ವಾಟ್ಸಾಪ್‌ ಗ್ರೂಪ್ ಅಡ್ಮಿನ್‌ಗಳಿಗೆ ಸದ್ಯದಲ್ಲೇ ಸಿಗಲಿದೆ ಅತ್ಯಂತ ಉಪಯುಕ್ತ ಆಯ್ಕೆ!

|

ಮೆಟಾ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ತನ್ನ ವಿಶೇಷ ಫೀಚರ್ಸ್‌ಗಳ ಮೂಲಕ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ವಾಟ್ಸಾಪ್‌ ಈಗಾಗಲೇ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮತ್ತೊಂದು ಹೊಸ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಈ ಫೀಚರ್ಸ್‌ ವಾಟ್ಸಾಪ್‌ ಗ್ರೂಪ್‌ ಅಡ್ಮಿನ್‌ಗೆ ಹೊಸ ಆಯ್ಕೆಯನ್ನು ನೀಡಲಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಗ್ರೂಪ್‌ ಅಡ್ಮಿನ್‌ಗಳಿಗೆ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಅದರಂತೆ ವಾಟ್ಸಾಪ್‌ ಗ್ರೂಪ್‌ ಅಡ್ಮಿನ್‌ ಇನ್ಮುಂದೆ ವಾಟ್ಸಾಪ್‌ ಗ್ರೂಪ್‌ನಲ್ಲಿ ಯಾವುದೇ ಮೆಸೇಜ್‌ ಅನ್ನು ಎವರಿವನ್‌ ಡಿಲೀಟ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ. ಇದರಿಂದ ಗ್ರೂಪ್‌ನಲ್ಲಿ ಯಾರೇ ಸಂದೇಶ ಕಳುಹಿಸಿದರೂ ನಿಮಗೆ ಸೂಕ್ತವಿಲ್ಲ ಎನಿಸಿದರೆ ಅದನ್ನು ಎಲ್ಲರಿಂದಲೂ ಡಿಲೀಟ್‌ ಮಾಡುವ ಆಯ್ಕೆ ಗ್ರೂಪ್‌ ಅಡ್ಮಿನ್‌ಗೆ ಲಭ್ಯವಾಗಲಿದೆ.

ವಾಟ್ಸಾಪ್‌

ವಾಟ್ಸಾಪ್‌ ಗ್ರೂಪ್‌ ಅಡ್ಮಿನ್‌ಗಳಿಗೆ ಈಗಾಗಲೇ ಹಲವು ಆಯ್ಕೆಗಳನ್ನು ನೀಡಲಾಗಿದೆ. ಇದೀಗ ಡಿಲೀಟ್‌ ಎನಿ ಮೆಸೇಜ್‌ ಫಾರ್‌ ಎವೆರಿಒನ್‌ ಆಯ್ಕೆ ನೀಡಲಾಗ್ತಿದೆ ಅಷ್ಟೇ. ಇದರಿಂದ ನಿಮ್ಮ ಗ್ರೂಪ್‌ಗೆ ಸರಿಹೊಂದದ ಸಂದೇಶಗಳನ್ನು ಯಾರಾದರೂ ಕಳುಹಿಸಿದರೆ ಕೂಡಲೇ ಅದನ್ನು ಡಿಲೀಟ್‌ ಮಾಡಬಹುದಾಗಿದೆ. ಇದರಿಂದ ನಿಮ್ಮ ಗ್ರೂಪ್‌ ಅನ್ನು ನೀವು ಸರಿಯಾದ ದಿಕ್ಕಿನಲ್ಲಿ ಕಂಟ್ರೋಲ್‌ ಮಾಡಲು ಸಾದ್ಯವಾಗಲಿದೆ. ಹಾಗಾದ್ರೆ ವಾಟ್ಸಾಪ್‌ ಪರಿಚಯಿಸಲಿರುವ ಈ ಹೊಸ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ನ ಹೊಸ ಫೀಚರ್ಸ್‌ಗಳನ್ನು ಟ್ರ್ಯಾಕ್‌ ಮಾಡುವ WABetaInfo ವರದಿಯ ಪ್ರಕಾರ, ಗ್ರೂಪ್ ಅಡ್ಮಿನ್‌ಗಳನ್ನು ಉತ್ತಮ ರೀತಿಯಲ್ಲಿ ಮಾಡರೇಟ್ ಮಾಡಲು ಈ ಫೀಚರ್ಸ್‌ ಅನ್ನು ಪರಿಚಯಿಸಲಾಗ್ತಿದೆ. ಈ ಫೀಚರ್ಸ್‌ ವಿಶ್ವದ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. ಇದರಿಂದ ಗ್ರೂಪ್‌ ಅಡ್ಮಿನ್‌ ಸಂದೇಶವನ್ನು ಅಳಿಸಿದಾಗ ಗುಂಪಿನ ಎಲ್ಲಾ ಸದಸ್ಯರಿಗೂ ತೋರಿಸುತ್ತದೆ. ಸದ್ಯ ಈ ಫೀಚರ್ಸ್‌ ಅನ್ನು ವಾಟ್ಸಾಪ್‌ ಅಧಿಕೃತವಾಗಿ ವೈಶಿಷ್ಟ್ಯವನ್ನು ಘೋಷಿಸದಿದ್ದರೂ, ಬೀಟಾ ಪರೀಕ್ಷಕರಿಗೆ ಶೀಘ್ರದಲ್ಲೇ ಲಭ್ಯವಾಗುವ ಸಾದ್ಯತೆಯಿದೆ.

