ಫ್ಲಿಪ್‌ಕಾರ್ಟ್ ಮೆಗಾಡೀಲ್‌ನಿಂದ ನಮಗೇನು ಲಾಭ ಗೊತ್ತಾ?

ಅಮೆರಿಕ ಮೂಲದ ‘ವಾಲ್‌ಮಾರ್ಟ್’ ಬೆಂಗಳೂರು ಮೂಲದ ಇ–ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ ಅನ್ನು ಖರೀದಿಸಿದ ನಂತರ ವಾಣಿಜ್ಯ ಲೋಕದಲ್ಲಿ ಸ್ವಲ್ಪ ತಲ್ಲಣ ಉಂಟಾಗಿದೆ.!

|

ಭಾರತದ ಮಟ್ಟಿಗೆ ಕರ್ನಾಟಕದ ವಿಧಾನಸಭಾ ಚುನಾವಣೆಯೇ ಬಹುದೊಡ್ಡ ಸುದ್ದಿಯಾಗಿದ್ದರೂ ಕೂಡ, ಮತ್ತೊಂದು ವಾಣಿಜ್ಯ ಸುದ್ದಿ ದೇಶದ ಗಮನ ಸೆಳೆದಿದೆ.! ಅಮೆರಿಕ ಮೂಲದ 'ವಾಲ್‌ಮಾರ್ಟ್' ಬೆಂಗಳೂರು ಮೂಲದ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ ಅನ್ನು ಖರೀದಿಸಿದ ನಂತರ ವಾಣಿಜ್ಯ ಲೋಕದಲ್ಲಿ ಸ್ವಲ್ಪ ತಲ್ಲಣ ಉಂಟಾಗಿದೆ.!

ಚಿಲ್ಲರೆ ಮಾರಾಟದಲ್ಲಿ ದೈತ್ಯ ಕಂಪನಿ ಎನಿಸಿಕೊಂಡಿರುವ ಅಮೆರಿಕಾದ ವಾಲ್‌ಮಾರ್ಟ್, ಫ್ಲಿಪ್‌ಕಾರ್ಟ್ ಕಂಪನಿಯ ಶೇ 77 ಪಾಲು ಬಂಡವಾಳವನ್ನು 1.07 ಲಕ್ಷ ಕೋಟಿ ರೂ. ಮೊತ್ತಕ್ಕೆ ಖರೀದಿಸಿರುವುದು ದೇಶವೇ ಕುತೋಹಲದಿಂದ ಎದುರು ನೋಡುವಂತಾಗಿದೆ. ಈ ಮಾರಾಟ ಹಲವರಲ್ಲಿ ನಿರೀಕ್ಷೆಗಳನ್ನೂ, ಕೆಲವರಲ್ಲಿ ಆತಂಕಗಳನ್ನೂ ಹುಟ್ಟುಹಾಕಿದೆ.!

ಫ್ಲಿಪ್‌ಕಾರ್ಟ್ ಮೆಗಾಡೀಲ್‌ನಿಂದ ನಮಗೇನು ಲಾಭ ಗೊತ್ತಾ?

ದೇಶದ ಭವಿಷ್ಯವನ್ನೂ ತನ್ನದೇ ಆದ ರೀತಿಯಲ್ಲಿ ಪ್ರಭಾವಿಸಬಲ್ಲದು ಎಂದು ತಜ್ಞರು ಅಂದಾಜಿಸಿರುವ ವಾಲ್‌ಮಾರ್ಟ್ ಮತ್ತು ಫ್ಲಿಪ್‌ಕಾರ್ಟ್ ಕಂಪನಿಯ ಒಪ್ಪಂದಿಂದ ವಾಣಿಜ್ಯ ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆಗಳು ಕಾಣುವುದು ನಿಶ್ಚಿತವಾಗಿದೆ. ಹಾಗಾಗಿ, ಈ ಮೆಗಾಡೀಲ್‌ನಿಂದ ನಮಗೇನು ಲಾಭ ಎಂಬುದನ್ನು ಮುಂದೆ ತಿಳಿಯಿರಿ.

ಏಕಸ್ವಾಮ್ಯದ ಸಾಧ್ಯತೆ ತಪ್ಪಿತು!!

ಏಕಸ್ವಾಮ್ಯದ ಸಾಧ್ಯತೆ ತಪ್ಪಿತು!!

