TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಒಮ್ಮೆ ಯಾವುದಾದರೂ ಚಟಕ್ಕೆ ಬಿದ್ದರೆ ಅದರಿಂದ ಹೊರಬರುವುದು ಕಷ್ಟ. ಹಾಗೆಯೇ ಫೇಸ್‌ಬುಕ್ ಕೂಡ ಈಗ ಚಟವಾಗಿ ಬದಲಾದ್ದು, ಫೇಸ್‌ಬುಕ್ ಅನ್ನು ನಾನು ಬಿಟ್ಟರೂ ಅದು ನನ್ನನ್ನು ಬಿಡುತ್ತಿಲ್ಲ ಎನ್ನುವಂತಾಗಿದೆ. ಮೊನ್ನೆ ಮೊನ್ನೆಯಷ್ಟೆ ಐದು ಕೋಟಿ ಫೇಸ್‌ಬುಕ್ ಖಾತೆಗಳ ಸುರಕ್ಷತೆಯನ್ನು ಭೇದಿಸಲಾಗಿದೆ ಎಂದು ಫೇಸ್‌ಬುಕ್ ಹೇಳಿದ ನಂತರ ಈ ಮಾತು ಸತ್ಯವೆನಿಸಿದೆ.
ಹೌದು, ಎಂದೂ ನಮ್ಮ ವಿಶ್ವಾಸವನ್ನೇ ಉಳಿಸಿಕೊಳ್ಳದ ಫೇಸ್‌ಬುಕ್ ನಂಬಿಕೆಗೆ ಅರ್ಹವಾಗಿಲ್ಲ ಎಂದು ಬಹುತೇಕ ಸಹ ಸಾಬೀತಾಗಿದೆ. ಆದರೆ, ನಮ್ಮನ್ನು ಆವರಿಸಿಕೊಂಡಿರುವ ಫೇಸ್‌ಬುಕ್ ಅನ್ನು ಬಿಡುವುದು ಹೇಗೆ? ಅದರಿಂದ ದೂರವಾಗಬೇಕು ಎಂದರೂ ಸಾಧ್ಯವಾಗುತ್ತಿಲ್ಲ ಎಂಬ ಚಿಂತೆ ಎಲ್ಲರಿಗೂ ಇದೆ.! ನಿಜ ಹೇಳಬೇಕೆಂದರೆ, ಅದನ್ನು ಬಿಡಲು ಯಾರಿಗೂ ಸಾಧ್ಯವಾಗುತ್ತಿಲ್ಲ.
ಹಾಗಾಗಿ, ಫೇಸ್‌ಬುಕ್ ಅನ್ನು ಬಿಡದಿದ್ದರೂ ಸಹ ನಮ್ಮ ಸುರಕ್ಷತೆಯನ್ನು ನಾವೇ ಕಾಪಾಡಿಕೊಳ್ಳುವ ಹೊಣೆಯನ್ನು ಹೊತ್ತಿಕೊಳ್ಳಬೇಕು. ಇತ್ತೀಚಿಗೆ ಫೇಸ್‌ಬುಕ್ ಖಾತೆಗಳು ಹ್ಯಾಕ್ ಆಗುವುದು ಸಹಜವೆಂಬಂತೆ ನಡೆಯುತ್ತಿರುವುದರಿಂದ ಅತಿ ಹೆಚ್ಚಿನ ಸುರಕ್ಷತೆಯನ್ನು ನೀವು ಹೊಂದಬೇಕು. ಅದಕ್ಕಾಗಿ ಈ ಲೇಖನದಲ್ಲಿ ಹೆಚ್ಚಿನ ಸುರಕ್ಷತೆ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ.
ಫೇಸ್‌ಬುಕ್ ಸುರಕ್ಷಿತವಾಗಿಲ್ಲ!