ವಾಟ್ಸಾಪ್‌

ಇನ್ನು ಈ ಫೀಚರ್ಸ್‌ ಅನ್ನು ವಾಟ್ಸಾಪ್‌ ಬೆರಳೆಣಿಕೆಯ ಬಳಕೆದಾರರೊಂದಿಗೆ ಪರೀಕ್ಷಿಸುತ್ತಿದೆ. ನೀವು ಕೂಡ ಈ ಫೀಚರ್ಸ್‌ ಅನ್ನು ಪಡೆದಿದ್ದೀರಾ ಇಲ್ಲವೆ ಎಂಬುದನ್ನು ಪರಿಶೀಲಿಸಲು ಯಾವುದೇ ಗುಂಪಿಗೆ ಹೋಗಿ ಮತ್ತು ಯಾವುದೇ ಸಂದೇಶವನ್ನು ಲಾಂಗ್‌ ಪ್ರೆಸ್‌ ಮಾಡಿರಿ. ಆ ಸಂದೇಶವನ್ನು ಅಳಿಸುವ ಆಯ್ಕೆ ನಿಮಗೆ ಲಭ್ಯವಿದ್ದರೆ, ನೀವು ಈ ಫೀಚರ್ಸ್‌ ಅನ್ನು ಸ್ವೀಕರಿಸಿದ್ದೀರಿ ಎಂದರ್ಥ. ಇಲ್ಲದಿದ್ದರೆ, ಈ ಫೀಚರ್ಸ್‌ ಅನ್ನು ನೀವು ಇನ್ನು ಪಡೆದುಕೊಂಡಿಲ್ಲ ಎಂದು ಭಾವಿಸಬಹುದು. ವಾಟ್ಸಾಪ್‌ ಶೀಘ್ರದಲ್ಲೇ ಈ ಫೀಚರ್ಸ್‌ಗಳನ್ನು ಎಲ್ಲರಿಗೂ ಹೊರತರಲಿದೆ.

