ವಾಟ್ಸಾಪ್‌ನಲ್ಲಿ ಮತ್ತೆ ಹೊಸ ಫೀಚರ್!..ಇನ್ಮುಂದೆ ನಿಮ್ಮ ಚಾಟ್‌ಗೆ ಫುಲ್‌ ಸೆಕ್ಯುರಿಟಿ!

|

ಮೆಟಾ ಮಾಲೀಕತ್ವದ ವಾಟ್ಸಾಪ್‌ (WhatsApp) ಈಗಾಗಲೇ ಅಧಿಕ ಸಕ್ರಿಯ ಬಳಕೆದಾರರನ್ನು ಒಳಗೊಂಡಿದೆ. ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹಲವು ಉಪಯುಕ್ತ ಫೀಚರ್ಸ್‌ಗಳ ಜೊತೆಗೆ ಮಾಹಿತಿ ಸುರಕ್ಷತೆಗೆ ಒತ್ತು ನೀಡಿರುವ ಕಾರಣ ಜನಪ್ರಿಯ ಮೆಸೆಜಿಂಗ್ ಆಪ್ ಎನಿಸಿಕೊಂಡಿದೆ. ಆಂಡ್ರಾಯ್ಡ್‌ (Android) ಹಾಗೂ ಐಓಎಸ್‌ (iOS) ಬಳಕೆದಾರರಿಬ್ಬರಿಗೂ ಸೆಕ್ಯುರಿಟಿ ಆಯ್ಕೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಈಗ ಮತ್ತೊಂದು ಸುರಕ್ಷತಾ ಫೀಚರ್ ನೀಡುವ ಸೂಚನೆ ಹೊರಹಾಕಿದೆ.

ವಾಟ್ಸಾಪ್‌ (WhatsApp) ಅಪ್ಲಿಕೇಶನ್

ಹೌದು, ವಾಟ್ಸಾಪ್‌ (WhatsApp) ಅಪ್ಲಿಕೇಶನ್ ಇದೀಗ ಡೆಸ್ಕ್‌ಟಾಪ್‌ (Desktop) ಬಳಕೆದಾರರಿಗೂ ಸ್ಕ್ರೀನ್‌ ಲಾಕ್ ಫೀಚರ್ ಪರಿಚಯಿಸುವ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಆಂಡ್ರಾಯ್ಡ್‌ (Android) ಹಾಗೂ ಐಓಎಸ್‌ (iOS) ನಲ್ಲಿ ಫೇಸ್‌ ಐಡೆಂಟಿಫಿಕೇಶನ್, ಫಿಂಗರ್‌ಪ್ರಿಂಟ್ ಸ್ಕ್ಯಾನರ್ ನಂತಹ ಆಯ್ಕೆಗಳಿದ್ದು, ಅದೇ ರೀತಿ ಡೆಸ್ಕ್‌ಟಾಪ್‌ ಆವೃತ್ತಿಗೂ ಶೀಘ್ರದಲ್ಲೇ ಸೆಕ್ಯುರಿಟಿ ಫೀಚರ್ ಲಭ್ಯ ಮಾಡಲಿದೆ. ಆ ಮೂಲಕ ಡೆಸ್ಕ್‌ಟಾಪ್‌ ಆವೃತ್ತಿಗೂ ಅಧಿಕ ಸುರಕ್ಷತೆ ನೀಡಲಿದೆ.

