ಮೆಟಾವರ್ಸ್‌ ಪರಿಕಲ್ಪನೆಯ ಉದ್ದೇಶ ನಿಜಕ್ಕೂ ಸಾದ್ಯವಾಗುತ್ತಾ?

|

ಕಳೆದ ಮೂರು ನಾಲ್ಕು ದಿನಗಳಿಂದ ಟೆಕ್‌ ವಲಯದಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿರುವ ಹೆಸರು ಒಂದೇ ಅದುವೇ 'ಮೆಟಾವರ್ಸ್‌'. ಸೊಶೀಯಲ್‌ ಮೀಡಿಯಾ ದೈತ್ಯ ಫೇಸ್‌ಬುಕ್‌ ಯಾವಾಗ ತನ್ನ ಹೆಸರನ್ನು ಮೆಟಾ ಎಂದು ಬದಲಾಯಿಸಿದ ದಿನದಿಂದ ಮೆಟಾವರ್ಸ್‌ ಅನ್ನೊ ಪದ ಸಾಕಷ್ಟು ಸಂಚಲನ ಮೂಡಿಸಿದೆ. ಅದರಲ್ಲೂ ಮೆಟಾವರ್ಸ್‌ ಅಂದರೆ ಏನು? ಇದರ ಮೂಲ ಯಾವುದು ಎಂಬ ಪ್ರಶ್ನೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಮೆಟಾವರ್ಸ್‌ ಎಂಬ ಪದ ಟೆಕ್‌ ವಲಯದಲ್ಲಿ ಭವಿಷ್ಯದ ಕಲ್ಪನೆಯನ್ನು ಹೇಗೆ ತೆರೆದಿಡಲಿದೆ ಅನ್ನೊ ನಿರೀಕ್ಷೆ ಗರಿಗೆದರಿದೆ.

ಪೇಸ್‌ಬುಕ್‌

ಹೌದು, ಪೇಸ್‌ಬುಕ್‌ ಸಿಇಒ ಮಾರ್ಕ್‌ ಜುಕರ್‌ ಬರ್ಗ್‌ ಪೇಸ್‌ಬುಕ್‌ ಕಂಪೆನಿಯ ಹೆಸರನ್ನು ಮೆಟಾ ಎಂದು ಬದಲಾಯಿಸಿದ ನಂತರ ಸಾಕಷ್ಟು ಸಂಚಲನ ಮೂಡಿಸಿದೆ. ಭವಿಷ್ಯದಲ್ಲಿ ವರ್ಚುವಲ್ ರಿಯಾಲಿಟಿ ಮತ್ತು ಟಕ್ನಾಲಜಿ ಬಳಸಿಕೊಂಡು ಮೆಟಾವರ್ಸ್ ಹೇಗೆ ರೂಪುಗೊಳ್ಳಲಿದೆ ಅನ್ನೊದರ ಕಲ್ಪನೆ ಬಗ್ಗೆ ಯಾರಿಗೂ ತಿಳಿದಿಲ್ಲ. ಜೊತೆಗೆ ಮೆಟಾವರ್ಸ್‌ ಹೇಗೆ ಕಾರ್ಯನಿರ್ವಹಿಸಲಿದೆ? ಇದು ವೈಯಕ್ತಿಕ ಡೇಟಾಗೆ ಪ್ರವೇಶ ನೀಡಲಿದೆಯಾ ಎಂಬೆಲ್ಲಾ ಪ್ರಶ್ನೆಗಳು ಶುರುವಾಗಿದೆ? ಇದರ ನಡುವೆ ಹೆಚ್ಚಿನ ಜನರಿಗೆ ಕಾಡುತ್ತಿರುವ ಪ್ರಶ್ನೆ ಮೆಟಾವರ್ಸ್‌ ಅಂದರೆ ಏನು? ಹಾಗಾದ್ರೆ ಮೆಟಾವರ್ಸ್‌ ಅಂದರೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೆಟಾವರ್ಸ್ ಎಂದರೆ ಏನು ಅರ್ಥ ಗೊತ್ತಾ?

