ನಿಮ್ಮ ವಾಟ್ಸಾಪ್‌ ಕೂಡ ಬ್ಯಾನ್‌ ಆಗಿದೆಯಾ? ಒಮ್ಮೆ ಚೆಕ್‌ ಮಾಡಿ!

|

ಭಾರತದಲ್ಲಿ ವಾಟ್ಸಾಪ್‌ ಬಳಕೆದಾರರ ಅಕೌಂಟ್‌ ಬ್ಯಾನ್‌ ಆಗುತ್ತಿರುವ ಸಂಖ್ಯೆ ತಿಂಗಳಿನಿಂದ ತಿಂಗಳಿಗೆ ಹೆಚ್ಚಾಗುತ್ತಲೇ ಇದೆ. ಹೊಸ ಐಟಿ ನಿಯಮಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸದ ಬಳಕೆದಾರರ ಅಕೌಂಟ್‌ಗಳನ್ನು ವಾಟ್ಸಾಪ್‌ ಬ್ಯಾನ್‌ ಮಾಡುತ್ತಿದೆ. ಅದರಲ್ಲೂ ಕಳೆದ ಅಕ್ಟೋಬರ್‌ ತಿಂಗಳಿನಲ್ಲಿ ಭಾರತದಲ್ಲಿ 23 ಲಕ್ಷಕ್ಕೂ ಹೆಚ್ಚು ವಾಟ್ಸಾಪ್‌ ಅಕೌಂಟ್‌ಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸಾಪ್‌ ಹೇಳಿಕೊಂಡಿದೆ. ಇವುಗಳನ್ನು ಬ್ಯಾನ್‌ ಮಾಡಲು ಮುಖ್ಯ ಕಾರಣ ಈ ಖಾತೆಗಳ ಬಳಕೆದಾರರು ಸಮಾಜಿ ಮಾಧ್ಯಮಗಳ ನೀತಿಗೆ ಅನುಗುಣವಾಗಿಲ್ಲ ಎನ್ನುವುದು.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಭಾರತದಲ್ಲಿ ಅಕ್ಟೋಬರ್‌ ತಿಂಗಳ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಈ ಅನುಸರಣಾ ವರದಿಯಲ್ಲಿ ಅಕ್ಟೋಬರ್ 1 ಮತ್ತು ಅಕ್ಟೋಬರ್ 31 ರ ನಡುವೆ ಭಾರತದ 23,24,000 ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ಈ ಪೈಕಿ 8,11,000 ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ. ಇನ್ನುಳಿದ ಖಾತೆಗಳನ್ನು ಬಳಕೆದಾರರು ನೀಡಿದ ವರದಿಯ ಆಧಾರದ ಮೇಲೆ ಬ್ಯಾನ್‌ ಮಾಡಲಾಗಿದೆ. ಹಾಗಾದ್ರೆ ಭಾರತದಲ್ಲಿ ಈ ಪರಿಯ ಖಾತೆಗಳು ಬ್ಯಾನ್‌ ಆಗಲು ಮುಖ್ಯ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ವಾಟ್ಸಾಪ್‌ ಖಾತೆಗಳು ಬ್ಯಾನ್‌ ಆಗಲು ಕಾರಣ ಏನು?

ಭಾರತದಲ್ಲಿ ವಾಟ್ಸಾಪ್‌ ಖಾತೆಗಳು ಬ್ಯಾನ್‌ ಆಗಲು ಕಾರಣ ಏನು?

ಭಾರತದಲ್ಲಿ 2021ರಲ್ಲಿ ಹೊಸ ಐಟಿ ನಿಯಮವನ್ನು ಜಾರಿಗೆ ತಂದ ನಂತರ ಪ್ರತಿ ತಿಂಗಳು ತಾವು ತೆಗೆದುಕೊಂಡ ಕ್ರಮಗಳು, ನಿರ್ಧಾರಗಳ ಬಗ್ಗೆ ವರದಿ ನೀಡುವುದು ಕಡ್ಡಾಯವಾಗಿದೆ. ಅಲ್ಲದೆ ಮಾಸಿಕ ಅವಧಿಯಲ್ಲಿ ಬಳಕೆದಾರರಿಂದ ತಾವು ಸ್ವೀಕರಿಸಿದ ದೂರುಗಳು, ಅದಕ್ಕೆ ಸಂಬಂಧಿಸಿದಂತೆ ತಾವು ತೆಗೆದುಕೊಂಡ ಕ್ರಮಗಳ ವಿವರ ನೀಡಬೇಕಿದೆ. ಅದರಂತೆ ಮೆಟಾ ಒಡೆತನದ ವಾಟ್ಸಾಪ್‌ ಪ್ರತಿ ತಿಂಗಳ ಅನುಸರಣ ವರದಿಯನ್ನು ನೀಡುತ್ತಾ ಬಂದಿದೆ. ಇದೇ ಕಾರಣಕ್ಕೆ ಭಾರತದಲ್ಲಿ ಪ್ರತಿ ತಿಂಗಳು ಸಾಕಷ್ಟು ಬಳಕೆದಾರರ ವಾಟ್ಸಾಪ್‌ ಅಕೌಂಟ್‌ಗಳು ಬ್ಯಾನ್‌ ಆಗುತ್ತಿವೆ.