ಸ್ಕ್ರೀನ್ ಲಾಕ್ ಫೀಚರ್

ಡೆಸ್ಕ್‌ಟಾಪ್‌ನ ಹೊಸ ಸ್ಕ್ರೀನ್ ಲಾಕ್ ಫೀಚರ್ ನಂತರ ಪಿಸಿಯಲ್ಲಿ ವಾಟ್ಸಾಪ್‌ ತೆರೆದಾಗಲೆಲ್ಲಾ ಬಳಕೆದಾರರು ಪಾಸ್‌ವರ್ಡ್ ಅನ್ನು ನಮೂದಿಸುವ ಅಗತ್ಯವಿದೆ. ಒಂದು ವೇಳೆ ನಿಮ್ಮ ಡೆಸ್ಕ್‌ಟಾಪ್ ಅನ್ನು ಬೇರೆಯವರು ಬಳಸುತ್ತಿದ್ದರೆ, ನಿಮ್ಮ ವಾಟ್ಸಾಪ್‌ ಚಾಟ್‌ಗಳನ್ನು ಸುರಕ್ಷಿತವಾಗಿರಿಸಲು ಈ ಆಯ್ಕೆ ನಿಮಗೆ ಸಹಾಯ ಮಾಡುತ್ತದೆ. ವರದಿಯಲ್ಲಿನ ಕೆಲವು ಸ್ಕ್ರೀನ್‌ಶಾಟ್ ಗಳು ಈ ಫೀಚರ್ ಹೇಗಿರುತ್ತದೆ ಎಂಬುದನ್ನು ಸೂಚಿಸುತ್ತದೆ.

ಅನ್‌ಲಾಕ್

ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್‌ ಅನ್ನು ಅನ್‌ಲಾಕ್ ಮಾಡಲು ಪಾಸ್‌ವರ್ಡ್‌ಗಳನ್ನು ಮೆಟಾ-ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ. ಇನ್ನು ಈ ಆಯ್ಕೆಯು ಹೆಚ್ಚುವರಿ ಕಾರ್ಯವಾಗಿ ಮ್ಯಾಕ್‌ನಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನಿಂಗ್ ಅನ್ನು ಸಹ ಒಳಗೊಂಡಿರುತ್ತದೆ. ಅಂದಹಾಗೆ ಈ ಫೀಚರ್ ಇನ್ನು ಅಭಿವೃದ್ಧಿ ಹಂತದಲ್ಲಿದ್ದು, ಇನ್ನೂ ಸಿದ್ಧವಾಗಿಲ್ಲ ಆದ್ದರಿಂದ ಈ ಸ್ಕ್ರೀನ್‌ಶಾಟ್‌ನಲ್ಲಿ ಇಂಟರ್ಫೇಸ್‌ನ ಕೆಲವು ಅಂಶಗಳು ಕಾಣೆಯಾಗಿರಬಹುದು.

ಪಾಸ್‌ವರ್ಡ್‌ ಮರೆತರೇ?

ಪಾಸ್‌ವರ್ಡ್‌ ಮರೆತರೇ?

ಒಂದು ವೇಳೆ ನೀವು ಪಾಸ್‌ವರ್ಡ್ ಅನ್ನು ಮರೆತರೆ, ವಾಟ್ಸಾಪ್‌ ನಿಂದ ಲಾಗ್ ಔಟ್ ಮಾಡುವ ಮೂಲಕ ಮತ್ತು ಡೆಸ್ಕ್‌ಟಾಪ್ ಕ್ಲೈಂಟ್‌ನಲ್ಲಿ ಮತ್ತೆ ಲಾಗ್ ಇನ್ ಮಾಡುವ ಮೂಲಕ ನೀವು ಅದನ್ನು ಹಿಂಪಡೆಯಲು ಸಾಧ್ಯವಾಗುತ್ತದೆ ಎಂದು ವರದಿ ಸೂಚಿಸುತ್ತದೆ. ನಿಮ್ಮ ಸ್ಮಾರ್ಟ್‌ಫೋನ್ ಮೂಲಕ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಇದನ್ನು ಮಾಡಬಹುದು.

