ವಾಟ್ಸಾಪ್‌ನಿಂದ ಭಾರತದ 26.85 ಲಕ್ಷ ಅಕೌಂಟ್‌ ಬ್ಯಾನ್‌! ಕಾರಣ ಏನ್‌ ಗೊತ್ತಾ?

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್ ಭಾರತದಲ್ಲಿ 26.85 ಲಕ್ಷ ಅಕೌಂಟ್‌ಗಳನ್ನು ಬ್ಲಾಕ್‌ ಮಾಡಿರುವುದಾಗಿ ಹೇಳಿದೆ. ತನ್ನ ಗೌಪ್ಯತೆ ನಿಯಮ ಹಾಗೂ ಸೊಶೀಯಲ್‌ ಮೀಡಿಯಾ ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾದ ಖಾತೆಗಳನ್ನು ಬ್ಲಾಕ್‌ ಮಾಡಿದೆ. ಇದು ಸೆಪ್ಟೆಂಬರ್‌ ತಿಂಗಳಿನ ಅನುಸರಣೆ ವರದಿಯಲ್ಲಿ ಬಹಿರಂಗವಾಗಿದೆ. ಭಾರತದಲ್ಲಿ ಹೊಸ ಐಟಿ ನಿಮಯಗಳು ಜಾರಿಗೆ ಬಂದ ನಂತರ ಪ್ರತಿ ತಿಂಗಳ ಅನುಸರಣೆ ವರದಿ ನೀಡುವುದು ಕಡ್ಡಾಯವಾಗಿದ್ದು, ಅದರಂತೆ ವಾಟ್ಸಾಪ್‌ ಈ ವರದಿಯನ್ನು ಬಹಿರಂಗಪಡಿಸಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಸೆಪ್ಟೆಂಬರ್‌ ತಿಂಗಳಲ್ಲಿನಲ್ಲಿ ಭಾರತದ 26.85 ಲಕ್ಷ ಖಾತೆಗಳನ್ನು ನಿಷೇಧಿಸಿದೆ. ಇದರಲ್ಲಿ 8.72 ಲಕ್ಷ ಖಾತೆಗಳನ್ನು ಬಳಕೆದಾರರು ಫ್ಲ್ಯಾಗ್ ಮಾಡುವ ಮೊದಲು ಪೂರ್ವಭಾವಿಯಾಗಿ ಬ್ಲಾಕ್‌ ಮಾಡಿರುವುದಾಗಿ ವಾಟ್ಸಾಪ್‌ ಪ್ರಕಟಿಸಿದೆ. ಇದು ಆಗಸ್ಟ್‌ನಲ್ಲಿ ವಾಟ್ಸಾಪ್‌ ನಿಷೇದ ಮಾಡಿರುವ ವಾಟ್ಸಾಪ್‌ ಅಕೌಂಟ್‌ಗಳಿಗಿಂತ ಸೆಪ್ಟೆಂಬರ್‌ನಲ್ಲಿ ಬ್ಲಾಕ್‌ ಮಾಡಿದ ಖಾತೆಗಳ ಸಂಖ್ಯೆ 15% ಹೆಚ್ಚಾಗಿದೆ. ಹಾಗಾದ್ರೆ ಸೆಪ್ಟೆಂಬರ್‌ ತಿಂಗಳಿನಲ್ಲಿ 26.85 ಲಕ್ಷ ಅಕೌಂಟ್‌ ಬ್ಲಾಕ್‌ ಮಾಡಲು ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಸೆಪ್ಟೆಂಬರ್ 1, 2022 ಮತ್ತು ಸೆಪ್ಟೆಂಬರ್ 30, 2022 ರ ನಡುವೆ 2,685,000 ವಾಟ್ಸಾಪ್‌ ಅಕೌಂಟ್‌ಗಳನ್ನು ಬ್ಲಾಕ್‌ ಮಾಡಿರುವುದಾಗಿ ವರದಿ ಮಾಡಿದೆ. ಇದರಲ್ಲಿ ಬಳಕೆದಾರರಿಂದ ಯಾವುದೇ ವರದಿಗಳು ಬರುವ ಮೊದಲು 872,000 ಅಕೌಂಟ್‌ಗಳನ್ನು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ. ಇನ್ನು ಈ ಅಕೌಂಟ್‌ಗಳನ್ನು +91 ಫೋನ್ ಸಂಖ್ಯೆಯ ಆಧಾರದ ಮೇಲೆ ಭಾರತೀಯ ಖಾತೆಗಳೆಂದು ಗುರುತಿಸಿರುವುದಾಗಿ ವಾಟ್ಸಾಪ್‌ ಸೆಪ್ಟೆಂಬರ್ ತಿಂಗಳಿನ ತನ್ನ ‘ಬಳಕೆದಾರ ಸುರಕ್ಷತಾ ವರದಿ'ಯಲ್ಲಿ ಹೇಳಿದೆ.