ಮೆಟಾವರ್ಸ್ ಎಂದರೆ ಏನು ಅರ್ಥ ಗೊತ್ತಾ?

ಫೇಸ್‌ಬುಕ್‌ ಇದೀಗ ತನ್ನ ಹೆಸರನ್ನು ಮೆಟಾ ಎಂದು ಬದಲಾಯಿಸಿಕೊಂಡಿದೆ. ಭವಿಷ್ಯದ ರ್ವುವಲ್‌ ರಿಯಾಲಿಟಿಯನ್ನು ಬದಲಾಯಿಸುವ ಗುರಿಯನ್ನು ಇದು ಒಳಗೊಂಡಿದೆ. ಇದೇ ಕಾರಣಕ್ಕೆ ಇದನ್ನು ಮೆಟಾವರ್ಸ್‌ ಎಂದು ಹೇಳಲಾಗ್ತಿದೆ. ಅಂದರೆ ಮಾರ್ಕ ಜುಕರ್‌ ಬರ್ಗ್‌ ನೀವು ಬಳಸುವ ಇಂಟರ್‌ನೆಟ್‌ಗೆ ಜೀವ ಬಂದಿದೆ ಎಂದು ಊಹಿಸಿಕೊಳ್ಳಿ ಇದನ್ನು "ವರ್ಚುವಲ್ ಪರಿಸರ" ಎಂದು ಹೇಳಬಹುದು ಅಂದಿದ್ದಾರೆ. ಅಂದರೆ ನೀವು ಇಂಟರ್‌ನೆಟ್‌ ಅನ್ನು ಪರದೆಯ ಮೇಲೆ ನೋಡುವ ಬದಲು ನಿಮ್ಮ ಸುತ್ತಲೂ ಇಂಟರ್‌ನೆಟ್‌ ಇದ್ದು, ನೀವೆ ಇಂಟರ್‌ನೆಟ್‌ ಪರಿಸರ ಒಳಗೆ ಪ್ರವೇಶಿಸುವ ಆಯ್ಕೆಯನ್ನು ನೀಡಲಿದೆ.

ಸ್ಮಾರ್ಟ್‌ಫೋನ್

ಇದು ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ಗಳು, ವರ್ಧಿತ ರಿಯಾಲಿಟಿ ಗ್ಲಾಸ್‌ಗಳು, ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳು ಅಥವಾ ಇತರ ಸಾಧನಗಳನ್ನು ಬಳಸಿಕೊಂಡು ಜನರು ಭೇಟಿಯಾಗಲು ಬಳಸಬಹುದಾಗಿದೆ. ಅಂದರೆ ವರ್ಚುವಲ್‌ ಪ್ರಂಪಚದಲ್ಲಿ ಇಂಟರ್‌ನೆಟ್‌ ಮೂಲಕವೇ ಎಲ್ಲರನ್ನೂ ಸಂಪರ್ಕಿಸಬಹುದು. ವರ್ಚುವಲ್‌ ವರ್ಲ್ಡ್‌ನಲ್ಲಿ ನಿಮಗೆ ಬೇಕಾದ ಎಲ್ಲವನ್ನು ಸುಲಭವಾಗಿ ಸಾದಿಸಬಹುದು. ಈ ರಿತಿಯ ಕಲ್ಪನೆ ಭವಿಷ್ಯದ ಸಂಪರ್ಕದ ವಿಕಸನವಾಗಿದೆ. ಇಲ್ಲಿ ಎಲ್ಲಾ ವಿಷಯಗಳು ತಡೆರಹಿತವಾಗಿದ್ದು, ನಿಮ್ಮ ಭೌತಿಕ ಜೀವನವನ್ನು ಹೇಗೆ ಜೀವಿಸುತ್ತೀರೋ ಅದೇ ರೀತಿಯಲ್ಲಿ ನಿಮ್ಮ ವರ್ಚುವಲ್ ಜೀವನವನ್ನು ನೀವು ಅನುಭವಿಸಬಹುದು ಎಂದು ಹೇಳಲಾಗಿದೆ.

ಮೆಟಾವರ್ಸ್‌ನಲ್ಲಿ ಏನೆಲ್ಲಾ ಸಾಧ್ಯವಾಗಲಿದೆ?

