ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಹೊಸ ಲಾಗಿನ್ ಫೀಚರ್ಸ್‌!

|

ಸ್ಮಾರ್ಟ್‌ಫೋನ್‌ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ವಾಟ್ಸಾಪ್‌ ಒಂದೆನಿಸಿಕೊಂಡಿದೆ. ಮೆಟಾ ಒಡೆತನದ ವಾಟ್ಸಾಪ್‌ ತನ್ನ ಆಕರ್ಷಕ ಫೀಚರ್ಸ್‌ಗಳ ಮೂಲಕ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇದಲ್ಲದೆ ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಅಪ್ಡೇಟ್‌ ಮಾಡುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವಾರು ಸೆಕ್ಯುರಿಟಿ ಫೀಚರ್ಸ್‌ಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಸೆಕ್ಯುರಿಟಿ ಫೀಚರ್ಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಅದರಲ್ಲೂ ಇನ್‌ಸ್ಟಾಗ್ರಾಮ್‌ನಲ್ಲಿರುವ ಲಾಗಿನ್‌ ಅನುಮೋದನೆ ಮಾದರಿಯ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಇದರಿಂದ ವಾಟ್ಸಾಪ್‌ ಖಾತೆಗೆ ಲಾಗ್‌ ಇನ್‌ ಮಾಡುವುದಕ್ಕೆ ಇನ್ನಷ್ಟು ಭದ್ರತಾ ಫೀಚರ್ಸ್‌ ಸೇರ್ಪಡೆಯಾಗಲಿದೆ ಎಂದು ಹೇಳಲಾಗಿದೆ. ಇದರಿಂದ ನಿಮ್ಮ ವಾಟ್ಸಾಪ್‌ ಖಾತೆಯನ್ನು ಬೇರೆಯವರು ಲಾಗ್‌ ಇನ್‌ ಆಗುವುದನ್ನು ತಪ್ಪಿಸಲು ಸಾಧ್ಯವಾಗಲಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ನಿಮ್ಮ ವಾಟ್ಸಾಪ್‌ ಖಾತೆಯನ್ನು ಬೇರೆಯವರು ಬಳಸದಂತೆ ತಡೆಯಲು ಈಗಾಗಲೇ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದೀಗ ಪರಿಚಯಿಸಲು ಉದ್ದೇಶಿಸಿರುವ ಫೀಚರ್ಸ್‌ ನಿಮ್ಮ ಅನುಮತಿಯಲ್ಲಿದೆ ಬೇರೆಯವರು ಖಾತೆ ಪ್ರವೇಶಿಸುವುದನ್ನು ತಪ್ಪಿಸಲಿದೆ. ನಿಮ್ಮ ಅಕೌಂಟ್‌ ತೆರೆಯುತ್ತಿರುವುದು ನೀವೇನಾ ಇಲ್ಲವೇ ಅನ್ನೊದನ್ನ ಕನ್ಫರ್ಮ್‌ ಮಾಡಿಕೊಳ್ಳುವುದಕ್ಕೆ ನಿಮ್ಮನ್ನು ಕೇಳಲಿದೆ. ಹಾಗಾದರೆ ವಾಟ್ಸಾಪ್‌ ಪರಿಶೀಲಿಸುತ್ತಿರುವ ಹೊಸ ಲಾಗಿನ್‌ ಫೀಚರ್ಸ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಇದೀಗ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿರುವ ಲಾಗಿನ್ ಅನುಮೋದನೆ ಫೀಚರ್ಸ್‌ ಮಾದರಿಯ ಪರಿಚಯಿಸಲು ಮುಂದಾಗಿದೆ. ಇನ್ನು ಈ ಹೊಸ ಫೀಚರ್ಸ್‌ ಬಗ್ಗೆ ವಾಬೇಟಾಇನ್ಫೋ ವರದಿ ಮಾಡಿದೆ. ಇದರಿಂದ ನೀವು ಹೊಸ ಡಿವೈಸ್‌ನಲ್ಲಿ ಹೊಸ ವಾಟ್ಸಾಪ್‌ ಖಾತೆಗೆ ಲಾಗ್‌ ಇನ್‌ ಮಾಡಿದರೆ ವಾಟ್ಸಾಪ್‌ನಿಂದ ನೋಟಿಫಿಕೇಶನ್‌ ಬರಲಿದೆ. ಈ ನೋಟಿಫಿಕೇಶನ್‌ನಲ್ಲಿ ಲಾಗ್‌ಇನ್‌ ಆಗುತ್ತಿರುವುದು ನೀವೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಲು ನಿಮ್ಮನ್ನು ಕೇಳುತ್ತದೆ. ಅದನ್ನು ನೀವು ಓಕೆ ಮಾಡಿದರೆ ಮಾತ್ರ ವಾಟ್ಸಾಪ್‌ ಲಾಗ್‌ ಇನ್‌ ಆಗಲಿದೆ.

