ಇನ್ಮುಂದೆ ಡೇಟಾ ಇಲ್ಲದೆ ನಿಮ್ಮ ಮೊಬೈಲ್‌ನಲ್ಲಿ ವಿಡಿಯೋ ನೋಡಬಹುದು; ಅದೇಗೆ ಗೊತ್ತಾ?

|

ಸ್ಮಾರ್ಟ್‌ಫೋನ್‌ ಅಥವಾ ಸ್ಮಾರ್ಟ್‌ ಡಿವೈಸ್‌ಗಳಲ್ಲಿ ಇಂಟರ್ನೆಟ್ ಇಲ್ಲದೆ ಬಳಕೆ ಮಾಡಲು ಸಾಧ್ಯವೇ ಆಗುವುದಿಲ್ಲ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಎಂದಾದರೂ ಎಫ್‌ಎಮ್‌ ಅನ್ನು ಹೇಗೆ ಬಳಕೆ ಮಾಡುತ್ತೇವೆಯೋ ಅದೇ ರೀತಿ ದೂರದರ್ಶನವನ್ನು ವೀಕ್ಷಿಸಬಹುದೇ ಎಂಬ ಆಲೋಚನೆ ನಿಮ್ಮಲ್ಲಿ ಮೂಡಿದ್ದರೆ. ಅದಕ್ಕೆ ಭಾರತದಲ್ಲಿ ಈಗ ಕಾಲ ಒದಗಿ ಬಂದಿದೆ.

ಮೊಬೈಲ್‌

ಹೌದು, ಇನ್ಮುಂದೆ ನಿಮ್ಮ ಮೊಬೈಲ್‌ನಲ್ಲಿ ಯಾವುದೇ ಇಂಟರ್ನೆಟ್‌ ಸಂಪರ್ಕವಿಲ್ಲದೆ ದೂರದರ್ಶನ ವೀಕ್ಷಣೆ ಮಾಡಬಹುದಾಗಿದೆ. ಅದರಲ್ಲೂ ಸಹ ಉತ್ತಮ ಕ್ಬಾಲಿಟಿಯಲ್ಲಿ. ಆದರೆ, ನಿಮಗೆ ಈ ಸೇವೆ ಲಭ್ಯವಾಗುವುದು ಮಾತ್ರ ಮೂರರಿಂದ ನಾಲ್ಕು ವರ್ಷಗಳ ನಂತರವಷ್ಟೇ. ಆದರೂ ಸದ್ಯಕ್ಕೆ ಭಾರತದಲ್ಲಿ ಈ ಸೇವೆ ನೀಡಲು ಎಲ್ಲಾ ರೀತಿಯ ತಯಾರಿಗಳು ನಡೆಯುತ್ತಿವೆ.

ಹೊಸ ತಂತ್ರಜ್ಞಾನ

ಹೊಸ ತಂತ್ರಜ್ಞಾನ

ಪ್ರತಿವರ್ಷ ನವೆಂಬರ್ 21 ರಂದು ವಿಶ್ವ ದೂರದರ್ಶನ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದ್ದು, ಭಾರತ ಸರ್ಕಾರವು ಕೆಲವು ರಾಷ್ಟ್ರಗಳು ಪ್ರಯತ್ನಿಸಿದ ರೀತಿಯಲ್ಲಿಯೇ ದೂರದರ್ಶನವನ್ನು ಸಮೂಹ ಸಂವಹನದ ಹೊಸ ಮತ್ತು ಉತ್ತೇಜಕ ಮಾರ್ಗಗಳಿಗೆ ತೆಗೆದುಕೊಂಡು ಹೋಗಲು ನೂತನ ತಂತ್ರಜ್ಞಾನದ ಕಡೆ ಮುಖ ಮಾಡಿದೆ. ಆದರೆ, ಪ್ರಾಯೋಗಿಕವಾಗಿ ಇದು ಸವಾಲುಗಳನ್ನು ಎದುರಿಸಬೇಕಿದೆ.

