ವಾಟ್ಸಾಪ್‌ಗೆ ಹೊಸ ಫೀಚರ್ಸ್‌ ಸೇರ್ಪಡೆ!..ಬಳಕೆದಾರರಿಗೆ ಇದು ಮತ್ತೊಂದು ಅಚ್ಚರಿ!

|

ಮೆಟಾ ಒಡೆತನದ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಮತ್ತೊಂದು ಅಚ್ಚರಿಯ ಫೀಚರ್ಸ್‌ ಅನ್ನು ಪರಿಚಯಿಸಿದೆ. ಬಳಕೆದಾರರ ಊಹೆಯನ್ನು ಮೀರಿಸುವ ಈ ಫೀಚರ್ಸ್‌ ನಿಮಗೆ ಏಕಕಾಲದಲ್ಲಿ ಹಲವು ಚಾಟ್‌ಗಳನ್ನು ಮಾಡುವುದಕ್ಕೆ ಅವಕಾಶ ನೀಡಲಿದೆ. ಇಂತಹ ಅವಕಾಶವನ್ನು ನೀವು ಕೂಡ ಊಹಿಸಲು ಅಸಾಧ್ಯ ಎಂದುಕೊಳ್ಳಬಹುದು. ಸದ್ಯ ಈ ಫೀಚರ್ಸ್‌ ಅನ್ನು ತನ್ನ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಪರಿಚಯಿಸುತ್ತಿದೆ. ಇದರಿಂದ ನೀವು ವಾಟ್ಸಾಪ್‌ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಒಂದೇ ಸಮಯದಲ್ಲಿ ಹಲವು ಚಾಟ್‌ಗಳನ್ನು ಮಾಡಬಹುದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಸೆಲೆಕ್ಟ್‌ ಮಲ್ಟಿಪಲ್‌ ಚಾಟ್ಸ್‌ ಫೀಚರ್ಸ್ ಅನ್ನು ಪರಿಚಯಿಸಲು ಮುಂದಾಗಿದೆ. ಇದರಿಂದ ನೀವು ಒಂದು ಸಮಯದಲ್ಲಿ ಅನೇಕ ಚಾಟ್‌ಗಳನ್ನು ತೆರೆಯೋದಕ್ಕೆ ಅವಕಾಶ ಸಿಗಲಿದೆ. ಇನ್ನು ಈ ಫೀಚರ್ಸ್‌ ಇನ್ನು ಕೂಡ ಅಭಿವೃದ್ಧಿಯ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಬೀಟಾ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಯಿದೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ ಸೇರಲಿರುವ ಸೆಲೆಕ್ಟ್‌ ಮಲ್ಟಿಪಲ್‌ ಚಾಟ್‌ ಫೀಚರ್ಸ್‌ ಬಳಕೆದಾರರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಿದೆ. ಡೆಸ್ಕ್‌ಟಾಪ್‌ ಆವೃತ್ತಿಯನ್ನು ಬಳಸೋರು ಒಂದೇ ಸಮಯದಲ್ಲಿ ಅನೇಕ ಮಂದಿಗೆ ಚಾಟ್‌ ಮಾಡೋಕೆ ಸಾದ್ಯವಾಗಲಿದೆ. ಒಂದೇ ಸಂದೇಶವನ್ನು ಅನೇಕ ಮಂದಿಗೆ ಕಳುಹಿಸಲು ಬಯಸೋರಿಗೆ ಈ ಆಯ್ಕೆ ಇನ್ನು ಹೆಚ್ಚು ಅನುಕೂಲಕರವಾಗೋದು ಗ್ಯಾರಂಟಿ. ಅಲ್ಲದೆ ಒಂದು ಸಮಯದಲ್ಲಿ ನಿಮ್ಮೆಲ್ಲಾ ಸ್ನೇಹಿತರ ಜೊತೆ ಚಾಟ್‌ ಮಾಡಲು ಬಯಸಿದರೆ ಇದು ಸಹಾಯ ಮಾಡಲಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಡೆಸ್ಕ್‌ಟಾಪ್‌ ಆವೃತ್ತಿ ಸೇರುವ ಈ ಹೊಸ ಫೀಚರ್ಸ್‌ ವಾಟ್ಸಾಪ್‌ ಮೊಬೈಲ್‌ ಆವೃತ್ತಿಗೆ ಹೋಲಲಿದೆ. ಆದರೆ ಇದರ ಬಗ್ಗೆ ವಾಟ್ಸಾಪ್‌ ಇನ್ನು ಕೂಡ ಯಾವುದೇ ಅಧಿಕೃತ ಪ್ರಕಟಣೆಗಳನ್ನು ಮಾಡಿಲ್ಲ. ಸದ್ಯ ಈ ಹೊಸ ಫೀಚರ್ಸ್‌ ಅನ್ನು ವಾಬೇಟಾಇನ್ಫೋ ಟ್ರ್ಯಾಕ್‌ ಮಾಡಿದೆ. ಇದಲ್ಲದೆ, ಈ ಹೊಸ ಫೀಚರ್ಸ್‌ ಬಗ್ಗೆ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ವಾಬೇಟಾಇನ್ಫೋ ವೆಬ್‌ಸೈಟ್ ಹಂಚಿಕೊಂಡಿದೆ. ಇದು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದರ ಬಗ್ಗೆ ಒಂದು ನೋಟವನ್ನು ಕೂಡ ನೀಡಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಆಕ್ಸಿಡೆಂಟಲ್‌ ಡಿಲೀಟ್‌ ಫೀಚರ್ಸ್‌ ಕೂಡ ಒಂದಾಗೊದೆ. ಇದು ಬಳಕೆದಾರರಿಗೆ ಸಾಕಷ್ಟು ಅನುಕೂಲಕರವಾಗಲಿದೆ. ನೀವು ತಪ್ಪಾಗಿ ಕಳುಹಿಸಿದ ಸಂದೇಶವನ್ನು ಡಿಲೀಟ್‌ ಮಾಡುವಾಗ ಡಿಲೀಟ್‌ ಫಾರ್‌ ಎವರಿವನ್‌ ಬಳಸುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಆಕಸ್ಮಿಕವಾಗಿ ಡಿಲೀಟ್‌ ಫಾರ್‌ ಮಿ ಬಳಸಿಬಿಡುತ್ತೆವೆ. ಅಂತಹ ಸನ್ನಿವೇಶದಲ್ಲಿ ಸಾಕಷ್ಟು ಮುಜುಗರ ಎದುರಿಸುವುದು ಸಾಮಾನ್ಯ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ 'ಆಕ್ಸಿಡೆಂಟಲ್ ಡಿಲೀಟ್' ಫೀಚರ್ಸ್‌ ಸಹಾಯ ಮಾಡಲಿದೆ.

