ಸದ್ಯದಲ್ಲೇ ವಾಟ್ಸಾಪ್‌ ಸೇರಲಿದೆ ಅತಿ ಉಪಯುಕ್ತ ಫೀಚರ್ಸ್‌! ಏನೆಲ್ಲಾ ಪ್ರಯೋಜನಗಳು!

|

ಮೆಟಾ ಒಡೆತನದ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಬಳಕೆದಾರರ ಅನುಕೂಲಕ್ಕಾಗಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಬಳಕೆದಾರ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಸ ಚಾಟ್ ಟ್ರಾನ್ಸಫರ್‌ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇದು ಬಳಕೆದಾರರಿಗೆ ಚಾಟ್ ಹಿಸ್ಟರಿಯನ್ನು ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ಗೆ ಟ್ರಾನ್ಸಫರ್‌ ಮಾಡಲು ಅನುವು ಮಾಡಿಕೊಡಲಿದೆ. ಈ ಫೀಚರ್ಸ್‌ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಆಂಡ್ರಾಯ್ಡ್‌ ಡಿವೈಸ್‌ಲ್ಲಿ ಹೊಸ ಚಾಟ್‌ ಟ್ರಾನ್ಸಫರ್‌ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇದು ಗೂಗಲ್‌ ಡ್ರೈವ್‌ ಇಲ್ಲದೆ ಹೋದರು ನಿಮ್ಮ ವಾಟ್ಸಾಪ್‌ ಚಾಟ್‌ ಹಿಸ್ಟರಿಯನ್ನು ಟ್ರಾನ್ಸಫರ್‌ ಮಾಡಲು ಅವಕಾಶ ನೀಡಲಿದೆ. ಇದರಿಂದ ವಾಟ್ಸಾಪ್‌ನ ಎಲ್ಲಾ ಚಾಟ್ ಹಿಸ್ಟರಿ, ಫೋಟೋಗಳು, ವೀಡಿಯೊಗಳು ಮತ್ತು ಇತರ ಡೇಟಾವನ್ನು ರಿಸ್ಟೋರ್‌ ಮಾಡಬಹುದಾಗಿದೆ. ಇನ್ನುಳಿದಂತೆ ಈ ಹೊಸ ಫೀಚರ್ಸ್‌ ಹೇಗೆ ಸಹಕಾರಿಯಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅವಕಾಶ

ಪ್ರಸ್ತುತ ವಾಟ್ಸಾಪ್‌ ಗೂಗಲ್‌ ಡ್ರೈವ್‌ನಲ್ಲಿ ಚಾಟ್‌ ಹಿಸ್ಟರಿ ಬ್ಯಾಕ್‌ಅಪ್‌ ಉಳಿಸಲು ಅವಕಾಶ ನೀಡುತ್ತಿದೆ. ಇದರಿಂದ ಬಳಕೆದಾರರು ತಮ್ಮ ಹೊಸ ಫೋನ್‌ನಲ್ಲಿ ವಾಟ್ಸಾಪ್‌ ಅಕೌಂಟ್‌ ತೆರೆದರೆ ತಮ್ಮ ಗೂಗಲ್‌ ಖಾತೆಗೆ ಲಾಗ್ ಇನ್ ಆಗುವುದು ಅನಿವಾರ್ಯವಾಗಿದೆ. ಇದರಿಂದ ನಿಮ್ಮ ವಾಟ್ಸಾಪ್‌ನ ಎಲ್ಲಾ ಚಾಟ್‌ ಹಿಸ್ಟರಿ, ಚಿತ್ರಗಳು, ವೀಡಿಯೊಗಳು ಮತ್ತು ಇತರ ಡೇಟಾವನ್ನು ಬ್ಯಾಕಪ್ ಮಾಡಬಹುದಾಗಿದೆ.

