ವಾಟ್ಸಾಪ್‌ ಬ್ಯುಸಿನೆಸ್‌ ಆವೃತ್ತಿಯ ಸರ್ಚ್‌ ಫೀಚರ್ಸ್‌ನಲ್ಲಿ ಹೊಸ ಅಪ್ಡೇಟ್‌ !

|

ಮೆಟಾ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಈಗಾಗಲೇ ಬಳಕೆದಾರರ ಅನುಕೂಲಕ್ಕಾಗಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ವಾಟ್ಸಾಪ್‌ ತನ್ನ ಬ್ಯುಸಿನೆಸ್‌ ಆವೃತ್ತಿಯಲ್ಲಿ ಹೊಸ ಫೀಚರ್ಸ್‌ ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಬಳಕೆದಾರರ ಅನುಕೂಲಕ್ಕಾಗಿ ಸರ್ಚ್‌ ಫಿಲ್ಟರ್ ಅನ್ನು ಹೆಚ್ಚಿಸಲಿದೆ ಎಂದು ಹೇಳಲಾಗಿದೆ. ಇದರಿಂದ ನಿಖರವಾದ ಫಲಿತಾಂಶಗಳಿಗಾಗಿ ಚಾಟ್ ಬಾಕ್ಸ್‌ನಲ್ಲಿ ಸರ್ಚ್‌ ಮಾಡಲು ಸಹಾಯ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬ್ಯುಸಿನೆಸ್‌ ಆವೃತ್ತಿಯಲ್ಲಿ ಸರ್ಚ್‌ ಫಿಲ್ಟರ್‌ ಅನ್ನು ಹೆಚ್ಚಿಸಲು ಪ್ಲಾನ್‌ ಮಾಡಿದೆ. ಇದರಿಂದ ನಿಖರವಾದ ಪಲಿತಾಂಶವನ್ನು ಸರ್ಚ್‌ ಮಾಡಲು ಸಾಧ್ಯವಾಗಲಿದೆ. ಬಳಕೆದಾರರು ಲಾಂಗ್‌ ಥ್ರೆಡ್‌ಗಳಲ್ಲಿ ಉತ್ತಮವಾಗಿ ಸರ್ಚ್‌ ಮಾಡಲು ಸಹಾಯ ಮಾಡುತ್ತದೆ. ಈ ಫೀಚರ್ಸ್‌ನಲ್ಲಿ ಸಂಪರ್ಕಗಳು, ಸಂಪರ್ಕವಿಲ್ಲದವರು ಮತ್ತು ಓದದಿರುವವರು ಎನ್ನುವ ಮೂರು ಆಯ್ಕೆಗಳನ್ನು ಕಾಣಬಹುದಾಗಿದೆ ಎಂದು WABetaInfo ವರದಿ ಮಾಡಿದೆ. ಹಾಗಾದ್ರೆ ವಾಟ್ಸಾಪ್‌ ತನ್ನ ಬ್ಯುಸಿನೆಸ್‌ ಆವೃತ್ತಿಯಲ್ಲಿ ಪರಿಚಯಿಸಿರುವ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಬ್ಯುಸಿನೆಸ್‌ ಅಕೌಂಟ್‌ ಬಳಸುವವರಿಗಾಗಿ ಸರ್ಚ್‌ ಫಿಲ್ಟರ್‌ ಅನ್ನು ಹೆಚ್ಚು ಮಾಡಲು ಮುಂದಾಗಿದೆ. ಬ್ಯುಸಿನೆಸ್‌ ಅಕೌಂಟ್‌ ಮೂಲಕ ಬಳಕೆದಾರರು ತಮ್ಮ ಹತ್ತಿರದ ವ್ಯವಹಾರಗಳನ್ನು ಫಿಲ್ಟರ್ ಮಾಡಲು ಅನುಕೂಲವಾಗಲಿದೆ. ಸರ್ಚ್‌ ಫಿಲ್ಟರ್ ಫೀಚರ್ಸ್‌ ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿನ ವಾಟ್ಸಾಪ್‌ ಬ್ಯುಸಿನೆಸ್‌ ಬೀಟಾ ಆವೃತ್ತಿಯಲ್ಲಿ ಪರಿಯಿಸಲಾಗಿದೆ. ನಿಮ್ಮ ಚಾಟ್‌ಗಳು ಮತ್ತು ಸಂದೇಶಗಳಿಗಾಗಿ ನೀವು ಸರ್ಚ್‌ ಮಾಡಿದರೆ ನಿಮಗೆ ಅನೇಕ ಆಯ್ಕೆಗಳನ್ನು ನೀಡಲಿದೆ. ಸಂಪರ್ಕಗಳು, ಸಂಪರ್ಕವಿಲ್ಲದವರು ಮತ್ತು ಓದದಿರುವುದು ಎನ್ನುವ ಆಯ್ಕೆಗಳನ್ನು ನೀಡಲಿದೆ ಎಂದು ವಾಟ್ಸಾಪ್‌ ಹೇಳಿದೆ.

