ಆನ್‌ಲೈನ್‌ ಶಾಪಿಂಗ್‌ ಮಾಡೋರಿಗೆ ಬಿಗ್‌ ಶಾಕ್‌ ಕೊಟ್ಟ OTP ಪ್ಯಾಕೇಜ್‌ ಡೆಲಿವರಿ ಸ್ಕ್ಯಾಮ್‌!

|

ಇಂದಿನ ಜಮಾನದಲ್ಲಿ ಆನ್‌ಲೈನ್‌ ಶಾಪಿಂಗ್‌ ಅನ್ನೊದು ಒಂದು ಹವ್ಯಾಸವಾಗಿದೆ. ಇದಕ್ಕೆ ತಕ್ಕಂತೆ ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್‌ ಸೈಟ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಆದರೆ ಆನ್‌ಲೈನ್‌ ಡೆಲಿವರಿ ವಿಚಾರದಲ್ಲಿ ಸಾಕಷ್ಟು ಸ್ಕ್ಯಾಮ್‌ಗಳು ನಡೆಯುತ್ತಲೇ ಇವೆ. ಇವುಗಳನ್ನು ತಡೆಯುವುದಕ್ಕಾಗಿ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಸೈಟ್‌ಗಳು ಒಟಿಪಿ ಡೆಲಿವರಿ ವೆರಿಫಿಕೇಶನ್‌ ಅನ್ನು ಪ್ರಾರಂಭಿಸಿವೆ. ಆದರೆ ಇದೀಗ ಒಟಿಪಿ ಡೆಲಿವರಿ ಸ್ಕ್ಯಾಮ್‌ ಕೂಡ ಪ್ರಾರಂಭವಾಗಿದೆ.

ಆನ್‌ಲೈನ್‌

ಹೌದು, ಆನ್‌ಲೈನ್‌ ಡೆಲಿವರಿ ವಿರುದ್ದ ತಡೆಯಲು ಶುರುವಾಗಿದ್ದ ಒಟಿಪಿ ಡೆಲಿವರಿ ವೆರಿಫಿಕೇಶನ್‌ ನಲ್ಲಿಯೂ ಕೂಡ ಸಾಕಷ್ಟು ವಂಚನೆ ಪ್ರಕರಣಗಳು ನಡೆಯುತ್ತಿವೆ. ಡೆಲಿವರಿ ಒಟಿಪಿ ಪರಿಶೀಲನೆ ವಿಚಾರದಲ್ಲಿ ನಕಲಿ ಒಟಿಪಿ ಕಳುಹಿಸಿ ಗ್ರಾಹಕರ ಹಣ ಎಗರಿಸುವ ಪ್ರಕರಣ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. OTP ಪ್ಯಾಕೇಜ್ ಡೆಲಿವರಿ ಸ್ಕ್ಯಾಮ್‌ ಇದೀಗ ಆನ್‌ಲೈನ್‌ ಶಾಪಿಂಗ್‌ ಪ್ರಿಯರಿಗೆ ಬಿಗ್‌ ಶಾಕ್‌ ನೀಡಿದೆ ಎನ್ನಲಾಗಿದೆ. ಹಾಗಾದ್ರೆ ಏನಿದು OTP ಪ್ಯಾಕೇಜ್‌ ಡೆಲಿವರಿ ಸ್ಕ್ಯಾಮ್‌ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಶಾಪಿಂಗ್‌

ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಸಿರಿ ಅನ್ನೊ ಎಚ್ಚರಿಕೆ ಸರ್ವೇ ಸಾಮಾನ್ಯವಾಗಿದೆ. ಯಾಕೆಂದರೆ ಆನ್‌ಲೈನ್‌ ಶಾಪಿಂಗ್‌ ಪ್ರಿಯರನ್ನು ವಂಚಿಸಿ ಹಣ ದೋಚುವ ವಂಚಕರು ಎಲ್ಲಾ ಕಡೆ ಇದ್ದಾರೆ ಅನ್ನೊದು ನಿಮಗೆಲ್ಲಾ ತಿಳಿದೆ ಇದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇ-ಕಾಮರ್ಸ್‌ ಸೈಟ್‌ಗಳು ಒಟಿಪಿ ಪ್ಯಾಕೇಜ್‌ ಡೆಲಿವರಿ ಸಿಸ್ಟಂ ಅನ್ನು ಪರಿಯಿಸಿವೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ನಕಲಿ ಒಟಿಪಿ ಗಳನ್ನು ಗ್ರಾಹಕರಿಗೆ ಕಳಹಿಸಿ ಅವರ ಬ್ಯಾಂಖ್‌ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ ಎನ್ನಲಾಗಿದೆ.

ಶಾಪಿಂಗ್‌

ಆನ್‌ಲೈನ್‌ ಶಾಪಿಂಗ್‌ ಮಾಡುವ ಗ್ರಾಹಕರನ್ನೇ ಟಾರ್ಗೆಟ್‌ ಮಾಡಿರುವ ವಂಚಕರು ಡೆಲಿವರಿ ಏಜೆಂಟ್‌ಗಳಂತೆ ವೇಷ ಹಾಕಿಕೊಂಡು ಮೋಸ ಮಾಡುತ್ತಿದ್ದಾರೆ. ಆನ್‌ಲೈನ್‌ ಡೆಲಿವರಿ ಮಾಡುವ ಏಜೆಂಟ್‌ ಸೋಗಿನಲ್ಲಿ ಕರೆ ಮಾಡಿ ನಿಮ್ಮ ಬಳಿ ಒಟಿಪಿ ಪಡೆದು ನಿಮ್ಮ ಬ್ಯಾಂಕ್‌ ಖಾತೆಗಳಿಗೆ ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ರೀತಿಯ ಸ್ಕ್ಯಾಮ್‌ ಇದೀಗ ಆನ್‌ಲೈನ್‌ ಶಾಪಿಂಗ್‌ ಪ್ರಿಯರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಅದರಲ್ಲೂ ಹೊಸ ವರ್ಷದ ಪ್ರಯುಕ್ತ ವಿಶೇಷ ಸೇಲ್‌ಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡುವ ಗ್ರಾಹಕರು ಈ ಹೊಸ ಸ್ಕ್ಯಾಮ್‌ ಬಗ್ಗೆ ಎಚ್ಚರ ವಹಿಸುವುದು ಸೂಕ್ತವಾಗಿದೆ.

ಫೇಕ್‌ OTP ಡೆಲಿವರಿ ಸ್ಕ್ಯಾಮ್‌ ಎಂದರೇನು?

ಫೇಕ್‌ OTP ಡೆಲಿವರಿ ಸ್ಕ್ಯಾಮ್‌ ಎಂದರೇನು?

ಇ-ಕಾಮರ್ಸ್‌ ಸೈಟ್‌ಗಳು ತಮ್ಮ ಗ್ರಾಹಕರು ಬುಕ್‌ ಮಾಡಿರುವ ಪ್ರಾಡಕ್ಟ್‌ಗಳು ಸರಿಯಾಗಿ ಗ್ರಾಹಕರ ಕೈಗೆ ಸೇರುವುದಕ್ಕಾಗಿ ಒಟಿಪಿ ಪ್ಯಾಕೇಜ್‌ ಡೆಲಿವರಿ ಸಿಸ್ಟಂ ಅನ್ನು ತಂದಿವೆ. ಅದರಂತೆ ಗ್ರಾಹಕರು ಆರ್ಡರ್‌ ಮಾಡಿರುವ ಪ್ರಾಡಕ್ಟ್‌ ಅವರ ಕೈ ಸೇರಿದಾಗ ಏಜೆಂಟ್‌ ಅವರಿಗೆ ಒಂದು ಒಟಿಪಿ ಸಂಖ್ಯೆಯನ್ನು ಹಂಚಿಕೊಳ್ಳುವ ಮೂಲಕ ಡೆಲಿವರಿಯನ್ನು ದೃಡಪಡಿಸಬೇಕಾಗುತ್ತದೆ. ಆದರೆ ಇಂದನ್ನೇ ಬಂಡವಾಳವಾಗಿರಿಸಿಕೊಂಡಿರುವ ವಂಚಕರು ಇದೀಗ ಗ್ರಾಹಕರ ಒಟಿಪಿ ಪಡೆದು ಅವರ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕಿರುವ ಘಟನೆಗಳನ್ನು ವರದಿಯಾಗುತ್ತಿವೆ.