ಸೆಪ್ಟೆಂಬರ್‌

ಇನ್ನು ಸೆಪ್ಟೆಂಬರ್‌ ತಿಂಗಳಿನಲ್ಲಿ ವಾಟ್ಸಾಪ್‌ 666 ಕುಂದುಕೊರತೆಗಳನ್ನು ಸ್ವೀಕರಿಸಿದೆ. ಇದರಲ್ಲಿ 23 ಕುಂದುಕೊರತೆಗಳ ವಿಚಾರವಾಗಿ ಮಾತ್ರ ಕ್ರಮ ಕೈಗೊಂಡಿರುವುದಾಗಿ ಹೇಳಿದೆ. ಕುಂದುಕೊರತೆ ಮೂಲಕ ಬಳಕೆದಾರರ ದೂರುಗಳಿಗೆ ಪ್ರತಿಕ್ರಿಯಿಸುವ ಮತ್ತು ಕ್ರಮ ಕೈಗೊಳ್ಳುವುದು ವಾಟ್ಸಾಪ್‌ಗೆ ಅತ್ಯಗತ್ಯವಾಗಿದೆ. ಬಳಕೆದಾರರಿಗೆ ಯಾವುದೇ ರೀತಿಯ ಜನಾಂಗೀಯ ನಿಂದನೆ, ಶೋಷಣೆ, ದ್ವೇಷ ಭಾಷಣದಂತಹ ವಿಚಾರಗಳ ವಿರುದ್ದ ರಿಪೋರ್ಟ್‌ ಮಾಡಿದರೆ ಅದನ್ನು ತಡೆಗಟ್ಟುವುದು ವಾಟ್ಸಾಪ್‌ನ ಕೆಲಸವಾಗಿದೆ.

2021ರ ಐಟಿ

2021ರ ಐಟಿ ನಿಯಮದ ಪ್ರಕಾರ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಮಧ್ಯವರ್ತಿ ಮಾರ್ಗಸೂಚಿ ವರದಿಯನ್ನು ನೀಡುವುದು ಕಡ್ಡಾಯವಾಗಿದೆ. ಅದರಂತೆ ಪ್ರತಿ ತಿಂಗಳು ತಾವು ಸ್ವಿಕರಿಸಿದ ರಿಕ್ವೆಸ್ಟ್‌ಗಳು, ರಿಪೋರ್ಟ್‌ಗಳು, ಬ್ಲಾಕ್‌ ಮಾಡಿದ ಖಾತೆಗಳ ವಿವರವನ್ನು ನೀಡುವುದು ಅತ್ಯಗತ್ಯವಾಗಿದೆ. ಪ್ರತಿ ತಿಂಗಳು ಅನುಸರಣೆ ವರದಿಗಳನ್ನು ಪ್ರಕಟಿಸಲು, ಸ್ವೀಕರಿಸಿದ ದೂರುಗಳ ವಿವರಗಳು ಮತ್ತು ತೆಗೆದುಕೊಂಡ ಕ್ರಮಗಳನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಿದೆ.