ಡೈರೆಕ್ಟ್ ಟು ಮೊಬೈಲ್‌

ಡೈರೆಕ್ಟ್ ಟು ಮೊಬೈಲ್‌

ದೆಹಲಿಯಲ್ಲಿ ಕೆಲವು ದಿನಗಳ ಹಿಂದೆ ಜರುಗಿದ ಬಿಗ್ ಪಿಕ್ಚರ್ ಶೃಂಗಸಭೆಯಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು, ಮುಂದಿನ ದಿನಗಳಲ್ಲಿ ದೂರದರ್ಶನದಲ್ಲಿ ದೊಡ್ಡ ವಿಷಯವನ್ನು ಭಾರತವು ಶೀಘ್ರದಲ್ಲೇ ಅನುಭವಿಸಲಿದೆ ಎಂದು ಹೇಳಿದ್ದು, ಈ ಮೂಲಕ ಈ ವಿಷಯದ ಬಗ್ಗೆ ಹಿಂಟ್‌ ನೀಡಿದ್ದಾರೆ. ಅದರಂತೆ ಈ ತಂತ್ರಜ್ಞಾನದಿಂದ ದೂರದರ್ಶನದ ಸೆಟ್‌ಗಳು ಹೇಗೆ ಕೆಲಸ ಮಾಡುತ್ತವೆಯೋ ಅದೇ ರೀತಿ ಡಿಜಿಟಲ್ ಟಿವಿ ಪ್ರಸಾರಗಳನ್ನು ಸ್ವೀಕರಿಸಲು ಮೊಬೈಲ್ ಫೋನ್‌ಗಳನ್ನು ತಾಂತ್ರಿಕವಾಗಿ ಸಿದ್ಧಗೊಳಿಸಲಾಗುತ್ತಿದೆ.

ಡೇಟಾ ಬೇಕಿಲ್ಲ

ಡೇಟಾ ಬೇಕಿಲ್ಲ

ಈ ವಿಷಯದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಾನ್ಪುರ್ ರಾಷ್ಟ್ರೀಯ ಬ್ರಾಡ್‌ಕಾಸ್ಟರ್ ಪ್ರಸಾರ ಭಾರತಿ ಮತ್ತು ಟೆಲಿಕಮ್ಯುನಿಕೇಶನ್ ಸ್ಟ್ಯಾಂಡರ್ಡ್ಸ್ ಡೆವಲಪ್‌ಮೆಂಟ್ ಸೊಸೈಟಿ ಆಫ್ ಇಂಡಿಯಾ ಸಹಯೋಗದೊಂದಿಗೆ ನೆಕ್ಸ್ಟ್‌ಜೆನ್ ಬ್ರಾಡ್‌ಕಾಸ್ಟ್ ತಂತ್ರಜ್ಞಾನ ಯೋಜನೆಯಲ್ಲಿ ಕೆಲಸ ಮಾಡಲಾಗುತ್ತಿದೆ. ಪ್ರಮುಖ ವಿಷಯ ಎಂದರೆ ಈ ತಂತ್ರಜ್ಞಾನದ ಆರಂಭಿಕ ಸೇವೆ ಎಂದರೆ ಯಾವುದೇ ಡೇಟಾವನ್ನು ಬಳಸದೆಯೇ ನೇರವಾಗಿ ಮೊಬೈಲ್ ಫೋನ್‌ಗಳಿಗೆ ಉತ್ತಮ ಗುಣಮಟ್ಟದ ಚಲನಚಿತ್ರ, ವಿಡಿಯೋಗಳನ್ನು ಪ್ರಸಾರ ಮಾಡಲಾಗುತ್ತದೆ. ಅದರಂತೆ ಐಐಟಿ ಕಾನ್ಪುರದ ಪ್ರಯೋಗ ಸಮಯದಲ್ಲಿ ಒಂದೇ ಸಮಯದಲ್ಲಿ 200 ಕ್ಕೂ ಹೆಚ್ಚು ಚಾನೆಲ್‌ಗಳನ್ನು ಪ್ರಸಾರ ಮಾಡಲಾಗಿದೆ.

750 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಲಭ್ಯ

750 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಲಭ್ಯ

ಇದರೊಂದಿಗೆ ಜೂನ್‌ನಲ್ಲಿ ದೆಹಲಿಯಲ್ಲಿ ಜರುಗಿದ 'ಡೈರೆಕ್ಟ್ ಟು ಮೊಬೈಲ್ ಮತ್ತು 5 ಜಿ: ಕನ್ವರ್ಜೆನ್ಸ್ ರೋಡ್‌ಮ್ಯಾಪ್ ಫಾರ್ ಇಂಡಿಯಾ' ದಲ್ಲಿ ಪ್ರತಿನಿಧಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಟಿವಿ ಪ್ರಸಾರಗಳನ್ನು ವೀಕ್ಷಣೆ ಮಾಡಿದ್ದಾರೆ. ಈ ಡೈರೆಕ್ಟ್ ಟು ಮೊಬೈಲ್ ತಂತ್ರಜ್ಞಾನವು ಭಾರತದಲ್ಲಿನ ಸುಮಾರು 750 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಲೈವ್‌ ಚಾನೆಲ್‌ಗಳನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗುತ್ತದೆ. ಅದರಲ್ಲೂ ವಿಶೇಷವಾಗಿ ವಿಪತ್ತು ಸಂದರ್ಭಗಳಲ್ಲಿ ಸಾರ್ವಜನಿಕ ಸೇವಾ ಸಂದೇಶಗಳನ್ನು ಕಳುಹಿಸಲು ಇದು ಹೆಚ್ಚಿನ ಅನುಕೂಲ ಒದಗಿಸಲಿದೆ. ಹಾಗೆಯೇ ನಕಲಿ ಸುದ್ದಿಗಳ ಬೆದರಿಕೆಯನ್ನು ಕಡಿಮೆ ಮಾಡುವ ಕೆಲಸವೂ ಈ ಮೂಲಕ ನಡೆಯುತ್ತದೆ.

