iOS 12 ಬಿಡುಗಡೆ ಮಾಡಲಿರುವ ಆಪಲ್: ಹೊಸದೇನು.?
ಈಗಾಗಲೇ ಆಪಲ್ ಐಫೋನ್ ಗಳಲ್ಲಿ iOS 11 ಬಳಕೆಯಾಗುತ್ತಿದ್ದು, ಐಫೋನ್ ಬಳಕೆದಾರರಿಗೆ ಹೊಸ ಹೊಸ ಆಯ್ಕೆಯನ್ನು iOS 11 ನೀಡಿದೆ. ಶೀಘ್ರವೇ ಆಪಲ್ iOS 12 ಅನ್ನು ಬಿಡುಗಡೆ ಮಾಡಲಿದ್ದು, ಈ ಕುರಿತು ಸಾಕಷ್ಟು ನಿರೀಕ್ಷೆಗಳು ಗರಿಗೆದರಿದೆ. ಆಪಲ್ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆಯನ್ನು ಹೊಸ OS ಮೇಲೆ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ಈ ಬಾರಿ ಆಪಲ್ iOS ನಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುವ ಸಾಧ್ಯತೆ ಇದೆ. ಈ ಹಿಂದಿನ iOS 11 ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಇದನ್ನು ಮರೆಮಾಚಲು ಮತ್ತು ಹೊಸದನ್ನು ಬಳಕೆದಾರರಿಗೆ ನೀಡಲು ಆಪಲ್ ಶ್ರಮ ವಹಿಸುತ್ತಿದ್ದು, iOS 12 ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸುವ ಸಾಧ್ಯತೆ ಇದೆ.

ಬಿಡುಗಡೆ:
ಆಪಲ್ ತನ್ನ ನೂತನ iOS 12 ಅನ್ನು ವರ್ಲ್ಡ್ ವೈಡ್ ಡೆವಲಪರ್ಸ್ ಕಾನ್ಫರೆನ್ಸ್ ನಲ್ಲಿ ಲಾಂಚ್ ಮಾಡಲಿದೆ ಎನ್ನಲಾಗಿದ್ದು, ಈ ಕಾರ್ಯಕ್ರಮವು ಜೂನ್ 4 ರಿಂದ 8ರ ವರೆಗೂ ನಡೆಯಲಿದೆ ಎನ್ನಲಾಗಿದೆ. ಆದರೆ ಇದು ಡಿವೈಸ್ ಗಳಲ್ಲಿ ಸೆಪ್ಟೆಂಬರ್ 20ರಿಂದ ಕಾಣಿಸಿಕೊಳ್ಳಲಿದೆ.

ಬಗ್ ಇರುವುದಿಲ್ಲ:
ಆಪಲ್ ಈ ಬಾರಿ iOS ಲಾಂಚ್ ಮಾಡುವ ಸಂದರ್ಭದಲ್ಲಿ ಎಲ್ಲಾ ಬಗ್ ಗಳನ್ನು ತೆಗೆದು ಹಾಕಲಿದೆ ಎನ್ನಲಾಗಿದೆ. ಪ್ರತಿ ಬಾರಿಯೂ ಸಣ್ಣ ಬಗ್ ಗಳಿಂದ ಆಪಲ್ ಮುಜುಗರ ಅನುಭವಿಸುತ್ತಿದೆ. ಇದನ್ನು ನಿವಾರಿಸಲು ಬಗ್ ಫ್ರಿ iOS ಬಿಡುಗಡೆ ಮಾಡಲಿದೆ.

ಡಿಸೈನ್:
iOS 12 ನಲ್ಲಿ ಬಳಕೆದಾರರಿಗೆ ಹೊಸ ಮಾದರಿಯ ಇಂಟರ್ ಫೇಸ್ ಅನ್ನು ನೀಡಲು ಆಪಲ್ ಮುಂದಾಗಿದೆ. ಉತ್ತಮವಾದ ವಿನ್ಯಾಸವು ಆಪಲ್ ಫೋನ್ ಬಳಕೆಯನ್ನು ಪ್ರೋತ್ಸಾಹಿಸುವಂತೆ ಮಾಡಲಿದೆ ಎನ್ನಲಾಗಿದೆ.

ವಿಡ್ಜಸ್:
ಈ ಬಾರಿ iOS 12ರಲ್ಲಿ ಹೆಚ್ಚಿನ ವಿಡ್ಜಸ್ ಕಾಣಿಸಿಕೊಲ್ಳಿದ್ದು, ಆಂಡ್ರಾಯ್ಡ್ ಮಾದರಿಯಲ್ಲಿ ಕಾಣಿಸಿಕೊಂಡೂ ಹೆಚ್ಚು ಶಕ್ತಿಶಾಲಿಯಾಗಿ ಮತ್ತು ಭಿನ್ನವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿವೆ.

ಕಂಟ್ರೋಲ್ ಪ್ಯಾನಲ್:
iOS 11 ನಲ್ಲಿ ಕಾಣಿಸಿಕೊಂಡ ತೊಂದರೆಗಳನ್ನು ನಿವಾರಿಸಿ ಉತ್ತಮವಾದ ಕಂಟ್ರೋಲ್ ಪ್ಯಾನಲ್ ಅನ್ನು ನೀಡಲು iOS 12 ನಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಲಾಗಿದೆ. ಅಲ್ಲದೇ ಮಕ್ಕಳ ಬಳಕೆಯನ್ನು ನಿರ್ಭಂದಿಸುವ ಆಯ್ಕೆಯನ್ನು ಹೊಂದಿರಲಿದೆ.

ಐಪ್ಯಾಡ್ ಗಳು:
iOS 12 ಪ್ಯಾಡ್ ಗಳಿಗೆ ಕೊಂಚ ಬದಲಾವಣೆಯನ್ನು ಹೊಂದಿರಲಿದ್ದು, ಇದಕ್ಕಾಗಿಯೇ ಬೇರೆ ಮಾಡಿರಯ UI ಯನ್ನು ವಿನ್ಯಾಸ ಮಾಡಲಾಗಿದೆ. ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲು ಇದು ಸೂಕ್ತವಾಗಿದೆ.


ಸಿರಿ:
iOS 12 ನಲ್ಲಿ ಸಿರಿಯನ್ನು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲು ಆಪಲ್ ಮುಂದಾಗಿದೆ. ವಾಯ್ಸ್ ಅಸಿಸ್ಟೆಂಟ್ ವಿಭಾಗದಲ್ಲಿ ಹೊಸ ಸಾಧ್ಯತೆಯನ್ನು ತೋರಿಸಲು ಆಪಲ್ iOS 12 ಅನ್ನು ವೇದಿಕೆಯಾಗಿ ಬಳಕೆ ಮಾಡಿಕೊಳ್ಳಲಿದೆ ಎನ್ನಲಾಗಿದೆ.


Click it and Unblock the Notifications