ಅಳಿಸಿದ್ದೀರಿ

ವಾಬೇಟಾಇನ್ಫೋ ವರದಿಯು ಈ ಹೊಸ ಫೀಚರ್ಸ್‌ನ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿದೆ. ಈ ಸ್ಕ್ರೀನ್‌ಶಾಟ್‌ಗಳಲ್ಲಿ ಹೊಸ "ಡಿಲೀಟ್‌ ಮೆಸೇಜ್‌ " ಆಯ್ಕೆ ಇದೆ. ಈ ಆಯ್ಕೆಯು ಪಾಪ್-ಅಪ್ ಅನ್ನು ತರುತ್ತದೆ. ಇದು ಅಡ್ಮಿನ್‌ ಆಗಿ, ನೀವು ಈ ಚಾಟ್‌ನಲ್ಲಿರುವ ಪ್ರತಿಯೊಬ್ಬರಿಗೂ (ಗುಂಪಿನ) ಸಂದೇಶವನ್ನು ಅಳಿಸುತ್ತಿರುವಿರಿ. ನೀವು ಸಂದೇಶವನ್ನು ಅಳಿಸಿದ್ದೀರಿ ಎಂದು ಅವರು ನೋಡುವ ಪಾಪ್‌ ಸಂದೇಶ ಕಾಣಲಿದೆ. ನೀವು ಒಮ್ಮೆ ಸಂದೇಶವನ್ನು ಡಿಲೀಟ್‌ ಮಾಡಿದರೆ ಪ್ರಸ್ತುತ ವಾಟ್ಸಾಪ್‌ನಲ್ಲಿ ಡಿಲೀಟ್‌ ಮಾಡಲಾದ ಮೆಸೇಜ್‌ಗಳ ರೀತಿಯಲ್ಲಿಯೇ ಕಾಣಲಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಇತ್ತೀಚೆಗೆ ಡಿಲೀಟ್‌ ಫಾರ್‌ ಎವರಿಒನ್‌ ಟೈಂ ಲಿಮಿಟ್‌ ಅನ್ನು 2 ದಿನಗಳು ಮತ್ತು 12 ಗಂಟೆಗಳವರೆಗೆ ನವೀಕರಿಸಿದೆ. ಈ ಹಿಂದೆ, ವಾಟ್ಸಾಪ್ ಬಳಕೆದಾರರಿಗೆ ಸುಮಾರು ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಹಳೆಯ ಸಂದೇಶಗಳನ್ನು ಡಿಲೀಟ್‌ ಮಾಡಲು ಅವಕಾಶ ನೀಡಿತ್ತು. ಇದೀಗ ಸಂದೇಶಗಳನ್ನು ಕಳುಹಿಸಿದ ಎರಡು ದಿನಗಳ ನಂತರ ಅವುಗಳನ್ನು ಡಿಲೀಟ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ. ಇದರಿಂದ ನೀವು ತಪ್ಪು ಸಂದೇಶ ಕಳುಹಿಸಿದ ಎರಡು ದಿನದ ಒಳಗೆ ಕೂಡ ಡಿಲೀಟ್‌ ಮಾಡಬಹುದಾಗಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಇನ್ನೂ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸುವುದಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಹಲವು ಫೀಚರ್ಸ್‌ಗಳು ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿವೆ. ಈ ಹೊಸ ಫೀಚರ್ಸ್‌ಗಳು ಲಭ್ಯವಾದ ನಂತರ ಬಳಕೆದಾರರ ಅನುಭವ ಇನ್ನಷ್ಟು ಸುಧಾರಿಸಲಿದೆ ಎಂದು ವಾಟ್ಸಾಪ್‌ ಹೇಳಿಕೊಂಡಿದೆ. ಸದ್ಯ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಶೀಘ್ರದಲ್ಲೇ ಪರಿಚಯಿಸಲಿರುವ ಕೆಲವು ಪ್ರಮುಖ ಫೀಚರ್ಸ್‌ಗಳ ವಿವರ ಇಲ್ಲಿದೆ ತಿಳಿಯಿರಿ.

ಗ್ರೂಪ್‌ನಿಂದ ಎಕ್ಸಿಟ್‌ ಆದವರು ಯಾರು ಅನ್ನೊದನ್ನ ತಿಳಿಯುವ ಆಯ್ಕೆ

ಗ್ರೂಪ್‌ನಿಂದ ಎಕ್ಸಿಟ್‌ ಆದವರು ಯಾರು ಅನ್ನೊದನ್ನ ತಿಳಿಯುವ ಆಯ್ಕೆ

ವಾಟ್ಸಾಪ್‌ ಗ್ರೂಪ್‌ನಲ್ಲಿ ಈಗಾಗಲೇ ಯಾರೆಲ್ಲಾ ಎಕ್ಸಿಟ್‌ ಆಗಿದ್ದಾರೆ ಅನ್ನೊದನ್ನ ಗ್ರೂಪ್‌ ಸದಸ್ಯರು ತಿಳಿದುಕೊಳ್ಳುವುದಕ್ಕೆ ಈ ಫೀಚರ್ಸ್‌ ಸಹಾಯಕವಾಗಲಿದೆ. ಇದರಿಂದ ಈ ಹಿಂದೆ ವಾಟ್ಸಾಪ್‌ ಗ್ರೂಪ್‌ನಲ್ಲಿ ಯಾರೆಲ್ಲಾ ಇದ್ದರೂ, ಎಕ್ಸಿಟ್‌ ಆದವರು ಯಾರು ಅನ್ನೊದನ್ನ ತಿಳಿಯಬಹುದು. ಈ ಫೀಚರ್ಸ್‌ ಇನ್ನು ಅಭಿವೃದ್ಧಿಯ ಹಂತದಲ್ಲಿದ್ದು, ಶೀಘ್ರದಲ್ಲೇ ಲಭ್ಯವಾಗುವ ಸಾದ್ಯತೆ ಇದೆ.