ಮಾಸಿಕ

ಇನ್ನು ಸೆಪ್ಟೆಂಬರ್‌ ತಿಂಗಳ ಮಾಸಿಕ ಅನುಸರಣೆ ವರದಿಯನ್ನು ಬಹಿರಂಗಗೊಳಿಸಿದ ನಂತರ ವಾಟ್ಸಾಪ್‌ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಬಳಕೆದಾರರ ಅನುಕೂಲತೆ ಹಾಗೂ ಸುರಕ್ಷತೆಗಾಗಿ ವಾಟ್ಸಾಪ್‌ ಸದಾ ಕಾರ್ಯನಿರ್ವಹಿಸಲಿದೆ. ಬಳಕೆದಾರರ ಕುಂದುಕೊರತೆಗಳನ್ನು ನಿಭಾಯಿಸುವಲ್ಲಿ ನಾವು ಸದಾ ಮುಂದಿರುತ್ತೇವೆ ಎನ್ನುವ ಮಾತುಗಳನ್ನು ಹೇಳಿದೆ. ಅಲ್ಲದೆ ಒಮ್ಮೆ ಖಾತೆಯನ್ನು ನಿಷೇಧಿಸಿದರೆ ಅಥವಾ ದೂರಿನ ಪರಿಣಾಮವಾಗಿ ಹಿಂದೆ ನಿಷೇಧಿಸಲಾದ ಖಾತೆಯನ್ನು ಮರುಸ್ಥಾಪಿಸಿದರೆ ಖಾತೆಯನ್ನು ಕಾರ್ಯಗತಗೊಳಿಸಲಾಗುತ್ತದ ಎಂದು ವಾಟ್ಸಾಪ್ ತನ್ನ ವರದಿಯಲ್ಲಿ ಹೇಳಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ ಸರ್ವರ್‌ನಲ್ಲಿ ಉಂಟಾದ ದೋಷದಿಂದಾಗಿ ಇಡೀ ದೇಶದಲ್ಲಿ ಎರಡು ಗಂಟೆಗಳ ಕಾಲ ವಾಟ್ಸಾಪ್‌ ಸ್ಥಗಿತಗೊಂಡಿತ್ತು. ಇದರಿಂದ ಸೊಶೀಯಲ್‌ ಮೀಡಿಯಾದಲ್ಲಿ ವಾಟ್ಸಾಪ್‌ ಕುರಿತ ಸಾಕಷ್ಟು ಮಿಮ್‌ಗಳು ಕೂಡ ಹರಿದಾಡಿತ್ತು. ಅಷ್ಟೇ ಅಲ್ಲ ಟ್ವಿಟರ್‌ನಲ್ಲಿ ಸಾಕಷ್ಟು ಮಂದಿ ಇದರ ಬಗ್ಗೆ ವರದಿ ಕೂಡ ಮಾಡಿದ್ದು. ಇದೀಗ ಭಾರತ ಸರ್ಕಾರ ಮೆಟಾ ಕಂಪೆನಿಯನ್ನು ವರದಿ ಕೇಳಿದೆ. ಭಾರತದ ಭೌಗೋಳಿಕ ಡೊಮೇನ್‌ನಲ್ಲಿ ಇಂಟರ್‌ನೆಟ್‌ಗೆ ಯಾವುದೇ ಅಡ್ಡಿ ಉಂಟಾದಾಗ MeitY ಕ್ರಮ ಕೈಗೊಳ್ಳುವುದು ಕಾರ್ಯವಿಧಾನವಾಗಿದೆ ಎಂದು ಹೇಳಲಾಗಿದೆ.

Best Mobiles in India

English summary
WhatsApp banned 26.85 lakh accounts in India in September

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X