ವಾಲ್‌ಮಾರ್ಟ್ ತೆಕ್ಕೆಗೆ ಫ್ಲಿಪ್‌ಕಾರ್ಟ್ ಬೀಳುವುದು ಬಹುತೇಕ ಪಕ್ಕಾ!!

ವಿಶ್ವದ ಅತಿದೊಡ್ಡ ರಿಟೇಲ್ ಮಾರಾಟ ಕಂಪೆನಿ ವಾಲ್‌ಮಾರ್ಟ್ ಭಾರತದಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಬೆಂಗಳೂರಿನ ದೈತ್ಯ ಇ–ಕಾಮರ್ಸ್ ದೈತ್ಯ ಸಂಸ್ಥೆ ಫ್ಲಿಪ್‌ಕಾರ್ಟ್ ಹಿಂದೆಬಿದ್ದಿದೆ.

|

ವಿಶ್ವದ ಅತಿದೊಡ್ಡ ರಿಟೇಲ್ ಮಾರಾಟ ಕಂಪೆನಿ ವಾಲ್‌ಮಾರ್ಟ್ ಭಾರತದಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಬೆಂಗಳೂರಿನ ದೈತ್ಯ ಇ-ಕಾಮರ್ಸ್ ದೈತ್ಯ ಸಂಸ್ಥೆ ಫ್ಲಿಪ್‌ಕಾರ್ಟ್ ಹಿಂದೆಬಿದ್ದಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಷೇರು ಖರೀದಿಸುವ ಪ್ರಯತ್ನವನ್ನು ವಾಲ್‌ಮಾರ್ಟ್ ಮುಂದುವರಿಸಿದೆ ಎಂಬ ಸುದ್ದಿ ಮತ್ತೆ ವರದಿಯಾಗಿದೆ.

ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ವಾಲ್‌ಮಾರ್ಟ್ ಕಂಪೆನಿ ಫ್ಲಿಪ್‌ಕಾರ್ಟ್‌ನಲ್ಲಿ ಶೇ 51 ರಷ್ಟು ಷೇರುಗಳನ್ನು ಖರೀದಿಸಲು ಮುಂದಾಗಿದ್ದು, ಜೂನ್‌ ವೇಳೆಗೆ ಈ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ. ಎರಡು ಕಂತುಗಳಲ್ಲಿ ಷೇರು ಖರೀದಿ ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ ಎಂದು ಹೇಳಲಾಗಿದೆ.

ವಾಲ್‌ಮಾರ್ಟ್ ತೆಕ್ಕೆಗೆ ಫ್ಲಿಪ್‌ಕಾರ್ಟ್ ಬೀಳುವುದು ಬಹುತೇಕ ಪಕ್ಕಾ!!

ಭಾರತದಲ್ಲಿ ಅಮೆಜಾನ್‌ಗೆ ಪ್ರಬಲ ಸ್ಪರ್ಧೆ ನೀಡುತ್ತಿರುವ ಏಕೈಕ ಇ-ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲಿ ಹೂಡಿಕೆ ಒಪ್ಪಂದ ಅಂತಿಮವಾದರೆ, ಭಾರತದಲ್ಲಿ ಉತ್ತಮ ವಹಿವಾಟು ನಡೆಸುತ್ತಿರುವ ಅಮೆಜಾನ್‌ಗೆ ತಾನು ಪ್ರಬಲ ಸ್ಪರ್ಧೆ ನೀಡಬಹುದು ಎನ್ನುವುದು ಅಮೆರಿಕಾದ ದಿಗ್ಗಜ ರಿಟೇಲ್ ಕಂಪೆನಿ ವಾಲ್‌ಮಾರ್ಟ್‌ನ ಉದ್ದೇಶವಾಗಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಹಾಗಾಗಿ, ಫ್ಲಿಪ್‌ಕಾರ್ಟ್‌ ಮತ್ತು ಅದರ ಹೂಡಿಕೆದಾರರಿಂದ ಷೇರುಗಳನ್ನು ಖರೀದಿಸುವ ಬಗ್ಗೆ ವಾಲ್‌ಮಾರ್ಟ್ ಮಾತುಕತೆ ನಡೆಸುತ್ತಿದೆ. ಇದು ಇನ್ನೂ ಅಂತಿಮ ಹಂತ ತಲುಪಬೇಕಾಗಿದೆ. ಎರಡು ಕಂತುಗಳಲ್ಲಿ ಷೇರು ಖರೀದಿ ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಎರಡೂ ಸಂಸ್ಥೆಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ವಾಲ್‌ಮಾರ್ಟ್ ತೆಕ್ಕೆಗೆ ಫ್ಲಿಪ್‌ಕಾರ್ಟ್ ಬೀಳುವುದು ಬಹುತೇಕ ಪಕ್ಕಾ!!

ಇನ್ನು ಇಬೇ, ಟೆನ್ಸೆಂಟ್ ಹೋಲ್ಡಿಂಗ್ಸ್ ಮತ್ತು ಮೈಕ್ರೊಸಾಪ್ಟ್ ಕಾರ್ಪ್‌ ಸಂಸ್ಥೆಗಳಿಂದಲೂ ಬಂಡವಾಳ ಸಂಗ್ರಹಿಸಿರುವ ಫ್ಲಿಪ್‌ಕಾರ್ಟ್‌ನಲ್ಲಿ ಕಳೆದ ವರ್ಷ ಸಾಫ್ಟ್‌ಬ್ಯಾಂಕ್‌ ಸಂಸ್ಥೆಯು 16,250 ಕೋಟಿ ಹೂಡಿಕೆ ಮಾಡಿತ್ತು. ಹಾಗಾಗಿ, ಫ್ಲಿಪ್‌ಕಾರ್ಟ್ ನಲ್ಲಿ ಹೂಡಿಕೆ ಮಾಡಲು ವಾಲ್‌ಮಾರ್ಟ್‌ಗೆ ಪೈಪೋಟಿ ನೀಡಿ ಅಮೆಜಾನ್‌ ಕೂಡಾ ಹೂಡಿಕೆ ಮಾಡಲು ಉತ್ಸಾಹ ತೋರಿದೆ.

Best Mobiles in India

English summary
Walmart Inc (WMT.N) is likely to reach a deal to buy a majority stake in Indian e-commerce player Flipkart by the end of June. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X