ಟ್ವಿಟರ್ ಸರ್ಕಲ್ ಎಂದರೇನು? ಇದರಿಂದಾಗುವ ಪ್ರಯೋಜನಗಳೇನು?

|

ಮೈಕ್ರೋಬ್ಲಾಗಿಂಗ್‌ ಸೈಟ್‌ ಟ್ವಿಟರ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಎನಿಸಿಕೊಂಡಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಿಶೇಷ ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ಬಳಕೆದಾರರನ್ನು ಸೆಳೆಯುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಟ್ವಿಟರ್‌ ಸರ್ಕಲ್‌ ಫೀಚರ್ಸ್‌ ಅನ್ನು ಎಲ್ಲಾ ಬಳಕೆದಾರರಿಗೂ ಪರಿಚಯಿಸಲು ಮುಂದಾಗಿದೆ. ಇಷ್ಟು ದಿನದವರೆಗೆ ಬಿಟಾ ವರ್ಷನ್‌ನಲ್ಲಿದ್ದ ಈ ಫೀಚರ್ಸ್‌ ಇದೀಗ ಎಲ್ಲಾ ಟ್ವಿಟರ್‌ ಬಳಕೆದಾರರಿಗೂ ಲಭ್ಯವಾಗಲಿದೆ.

ಟ್ವಿಟರ್‌

ಹೌದು, ಟ್ವಿಟರ್‌ ತನ್ನ ಎಲ್ಲಾ ಬಳಕೆದಾರರಿಗೆ ಟ್ವಿಟರ್ ಸರ್ಕಲ್ ಫೀಚರ್ಸ್‌ ಪರಿಚಯಿಸಿದೆ. ಇನ್ನು ಟ್ವಿಟರ್‌ ಸರ್ಕಲ್‌ ಫೀಚರ್ಸ್‌ ಸಾಕಷ್ಟು ವಿಶೇಷವಾಗಿದ್ದು, ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕ್ಲೋಸ್‌ ಫ್ರೆಂಡ್ಸ್‌ ಆಯ್ಕೆಯ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಅಂದರೆ ಈ ಫೀಚರ್ಸ್‌ ಮೂಲಕ ನೀವು ನಿಮ್ಮದೇ ಆಯ್ದ ಜನರ ಗುಂಪಿಗೆ ಮಾತ್ರ ಟ್ವೀಟ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದರಿಂದ ಒಂದೇ ಮನಸ್ಥಿತಿಯ ಜನರು ತಮ್ಮ ಅಭಿಪ್ರಾಯಗಳನ್ನು ಒಂದೆಡೆ ಹಂಚಿಕೊಳ್ಳಲು ಅವಕಾಶ ಸಿಗಲಿದೆ. ಹಾಗಾದ್ರೆ ಟ್ವಿಟರ್‌ ಸರ್ಕಲ್‌ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್ ಸರ್ಕಲ್ ಫೀಚರ್ಸ್‌ ವಿಶೇಷತೆ ಏನು?

ಟ್ವಿಟರ್ ಸರ್ಕಲ್ ಫೀಚರ್ಸ್‌ ವಿಶೇಷತೆ ಏನು?

ಹೆಸರೇ ಸೂಚಿಸುವಂತೆ ಟ್ವಿಟರ್‌ ಸರ್ಕಲ್‌ ಎಂದರೆ ನೀವು ನಿಮ್ಮದೇ ಆದ ಗುಂಪಿನೊಂದಿಗೆ ಟ್ವಿಟ್‌ ಮಾಡುವ ಆಯ್ಕೆಯಾಗಿದೆ. ಅಂದರೆ ನೀವು ನಿಮ್ಮ ಟ್ವೀಟ್‌ ಅನ್ನು ನಿಮ್ಮ ಸಂಪೂರ್ಣ ಪ್ರೇಕ್ಷಕರ ಬದಲಿಗೆ ಆಯ್ದ ಜನರ ಗುಂಪಿಗೆ ಟ್ವೀಟ್ ಮಾಡುವುದಕ್ಕೆ ಅನುಮತಿಸಲಿದೆ. ಇದರಿಂದ ನೀವು ತಮಾಷೆ, ವೈಯಕ್ತಿಕ, ಇತರೆ ಉಳಿದ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ಬಯಸದ ವಿಚಾರವನ್ನು ಇಲ್ಲಿ ಟ್ವೀಟ್‌ ಮಾಡಬಹುದಾಗಿದೆ. ಇದರಿಂದ ನಿಮ್ಮ ಸರ್ಕಲ್‌ನಲ್ಲಿ ನೀವು ಟ್ವಿಟ್‌ ಮಾಡಿ ಚರ್ಚೆ ನಡೆಸಬಹುದಾಗಿದೆ. ಈ ಫೀಚರ್ಸ್‌ ಹೆಚ್ಚಿನ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವ ಬಳಕೆದಾರರಿಗೆ ವಿಶೇಷವಾಗಿ ಅನುಕೂಲಕರವಾಗಿರುತ್ತದೆ ಎಂದು ಹೇಳಲಾಗಿದೆ.