ವಂಚಕರು

ಮೊದಲಿಗೆ ವಂಚಕರು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಡೆಲಿವರಿ ಏಜೆಂಟ್‌ಗಳ ರೀತಿಯಲ್ಲಿ ಗ್ರಾಹಕರಿಗೆ ಕರೆ ಮಾಡುತ್ತಾರೆ. ನಂತರ ಇದು ಪೇ-ಆನ್ ಡೆಲಿವರಿ ಪಾರ್ಸೆಲ್ ಆಗಿದ್ದು, ನೀವು ಹಣ ಪಾವತಿಸಬೇಕು ಎಂದು ಹೇಳುತ್ತಾರೆ. ಒಂದು ವೇಳೆ ಗ್ರಾಹಕ ಪೇ ಮಾಡಲು ನಿರಾಕರಿಸಿದರೆ ಡೆಲಿವರಿಯನ್ನು ಕ್ಯಾನ್ಸಲ್‌ ಮಾಡುತ್ತೇವೆ ಎಂದು ವರ್ತಿಸುತ್ತಾರೆ. ಇಂತಹ ಸಮಯದಲ್ಲಿ ಮೋಸ ಹೋಗುವ ಗ್ರಾಹಕ ತನಗೆ ಬರುವ ಒಟಿಪಿಯನ್ನು ಹಂಚಿಕೊಮಡರೇ ಕೂಡಲೇ ಅವರ ಬ್ಯಾಂಕ್‌ ಖಾತೆಗೆ ಎಂಟ್ರಿ ನೀಡಿ ಹಣವನ್ನು ಕದಿಯುತ್ತಾರೆ ಎಂದು ಹೇಳಲಾಗಿದೆ.

ನಕಲಿ OTP ಡೆಲಿವರಿ ಸ್ಕ್ಯಾಮ್‌ ತಡೆಯೋದು ಹೇಗೆ?

ನಕಲಿ OTP ಡೆಲಿವರಿ ಸ್ಕ್ಯಾಮ್‌ ತಡೆಯೋದು ಹೇಗೆ?

* ಆನ್‌ಲೈನ್‌ ಶಾಪಿಂಗ್‌ ಮಾಡುವ ಗ್ರಾಹರು ಯಾವುದೇ ಎಚ್ಚರಿಕೆಯಿಲ್ಲದೆ ನಿಮ್ಮ ಒಟಿಪಿಯನ್ನು ಶೇರ್‌ ಮಾಡಬೇಡಿ.
* ವಿತರಣೆಯನ್ನು ದೃಢೀಕರಿಸುವ ಮೊದಲು ಯಾವಾಗಲೂ ಡೆಲಿವರಿ ಪಾರ್ಸೆಲ್ ಅನ್ನು ತೆರೆಯಿರಿ.
* ನೀವು ಅನುಮಾನಾಸ್ಪದ ವಿತರಣೆಯನ್ನು ಸ್ವೀಕರಿಸಿದರೆ ಅದನ್ನು ಸ್ವೀಕರಿಸಬೇಡಿ.
* ನಿಮ್ಮ ಪಾರ್ಸೆಲ್ ಅನ್ನು ಯಾವಾಗಲೂ ಟ್ರ್ಯಾಕ್ ಮಾಡಿ.

Best Mobiles in India

English summary
What is fake OTP delivery scam? How to prevent fake OTP delivery scam

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X