ಈ ಮೊದಲು ಫ್ಲಿಪ್‌ಕಾರ್ಟ್ ಕಂಪನಿಯನ್ನು ಅಮೆಜಾನ್ ಖರೀದಿಸಲಿದೆ ಎಂಬ ಮಾತು ಕೇಳಿ ಬರುತ್ತಿತ್ತು. ಒಂದು ವೇಳೆ ಅದು ನಿಜವಾಗಿದ್ದರೆ ದೇಶದ ಇ-ಕಾಮರ್ಸ್ ವಲಯದಲ್ಲಿ ಸ್ಪರ್ಧೆಯೇ ಇರುತ್ತಿರಲಿಲ್ಲ. ಅಮೆಜಾನ್ ಹೇಳಿದ್ದೇ ನಿಯಮ, ನಿಗದಿಪಡಿಸಿದ್ದೇ ದರ ಎನ್ನುವ ಪರಿಸ್ಥಿತಿ ಎದುರಾಗುವ ಅಪಾಯವಿತ್ತು. ಆದರೆ, ವಾಲ್‌ಮಾರ್ಟ್ ಪ್ರವೇಶದೊಂದಿಗೆ ಭಾರತದ ಇ-ಕಾಮರ್ಸ್ ಕ್ಷೇತ್ರದಲ್ಲಿ ಏಕಸ್ವಾಮ್ಯದ ಸಾಧ್ಯತೆ ತಪ್ಪಿದಂತೆ ಆಗಿದೆ.!!

ಗ್ರಾಹಕರಿಗೆ ಲಾಭವಾಗಲಿದೆಯೇ?

ಗ್ರಾಹಕರಿಗೆ ಲಾಭವಾಗಲಿದೆಯೇ?

ತಯಾವುದೇ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಕಂಪನಿಗಳ ನಡುವೆ ಸ್ಪರ್ಧೆ ಹೆಚ್ಚಾದಂತೆ ಆ ವಲಯದ ಗ್ರಾಹಕರಿಗೆ ಸಿಗುವ ರಿಯಾಯ್ತಿ ಸಹ ಹೆಚ್ಚಾಗುತ್ತದೆ. ವಾಲ್‌ಮಾರ್ಟ್‌ಮೂಲಕ ವಿವಿಧ ದೇಶಗಳ ಉತ್ಪನ್ನಗಳು ಕಡಿಮೆ ಬೆಲೆಗೆ ಭಾರತಕ್ಕೆ ಬರಲಿವೆ ಎಂಬ ನಿರೀಕ್ಷೆ ಇದೆ. ವಾಲ್‌ಮಾರ್ಟ್ ತನ್ನ ಎಲ್ಲ ನೂತನ ಗ್ರಾಹಕರಿಗೂ ವಿವಿಧ ರೀತಿಯ ಸೇವೆಗಳನ್ನು ನೀಡುವ ಗುರಿಯನ್ನು ಇಟ್ಟುಕೊಂಡಿದೆ. ಏಕೆಂದರೆ, ವಾಲ್‌ಮಾರ್ಟ್ ಗುರಿ ಅಮೆಜಾನ್ ಅನ್ನು ಮಣಿಸುವುದು.!!

ಉದ್ಯೋಗಾವಕಾಶ ಸೃಷ್ಟಿ!!

ಉದ್ಯೋಗಾವಕಾಶ ಸೃಷ್ಟಿ!!

ಭಾರತದ ಮಾರುಕಟ್ಟೆಗೆ ವಾಲ್‌ಮಾರ್ಟ್ ರಂಗಪ್ರವೇಶ ಮಾಡಿರುವುದರಿಂದ ಭಾರತದಲ್ಲಿ ಬಂಡವಾಳ ಹೂಡಿಕೆ ಪ್ರಮಾಣ ಕೂಡ ಮತ್ತಷ್ಟು ಹೆಚ್ಚಾಗಲಿದೆ. ಎರಡು ದೈತ್ಯ ಕಂಪನಿಗಳ ಪೈಪೋಟಿಯು ಪೂರೈಕೆ ಸರಣಿಗಳ ಜೊತೆಗೆ ದೊಡ್ಡ ಮಟ್ಟದ ಉದ್ಯೋಗಾವಕಾಶ ಸೃಷ್ಟಿಗೂ ಕಾರಣವಾಗಲಿದೆ. ಮಾರುಕಟ್ಟೆ ಸ್ವಾಮ್ಯಕ್ಕಾಗಿ ನಡೆಯಲಿರುವ ಹೋರಾಟದಲ್ಲಿ ಸಹಜವಾಗಿಯೇ ಉದ್ಯೋಗಗಳು ಹುಟ್ಟಿಕೊಳ್ಳುತ್ತವೆ!!

ಮತ್ತಷ್ಟು ರಿಯಾಯ್ತಿಗಳು!!

ಮತ್ತಷ್ಟು ರಿಯಾಯ್ತಿಗಳು!!

ಭಾರತದ ಇ-ಕಾಮರ್ಸ್ ವಲಯದಲ್ಲಿ ಫ್ಲಿಪ್‌ಕಾರ್ಟ್ ಅಮತ್ತು ಅಮೆಜಾನ್ ಕಂಪೆನಿಗಳು ನಿಡುತ್ತಿದ್ದ ಬಿಗ್ ಬಿಲಿಯನ್ ಸೇಲ್ಸ್ ನಂತಹ ಕೊಡುಗೆಗಳಿಗೆ ಭಾರತದ ಗ್ರಾಹಕರು ಹೊಂದಿಕೊಂಡಿದ್ದಾರೆ. ಹಾಗಾಗಿ, ಇಂಥ ಆಫರ್‌ಗಳನ್ನು ಇನ್ನು ಮುಂದೆ ಇನ್ನೂ ಹೆಚ್ಚಾಗಿ ನಿರೀಕ್ಷಿಸಬಹುದು., ಏಕೆಂದರೆ, ಉತ್ಪನ್ನಗಳನ್ನು ಮಾರುವಂತೆ ವ್ಯಾಪಾರಿಗಳನ್ನು ಮತ್ತು ಕೊಳ್ಳುವಂತೆ ಗ್ರಾಹಕರನ್ನು ಎರಡೂ ಕಂಪನಿಗಳು ಓಲೈಸುವುದು ಸಹಜ. ಹೀಗಾಗಿ ಎರಡೂ ಕಂಪನಿಗಳು ಹೆಚ್ಚು ರಿಯಾಯ್ತಿಗಳನ್ನು ಘೋಷಿಸುವ ಸಾಧ್ಯತೆ ಇದೆ.

ಭಾರತದ ಇ–ಕಾಮರ್ಸ್!!

ಭಾರತದ ಇ–ಕಾಮರ್ಸ್!!

ಭಾರತದ ಇಂಟರ್ನೆಟ್ ಬಳಕೆದಾರರ ಸಂಖ್ಯೆ 45 ಕೋಟಿ ಇದ್ದು, ಇದರಲ್ಲಿ ಕೇವಲ 14ರಷ್ಟು ಮಂದಿ ಮಾತ್ರ ವಸ್ತುಗಳನ್ನು ಖರೀದಿಸುತ್ತಿದ್ದಾರೆ. 2020ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಯುವಜನರ ಸಂಖ್ಯೆ ಶೇ 50ರಷ್ಟಾಗುತ್ತದೆ ಎಂದು ಅಂದಾಜಿಸಲಾಗಿದೆ. ಹಾಗಾಗಿಯೇ, ಹೊಸ ತಲೆಮಾರು ಇ-ಕಾಮರ್ಸ್‌ಗೆ ಒಲಿಯಲಿದೆ ಎಂಬ ನಿರೀಕ್ಷೆಯನ್ನು ದೊಡ್ಡ ಕಂಪನಿಗಳು ಹೊಂದಿವೆ. ವಾಲ್‌ಮಾರ್ಟ್ ಅಷ್ಟುದೊಡ್ಡ ಮೊತ್ತಕ್ಕೆ ಫ್ಲಿಪ್‌ಕಾರ್ಟ್ ಖರೀದಿಸಲು ಇರುವ ಅನೇಕ ಕಾರಣಗಳ ಪೈಕಿ ಇದೂ ಕೂಡ ಒಂದು!!

Best Mobiles in India

English summary
Walmart Inc said on Saturday in a filing with a US regulator that it may take India's Flipkart public in as early as four years,. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X