ಲಾಗ್

ಇದರಿಂದಾಗಿ ಬೇರೆಯವರು ತಮ್ಮ ಖಾತೆಗಳಿಗೆ ಲಾಗ್ ಇನ್ ಮಾಡಲು ಪ್ರಯತ್ನಿಸಿದಾಗ ಅವರು ಇನ್-ಆಪ್ ಎಚ್ಚರಿಕೆಗಳನ್ನು ಸ್ವೀಕರಿಸಬಹುದು ಎಂದು ಹೇಳಿದೆ. ಒಂದು ವೇಳೆ ನಿಮ್ಮ 6-ಅಂಕಿಯ ಕೋಡ್ ಅನ್ನು ತಪ್ಪಾಗಿ ಶೇರ್‌ ಮಾಡಿದರೂ ಕೂಡ ನಿಮ್ಮ ಲಾಗ್‌ ಇನ್‌ ಪ್ರಯತ್ನ ವಿಫಲವಾಗಲಿದೆ. ಹೆಚ್ಚುವರಿಯಾಗಿ, ಈ ವಿಶೇಷ ಸೆಕ್ಯುರ್‌ ಆಲರ್ಟ್‌ ಇತರ ಫೋನ್‌ನಲ್ಲಿ ಲಾಗ್‌ಇನ್‌ ಆದ ಸಮಯ ಮತ್ತು ಇತರ ಉಪಯುಕ್ತ ಮಾಹಿತಿಯನ್ನು ಕೂಡ ವರದಿ ಮಾಡಲಿದೆ. ಇದಲ್ಲದೆ ವಾಟ್ಸಾಪ್‌ ಅಪ್ಲಿಕೇಶನ್‌ ಇನ್ನು ಅನೇಕ ಫೀಚರ್ಸ್‌ಗಳನ್ನು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪರಿಚಯಿಸಲು ಸಿದ್ಧತೆ ನಡೆಸಿದೆ. ಅವುಗಳ ವಿವರ ಇಲ್ಲಿದೆ.

ಸ್ನೀಕಿ 'ಸ್ಟೆಲ್ತ್ ಮೋಡ್'

ಸ್ನೀಕಿ 'ಸ್ಟೆಲ್ತ್ ಮೋಡ್'

ಸ್ನೀಕಿ 'ಸ್ಟೆಲ್ತ್ ಮೋಡ್' ವಾಟ್ಸಾಪ್‌ ಸೇರಲಿರುವ ಸ್ನೀಕಿ 'ಸ್ಟೆಲ್ತ್ ಮೋಡ್' ಆನ್‌ಲೈನ್‌ನಂತೆ ನೋಡದೆ ಅಪ್ಲಿಕೇಶನ್ ಅನ್ನು ಬಳಸಲು ನಿಮಗೆ ಅನುಮತಿಸುತ್ತದೆ. ಈ ಫೀಚರ್ಸ್‌ ನಿಮ್ಮ 'ಲಾಸ್ಟ್‌ ಸೀನ್‌' ಸ್ಟೇಟಸ್‌ ಅನ್ನು ಮಾತ್ರವಲ್ಲದೆ ನಿಮ್ಮ 'ಆನ್‌ಲೈನ್' ಆಕ್ಟಿವಿಟಿಯನ್ನು ಕೂಡ ಹೈಡ್‌ ಮಾಡಲು ಅವಕಾಶ ನೀಡಲಿದೆ. ಇದರೊಂದಿಗೆ ಇನ್ನು ಅನೇಕ ಫೀಚರ್ಸ್‌ಗಳು ವಾಟ್ಸಾಪ್‌ ಪ್ಲಾಟ್‌ಫಾರ್ಮ್ ಸೇರಲಿವೆ.

ವೀಡಿಯೊ ಅವತಾರ್‌

ವೀಡಿಯೊ ಅವತಾರ್‌

ವೀಡಿಯೊ ಚಾಟ್‌ಗಳಲ್ಲಿ ಅವತಾರಗಳು ಈ ಫೀಚರ್ಸ್‌ ಮೂಲಕ ನೀವು ವೀಡಿಯೊ ಕಾಲ್‌ನಲ್ಲಿ ನಿಮ್ಮದೇ ಆದ ಅವತಾರ್‌ ಅನ್ನು ಬಳಸಲು ಸಾಧ್ಯವಾಗಲಿದೆ. ನಿಮ್ಮ ಸ್ವಂತ ಕಾರ್ಟೂನ್ ಪಾತ್ರವನ್ನು ಮಾಡಲು ಈ ಫೀಚರ್ಸ್‌ ನಿಮಗೆ ಅನುಮತಿಸಲಿದೆ.

ಚಾಟ್‌ಗಳನ್ನು ಡಿಲೀಟ್‌ ಮಾಡುವ ಮೊದಲು ಸೇವ್‌ ಮಾಡಿ

ಚಾಟ್‌ಗಳನ್ನು ಡಿಲೀಟ್‌ ಮಾಡುವ ಮೊದಲು ಸೇವ್‌ ಮಾಡಿ

ನೀವು ವಾಟ್ಸಾಪ್‌ ಚಾಟ್‌ ಅನ್ನು ಡಿಲೀಟ್‌ ಮಾಡುವ ಮೊದಲು ಅವುಗಳನ್ನು ಸೇವ್‌ ಮಾಡುವ ಆಯ್ಕೆಯು ಕೂಡ ಸದ್ಯದಲ್ಲೇ ಲಭ್ಯವಾಗಲಿದೆ. ