ಜಿಯೋದ 5G ವಿಶೇಷತೆ ಏನು?..4G LTE ಗಿಂತ ಭಿನ್ನ ಹೇಗೆ?

|

ಇತ್ತೀಚಿನ ದಿನಗಳಲ್ಲಿ ಜಗತ್ತಿನ ಎಲ್ಲೆಡೆ 5G ನೆಟ್‌ವರ್ಕ್‌ ಬಗ್ಗೆ ಚರ್ಚೆಯಾಗುತ್ತಿದೆ. ಭಾರತ ಕೂಡ ಲ್ಯಾಂಡ್‌ಲೈನ್‌ ನೆಟ್‌ವರ್ಕ್‌ ಜಮಾನದಿಂದ ಪ್ರಸ್ತುತ 5G ನೆಟ್‌ವರ್ಕ್‌ ಜಮಾನದವರೆಗೂ ಬಂದು ನಿಂತಿದೆ. ಸದ್ಯ 4G ನೆಟ್‌ವರ್ಕ್‌ ಯುಗದಲ್ಲಿರುವ ಭಾರತ 5G ನೆಟ್‌ವರ್ಕ್‌ ಜಮಾನಕ್ಕೆ ಹೆಜ್ಜೆ ಹಾಕಲು ಹವಣಿಸುತ್ತಿದೆ. ವಿಶ್ವದ ಕೆಲವೇ ಕೆಲ ರಾಷ್ಟ್ರಗಳಲ್ಲಿ ಲಬ್ಯವಿರುವ 5G ನೆಟ್‌ವರ್ಕ್‌ ಭಾರತದಲ್ಲಿಯೂ ಲಭ್ಯವಾಗುವ ಕಾಲ ದೂರವೇನಿಲ್ಲ. ಇಷ್ಟು ದಿನ 4G ವೇಗದಲ್ಲಿ ಕಾಲಕಳೆದಿದ್ದ ಜನ 5G ವೇಗಕ್ಕೆ ಅಣಿಯಾಗುತ್ತಿದ್ದಾರೆ. ಹಾಗಾದ್ರೆ 5G ನೆಟ್‌ವರ್ಕ್‌ ಎಂದರೇನು? 5G ನೆಟ್‌ವರ್ಕ್‌ ನಿಂದ ಏನು ಉಪಯೋಗ ಅನ್ನೊದನ್ನ ತಿಳಿಯೋಣ ಬನ್ನಿರಿ.

5G ನೆಟ್‌ವರ್ಕ್‌

ಹೌದು, ಭಾರತದಲ್ಲಿ 4G/LTE ಬಳಕೆಯಲ್ಲಿದೆ, ಆದರಿಂದ 3G ಗಿಂತಲೂ ಇಂಟರ್ನೆಟ್ ಅಪ್‌ಲೋಡ್ ಮತ್ತು ಡೌನ್‌ಲೋಡ್ ವೇಗ ಹೆಚ್ಚಿದೆ. ಆದರೆ 5G ನೆಟ್‌ವರ್ಕ್‌ ಬಾರತಕ್ಕೆ ಕಾಲಿಟ್ಟರೆ ಇಂಟರ್‌ನೆಟ್‌ ಅಪ್‌ಲೋಡ್‌ ಮತ್ತು ಡೌನ್‌ಲೋಡ್‌ ವೇಗ ಇನ್ನು ಹೆಚ್ಚಾಗಲಿದೆ. ಇನ್ನು ಟೆಲಿಕಾಂ ವಲಯಕ್ಕೆ ಜಿಯೋ ಕಾಲಿಟ್ಟ ಮೇಲೆ ಸಾಕಷ್ಟು ಬದಲಾವಣೆ ಆಗಿದ್ದು, 4G LTE ಯೊಂದಿಗೆ, ರಿಲಯನ್ಸ್ ಜಿಯೋ VoLTE ಅಥವಾ Voice-over-LTE ಯನ್ನ ಪರಿಚಯಿಸಲಾಗಿದೆ. ಇದರರ್ಥ ಮೂಲತಃ ಫೋನ್ ಮಾಡಿದಾಗ ಅಥವಾ ಸ್ವೀಕರಿಸುವಾಗಲೆಲ್ಲಾ 2G ನೆಟ್‌ವರ್ಕ್‌ಗೆ ಬದಲಾಯಿಸುವ ಅಗತ್ಯವಿರುವ ಫೋನ್‌ಗೆ ಬದಲಾಗಿ ಎಲ್ಲಾ ಫೋನ್ ಕರೆಗಳನ್ನು 4G ನೆಟ್‌ವರ್ಕ್ ಮೂಲಕ ಮಾಡಲಾಗುತ್ತದೆ. ಸದ್ಯ ಇದೀಗ ರಿಲಾಯನ್ಸ್‌ ಜಿಯೋ ಜಿಯೋ 5Gಪರಿಚಯಿಸುವ ಮಾತುಗಳನ್ನ ಆಡಿದೆ. ಅಷ್ಟಕ್ಕೂ ಜಿಯೋ 5G ಎಂದರೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜಿಯೋ 5 ಜಿ ಎಂದರೇನು?