ಆಂಡ್ರಾಯ್ಡ್‌ ಫೋನ್‌ಗಳಲ್ಲಿ ವಾಟ್ಸಾಪ್‌ Poll ರಚಿಸಲು ಹೀಗೆ ಮಾಡಿ:

ಆಂಡ್ರಾಯ್ಡ್‌ ಫೋನ್‌ಗಳಲ್ಲಿ ವಾಟ್ಸಾಪ್‌ Poll ರಚಿಸಲು ಹೀಗೆ ಮಾಡಿ:

ಹಂತ 1: ವಾಟ್ಸಾಪ್‌ ಅಪ್ಲಿಕೇಶನ್ ಅನ್ನು ಅಪ್‌ಡೇಟ್‌ ಮಾಡಿರಿ

ಹಂತ 2: ನಂತರ ವಾಟ್ಸಾಪ್‌ ಆಪ್ ತೆರೆದು, ಚಾಟ್ ಅಥವಾ ಗ್ರೂಪ್ ಚಾಟ್ ತೆರೆಯಿರಿ.

ಹಂತ 2: ಬಳಿಕ ಟೆಕ್ಸ್ಟ್‌ ಬಾಕ್ಸ್‌ನ ಬಲಭಾಗದಲ್ಲಿರುವ ಪೇಪರ್ ಕ್ಲಿಪ್ ಐಕಾನ್ ಮೇಲೆ ಟ್ಯಾಪ್ ಮಾಡಿ

ಆಯ್ಕೆಯ

ಹಂತ 3: 'poll' ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಹಂತ 4: ಪ್ರಶ್ನೆಯನ್ನು ಟೈಪ್ ಮಾಡಿ, ನಂತರ ಆಯ್ಕೆಗಳನ್ನು ರಚಿಸಿ/ ನೀಡಿರಿ.

ಹಂತ 5: ಇದಾದ ನಂತರ, ಚಾಟ್‌ನಲ್ಲಿ ಪೋಲ್‌ ಅನ್ನು ಕಳುಹಿಸಲು ಸೆಂಡ್ ಬಟನ್ ಅನ್ನು ಟ್ಯಾಪ್ ಮಾಡಿ

ಐಫೋನ್‌ ವಾಟ್ಸಾಪ್‌ Poll ರಚಿಸಲು ಈ ಕ್ರಮ ಅನುಸರಿಸಿ:

ಐಫೋನ್‌ ವಾಟ್ಸಾಪ್‌ Poll ರಚಿಸಲು ಈ ಕ್ರಮ ಅನುಸರಿಸಿ:

ಹಂತ 1: ವಾಟ್ಸಾಪ್‌ ಅಪ್ಲಿಕೇಶನ್ ಅನ್ನು ಅಪ್‌ಡೇಟ್‌ ಮಾಡಿರಿ

ಹಂತ 2: ನಂತರ ವಾಟ್ಸಾಪ್‌ ಆಪ್ ತೆರೆದು, ಚಾಟ್ ಅಥವಾ ಗ್ರೂಪ್ ಚಾಟ್ ತೆರೆಯಿರಿ.

ಹಂತ 3: ಟೆಕ್ಸ್ಟ್‌ ಬಾಕ್ಸ್‌ನ ಎಡಭಾಗದಲ್ಲಿರುವ ಪ್ಲಸ್ (+) ಚಿಹ್ನೆಯ ಮೇಲೆ ಟ್ಯಾಪ್ ಮಾಡಿ

ಚಾಟ್‌ನಲ್ಲಿ ಪೋಲ್‌

ಹಂತ 4: ಅಲ್ಲಿ ಕಾಣಿಸುವ 'Poll' ಆಯ್ಕೆಯನ್ನು ಟ್ಯಾಪ್ ಮಾಡಿ

ಹಂತ 5: ಪ್ರಶ್ನೆಯನ್ನು ಟೈಪ್ ಮಾಡಿ, ನಂತರ ಆಯ್ಕೆಗಳನ್ನು ರಚಿಸಿ/ ನೀಡಿರಿ.

ಹಂತ 5: ಇದಾದ ನಂತರ, ಚಾಟ್‌ನಲ್ಲಿ ಪೋಲ್‌ ಅನ್ನು ಕಳುಹಿಸಲು ಸೆಂಡ್ ಬಟನ್ ಅನ್ನು ಟ್ಯಾಪ್ ಮಾಡಿ

Best Mobiles in India

English summary
WhatsApp for Desktop Might Soon Get a Screen Lock Feature: Report.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X