2023ಕ್ಕೆ ಎಲ್ಲಾ ಸ್ಮಾರ್ಟ್‌ಫೋನ್‌ಗಳು ನಾವಿಕ್‌ ಬೆಂಬಲಿಸಬೇಕೆಂದು ಸರ್ಕಾರದ ಆದೇಶ!

|

ಭಾರತ ಸರ್ಕಾರ ಸ್ಮಾರ್ಟ್‌ಫೋನ್‌ ತಯಾರಿಕರಿಗೆ ಹೊಸ ಆದೇಶವನ್ನು ನೀಡಿದೆ. ಅದರಂತೆ ಮುಂದಿನ ವರ್ಷದಿಂದ ಬಿಡುಗಡೆಯಾಗುವ ಸ್ಮಾರ್ಟ್‌ಫೋನ್‌ಗಳು ನಾವಿಕ್‌ ಅನ್ನು ಸಕ್ರಿಯಗೊಳಿಸಬೇಕು ಎಂಬ ಆದೇಶವನ್ನು ಭಾರತ ಸರ್ಕಾರ ಅಂಗೀಕರಿಸಿದೆ. ಇನ್ನು ನಾವಿಕ್‌ ಟೆಕ್ನಾಲಜಿಯನ್ನು ಇಸ್ರೋ ಅಭಿವೃದ್ಧಿಪಡಿಸಿರುವ ಸ್ವದೇಶಿ ನ್ಯಾವಿಗೇಷನ್‌ ಟೆಕ್ನಾಲಜಿಯಾಗಿದೆ. ಇದನ್ನು ಮಿಲಿಟರಿ ಮತ್ತು ಕಮರ್ಷಿಯಲ್‌ ಉದ್ದೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ.

ಸ್ಮಾರ್ಟ್‌ಫೋನ್‌

ಹೌದು, ಭಾರತ ಸರ್ಕಾರ ಸ್ಮಾರ್ಟ್‌ಫೋನ್‌ ತಯಾರಕರಿಗೆ ಕಟ್ಟುನಿಟ್ಟನ ಸಂದೇಶ ರವಾನಿಸಿದೆ. ಮುಂದಿನ ವರ್ಷದಿಂದ ಎಲ್ಲಾ ಸ್ಮಾರ್ಟ್‌ಫೋನ್‌ ತಯಾರಕರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ನಾವಿಕ್‌ ಟೆಕ್ನಾಲಜಿಯನ್ನು ಸಕ್ರಿಯಗೊಳಸಿಬೇಕು ಎಂದು ಹೇಳಿದೆ. ನಾವಿಕ್‌ ಗೂಗಲ್‌ ಮ್ಯಾಪ್‌ ಮಾದರಿಯಲ್ಲಿಯೇ ಕಾರ್ಯನಿರ್ವಿಸಲಿದ್ದು, ಸ್ವದೇಶಿ ಟೆಕ್ನಾಲಜಿಯಾಗಿದೆ. ಹಾಗಾದ್ರೆ ಭಾರತ ಸರ್ಕಾರ ನಾವಿಕ್‌ ಅನ್ನು ಸಕ್ರಿಯಗೊಳಿಸಬೇಕು ಎಂದು ಯಾಕೆ ಹೇಳಿದೆ? ಇದರಿಂದ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು ಯಾವ ಪರಿಣಾಮಗಳನ್ನು ಎದುರಿಸಬಹುದು? ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನಾವಿಕ್‌ ಎಂದರೇನು? ಹೇಗೆ ಕಾರ್ಯನಿರ್ವಹಿಸಲಿದೆ?

ನಾವಿಕ್‌ ಎಂದರೇನು? ಹೇಗೆ ಕಾರ್ಯನಿರ್ವಹಿಸಲಿದೆ?