ಜಿಯೋ 5 ಜಿ ಎಂದರೇನು?

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ತನ್ನ 43 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (MGM) ಜಿಯೋ 5G ನೆಟ್‌ವರ್ಕ್ ಬಗ್ಗೆಘೋಷಣೆ ಮಾಡಿರೋದು ನಿಮಗೆಲ್ಲಾ ತಿಳಿದೆ ಇದೆ. ಹಾಗಂತ 4G ಯಿಂದ 5G ಗೆ ಅಪ್‌ಗ್ರೇಡ್ ಮಾಡುವುದು ಅಂದುಕೊಂಡಷ್ಟು ಸರಳವಲ್ಲ. ಬಳಕೆದಾರರು ಹೊಸ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಮಾಡಬೇಕಾದರೆ, ಟೆಲಿಕಾಂ ಆಪರೇಟರ್‌ನ ಕೊನೆಯಲ್ಲಿ ಸಾಕಷ್ಟು ಕೆಲಸಗಳು ಬೇಕಾಗುತ್ತವೆ. ಅದರಲ್ಲೂ ಟೆಲಿಕಾಂ ಆಪರೇಟರ್ ಹೊಸ ಸ್ಪೆಕ್ಟ್ರಮ್ ಅನ್ನು ಖರೀದಿಸಬೇಕಾಗುತ್ತದೆ, ಅದನ್ನು ಸರ್ಕಾರದ ಸ್ಪೆಕ್ಟ್ರಮ್ ಆಡಿಷನ್ ಮೂಲಕ ಬಳಸಲಾಗುತ್ತದೆ. ಹೆಚ್ಚುವರಿಯಾಗಿ, ಕಂಪನಿಯು ದೇಶಾದ್ಯಂತ ಸಾಧನಗಳನ್ನು ಸ್ಥಾಪಿಸುವ ಅಗತ್ಯವಿದೆ, ಅದರ ಮೂಲಕ ನೆಟ್‌ವರ್ಕ್ ಸಿಗ್ನಲ್ಸ್‌ ಅನ್ನು ನಿಯೋಜಿಸಬೇಕಾಗುತ್ತದೆ.

ಜಿಯೋ

ಸದ್ಯ ಜಿಯೋ ಪ್ರಕಟಣೆಯ ಪ್ರಕಾರ, ಟೆಲಿಕಾಂ ಸೇವಾ ಪೂರೈಕೆದಾರರು ಮತ್ತು ಅವರ ಸಲಕರಣೆಗಳ ಮಾರಾಟಗಾರರು 5G ನೆಟ್‌ವರ್ಕ್ ಘಟಕಗಳ ಲ್ಯಾಬ್ ಪ್ರಯೋಗಗಳನ್ನು ಪೂರ್ಣಗೊಳಿಸಿದ್ದಾರೆ. ಆದಾಗ್ಯೂ, ಸ್ಪೆಕ್ಟ್ರಮ್ ಹರಾಜು ಪ್ರಾರಂಭವಾಗುವವರೆಗೆ ಸಾರ್ವಜನಿಕವಾಗಿ ಲಭ್ಯವಾಗುವುದಿಲ್ಲ. ಆದರೆ ಅವರು ಸ್ಪೆಕ್ಟ್ರಮ್ ಅನ್ನು ಖರೀದಿಸಿದ ತಕ್ಷಣ, ಇದು ಸಾರ್ವಜನಿಕ ಟ್ರೇಲ್ಸ್‌ನಲ್ಲಿ ಲಭ್ಯವಾಗಲಿದೆ ಎಂದು ಜಿಯೋ ಭರವಸೆ ನೀಡಿದೆ. ಈ ಮೂಲಕ 5G ನೆಟ್‌ವರ್ಕ್‌ ಅನ್ನು ಭಾರತದಲ್ಲಿ ಪರಿಚಯಿಸಿದ ಮೊದಲ ನೆಟ್‌ವರ್ಕ್ ಜಿಯೋ ಆಗಿರಲಿದೆ ಎಂದು ಹೇಳಬಹುದಾಗಿದೆ.