ಚಾಟ್‌ಗಳನ್ನು ಡಿಲೀಟ್‌ ಮಾಡುವ ಮೊದಲು ಸೇವ್‌ ಮಾಡಿ

ಚಾಟ್‌ಗಳನ್ನು ಡಿಲೀಟ್‌ ಮಾಡುವ ಮೊದಲು ಸೇವ್‌ ಮಾಡಿ

ನೀವು ವಾಟ್ಸಾಪ್‌ ಚಾಟ್‌ ಅನ್ನು ಡಿಲೀಟ್‌ ಮಾಡುವ ಮೊದಲು ಅವುಗಳನ್ನು ಸೇವ್‌ ಮಾಡುವ ಆಯ್ಕೆಯು ಕೂಡ ಸದ್ಯದಲ್ಲೇ ಲಭ್ಯವಾಗಲಿದೆ. ಇದರಿಂದ 'ಕೆಪ್ಟ್‌ ಮೆಸೇಜಸ್‌' ಆಯ್ಕೆ ಮಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

ವೀಡಿಯೊ ಚಾಟ್‌ಗಳಲ್ಲಿ ಅವತಾರಗಳು

ವೀಡಿಯೊ ಚಾಟ್‌ಗಳಲ್ಲಿ ಅವತಾರಗಳು

ಈ ಫೀಚರ್ಸ್‌ ಮೂಲಕ ನೀವು ವೀಡಿಯೊ ಕಾಲ್‌ನಲ್ಲಿ ನಿಮ್ಮದೇ ಆದ ಅವತಾರ್‌ ಅನ್ನು ಬಳಸಲು ಸಾಧ್ಯವಾಗಲಿದೆ. ನಿಮ್ಮ ಸ್ವಂತ ಕಾರ್ಟೂನ್ ಪಾತ್ರವನ್ನು ಮಾಡಲು ಈ ಫೀಚರ್ಸ್‌ ನಿಮಗೆ ಅನುಮತಿಸಲಿದೆ.

ಸ್ನೀಕಿ 'ಸ್ಟೆಲ್ತ್ ಮೋಡ್'

ಸ್ನೀಕಿ 'ಸ್ಟೆಲ್ತ್ ಮೋಡ್'

ವಾಟ್ಸಾಪ್‌ ಸೇರಲಿರುವ ಸ್ನೀಕಿ 'ಸ್ಟೆಲ್ತ್ ಮೋಡ್' ಆನ್‌ಲೈನ್‌ನಂತೆ ನೋಡದೆ ಅಪ್ಲಿಕೇಶನ್ ಅನ್ನು ಬಳಸಲು ನಿಮಗೆ ಅನುಮತಿಸುತ್ತದೆ. ಈ ಫೀಚರ್ಸ್‌ ನಿಮ್ಮ 'ಲಾಸ್ಟ್‌ ಸೀನ್‌' ಸ್ಟೇಟಸ್‌ ಅನ್ನು ಮಾತ್ರವಲ್ಲದೆ ನಿಮ್ಮ 'ಆನ್‌ಲೈನ್' ಆಕ್ಟಿವಿಟಿಯನ್ನು ಕೂಡ ಹೈಡ್‌ ಮಾಡಲು ಅವಕಾಶ ನೀಡಲಿದೆ. ಇದರೊಂದಿಗೆ ಇನ್ನು ಅನೇಕ ಫೀಚರ್ಸ್‌ಗಳು ವಾಟ್ಸಾಪ್‌ ಪ್ಲಾಟ್‌ಫಾರ್ಮ್ ಸೇರಲಿವೆ.

Best Mobiles in India

English summary
Whatsapp is getting a new feature that will allow group admins to delete any message for everyone!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X