ಆನ್‌ಲೈನಿನಿಂದ ಆಫ್‌ಲೈನ್ ಮಾರುಕಟ್ಟೆಗೆ ಬರಲಿದೆ 'ಫ್ಲಿಪ್‌ಕಾರ್ಟ್'!!

ಆನ್‌ಲೈನ್ ಮಾರುಕಟ್ಟೆಯ ಬೆಲೆಯಲ್ಲಿಯೇ ಆಫ್‌ಲೈನ್ ಸೇವೆ ನೀಡಲು ಫ್ಲಿಪ್‌ಕಾರ್ಟ್ ಮುಂದಾಗಿರುವ ಬಗ್ಗೆ ಮಾರುಕಟ್ಟೆಯಲ್ಲಿ ಗುಸುಗುಸು ಎದ್ದಿದೆ.!!

|

ಭಾರತದ ಜನಪ್ರಿಯ ಆನ್‌ಲೈನ್ ಮಾರುಕಟ್ಟೆ ಜಾಲತಾಣ ಫ್ಲಿಪ್‌ಕಾರ್ಟ್ ಇದೀಗ ಆನ್‌ಲೈನಿನಿಂದ ಆಫ್‌ಲೈನಿಗೆ ಕಾಲಿಡಲಿದೆ ಎನ್ನುವ ವರದಿಯೊಂದು ಹೊರಬಿದ್ದಿದೆ.! ಆನ್‌ಲೈನ್ ಮಾರುಕಟ್ಟೆಯ ಬೆಲೆಯಲ್ಲಿಯೇ ಆಫ್‌ಲೈನ್ ಸೇವೆ ನೀಡಲು ಫ್ಲಿಪ್‌ಕಾರ್ಟ್ ಮುಂದಾಗಿರುವ ಬಗ್ಗೆ ಮಾರುಕಟ್ಟೆಯಲ್ಲಿ ಗುಸುಗುಸು ಎದ್ದಿದೆ.!!

ಅಮೆರಿಕ ಮೂಲದ ದೊಡ್ಡ ಕಂಪನಿಯೊಂದು ಫ್ಲಿಪ್‌ಕಾರ್ಟ್‌ನಲ್ಲಿ ಬಂಡವಾಳ ಹೂಡಿಕೆ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದು, ಈ ಎರಡೂ ಕಂಪೆನಿಗಳ ನಡುವಿನ ಮಾತುಕತೆ ಯಶಸ್ವಿಯಾದರೆ ಭಾರತದಲ್ಲಿ ಉಭಯ ಕಂಪನಿಗಳು ಫ್ಲಿಪ್‌ಕಾರ್ಟ್ ಹೆಸರಿನಲ್ಲಿ ರಿಟೇಲ್ ಮಳಿಗೆಗಳ ಸರಣಿಯನ್ನು ತೆರೆಯಲಿವೆ ಎಂದು ಮಾಧ್ಯಮ ಮೂಲಗಳಿಂದ ತಿಳಿದುಬಂದಿದೆ.!!

ಆನ್‌ಲೈನಿನಿಂದ ಆಫ್‌ಲೈನ್ ಮಾರುಕಟ್ಟೆಗೆ ಬರಲಿದೆ 'ಫ್ಲಿಪ್‌ಕಾರ್ಟ್'!!

ಭಾರತದಲ್ಲಿ ಅಮೆಜಾನ್ ಕಂಪೆನಿಗೆ ಸೆಡ್ಡುಹೊಡೆಯುವ ನಿಟ್ಟಿನಲ್ಲಿ ಅಮೆರಿಕಾ ಮೂಲದ ಕಂಪೆನಿಯೊಂದಿಗೆ ಫ್ಲಿಪ್‌ಕಾರ್ಟ್ ಕೈಜೋಡಿಸುತ್ತಿದ್ದು, ಹಾಗಾದರೆ, ಫ್ಲಿಪ್‌ಕಾರ್ಟ್ ಕೈಜೋಡಿಸುತ್ತಿರುವ ಅಮೆರಿಕಾದ ಕಂಪೆನಿ ಯಾವುದು? ಆಫ್‌ಲೈನ್ ಮಾರುಕಟ್ಟೆಯಲ್ಲಿ ಫ್ಲಿಪ್‌ಕಾರ್ಟ್ ಪಾತ್ರವೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಆಫ್‌ಲೈನ್ ಮಾರುಕಟ್ಟೆ ಮೇಲೆ ಕಣ್ಣು!!

ಆಫ್‌ಲೈನ್ ಮಾರುಕಟ್ಟೆ ಮೇಲೆ ಕಣ್ಣು!!

ಆನ್‌ಲೈನ್ ಮಾರುಕಟ್ಟೆಯಲ್ಲಿ ಭಾರೀ ಹೆಸರುಗಳಿಸಿರುವ ಫ್ಲಿಪ್‌ಕಾರ್ಟ್ ಇದೀಗ ಆಫ್‌ಲೈನ್ ಮಾರುಕಟ್ಟೆ ಮೇಲೆ ಕಣ್ಣಿಟ್ಟಿದೆ ಎನ್ನಲಾಗಿದೆ. ಆನ್‌ಲೈನ್ ಮಾರುಕಟ್ಟೆಯ ಇತ್ತೀಚಿಗೆ ಪ್ರಭಾವ ಕಡಿಮೆಯಾಗುತ್ತಿರುವುದರಿಂದ ಆಫ್‌ಲೈನ್‌ ಮಮಾರುಕಟ್ಟೆಯಲ್ಲಿ ಫ್ಲಿಪ್‌ಕಾರ್ಟ್ ಹೆಸರಿನ ರಿಟೇಲ್ ಮಳಿಗೆಗಳ ಸರಣಿಯನ್ನು ತೆರೆಯಲು ಮುಂದಾಗಿದೆ ಎನ್ನಲಾಗಿದೆ.!!

