊಂಡಿದ್ದಾರೆ. ಜುಲೈ 4ರಂದು ಆಂಡ್ರಾಯ್ಡ್‌ನ ಭದ್ರತಾ ತಂಡಕ್ಕೆ ದೋಷದ ಬಗ್ಗೆ ವರದಿ ಸಲ್ಲಿಸಿದ್ದೇನೆ ಎಂದು ಯಾಲೋನ್ ಹೇಳಿಕೊಂಡಿದ್ದಾರೆ.

ಗೂಗಲ್‌ನಿಂದ ತಾತ್ಸಾರ

ಗೂಗಲ್‌ನಿಂದ ತಾತ್ಸಾರ

ಆಗಸ್ಟ್ 1 ರಂದು ಭದ್ರತಾ ದೋಷ ಇರುವುದನ್ನು ಗೂಗಲ್ ದೃಢಪಡಿಸಿತು. ಆದರೆ, ಆರಂಭದಲ್ಲಿ ಈ ಸಮಸ್ಯೆಗೆ ಹೆಚ್ಚಿನ ಆದ್ಯತೆ ನೀಡಲಿಲ್ಲ. ಸಂಶೋಧಕರು ಹೆಚ್ಚುವರಿ ಪ್ರತಿಕ್ರಿಯೆ ನೀಡಿದ ನಂತರವೇ ಸಮಸ್ಯೆಯ ಬಗ್ಗೆ ಗೂಗಲ್ ಸಂಶೋಧನೆಯ ತೀವ್ರತೆಯನ್ನು ಉನ್ನತಕ್ಕೆ ಏರಿಸಿತು.

ಎಲ್ಲಾ ಫೋನ್‌ಗಳಲ್ಲೂ ಸಮಸ್ಯೆ

ಎಲ್ಲಾ ಫೋನ್‌ಗಳಲ್ಲೂ ಸಮಸ್ಯೆ

ಈ ಸಮಸ್ಯೆ ಕೇವಲ ಪಿಕ್ಸೆಲ್ ಫೋನ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಆಂಡ್ರಾಯ್ಡ್‌ನ ಇತರೆ ಸ್ಮಾರ್ಟ್‌ಫೋನ್ ಮಾರಾಟಗಾರರ ಕ್ಯಾಮೆರಾ ಆಪ್‌ಗಳ ಮೇಲೂ ಪರಿಣಾಮ ಬೀರಿದೆ. ಪ್ರಮುಖವಾಗಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ನಲ್ಲೂ ದೋಷವನ್ನು ಸಂಶೋಧನಾ ತಂಡ ಕಂಡುಹಿಡಿದಿದೆ. ಸ್ಯಾಮ್‌ಸಂಗ್ ಕೂಡ ದುರ್ಬಲತೆ ಇರುವುದನ್ನು ಒಪ್ಪಿಕೊಂಡಿದೆ.

ನಿಯಂತ್ರಣಕ್ಕೆ ಕ್ರಮ

ನಿಯಂತ್ರಣಕ್ಕೆ ಕ್ರಮ

ಗೂಗಲ್‌ನೊಂದಿಗೆ ನೇರವಾಗಿ ಕೆಲಸ ಮಾಡುತ್ತಿರುವ ಸ್ಯಾಮ್‌ಸಂಗ್‌ ಸಂಶೋಧನಾ ತಂಡಕ್ಕೆ ಸೂಚನೆ ನೀಡಿ, ದೋಷ ಕೇವಲ ಪಿಕ್ಸೆಲ್ ಉತ್ಪನ್ನದ ಸಾಲಿಗೆ ನಿರ್ದಿಷ್ಟವಾಗಿಲ್ಲ ಎಂಬ ಅನುಮಾನವನ್ನು ದೃಢಪಡಿಸಿದೆ. ಸ್ಯಾಮ್‌ಸಂಗ್‌ನಂತಹ ಹೆಚ್ಚುವರಿ ಮಾರಾಟಗಾರರು ಈ ನ್ಯೂನತೆಗಳು ತಮ್ಮ ಕ್ಯಾಮೆರಾ ಅಪ್ಲಿಕೇಶನ್‌ಗಳ ಮೇಲೂ ಪರಿಣಾಮ ಬೀರುತ್ತವೆ ಎಂದು ಒಪ್ಪಿಕೊಂಡಿದ್ದು, ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಗೂಗಲ್‌ನಿಂದ ಪ್ರಶಂಸೆ

ಗೂಗಲ್‌ನಿಂದ ಪ್ರಶಂಸೆ

ದೋ‍ಷವನ್ನು ಗಮನಕ್ಕೆ ತಂದಿದ್ದಕ್ಕೆ ಚೆಕ್‌ಮಾರ್ಕ್ಸ್‌ನ್ನು ಗೂಗಲ್‌ ಪ್ರಶಂಸಿಸಿದೆ. ಜುಲೈ 2019ರಲ್ಲಿ ಗೂಗಲ್ ಕ್ಯಾಮೆರಾ ಅಪ್ಲಿಕೇಶನ್‌ಗೆ ಪ್ಲೇ ಸ್ಟೋರ್ ಅಪ್‌ಡೇಟ್ ಮೂಲಕ ಪ್ರಭಾವಿತ ಗೂಗಲ್ ಸಾಧನಗಳಲ್ಲಿ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ. ಎಲ್ಲಾ ಪಾಲುದಾರರಿಗೂ ಈ ಪ್ಯಾಚ್ ಲಭ್ಯವಾಗಿದೆ.

Best Mobiles in India

English summary
Vulnerability In Camera App Recorded Videos, Take Photos

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X