ಡಿಲೀಟ್‌

ನೀವು ಡಿಲೀಟ್‌ ಫಾರ್‌ ಮಿ ಮೂಲಕ ಸಂದೇಶ ಡಿಲೀಟ್‌ ಮಾಡಿದರೆ ಆಕ್ಸಿಡೆಂಟಲ್‌ ಡಿಲೀಟ್‌ ಫೀಚರ್ಸ್‌ ನಿಮ್ಮ ರಕ್ಷಣೆಗೆ ಬರಲಿದೆ. ಈ ಫೀಚರ್ಸ್‌ ನಿಮಗೆ ಒಂದು ಸ್ಮಾಲ್‌ ವಿಂಡೋದಲ್ಲಿ ನಿಮ್ಮ ಡಿಲೀಟ್‌ ಫಾರ್‌ ಮಿ ಸಂದೇಶಕ್ಕೆ ಹಿಂತಿರುಗಲು ಅವಕಾಶ ನೀಡಲಿದೆ. ಆಗ ಆ ಸಂದೇಶವನ್ನು ಡಿಲೀಟ್‌ ಫಾರ್‌ ಎವರಿವನ್‌ ಮೂಲಕ ಡಿಲೀಟ್‌ ಮಾಡುವುದಕ್ಕೆ ಸಾಧ್ಯವಾಗಲಿದೆ. ಆಕ್ಸಿಡೆಂಟಲ್‌ ಫೀಚರ್ಸ್‌ ಬಳಕೆದಾರರಿಗೆ ಐದು ಸೆಕೆಂಡುಗಳ ವಿಂಡೋವನ್ನು ಒದಗಿಸಲಿದೆ. ಇನ್ನು ಆ್ಯಕ್ಸಿಡೆಂಟಲ್ ಡಿಲೀಟ್ ಫೀಚರ್ಸ್‌ ಎಲ್ಲಾ ಬಳಕೆದಾರರಿಗೆ ಆಂಡ್ರಾಯ್ಡ್‌ ಮತ್ತು ಐಫೋನ್‌ ಡಿವೈಸ್‌ಗಳಲ್ಲಿ ಲಭ್ಯವಾಗಲಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ ಇನ್ನು ಅನೇಕ ಉಪಯುಕ್ತ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ. ಇದರಲ್ಲಿ ವಾಟ್ಸಾಪ್‌ ತನ್ನ iOS 22.24.0.79 ಅಪ್‌ಡೇಟ್‌ನಲ್ಲಿ ಹೊಸ ಪಿಕ್ಚರ್‌ ಇನ್‌ ಪಿಕ್ಚರ್‌ ಮೋಡ್‌ ಪರಿಚಯಿಸಿದೆ. ಇದು ಐಒಎಸ್‌ ಬೀಟಾ ಪರೀಕ್ಷಕರು ಮಾತ್ರ ಪ್ರವೇಶಿಸಲು ಅವಕಾಶ ನೀಡಿದೆ.

Best Mobiles in India

English summary
Whatsapp introducing a new feature using which desktop users: Report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X