ಭಾರತದಲ್ಲಿ ಇಂಟರ್ನೆಟ್‌ ಬಳಕೆ

ಭಾರತದಲ್ಲಿ ಇಂಟರ್ನೆಟ್‌ ಬಳಕೆ

ಭಾರತದಲ್ಲಲಿ ಸುಮಾರು 80 ಪ್ರತಿಶತದಷ್ಟು ಭಾರತೀಯ ಇಂಟರ್ನೆಟ್ ಬಳಕೆದಾರರಿದ್ದಾರೆ. ಇವರೆಲ್ಲಾ ಯಾವುದೇ ವಿಡಿಯೋಗಳನ್ನು ಸ್ಟ್ರೀಮ್‌ ಮಾಡಬೇಕಾದರೆ ಇಂಟರ್ನೆಟ್ ಅನಿವಾರ್ಯವಾಗಿದೆ. ಹಾಗೆಯೇ ಪ್ರತಿ ಸೆಕೆಂಡಿಗೆ 1.1 ಮಿಲಿಯನ್ ನಿಮಿಷಗಳ ವಿಡಿಯೋ ಸ್ಟ್ರೀಮ್ ಅಥವಾ ಡೌನ್‌ಲೋಡ್ ಪ್ರಕ್ರಿಯೆ ಜರುಗುತ್ತದೆ. ಈ ಮೂಲಕ ಪ್ರತಿ ತಿಂಗಳು 240.2 ಎಕ್ಸಾಬೈಟ್‌ಗಳಷ್ಟು ಡೇಟಾವನ್ನು ಬಳಕೆ ಮಾಡಲಾಗುತ್ತಿದೆ.

ಎಫ್‌ ಎಮ್‌ ರೀತಿಯಲ್ಲಿಯೇ ಸೇವೆ

ಎಫ್‌ ಎಮ್‌ ರೀತಿಯಲ್ಲಿಯೇ ಸೇವೆ

ಈ ತಂತ್ರಜ್ಞಾನಕ್ಕೆ ವಿಶೇಷ ತರಂಗಾಂತರದ ಸ್ಪೆಕ್ಟ್ರಮ್‌ನ ಹಂಚಿಕೆಯ ಅಗತ್ಯವಿದ್ದು, ಟಿವಿ ಪ್ರಸಾರಕ್ಕಾಗಿ ಬಳಸುತ್ತಿರುವ ಬ್ಯಾಂಡ್ 526-582 MHz ಅನ್ನು ಡೈರೆಕ್ಟ್ ಟು ಮೊಬೈಲ್‌ಗಾಗಿ ಮರು ರೂಪಿಸಬಹುದಾಗಿ ಎನ್ನಲಾಗಿದೆ. ಉದಾಹರಣೆಗೆ ಇಂದು ನಾವೆಲ್ಲ ಫೋನ್‌ಗಳಲ್ಲಿ ಎಫ್‌ಎಮ್‌ ಚಾನೆಲ್‌ಗಳನ್ನು ಹೇಗೆ ಬಳಕೆ ಮಾಡುತ್ತೇವೆಯೋ ಅದೇ ರೀತಿ ಈ ಸೌಲಭ್ಯ ಲಭ್ಯವಾಗಲಿದೆ. ಇನ್ನು ಈ ಸೇವೆಯನ್ನು ಪಡೆಯಲು ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಗ್ರೇಡ್ ಮಾಡಬೇಕಾಗಿದೆ.

ಆಂಡ್ರಾಯ್ಡ್‌ ಟಿವಿ ಟ್ಯೂನರ್

ಆಂಡ್ರಾಯ್ಡ್‌ ಟಿವಿ ಟ್ಯೂನರ್

ಈಗಲೂ ಸಹ ನಿಮ್ಮ ಸ್ಮಾರ್ಟ್‌ಫೋನ್‌ ಮೂಲಕ ದೂರದರ್ಶನ ವೀಕ್ಷಣೆ ಮಾಡಬಹುದು. ಅದು ಹೇಗೆಂದರೆ ನಿಮ್ಮ ಫೋನ್‌ನಲ್ಲಿ ಟಿವಿ ಚಾನೆಲ್‌ಗಳನ್ನು ಸ್ವೀಕರಿಸಲು 3,000 ರೂ. ಗಳಿಗಿಂತ ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಆಂಡ್ರಾಯ್ಡ್‌ ಟಿವಿ ಟ್ಯೂನರ್‌ಗಳ ಮೂಲಕ. ಇವು ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ ಇವೆ.

Best Mobiles in India

English summary
Watch Hundreds Of High-Quality Video Channels On Your Mobile Phone soon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X