Just In
- 24 min ago
ಏರ್‌ಟೆಲ್ ಜೊತೆಗೆ ಕೈ ಮಿಲಾಯಿಸಿದ ಮೆಟ್ರೋ, ಇನ್ಮುಂದೆ ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!
- 1 hr ago
ಪೊಕೊ X5 ಪ್ರೊ ಲಾಂಚ್ಗೆ ಡೇಸ್ ಫಿಕ್ಸ್; ಭಾರೀ ಕುತೂಹಲ ಮೂಡಿಸಿದ ಫೀಚರ್ಸ್!
- 17 hrs ago
SSLC, PUC exam;ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- 18 hrs ago
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
Don't Miss
- News
Breaking; ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ನಿರ್ದೇಶಕರ ನೇಮಕ
- Automobiles
ರೀ ಎಂಟ್ರಿ ಕೊಡಲಿವೆಯೇ ಮಿಂಚಿ ಮರೆಯಾದ ಲೆಜೆಂಡರಿ ಕಾರುಗಳು?: ಹೊಸ ವಿನ್ಯಾಸ, ಎಂಜಿನ್ ಬದಲಾವಣೆ!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತದತ್ತ ಪ್ರಯಾಣ ಆರಂಭಿಸಿದ ಆಸಿಸ್ ಆಟಗಾರರು
- Lifestyle
February 2023 Horoscope : ಫೆಬ್ರವರಿ ತಿಂಗಳ ಭವಿಷ್ಯ: ಮೇಷ-ಮೀನದವರೆಗಿನ ರಾಶಿಗಳ ರಾಶಿಫಲ ಹೇಗಿದೆ?
- Finance
Budget 2023: ರಾಷ್ಟ್ರಪತಿ ಭಾಷಣದೊಂದಿಗೆ ಜ.31ರಿಂದ ಬಜೆಟ್ ಅಧಿವೇಶನ ಆರಂಭ, ಈ ಮಾಹಿತಿ ತಿಳಿದಿರಿ
- Movies
ಕೆಜಿಎಫ್ to ಕಾಂತಾರ: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 100 ಕೋಟಿ ಕ್ಲಬ್ ಸೇರಿರುವ 7 ಚಿತ್ರಗಳಿವು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪೋರ್ನ್ ವೀಕ್ಷಣೆ ಕಾನೂನು ಬಾಹಿರವಲ್ಲ..! ಆರ್‌ಟಿಐನಲ್ಲಿ ಬಹಿರಂಗ..!
ಭಾರತದಲ್ಲಿ ಪೋರ್ನ್ ವೆಬ್‌ಸೈಟ್‌ಗಳ ಮೇಲೆ ನಿಷೇಧ ಹೇರಿರುವುದು ನಿಮಗೆಲ್ಲಾ ಗೊತ್ತೆ ಇದೆ. ಕಳೆದ ವರ್ಷ ಏರ್‌ಟೆಲ್, ಜಿಯೋ, ಬಿಎಸ್‌ಎನ್‌ಎಲ್ ಸೇರಿದಂತೆ ಇತರ ಭಾರತೀಯ ಅಂತರ್ಜಾಲ ಸೇವಾ ಪೂರೈಕೆದಾರರು ನೂರಾರು ಪೋರ್ನ್ ಮಮತ್ತು ಫೈಲ್ ಶೇರಿಂಗ್ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದ್ದಾರೆ. ಈ ನಿಷೇಧಿತ ವೆಬ್‌ಸೈಟ್‌ಗಳನ್ನು ಬಳಕೆದಾರರು ಪ್ರವೇಶಿಸಲು ಪ್ರಯತ್ನಿಸಿದಾಗ ಅವರಿಗೆ ವೆಬ್‌ಸೈಟ್ ಟೆಲಿಕಾಂ ಇಲಾಖೆಯ ನಿರ್ದೇಶನದಲ್ಲಿದೆ ಎಂಬ ಸಂದೇಶವನ್ನು ಡಿಸ್‌ಪ್ಲೇ ಮೇಲೆ ನೋಡುತ್ತೇವೆ.

ಭಾರತದಲ್ಲಿ ಪೋರ್ನ್ ವೆಬ್‌ಸೈಟ್‌ಗಳನ್ನು ನಿಷೇಧಿಸಲು ಟೆಲಿಕಾಂ ಇಲಾಖೆ ನಿಜವಾಗಿಯೂ ಆದೇಶ ನೀಡಿದೆ. ಆದರೆ, ಮೂರು ನಿರ್ದಿಷ್ಟ ನ್ಯಾಯಾಲಯಗಳು ನೀಡಿದ ತೀರ್ಪಿನನ್ವಯ ಈ ಆದೇಶ ನೀಡಬೇಕಾಗಿ ಬಂತು ಎಂದು ಆರ್‌ಟಿಐಗೆ ಇಲಾಖೆ ಉತ್ತರಿಸಿದೆ.

ಎರಡು ಆರ್‌ಟಿಐ ಅರ್ಜಿ
ಇತ್ತೀಚೆಗೆ, ಟೆಕ್ ನೀತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ವಹಿಸುವ ಸಂಸ್ಥೆಯಾಗಿರುವ ಇಂಟರ್‌ನೆಟ್ ಫ್ರೀಡಂ ಫೌಂಡೇಶನ್ ಟೆಲಿಕಾಂ ಇಲಾಖೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯಕ್ಕೆ ಎರಡು ಆರ್‌ಟಿಐ ಅರ್ಜಿಯನ್ನು ಸಲ್ಲಿಸಿದೆ. ಏರ್‌ಟೆಲ್ ಮತ್ತು ಜಿಯೋದಂತಹ ಭಾರತೀಯ ಐಎಸ್‌ಪಿ ನೆಟ್‌ವರ್ಕ್‌ಗಳಲ್ಲಿ ಪೋರ್ನ್ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿರುವುದು ಏಕೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಮಾಹಿತಿ ಕೇಳಲಾಗಿದೆ.