ಮೆಟಾವರ್ಸ್‌ನಲ್ಲಿ ಏನೆಲ್ಲಾ ಸಾಧ್ಯವಾಗಲಿದೆ?

ಮೆಟಾವರ್ಸ್‌ನಲ್ಲಿ ವರ್ಚುವಲ್ ಕನ್ಸರ್ಟ್‌ಗೆ ಹೋಗುವುದು, ಆನ್‌ಲೈನ್‌ನಲ್ಲಿ ಟೂರಿಸಂ, ಕಲಾಕೃತಿಗಳ ವಿಕ್ಷಣೆ ಅಥವಾ ಇಲ್ಲವೇ ಕಲಾಕೃತಿಗಳನ್ನು ಕ್ರಿಯೆಟ್‌ ಮಾಡುವುದು. ಹಾಗೂ ಡಿಜಿಟಲ್ ಉಡುಪುಗಳನ್ನು ಪ್ರಯತ್ನಿಸಬಹುದು. ಇದಲ್ಲದೆ ವೀಡಿಯೊ ಕರೆ ಗ್ರಿಡ್‌ನಲ್ಲಿ ಸಹೋದ್ಯೋಗಿಗಳನ್ನು ನೋಡುವ ಬದಲು, ಉದ್ಯೋಗಿಗಳು ಅವರನ್ನು ವರ್ಚುವಲ್ ಆಫೀಸ್‌ನಲ್ಲಿ ಸೇರಿಕೊಳ್ಳಬಹುದಾಗಿದೆ. ಇದಕ್ಕಾಗಿ ಫೇಸ್‌ಬುಕ್ ತನ್ನ Oculus VR ಹೆಡ್‌ಸೆಟ್‌ಗಳನ್ನು ಬಳಸುವುದಕ್ಕಾಗಿ ಕಂಪನಿಗಳಿಗೆ Horizon Workrooms ಎಂಬ ಮೀಟಿಂಗ್ ಸಾಫ್ಟ್‌ವೇರ್ ಅನ್ನು ಪ್ರಾರಂಭಿಸಿದೆ. ಇನ್ನು ಈ ಹೆಡ್‌ಸೆಟ್‌ಗಳ ಬೆಲೆ $300 ಆಗಿದೆ ಎನ್ನಲಾಗಿದೆ.

ಮೆಟಾವರ್ಸ್‌

ಮೆಟಾವರ್ಸ್‌ ಎಂಬ ಪರಿಕಲ್ಪನೆ ವರ್ಚುವಲ್‌ ಜಗತ್ತಿನ ಪರಿಕ್ಲಪನೆಯಾಗಿದೆ. ಕಂಪೆನಿಯ ಸಹದ್ಯೋಗಿಗಳು ವರ್ಚವಲ್‌ ಆಫೀಸ್‌ನಲ್ಲಿ ಪರಸ್ಪರ ಬೇಟಿಯಾಗುವ ಪರಿಸರವನ್ನು ಇದು ನಿರ್ಮಾಣ ಮಾಡಲಿದೆ ಅನ್ನೊದು ಮಾರ್ಕ ಜುಕರ್‌ ಬರ್ಗ್‌ ಅಭಿಪ್ರಾಯ. ಇದನ್ನು ಕಾರ್ಯಗತಗೊಳಿಸಲು ಸ್ಪರ್ಧಾತ್ಮಕ ತಂತ್ರಜ್ಞಾನ ವೇದಿಕೆಗಳು ಮಾನದಂಡಗಳ ಸೆಟ್ ಅನ್ನು ಒಪ್ಪಿಕೊಳ್ಳುವ ಅಗತ್ಯವಿರುತ್ತದೆ. ಇದು ಡಿಜಿಟಲ್ ಆರ್ಥಿಕತೆಯ ದೊಡ್ಡ ಭಾಗವಾಗಲಿದೆ ಎಂದು ಹೇಳಲಾಗಿದೆ.

ಮೆಟಾವರ್ಸ್ ಅನ್ನೊದು ಕೇವಲ ಫೇಸ್‌ಬುಕ್‌ಗೆ ಸೀಮಿತನಾ?