4G ಗಿಂತ 5G ಹೇಗೆ ಉತ್ತಮ?

4G ಗಿಂತ 5G ಹೇಗೆ ಉತ್ತಮ?

4G ನೆಟ್‌ವರ್ಕ್‌ ಗಿಂತ 5G ನೆಟ್‌ವರ್ಕ್‌ ಉತ್ತಮವಾಗಿದ್ದು, 5G ನೆಟ್‌ವರ್ಕ್‌ 20gbps ಡೌನ್‌ಲಿಂಕ್ ಮತ್ತು 10gbps ಅಪ್‌ಲಿಂಕ್ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ 5G ನೆಟವರ್ಕ್‌ ವೇಗವಾಗಿ ಡೇಟಾ ಟ್ರಾನ್‌ಫರ್‌ ಮಾಡುವ ಜೊತೆಗೆ ಏಕಕಾಲಕ್ಕೆ ಹಲವು ಡಿವೈಸ್‌ಗಳೊಂದಿಗೆ ಕನೆಕ್ಟ್‌ ಆಗುವ ಸಾಮರ್ಥ್ಯಹೊಂದಿರಲಿದೆ. ಜೊತೆಗೆ 100Mbps ಡೌನ್‌ಲೋಡ್ ವೇಗ ಮತ್ತು 50Mbps ಅಪ್‌ಲೋಡ್ ವೇಗವನ್ನುಒದಗಿಸಲಿದೆ. ಕೇವಲ ವೇಗವನ್ನು ನೀಡುವುದರ ಹೊರತಾಗಿ, 5G ನೆಟ್‌ವರ್ಕ್ ಮೂಲಕ ಗೇಮಿಂಗ್ ಅನ್ನು ತಡೆರಹಿತವಾಗಿ ಅನುಭವಿಸಬಹುದು. ಅಲ್ಲದೆ, ವೀಡಿಯೊ ಕರೆಗಳನ್ನು ಯಾವುದೇ ಅಡೆತಡೆಯಿಲ್ಲದೆ ಅನುಭವಿಸಬಹುದಾಗಿದೆ. .

ಜಿಯೋ

ಸದ್ಯ ರಿಲಯನ್ಸ್ ಜಿಯೋ ಮುಂದಿನ ವರ್ಷದ ವೇಳೆಗೆ 5G ಪ್ರಯೋಗಗಳನ್ನು ಹೊರತರುವ ನಿರೀಕ್ಷೆಯಿದೆ. ಇದಕ್ಕಾಗಿ ರಿಲಾಯನ್ಸ್‌ ಜಿಯೋ ಕಂಪನಿಯು ಸಲಕರಣೆಗಳೊಂದಿಗೆ ಸಜ್ಜಾಗಿದೆ ಮತ್ತು ಸ್ಪೆಕ್ಟ್ರಮ್ ಹರಾಜುಗಾಗಿ ಕಾಯುತ್ತಿದೆ. ಆದಾಗ್ಯೂ, ಹೊಸ ಜಿಯೋ 5G ಯನ್ನು ಪ್ರಯತ್ನಿಸಲು ಗ್ರಾಹಕರಿಗೆ ತಮ್ಮ ತುದಿಯಲ್ಲಿ ಹಾರ್ಡ್‌ವೇರ್ ಅಪ್‌ಗ್ರೇಡ್ ಅಗತ್ಯವಿದೆ. ಜೊತೆಗೆ ಕೈಗೆಟುಕುವ 5G ಸ್ಮಾರ್ಟ್‌ಫೋನ್‌ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಉದ್ದೇಶದಿಂದ ಟೆಲಿಕಾಂ ಆಪರೇಟರ್ ಗೂಗಲ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಸದ್ಯ ಜಿಯೋ ಕಂಪೆನಿಯ ಪ್ರಕಾರ, ಶೀಘ್ರದಲ್ಲೇ ಪ್ರತಿಯೊಬ್ಬ ವ್ಯಕ್ತಿಯ ಕೈಯಲ್ಲಿ 5G ಸ್ಮಾರ್ಟ್‌ಫೋನ್‌ ಲಭ್ಯವಿರುವಂತೆ ಮಾಡುವ ಉದ್ದೇಶವನ್ನು ಹೊಂದಿದೆ.

Most Read Articles
Best Mobiles in India

Read more about:
English summary
According to Jio’s announcement, both the telecom service provider and their equipment vendor, have completed lab trials of 5G network components.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X