ನಾವಿಕ್‌ ಅನ್ನೊದು ಇಸ್ರೋ ಸಂಸ್ಥೆ ವಿನ್ಯಾಸಗೊಳಿಸಿರುವ ಇಂಡಿಯನ್‌ ಸ್ಯಾಟ್‌ಲೈಟ್‌ ಸಿಸ್ಟಂ ಆಗಿದೆ. ನಾವಿಕ್‌ ಸಿಸ್ಟಂ ಡ್ಯುಯಲ್ ಫ್ರೀಕ್ವೆನ್ಸಿ ಬ್ಯಾಂಡ್‌ಗಳ ಮೂಲಕ GPS ಗಿಂತ ಉತ್ತಮ ನಿಖರತೆಯನ್ನು ನೀಡಲಿದೆ ಎನ್ನಲಾಗಿದೆ. ಅಂದರೆ ಭಾರತದ ಭೌಗೋಳಿಕ ಪ್ರದೇಶದ ನ್ಯಾವಿಗೇ‍ಷನ್‌ ಅನ್ನು ನೀಡಲಿದೆ. ನಾವಿಕ್‌ ಭಾರತ ಮತ್ತು ಪಕ್ಕದ ಪ್ರದೇಶಗಳನ್ನು ಒಳಗೊಂಡಿರುವ 7 ಸ್ಯಾಟ್‌ಲೈಟ್‌ಗಳನ್ನು ಅವಲಂಬಿಸಿದೆ. ಆದರೆ GPS ಅಂತರಾಷ್ಟ್ರೀಯ ನ್ಯಾವಿಗೇಷನ್ ಸಿಸ್ಟಮ್ ಆಗಿದ್ದು, 31 ಸ್ಯಾಟ್‌ಲೈಟ್‌ಗಳನ್ನು ಅವಲಂಬಿಸಿದೆ. GPS ಇಡೀ ಜಗತ್ತಿನಾದ್ಯಂತ ಸೇವೆ ನೀಡಲಿದೆ. ಆದರೆ NavIC ಪ್ರಸ್ತುತ ಭಾರತ ಮತ್ತು ಪಕ್ಕದ ಪ್ರದೇಶಗಳಲ್ಲಿ ಮಾತ್ರ ಸೇವೆ ನೀಡಲಿದೆ.

ಸರ್ಕಾರ ನ ನೀಡಿರುವ ಆದೇಶದಲ್ಲಿ ಏನಿದೆ?

ಸರ್ಕಾರ ನ ನೀಡಿರುವ ಆದೇಶದಲ್ಲಿ ಏನಿದೆ?

ಭಾರತ ಸರ್ಕಾರದ ಸ್ಮಾರ್ಟ್‌ಫೋನ್ ತಯಾರಕರಿಗೆ 2023ರಿಂದ ಬಿಡುಗಡೆಯಾಗಲಿರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ನಾವಿಕ್‌ ಅನ್ನು ಸಕ್ರಿಯಗೊಳಿಸುವುದನ್ನು ಕಡ್ಡಾಯಗೊಳಿಸಿದೆ. ಸ್ವದೇಶಿ ನ್ಯಾವಿಗೇಷನ್‌ ಸಿಸ್ಟಂ ಅನ್ನು ಆಯಾ ರಾಷ್ಟ್ರಗಳ ಸೆಕ್ಯುರಿಟಿ ಏಜೆನ್ಸಿಗಳು ನಿರ್ವಹಿಸುತ್ತವೆ. ಆದ್ದರಿಂದ, ನಾಗರಿಕ ಸೇವೆಗಳನ್ನು ಕೆಳಮಟ್ಟಕ್ಕಿಳಿಸುವ ಸಾಧ್ಯತೆಯಿರಲಿದೆ. ಆದರಿಂದ ಸ್ವದೇಶಿ ತಂತ್ರಜ್ಞಾನವಾದ ನಾವಿಕ್‌ ಬಳಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಭಾರತ ಸರ್ಕಾರ ಬಂದಿದೆ.

ಸ್ಮಾರ್ಟ್‌ಫೋನ್‌ ತಯಾರಕರ ವಾದ ಏನಿದೆ?

ಸ್ಮಾರ್ಟ್‌ಫೋನ್‌ ತಯಾರಕರ ವಾದ ಏನಿದೆ?