ಅಕ್ಟೋಬರ್‌ನಲ್ಲಿ ಬ್ಯಾನ್‌ ಆದ ಅಕೌಂಟ್‌ಗಳೆಷ್ಟು? ವರದಿಯಲ್ಲಿ ಏನಿದೆ?

ಅಕ್ಟೋಬರ್‌ನಲ್ಲಿ ಬ್ಯಾನ್‌ ಆದ ಅಕೌಂಟ್‌ಗಳೆಷ್ಟು? ವರದಿಯಲ್ಲಿ ಏನಿದೆ?

ಮೆಟಾ ಒಡೆತನದ ವಾಟ್ಸಾಪ್‌ ಅಕ್ಟೋಬರ್‌ ತಿಂಗಳಿನಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್‌ ಮಾಡಿದೆ. ಅಕ್ಟೋಬರ್‌ನಲ್ಲಿ ಭಾರತದ ಬಳಕೆದಾರರಿಂದ 701 ಕಂಪ್ಲೇಟ್‌ ರಿಪೋರ್ಟ್‌ಗಳನ್ನು ಸ್ವಿಕರಿಸಿದೆ. ಇದರಲ್ಲಿ ರಿಪೋರ್ಟ್‌ ಆಗಿರುವ ಆಧಾರದ ಮೇಲೆ 34 ಖಾತೆಗಳ ಮೇಲೆ ಕ್ರಮ ಜರುಗಿಸಲಾಗಿದೆ. ಇನ್ನುಳಿದಂತೆ ಕೆಲವು ಖಾತೆಗಳನ್ನು ಯಾವುದೇ ರಿಪೋರ್ಟ್‌ ಬರುವ ಮೊದಲು ಅಂದರೆ ಪೂರ್ವಭಾವಿಯಾಗಿ ನಿಷೇದಿಸಲಾಗಿದೆ.

ಐಟಿ ನಿಯಮ 2021 ಏನು ಹೇಳುತ್ತೆ?

ಐಟಿ ನಿಯಮ 2021 ಏನು ಹೇಳುತ್ತೆ?

ಐಟಿ ನಿಯಮಗಳು 2021 ರ ಅಡಿಯಲ್ಲಿ, ಪ್ರಮುಖ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು 5 ಮಿಲಿಯನ್‌ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದ್ದರೆ ಪ್ರತಿ ಮಾಸಿಕ ಅನುಸರಣೆ ವರದಿಗಳನ್ನು ಪ್ರಕಟಿಸಬೇಕು. ಇದಲ್ಲದೆ ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಇಂಟರ್‌ನೆಟ್‌ ಬ್ರೌಸಿಂಗ್‌ಗಾಗಿ 'ಡಿಜಿಟಲ್ ನಾಗ್ರಿಕ್ಸ್' ಹಕ್ಕುಗಳನ್ನು ಈ ನಿಯಮ ಹೊಂದಿದೆ. ಅದರಂತೆ ಮೆಟಾ ಒಡೆತನದ ವಾಟ್ಸಾಫ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಕೂಡ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

ನಿಮ್ಮ ವಾಟ್ಸಾಪ್‌ ಅಕೌಂಟ್‌ ಬ್ಯಾನ್‌ ಆದರೆ ಏನ್‌ ಮಾಡಬೇಕು?

ನಿಮ್ಮ ವಾಟ್ಸಾಪ್‌ ಅಕೌಂಟ್‌ ಬ್ಯಾನ್‌ ಆದರೆ ಏನ್‌ ಮಾಡಬೇಕು?

ನಿಮ್ಮ ವಾಟ್ಸಾಪ್‌ ಖಾತೆ ಬ್ಯಾನ್‌ ಆಗುವ ಮೊದಲು ಕೆಲವೊಮ್ಮೆ ಯಾವುದೇ ಎಚ್ಚರಿಕೆ ಸಂದೇಶ ಬಂದಿರುವುದಿಲ್ಲ. ಇಂತಹ ಸಮಯದಲ್ಲಿ ನಿಮ್ಮ ಡಿವೈಸ್‌ನಲ್ಲಿ ವಾಟ್ಸಾಪ್‌ ಬಳಸುವುದನ್ನು ನಿಷೇಧಿಸಲಾಗಿದೆ ಸಹಾಯಕ್ಕಾಗಿ ಬೆಂಬಲವನ್ನು ಸಂಪರ್ಕಿಸಿ ಎಂಬ ವಾಕ್ಯ ಕಾಣಿಸಿಕೊಳ್ಳಲಿದೆ. ಒಂದು ವೇಳೆ ನಿಮ್ಮ ಖಾತೆಯನ್ನು ಬ್ಯಾನ್‌ ಮಾಡುವಂತಹ ಯಾವುದೇ ನಿಯಮ ಉಲ್ಲಂಘನೆಯನ್ನು ನೀವು ಮಾಡದಿದ್ದರೆ ನೀವು ಮತ್ತಷ್ಟು ತನಿಖೆ ಮಾಡಲು "wa@support.whatsapp.com" ನಲ್ಲಿ ವಾಟ್ಸಾಪ್‌ ಅಪ್ಲಿಕೇಶನ್‌ಗೆ ಇಮೇಲ್ ಮಾಡಬೇಕಾಗುತ್ತದೆ.

Best Mobiles in India

English summary
WhatsApp banned over 23 lakh bad accounts in India in the month of October

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X