ವಾಟ್ಸಾಪ್‌

ಆದರೆ ವಾಟ್ಸಾಪ್‌ ಹೊಸದಾಗಿ ಪರಿಚಯಿಸಲಿರುವ ಫೀಚರ್ಸ್‌ ನಿಮಗೆ ಯಾವುದೇ ಗೂಗಲ್‌ ಡ್ರೈವ್‌ ಅಕೌಂಟ್‌ ಬಳಸದೆ ಚಾಟ್‌ ಬ್ಯಾಕ್‌ಅಪ್‌ ಪಡದುಕೊಳ್ಳುವುದಕ್ಕೆ ಅವಕಾಶ ನೀಡಲಿದೆ. ಇದರಿಂದ ವಾಟ್ಸಾಪ್‌ ಬಳಕೆದಾರರು ತಮ್ಮ ಅಪ್ಲಿಕೇಶನ್ ಡೇಟಾವನ್ನು ಒಂದು ಸ್ಮಾರ್ಟ್‌ಫೋನ್‌ನಿಂದ ಇನ್ನೊಂದಕ್ಕೆ ವಾಟ್ಸಾಪ್‌ ಸೆಟ್ಟಿಂಗ್ಸ್‌> ಚಾಟ್‌ಗಳು> ಚಾಟ್ ಟ್ರಾನ್ಸಫರ್‌ ಆಯ್ಕೆಗೆ ಹೋಗಿ ಆಂಡ್ರಾಯ್ಡ್‌ನಲ್ಲಿ ಚಾಟ್‌ ಟ್ರಾನ್ಸಫರ್‌ ಮಾಡಲು ಸಾಧ್ಯವಾಗಲಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಕೆಪ್ಟ್‌ ಮೆಸೇಜ್‌ ಫೀಚರ್ಸ್‌ ನಂತಹ ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಬಳಕೆದಾರರು ಡಿಸ್‌ಅಪಿಯರಿಂಗ್‌ ಫೀಚರ್ಸ್‌ ಅನ್ನು ತಾತ್ಕಾಲಿಕವಾಗಿ ಉಳಿಸಲು ಅವಕಾಶ ನೀಡಲಿದೆ. ಇದರಿಂದ ಚಾಟ್‌ನಲ್ಲಿರುವ ಪ್ರತಿಯೊಬ್ಬರೂ ಆ ಸಂದೇಶವನ್ನು ನೋಡಬಹುದು. ಇದರೊಂದಿಗೆ ವಾಟ್ಸಾಪ್‌ ಚಾಟ್‌ ವಿಂಡೋದಿಂದ ಶಾಶ್ವತವಾಗಿ ಕಣ್ಮರೆಯಾಗುವಂತೆ ಮಾಡಲು ಯಾವುದೇ ಸಮಯದಲ್ಲಿ ಸಂದೇಶವನ್ನು "ಅನ್-ಕೀಪ್" ಮಾಡಲು ಬಳಕೆದಾರರಿಗೆ ಅನುಮತಿಸಲಿದೆ.