ಬಹುತೇಕ ಜನರು ಫೇಸ್‌ಬುಕ್ ಖಾತೆ ಪರ್ಫೆಕ್ಟ್ ಸೆಕ್ಯುರಿಟಿಯನ್ನು ಹೊಂದಿದೆ ಎಂದುಕೊಳ್ಳುತ್ತಾರೆ. ಆದರೆ, ಹಾಗೆಂದು ನೀವು ತಿಳಿಯುವ ಹಾಗಿಲ್ಲ, ಯಾಕೆಂದರೆ ಸ್ವತಃ ಫೇಸ್‌ಬುಕ್ ಒಡೆಯ ಮಾರ್ಕ್ ಜುಕರ್‌ಬರ್ಗ್‌ನ ಖಾತೆಯ ಭದ್ರತೆಯೇ ಉಲ್ಲಂಘನೆಯಾಗಿದೆಯಂತೆ.! ಇಂತಹದೊಂದು ಸುದ್ದಿ ಕಿವಿಗೆ ಬಿದ್ದ ನಂತರವೂ ನೀವು ಸುರಕ್ಷಿತವಾಗಿರಿದ್ದರೆ ಕಷ್ಟವೇ ಸರಿ.
2-ಫ್ಯಾಕ್ಟರ್ ಆಥೆಂಟಿಕೇಶನ್
ಫೇಸ್‌ಬುಕ್ ಖಾತೆಗೆ ಲಾಗಿನ್ ಆಗುವ ಮುನ್ನ ಹೆಚ್ಚಿನ ಎರಡು ಹಂತಹ ಸುರಕ್ಷತೆಯನ್ನು ಫೇಸ್‌ಬುಕ್ ಒದಗಿಸಿದೆ. ಇದಕ್ಕೆ 2-ಫ್ಯಾಕ್ಟರ್ ಆಥೆಂಟಿಕೇಶನ್ (ಎರಡು ಹಂತದ ದೃಢೀಕರಣ) ಎಂದು ಕರೆಯುತ್ತಾರೆ. ಈ 2 ಫ್ಯಾಕ್ಟರ್ ಆಥೆಂಟಿಕೇಶನ್ ಎಂಬುದನ್ನು ಎನೇಬಲ್ ಮಾಡಿಕೊಂಡರೆ ನಿಮ್ಮ ಫೇಸ್‌ಬುಕ್ ಖಾತೆಯನ್ನು ಕ್ರಿಮಿನಲ್‌ಗಳು ಸುಲಭವಾಗಿ ಪ್ರವೇಶಿಸಲು ಸಾಧ್ಯವೇ ಇಲ್ಲ.
ಎರಡು ಹಂತದ ಸುರಕ್ಷತೆ ಹೇಗೆ?
ಫೇಸ್‌ಬುಕ್ ಖಾತೆಗೆ ಲಾಗಿನ್ ಆಗಿ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ ಸೆಟ್ಟಿಂಗ್ಸ್‌ನಲ್ಲಿ Security &login ಆಯ್ಕೆ ಮಾಡಿ ಅಲ್ಲಿ ನಿಮಗೆ ನೀವು ಫೇಸ್‌ಬುಕ್‌ಗೆ ಲಾಗಿನ್ ಆದ ಸಿಸ್ಟಂ, ಲಾಗಿನ್ ಆದ ದಿನಾಂಕದ ಕೆಳಗೆ Use two-factor authentication ಎಂದು ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ ನಿಮ್ಮ ಮೊಬೈಲ್‌ಗೆ ಒಟಿಪಿ ಬಂದ ನಂತರವಷ್ಟೆ ಫೇಸ್‌ಬುಕ್‌ಗೆ ಲಾಗಿನ್ ಆಗುವಂತೆ ಮಾಡಬಹುದು.
ಹ್ಯಾಕ್ ಆಗಿದಿದ್ದರೂ ತಿಳಿಯುತ್ತದೆ!
ಸೆಟ್ಟಿಂಗ್ಸ್‌ನಲ್ಲಿ Security &login ಆಯ್ಕೆ ಮಾಡಿ ಅಲ್ಲಿ ನಿಮಗೆ ನೀವು ಫೇಸ್‌ಬುಕ್‌ಗೆ ಲಾಗಿನ್ ಆದ ಸಿಸ್ಟಂ, ಲಾಗಿನ್ ಆದ ದಿನಾಂಕ ಮತ್ತು ಸಮಯ ಕೂಡ ಕಾಣುತ್ತದೆ .ಇಲ್ಲಿ ನಿಮಗೆ ತಿಳಿಯದೆ ಬೇರೆ ಯಾವುದಾದರೂ ಸಿಸ್ಟಂನಿಂದ ಲಾಗಿನ್ ಆಗಿದ್ದರೆ ನಿಮ್ಮ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ ಎಂದು ತಿಳಿದು ಅದನ್ನು ಕೊನೆಗೊಳಿಸಬಹುದು.