ಡಾಕ್ಯುಮೆಂಟ್‌

ಈ ಆಯ್ಕೆಗಳ ಮೂಲಕ ಬಳಕೆದಾರರು ಅಗತ್ಯವಿರುವ ಮಾಹಿತಿಯನ್ನು ಸುಲಭವಾಗಿ ಪ್ರವೇಶಿಸಬಹುದು. ಫೋಟೋಗಳು, gifಗಳು, ವೀಡಿಯೊಗಳು, ಆಡಿಯೋ, ಲಿಂಕ್‌ಗಳು ಮತ್ತು ಡಾಕ್ಯುಮೆಂಟ್‌ಗಳನ್ನು ಸರ್ಚ್‌ ಮಾಡಲು ಇದರಿಂದ ಸುಲಭವಾಗಲಿದೆ. ಇದರಿಂದ ನೀವು ಹುಡುಕಲು ಬಯಸುವ ಪೈಲ್‌ ಸಂಪರ್ಕದಲ್ಲಿರುವವರು, ಸಂಪರ್ಕವಿಲ್ಲದವರು, ಓದದಿರುವುದು ಆಯ್ಕೆಗಳಲ್ಲಿ ಹುಡುಕಬಹುದಾಗಿದೆ. ಈ ಹೆಚ್ಚುವರಿ ವರ್ಗಗಳು ಬಳಕೆದಾರರಿಗೆ ಸರ್ಚ್‌ ಅನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಫೀಚರ್ಸ್‌ ವಾಟ್ಸಾಪ್‌ ಬ್ಯುಸಿನೆಸ್‌ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಲಿದೆ. ಸಾಮಾನ್ಯ ವಾಟ್ಸಾಪ್‌ ಅಕೌಂಟ್‌ನಲ್ಲಿ ಈ ಫೀಚರ್ಸ್‌ ಲಭ್ಯವಿರುವುದಿಲ್ಲ. ಏಕೆಂದರೆ ಈ ಫೀಚರ್ಸ್‌ ವಾಟ್ಸಾಪ್‌ ಬ್ಯುಸಿನೆಸ್‌ ಅಕೌಂಟ್‌ನಲ್ಲಿ ಮಾತ್ರ ಉಪಯುಕ್ತವಾಗಿರಲಿದೆ ಎಂದು ಹೇಳಲಾಗಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಕೆಲವು ದಿನಗಳ ಹಿಂದೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಾಯ್ಸ್ ಮೆಸೇಜ್ ಪ್ರಿವ್ಯೂ ಫೀಚರ್ಸ್‌ ಪರಿಚಯಿಸಿದೆ. ಇದು ನೀವು ವಾಯ್ಸ್‌ ಮೆಸೇಜ್‌ ಅನ್ನು ಕಳುಹಿಸುವುದಕ್ಕೂ ಮೊದಲು ಪ್ರಿವ್ಯೂ ಮಾಡಲು ಅವಕಾಶ ನೀಡಲಿದೆ. ಇದರಿಂದ ನೀವು ನಿಮ್ಮ ಸಂದೇಶವನ್ನು ಸರಿಯಾಗಿ ಕಳುಹಿಸಿದ್ದೀರಾ ಇಲ್ಲವೇ ಅನ್ನೊದನ್ನ ಪರಿಶೀಲಿಸಲು ಅವಕಾಶ ನೀಡಲಿದೆ. ಅಲ್ಲದೆ ಟೆಕ್ಸ್ಟ್‌ ಮೆಸೇಜ್‌ ಮಾಡುವುದಕ್ಕಿಂತ ಪರಿಣಾಮಕಾರಿಯಾಗಿ ವಾಯ್ಸ್‌ಮೆಸೇಜ್‌ ಸೆಂಡ್‌ ಮಾಡಲು ಸಾಧ್ಯವಾಗಲಿದೆ.

ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಪ್ರಿವ್ಯೂ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಪ್ರಿವ್ಯೂ ಮಾಡುವುದು ಹೇಗೆ?

ಹಂತ:1 ಮೊದಲಿಗೆ ವಾಟ್ಸಾಪ್‌ನಲ್ಲಿ ವೈಯಕ್ತಿಕ ಅಥವಾ ಗ್ರೂಪ್‌ ಚಾಟ್ ತೆರೆಯಿರಿ.
ಹಂತ:2 ಮೈಕ್ರೊಫೋನ್ ಅನ್ನು ಟ್ಯಾಪ್‌ಮಾಡಿ ಮತ್ತು ಹ್ಯಾಂಡ್ಸ್-ಫ್ರೀ ರೆಕಾರ್ಡಿಂಗ್ ಅನ್ನು ಲಾಕ್ ಮಾಡಲು ಅದನ್ನು ಮೇಲಕ್ಕೆ ಸ್ಲೈಡ್ ಮಾಡಿ.
ಹಂತ:3 ಇದೀಗ ಮಾತನಾಡಲು ಪ್ರಾರಂಭಿಸಿ.
ಹಂತ:4 ನಿಮ್ಮ ವಾಯ್ಸ್‌ ರೆಕಾರ್ಡ್‌ ಮುಗಿದ ನಂತರ, ಸ್ಟಾಪ್‌ ಟ್ಯಾಪ್ ಮಾಡಿ.
ಹಂತ:5 ನಿಮ್ಮ ರೆಕಾರ್ಡಿಂಗ್ ಕೇಳಲು ಪ್ಲೇ ಟ್ಯಾಪ್ ಮಾಡಿ. ಇದರಲ್ಲಿ ಟೈಮ್‌ಸ್ಟ್ಯಾಂಪ್‌ನಿಂದ ಅದನ್ನು ಪ್ಲೇ ಮಾಡಲು ನೀವು ರೆಕಾರ್ಡಿಂಗ್‌ನ ಯಾವುದೇ ಭಾಗವನ್ನು ಟ್ಯಾಪ್ ಮಾಡಬಹುದು.
ಹಂತ:6 ನಂತರ ನಿಮ್ಮ ವಾಯ್ಸ್‌ ಮೆಸೇಜ್‌ ಧ್ವನಿ ಸಂದೇಶವನ್ನು ಡಿಲೀಟ್‌ ಮಾಡಲು ಟ್ರಾಶ್‌ ಕ್ಯಾನ್ ಅನ್ನು ಟ್ಯಾಪ್ ಮಾಡಿ ಅಥವಾ ಅದನ್ನು ಸೆಂಡ್‌ ಮಾಡಲು ಸೆಂಡ್‌ ಟ್ಯಾಪ್ ಮಾಡಿ.

ವಾಯ್ಸ್‌ ಮೆಸೇಜ್‌ ಪ್ಲೇಬ್ಯಾಕ್ ಅನ್ನು ಸ್ಪೀಡ್‌ ಮಾಡುವುದು ಹೇಗೆ?

ವಾಯ್ಸ್‌ ಮೆಸೇಜ್‌ ಪ್ಲೇಬ್ಯಾಕ್ ಅನ್ನು ಸ್ಪೀಡ್‌ ಮಾಡುವುದು ಹೇಗೆ?

ಹಂತ:1 ನೀವು ಕಳುಹಿಸಿದ ಅಥವಾ ಸ್ವೀಕರಿಸಿದ ವಾಯ್ಸ್‌ ಮೆಸೇಜ್‌ಗಳನ್ನು ಕೇಳಲು ಪ್ಲೇ ಕ್ಲಿಕ್ ಮಾಡಿ.
ಹಂತ:2 ನಂತರ ನಿಮ್ಮ ಮೆಸೇಜ್‌ ಅನ್ನು ಆಲಿಸಿ.
ಹಂತ:3 ಮೆಸೇಜ್‌ ಪ್ಲೇ ಆಗುತ್ತಿರುವಾಗ, ವೇಗವನ್ನು 1.5x ಅಥವಾ 2x ಗೆ ಹೆಚ್ಚಿಸಲು ನೀವು 1x ಐಕಾನ್ ಅನ್ನು ಕ್ಲಿಕ್ ಮಾಡಬಹುದು.

Best Mobiles in India

English summary
Instant messaging platform WhatsApp plans to enhance the search filter for business account users this year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X