ಮೆಟಾವರ್ಸ್ ಅನ್ನೊದು ಕೇವಲ ಫೇಸ್‌ಬುಕ್‌ಗೆ ಸೀಮಿತನಾ?

ಮೆಟಾವರ್ಸ್‌ನಲ್ಲಿ ಸಾಕಷ್ಟು ಕಂಪನಿಗಳು ವರ್ಚುವಲ್ ವರ್ಲ್ಡ್‌ ಮತ್ತು ಪರಿಸರವನ್ನು ನಿರ್ಮಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದೇ ರೀತಿಯಲ್ಲಿ ವರ್ಲ್ಡ್ ವೈಡ್ ವೆಬ್‌ನಲ್ಲಿ ಸಾಕಷ್ಟು ಕಂಪನಿಗಳು ಕೆಲಸಗಳನ್ನು ಮಾಡುತ್ತಿವೆ ಎಂದು ಎನ್‌ವಿಡಿಯಾದ ಓಮ್ನಿವರ್ಸ್ ಪ್ಲಾಟ್‌ಫಾರ್ಮ್‌ನ ಉಪಾಧ್ಯಕ್ಷ ರಿಚರ್ಡ್ ಕೆರಿಸ್ ಅಭಿಪ್ರಾಯ ಪಟ್ಟಿದ್ದಾರೆ. ಆದ್ದರಿಂದ ನೀವು ಒಂದು ಕಂಪನಿ ಅಥವಾ ಇನ್ನೊಂದು ಕಂಪನಿಯಿಂದ ಬೇರೆ ಬೇರೆ ವರ್ಚುವಲ್‌ ವರ್ಲ್ಡ್‌ಗೆ ಪ್ರವೇಶಿಸಬಹುದು ಎಂದು ಹೇಳಲಾಗಿದೆ.

ಮೆಟಾವರ್ಸ್‌

ಆದರೆ ಜುಕರ್‌ಬರ್ಗ್‌ನ ಮೆಟಾವರ್ಸ್‌ ಪರಿಕಲ್ಪನೆ ಒಂದರ್ಥದಲ್ಲಿ ದೊಡ್ಡ ಉತ್ಸಾಹಿಗಳ ಕೇಂದ್ರ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಏಕೆಂದರೆ ಕೆಲವರು ಮೆಟಾವರ್ಸ್ ಅನ್ನು ಫೇಸ್‌ಬುಕ್‌ನಂತಹ ಟೆಕ್ ಪ್ಲಾಟ್‌ಫಾರ್ಮ್‌ಗಳಿಂದ ಆನ್‌ಲೈನ್ ಸಂಸ್ಕೃತಿಯ ವಿಮೋಚನೆ ಎಂದು ಪರಿಗಣೆ ಮಾಡುತ್ತಾರೆ. ಯಾವಾಗಲೂ ಇಂಟರ್ನೆಟ್‌ನಲ್ಲಿ ಸುಲಭವಾಗಿ ಕಾರ್ಯನಿರ್ವಹಿಸಲು ಬಯಸುತ್ತೇವೆ. ಆದರೆ ಟ್ರ್ಯಾಕ್ ಮಾಡದ ಮತ್ತು ಮೇಲ್ವಿಚಾರಣೆ ಮಾಡದ ರೀತಿಯಲ್ಲಿ ಇಂಟರ್ನೆಟ್‌ನಲ್ಲಿ ರನ್‌ ಆಗಲು ಎಲ್ಲರೂ ಬಯಸುತ್ತಾರೆ. ಮೆಆವರ್ಸ್‌ನ ವರ್ಚುವಲ್‌ ಜಗತ್ತಿನಲ್ಲಿ ನಮ್ಮನ್ನ ಟ್ರಾಕ್‌ ಮಾಡುವ ಸಾದ್ಯತೆ ಕೂಡ ಇದೆ.

Best Mobiles in India

English summary
Facebook CEO Mark Zuckerberg's Thursday announcement that he's changing his company's name to Meta Platforms Inc.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X