ಟ್ವಿಟರ್ ಸರ್ಕಲ್ ಕಾರ್ಯನಿರ್ವಹಣೆ ಹೇಗೆ?

ಟ್ವಿಟರ್ ಸರ್ಕಲ್ ಕಾರ್ಯನಿರ್ವಹಣೆ ಹೇಗೆ?

ಟ್ವಿಟರ್‌ ಸರ್ಕಲ್‌ ಫೀಚರ್‌ ಮೂಲಕ ಟ್ವಿಟರ್‌ ಬಳಕೆದಾರರು ತಮ್ಮದೇ ಅದ ಟ್ವಿಟರ್‌ ಸರ್ಕಲ್‌ ಕ್ರಿಯೆಟ್‌ ಮಾಡಿಕೊಲ್ಳಬಹುದು. ಈ ಸರ್ಕಲ್‌ನಲ್ಲಿ 150 ಸದಸ್ಯರವರೆಗೆ ಸೇರಿಸಬಹುದು. ಈ ಸದಸ್ಯರನ್ನು ನಿಮಗೆ ಬೇಡ ಎನಿಸಿದರೆ ತೆಗೆದುಹಾಕಬಹುದು. ಅಲ್ಲದೆ ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಟ್ವಿಟರ್‌ ಸರ್ಕಲ್‌ ಅನ್ನು ಬದಲಾಯಿಸುತ್ತಾ ಹೋಗಬಹುದು. ಅಲ್ಲದೆ ಟ್ವಿಟರ್‌ ಸರ್ಕಲ್‌ನಿಂದ ನೀವು ಯಾವುದೇ ಬಳಕೆದಾರರನ್ನು ತೆಗೆದುಹಾಕಿದರೂ ಕೂಡ ಅವರಿಗೆ ತಿಳಿಸುವುದಿಲ್ಲ ಎಂದು ಟ್ವಿಟರ್‌ ಹೇಳಿದೆ. ಆದರೆ ಸರ್ಕಲ್‌ನಲ್ಲಿರುವ ಜನರು ಟ್ವೀಟ್‌ಗಳ ಅಡಿಯಲ್ಲಿ ಬ್ಯಾಡ್ಜ್ ಅನ್ನು ನೋಡಲು ಸಾಧ್ಯವಾಗುತ್ತದೆ.

ಸರ್ಕಲ್‌

ಇನ್ನು ನೀವು ನಿಮ್ಮ ಸರ್ಕಲ್‌ ಅನ್ನು ಸೆಟ್‌ ಮಾಡಿದಾಗ ನೀವು ಸಾಮಾನ್ಯವಾಗಿ ಟ್ವೀಟ್‌ ಮಾಡಿದಂತೆಯೇ ಮಾಡಬಹುದು. ಎಂದಿನಂತೆ ಮೀಡಿಯಾವನ್ನು ಟ್ವೀಟ್ ಮಾಡಬಹುದು ಮತ್ತು ಅದನ್ನು ನಿಮ್ಮ ಸಂಪೂರ್ಣ ಪ್ರೇಕ್ಷಕರೊಂದಿಗೆ ಅಥವಾ ಟ್ವೀಟ್ ಸಂಯೋಜಕರಿಂದ ನಿಮ್ಮ ವಲಯಕ್ಕೆ ಮಾತ್ರ ಹಂಚಿಕೊಳ್ಳಲು ಆಯ್ಕೆ ಮಾಡಬಹುದು. ಆಯ್ಕೆಮಾಡಿದ ಸದಸ್ಯರಿಗೆ ಮಾತ್ರ ಆ ಟ್ವೀಟ್ ಅನ್ನು ವೀಕ್ಷಿಸಲು ಅವಕಾಶ ನೀಡುತ್ತದೆ. ನೀವು ಟ್ವೀಟ್‌ ಮಾಡುವಾ ಎಡಿಟ್‌ ಬಟನ್‌ ಕಾಣಲಿದೆ, ಇದರ ಮೂಲಕ ನಿಮ್ಮ ಸರ್ಕಲ್‌ಗೆ ಸದಸ್ಯರನ್ನು ಸೇರ್ಪಡೆ ಮಾಡುವ ಅಥವಾ ತೆಗೆದುಹಾಕುವುದಕ್ಕೆ ಅನುಮತಿಸಲಿದೆ.