ಕೋರ್ಟ್ ಆದೇಶ
ಆರ್‌ಟಿಐ ಅರ್ಜಿಗೆ ಉತ್ತರಿಸಿರುವ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ ನಿರ್ಬಂಧದ ಕ್ರಮಕ್ಕೆ ಮೂರು ನಿರ್ದಿಷ್ಟ ಆದೇಶಗಳಿವೆ ಎಂದಿದೆ. ಮೂರು ಆದೇಶಗಳ ಪೈಕಿ ಎರಡು ಮುಂಬೈನ ಎಸ್ಪ್ಲನೇಡ್ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ 2016 ಮತ್ತು 2017ರಲ್ಲಿ ನೀಡಿದ್ದಾರೆ. ಸೈಬರ್ ಪೊಲೀಸ್ ಇಲಾಖೆಯಿಂದ ದೂರು ಬಂದ ನಂತರ ಒಂದೇ ದಿನದಲ್ಲಿ 500 ವೆಬ್‌ಸೈಟ್‌ಗಳನ್ನು ಈ ಆದೇಶದ ಅಡಿಯಲ್ಲಿ, ನಿರ್ಬಂಧಿಸಲಾಗಿದೆ. ಇನ್ನು, ಮೂರನೇ ಆದೇಶ ಉತ್ತರಾಖಂಡ ಹೈಕೋರ್ಟ್‌ನಿಂದ ಬಂದಿದ್ದು, ಮಕ್ಕಳ ಪೋರ್ನ್ ವಿಷಯವನ್ನು ಹೊಂದಿರುವ ಪೋರ್ನ್ ವೆಬ್‌ಸೈಟ್‌ಗಳನ್ನು ರಾಷ್ಟ್ರ ಮಟ್ಟದಲ್ಲಿ ನಿರ್ಬಂಧಿಸಲು ಕಾರಣವಾಯಿತು.

857 ವೆಬ್‌ಸೈಟ್ ಬ್ಲಾಕ್
ಉತ್ತರಾಖಂಡ ಹೈಕೋರ್ಟ್ ಆದೇಶದ ನಂತರ ಒಟ್ಟು 857 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲಾಗಿದೆ. ಆದರೆ, ಐಎಸ್‌ಪಿಗಳಿಗೆ ರವಾನಿಸಿದ ಸೂಚನೆಗಳಲ್ಲಿ ಮಕ್ಕಳ ಪೋರ್ನ್ ಚಿತ್ರ ಹೊಂದಿರುವ ವೆಬ್‌ಸೈಟ್‌ಗಳನ್ನು ಮಾತ್ರ ನಿಷೇಧಿಸಬೇಕು ಎಂದಿದೆ. ಇನ್ನು, ಭಾರತದಲ್ಲಿ ಪೋರ್ನ್ ವೀಕ್ಷಣೆಯನ್ನು ಸರ್ಕಾರ ನಿಷೇಧಿಸುತ್ತಿಲ್ಲ ಎಂಬುದು ಆರ್‌ಟಿಐ ಉತ್ತರ ಸ್ಪಷ್ಟಪಡಿಸಿದೆ. ಭಾರತದಲ್ಲಿ ಖಾಸಗಿಯಾಗಿ ಅಶ್ಲೀಲ ಚಿತ್ರಗಳನ್ನು ನೋಡುವುದು ಕಾನೂನು ಬಾಹಿರವಲ್ಲ. ಹಾಗೆಯೇ, ಪೋರ್ನ್ ಕಂಟೆಂಟ್ ಉತ್ಪಾದನೆ ಮತ್ತು ವಿತರಣೆಗೆ ಭಾರತದಲ್ಲಿ ಅನುಮತಿಯಿಲ್ಲ.

ಕಾನೂನು ಇಲ್ಲ
ಇಂಟರ್‌ನೆಟ್ ಫ್ರೀಡಮ್ ಫೌಂಡೇಶನ್ ಹೇಳುವಂತೆ, ಸರ್ಕಾರದ ಮಾಹಿತಿ ಪ್ರಕಾರ ಮಕ್ಕಳ ಅಶ್ಲೀಲ ಅಂಶಗಳಿಲ್ಲದಿದ್ದರೆ ಪೋರ್ನ್ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಸರ್ಕಾರ ನಿರ್ದೇಶನ ನೀಡುತ್ತಿಲ್ಲ ಎಂಬ ಅಂಶ ಬೆಳಕಿಗೆ ಬರುತ್ತದೆ. ಇಂಟರ್‌ನೆಟ್ ಸೇವಾ ಪೂರೈಕೆದಾರರು ಪೋರ್ನ್ ವೆಬ್‌ಸೈಟ್‌ಗಳನ್ನು ಸಕ್ರಿಯವಾಗಿ ನಿರ್ಬಂಧಿಸಲು ಯಾವುದೇ ನಿರ್ದೇಶನಗಳಿಲ್ಲ. ಮತ್ತು ನಿರ್ದಿಷ್ಟ ನ್ಯಾಯಾಲಯದ ಆದೇಶವಿಲ್ಲದೇ ಪ್ರತ್ಯೇಕ ಯುಆರ್‌ಎಲ್‌ಗಳನ್ನು ನಿಷೇಧದ ನಿರ್ದೇಶನ ನೀಡಬಾರದು ಎಂದು ಫೌಂಡೇಶನ್ ಹೇಳುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470