ಒಮ್ಮೆಲೆ ಎಲ್ಲೆಡೆ ಲಾಗ್ ಔಟ್ ಮಾಡಿ!
ನಿಮ್ಮ ಫೇಸ್‌ಬುಕ್ ಖಾತೆ ಹಲವೆಡೆ ಲಾಗಿನ್ ಆಗಿದ್ದರೆ ನಿಮ್ಮ ಖಾತೆ ಲಾಗಿನ್ ಆದ ಸಿಸ್ಟಂಗಳ ಮಾಹಿತಿಯ ಕೆಳಗೆ logout off all sessions ಎಂದು ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಇಲ್ಲಿಯವರೆಗೂ ನೀವು ಲಾಗಿನ್ ಆಗಿದ್ದ ಅಥವಾ ಇತರರು ನಿಮ್ಮ ಖಾತೆಯಿಂದ ಲಾಗಿನ್ ಆಗಿದ್ದ ಖಾತೆಗಳೆಲ್ಲವೂ ಸೈನ್ ಔಟ್ ಆಗುತ್ತವೆ.
ಆಗಾಗ್ಗೆ ಪಾಸ್‌ವರ್ಡ್ ಬದಲಾಯಿಸಿ
ಐದು ಕೋಟಿ ಫೇಸ್‌ಬುಕ್ ಖಾತೆಗಳ ಸುರಕ್ಷತೆಯನ್ನು ಭೇದಿಸಲಾಗಿದೆ ಎಂದು ಹೇಳೀದ ಫೇಸ್‌ಬುಕ್, ಇನ್ನೂ 4 ಕೋಟಿ ಮಂದಿಯ ಖಾತೆಗಳಿಗೆ ಅಪಾಯವಿದೆ ಎಂದು ಸ್ವತಃ ಶುಕ್ರವಾರ ಎಚ್ಚರಿಕೆ ನೀಡಿದೆ. ಇನ್ನು ಪಾಸ್‌ವರ್ಡ್ ಕಳ್ಳತನವಾಗಿಲ್ಲ ಎಂದು ಫೇಸ್‌ಬುಕ್ ಈಗಾಗಲೇ ಸ್ಪಷ್ಟಪಡಿಸಿದ್ದರೂ, ಆಗಾಗ್ಗೆ ಪಾಸ್‌ವರ್ಡ್ ಬದಲಾಯಿಸಿಕೊಳ್ಳುವುದು ಸಹ ಸೂಕ್ತ.
ಜೀಮೇಲ್ ಕೂಡ ಹುಷಾರು
ಜೀಮೇಲ್ ಮೂಲಕ ಲಾಗಿನ್ ಆದಾಗಲೆಲ್ಲಾ ನಿಮಗೆ ಗೊತ್ತಾಗಬೇಕು ಎಂದಾದರೆ ಜೀಮೇಲ್‌ನಲ್ಲಿ ಲಾಗಿನ್ ಅಲರ್ಟ್ ಸೆಟ್ ಮಾಡಿದರೆ ಸಾಕು.ಲಾಗಿನ್ ಅಲರ್ಟ್ ಸೆಟ್ ಮಾಡಿದರೆ ಖಾತೆಗೆ ಲಾಗಿನ್ ಆದಾಗಲೆಲ್ಲಾ ನಿಮಗೆ ಇಮೇಲ್ ಅಥವಾ ಮೊಬೈಲ್ ಸಂದೇಶ ಲಭಿಸುತ್ತದೆ. ಅದರಲ್ಲಿರುವ OTP ನಮೂದಿಸಿದ ನಂತರವೇ ನಿವು ಲಾಗಿನ್ ಆಗಬಹುದು.