ಟ್ವಿಟರ್‌

ಇದಲ್ಲದೆ ಟ್ವಿಟರ್‌ ಇತ್ತೀಚಿಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕೋ ಟ್ವೀಟ್ಸ್ ಫೀಚರ್ಸ್‌ ಸೇರ್ಪಡೆ ಮಾಡಿದೆ. ಟ್ವಿಟರ್‌ ಅಂತಿಮವಾಗಿ ತನ್ನ ಬಳಕೆದಾರರಿಗೆ ಕೋ ಟ್ವೀಟ್ಸ್ ಫೀಚರ್ಸ್‌ ಅನ್ನು ಲೈವ್‌ ಮಾಡಿದೆ. ಇನ್ನು ಈ ಹೊಸ ಫೀಚರ್ಸ್‌ ಇಬ್ಬರು ಬಳಕೆದಾರರು ಒಟ್ಟಿಗೆ ಪೋಸ್ಟ್ ಮಾಡುವುದಕ್ಕೆ ಅನುಮತಿಸಲಿದೆ. ಅಂದರೆ ಇಬ್ಬರು ಬಳಕೆದಾರರು ಟ್ವೀಟ್‌ನಲ್ಲಿ ಪರಸ್ಪರ ಸಹಕರಿಸುವುದಕ್ಕೆ ಸಹಾಯ ಮಾಡಲಿದೆ. ಕೋ ಟ್ವೀಟ್ಸ್‌ ಫೀಚರ್ಸ್‌ನಲ್ಲಿ ಒಬ್ಬ ಬಳಕೆದಾರ ಪೋಸ್ಟ್‌ ಅನ್ನು ಟ್ವೀಟ್‌ ಮಾಡಬೇಕು, ನಂತರ ಅದೇ ಟ್ವೀಟ್‌ಗೆ ಎರಡನೇ ಟ್ವಿಟರ್‌ ಬಳಕೆದಾರರನ್ನು ಕೋ ಆಥರ್‌ ಆಗಿ ಸೇರಿಸಬಹುದಾಗಿದೆ.

ಕೋ-ಟ್ವೀಟ್‌

ಕೋ-ಟ್ವೀಟ್‌ ಅನ್ನು ಮಾಡಿದ ನಂತರ ಈ ಟ್ವೀಟ್ ಅನ್ನು ನೋಡಬಹುದಾದ ಯಾವುದೇ ಬಳಕೆದಾರರು ರೀಟ್ವೀಟ್ ಮಾಡಬಹುದು. ಅಲ್ಲದೆ ಮೆನ್ಶನ್‌ ಅನ್ನು ಕೂಡ ಟ್ವೀಟ್ ಮಾಡಬಹುದು ಮತ್ತು ಕಾಮೆಂಟ್ ಮಾಡಬಹುದು. ಆದರೆ ಕೋ ಟ್ವೀಟ್ಸ್‌ ಅನ್ನು ಪ್ರಮೋಷನ್‌ ಮಾಡಲಾಗುವುದಿಲ್ಲ. ಹಾಗೆಯೇ ಕೋ-ಟ್ವೀಟ್‌ ಇನ್ವೈಟ್‌ ಕಳುಹಿಸುವವರು ಮಾತ್ರ ಕೋ-ಟ್ವೀಟ್‌ ಅನ್ನು ಪಿನ್ ಮಾಡಬಹುದು.

Best Mobiles in India

Read more about:
English summary
Twitter will not notify users when they have been removed from a Circle.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X