ವಾಲ್‌ಮಾರ್ಟ್ ಜತೆ ಫ್ಲಿಪ್‌ಕಾರ್ಟ್!!

ವಾಲ್‌ಮಾರ್ಟ್ ಜತೆ ಫ್ಲಿಪ್‌ಕಾರ್ಟ್!!

ಅಮೆರಿಕಾದ ಪ್ರಸಿದ್ದ ಕಂಪೆನಿ ವಾಲ್‌ಮಾರ್ಟ್ ಭಾರತದ ಕಂಪೆನಿ ಫ್ಲಿಪ್‌ಕಾರ್ಟ್‌ನಲ್ಲಿ ಶೇ.30ರಷ್ಟು ಪಾಲನ್ನು ಖರೀದಿಸಲು ಮಾತುಕತೆ ನಡೆಸುತ್ತಿದೆ. ಫ್ಲಿಪ್‌ಕಾರ್ಟ್‌ನಲ್ಲಿ ವಾಲ್‌ಮಾರ್ಟ್ ಹೂಡಿಕೆ ಯಶಸ್ವಿಯಾದರೆ ಫ್ಲಿಪ್‌ಕಾರ್ಟ್ ಹೆಸರಿನ ರಿಟೇಲ್ ಮಳಿಗೆಗಳ ಸರಣಿಗಳು ದೇಶದೆಲ್ಲೆಡೆ ರೂಪುಗೊಳ್ಳುತ್ತವೆ.!!

ಭವಿಷ್ಯದ ಯೋಜನೆಯಲ್ಲಿ ಫ್ಲಿಪ್‌ಕಾರ್ಟ್!!

ಭವಿಷ್ಯದ ಯೋಜನೆಯಲ್ಲಿ ಫ್ಲಿಪ್‌ಕಾರ್ಟ್!!

ದೇಶದೆಲ್ಲೆಡೆ ಆಫ್‌ಲೈನ್ ನೆಟ್‌ವರ್ಕ್ ಅನ್ನು ಬೆಳೆಸಿಕೊಳ್ಳುವ ಮೂಲಕ ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಫ್ಲಿಪ್‌ಕಾರ್ಟ್ ಭವಿಷ್ಯದ ಯೋಜನೆ ರೂಪಿಸಿದೆ. ಎರಡೂ ಯೋಜನೆಗಳಿಂದ ಆಫ್‌ಲೈನ್‌ನಲ್ಲಿಯೂ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವ ಯೋಜನೆ ಫ್ಲಿಪ್‌ಕಾರ್ಟ್‌ಗಿದೆ.!!

ವಾಲ್‌ಮಾರ್ಟ್‌ಗೂ ಬೇಕು ಫ್ಲಿಪ್‌ಕಾರ್ಟ್!!

ವಾಲ್‌ಮಾರ್ಟ್‌ಗೂ ಬೇಕು ಫ್ಲಿಪ್‌ಕಾರ್ಟ್!!

ಭಾರತದಲ್ಲಿ ಮಲ್ಟಿ-ಬ್ರ್ಯಾಂಡ್‌ ರಿಟೇಲ್‌ನಲ್ಲಿ ವಿದೇಶಿ ಹೂಡಿಕೆಗೆ ಕೆಲ ನಿರ್ಬಂಧಗಳಿರುವುದ ವಾಲ್‌ಮಾರ್ಟ್ ಭಾರತದಲ್ಲಿ ನೇರವಾಗಿ ರಿಟೇಲ್‌ ಮಳಿಗೆಗಳನ್ನು ತೆರೆಯಲು ಸಾಧ್ಯವಿಲ್ಲ. ಹಾಗಾಗಿ, ಫ್ಲಿಪ್‌ಕಾರ್ಟ್ ಜತೆ ಸೇರಿ ಭಾರತದಲ್ಲಿ ಆಫ್‌ಲೈನ್‌ ಮಳಿಗೆಗಳನ್ನು ತೆರೆಯಲು ಯೋಚಿಸುತ್ತಿದೆ. !!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಅಮೆಜಾನ್‌ ಇಂಡಿಯಾಗೆ ಭಯ!!

ಅಮೆಜಾನ್‌ ಇಂಡಿಯಾಗೆ ಭಯ!!

ಭಾರತದಲ್ಲಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಎರಡೂ ಕಂಪೆನಿಗಳ ನಡುವೆ ನೇರಾನೇರಾ ಪೈಪೋಟಿ ಏರ್ಪಟ್ಟಿದೆ. ಇಂತಹ ಸಮಯದಲ್ಲಿ ವಾಲ್‌ಮಾರ್ಟ್ ಜತೆ ಸೇರಿ ಫ್ಲಿಪ್‌ಕಾರ್ಟ್ ಆಫ್‌ಲೈನ್ ಮಳಿಗೆಗಳನ್ನು ತೆರೆಯುತ್ತಿರುವುದು ಅಮೆಜಾನ್‌ಗೆ ಭಯ ಮೂಡಿಸಿದೆ. ಇದರಿಂದ ಮಾರುಕಟ್ಟೆಯನ್ನು ಕಳೆದುಕೊಳ್ಳುವ ಭೀತಿ ಅಮೆಜಾನ್ ಕಂಪೆನಿಗಿದೆ.!!

Best Mobiles in India

English summary
Walmart's investment deal with the homegrown giant may include setting up of a retail - offline - chain in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X