ಫೀಚರ್ಸ್‌

ಈ ಫೀಚರ್ಸ್‌ ಡಿಸ್‌ಅಪಿಯರಿಂಗ್‌ ಮೆಸೇಜ್‌ಗಳ ಆಯ್ಕೆಯನ್ನು ಆನ್ ಮಾಡಿದರೆ, ಬಳಕೆದಾರರು ಚಾಟ್ ವಿಂಡೋದಿಂದ ಡಿಸ್‌ಅಪಿಯರಿಂಗ್‌ ಆಗುವುದನ್ನು ತಡೆಯಬಹುದಾಗಿದೆ. ಇದರಿಂದ ಕೆಲವು ಸಂದೇಶಗಳನ್ನು ಆಯ್ಕೆ ಮಾಡಬಹುದು ಮತ್ತು ತಾತ್ಕಾಲಿಕವಾಗಿ ಸೇವ್‌ ಮಾಡಬಹುದಾಗಿದೆ. ಅಲ್ಲದೆ ಇತರ ಚಾಟ್‌ಗಳ ಅವಧಿ ಮುಗಿದ ನಂತರವೂ ಬಳಕೆದಾರರು ಸೇವ್‌ ಮಾಡಿದ ಸಂದೇಶಗಳಲ್ಲಿ ಬುಕ್‌ಮಾರ್ಕ್ ಬಬಲ್ ಅನ್ನು ಕಾಣಬಹುದಾಗಿದೆ. ಆದರೆ ಚಾಟ್‌ ಸಂಭಾಷಣೆಯಲ್ಲಿ ಭಾಗವಹಿಸುವವರಿಗೆ ಯಾವುದೇ ಸಮಯದಲ್ಲಿ ಕೆಪ್ಟ್‌ ಮಾಡಿದ ಸಂದೇಶಗಳನ್ನು ಡಿಲೀಟ್‌ ಮಾಡುವುದಕ್ಕೆ ಅನುಮತಿಸಲಿದೆ ಅನ್ನೊದು ಗಮನಾರ್ಹ ವಿಚಾರವಾಗಿದೆ.

ವಾಟ್ಸಾಪ್‌

ವಾಟ್ಸಾಪ್‌ ಈ ವರ್ಷ ಪರಿಚಯಿಸಲಿರುವ ಪ್ರಮುಖ ಫೀಚರ್ಸ್‌ಗಳಲ್ಲಿ ಕಂಪ್ಯಾನಿಯನ್‌ ಮೋಡ್‌ ಕೂಡ ಒಂದಾಗಿದೆ. ಇದು ಬಳಕೆದಾರರಿಗೆ ಒಂದೇ ವಾಟ್ಸಾಪ್‌ ಖಾತೆಯನ್ನು ಹಲವು ಫೋನ್‌ಗಳಲ್ಲಿ ಬಳಸುವುದಕ್ಕೆ ಅವಕಾಶ ನೀಡಲಿದೆ. ಈ ಫೀಚರ್ಸ್‌ನ ವಿಶೇಷತೆ ಎಂದರೆ ಬಳಕೆದಾರರು ಏಕಕಾಲದಲ್ಲಿ ವಾಟ್ಸಾಪ್‌ ಅಕೌಂಟ್‌ ಎರಡಕ್ಕಿಂತ ಹೆಚ್ಚು ಡಿವೈಸ್‌ಗಳಲ್ಲಿ ಬಳಸುವುದಕ್ಕೆ ಸಾಧ್ಯವಾಗಲಿದೆ. ಇದರಿಂದ ನಿಮ್ಮ ಪ್ರಾಥಮಿಕ ಮೊಬೈಲ್‌ನಿಂದ ವಾಟ್ಸಾಪ್‌ ಅಕೌಂಟ್‌ ಅನ್ನು ಲಾಗ್‌ಔಟ್‌ ಮಾಡುವ ಅವಶ್ಯಕತೆಯಿಲ್ಲ.

ಫೀಚರ್ಸ್‌

ಇದರೊಂದಿಗೆ ವ್ಯೂ ಒನ್ಸ್‌ ನೋಟ್‌ ಫೀಚರ್ಸ್‌ ಕೂಡ ಇದೇ ವರ್ಷ ವಾಟ್ಸಾಪ್‌ ಸೇರಲಿದೆ. ಈ ಫೀಚರ್ಸ್‌ ಮೂಲಕ ಬಳಕೆದಾರರು ಕಳುಹಿಸಿದ ಟೆಕ್ಸ್ಟ್‌ ಆಧಾರಿತ ಸಂದೇಶವನ್ನು ಸ್ವೀಕರಿಸುವವರು ತೆರೆದಾಗ ಮತ್ತು ಓದಿದಾಗ ಆಟೋಮ್ಯಾಟಿಕ್‌ ಆಗಿ ಡಿಲೀಟ್‌ ಆಗಲಿದೆ.

Best Mobiles in India

English summary
WhatsApp is developing a new chat transfer feature

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X