ಸ್ಮಾರ್ಟ್‌ಫೋನ್ ತಯಾರಕರು ನಾವಿಕ್‌ ಅನ್ನು ಆಕ್ಟಿವ್‌ ಮಾಡಲು ಇತರ ಘಟಕಗಳ ಅಗತ್ಯವಿದೆ ಎಂದು ಹೇಳಿವೆ. ಇದರಿಂದ ಟಾಪ್-ಆಫ್-ಲೈನ್ ಚಿಪ್‌ಸೆಟ್‌ಗಳಿಂದ ಚಾಲಿತವಾಗಿರುವ ಫ್ಲ್ಯಾಗ್‌ಶಿಪ್ ಫೋನ್‌ಗಳ ಬೆಲೆ ದುಬಾರಿಯಾಗುತ್ತವೆ ಎಂದು ವಾದಿಸಿವೆ. ಅಲ್ಲದೆ ಈ ಸ್ಮಾರ್ಟ್‌ಫೋನ್ ತಯಾರಕರು ಬಜೆಟ್ ವಿಭಾಗದಲ್ಲಿ 20ಸಾವಿರ ರೂ ವಿಭಾಗದಲ್ಲಿ ಬರುವ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.

ಸರ್ಕಾರ

ಸದ್ಯ ಭಾರತ ಸರ್ಕಾರ ನ್ಯಾವಿಗೇಷನ್‌ಗಾಗಿ ವಿದೇಶಿ ಸ್ಯಾಟ್‌ಲೈಟ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮುಂದಾಗಿದೆ. ಸಂಪೂರ್ಣವಾಗಿ ನಾವಿಕ್‌ ಟೆಕ್ನಾಲಜಿ ಎಲ್ಲಾ ಕಡೆ ಲಭ್ಯವಾದ ನಂತರ ವಿದೇಶಿ ಜಿಪಿಎಸ್‌ ಟೆಕ್ನಾಲಜಿಯನ್ನು ತೆಗೆದು ಹಾಕುವ ಆಲೋಚನೆಯಲ್ಲಿದೆ. ಜಾಗತಿಕ ನ್ಯಾವಿಗೇಷನ್‌ಗಾಗಿ ಗುಣಮಟ್ಟದ ಪೈಪೋಟಿ ನೀಡುವ ನಿಟ್ಟಿನಲ್ಲಿ ನಾವಿಕ್‌ ಅನ್ನು ವಿಸ್ತರಿಸುವ ಗುರಿಯನ್ನು ಕೂಡ ಸರ್ಕಾರ ಹೊಂದಿದೆ. ಇದು ಮುಂದಿನ ದಿನಗಳಲ್ಲಿ ಸಾಧ್ಯವಾಗಲಿದೆ ಎನ್ನಲಾಗಿದೆ.

ನಾವಿಕ್‌

ಇದಲ್ಲದೆ ನಾವಿಕ್‌ ಅನ್ನು ಸಾರ್ವಜನಿಕರಿಗೆ ವಾಣಿಜ್ಯಿಕವಾಗಿ ಲಭ್ಯವಾಗುವಂತೆ ಮಾಡುವುದು ಮುಖ್ಯ ಉದ್ದೇಶವಾಗಿದೆ. ಅದರಂತೆ ಮುಂದಿನ ವರ್ಷದಿಂದ ನಾವಿಕ್‌ ಅನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಸಕ್ರಿಯಗೊಳಿಸಬೇಕಾದ ಜವಾಬ್ದಾರಿ ಎಲ್ಲಾ ಸ್ಮಾರ್ಟ್‌ಫೋನ್‌ ತಯಾರಕರ ಮೇಲಿದೆ. ಒಂದು ವೇಳೆ ನಾವಿಕ್‌ ಅನ್ನು ಬೆಂಬಲಿಸಿದ ಸ್ಮಾರ್ಟ್‌ಫೋನ್‌ ತಯಾರಿಕರ ಮೇಲೆ ಭಾರತ ಸರ್ಕಾರ ಯಾವ ಕ್ರಮ ಕೈ ತೆಗೆದುಕೊಳ್ಳಲಿದೆ ಅನ್ನೊದನ್ನ ಕಾದು ನೋಡಬೇಕಿದೆ.

Best Mobiles in India

English summary
What is NavIC ?What's the Government mandate?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X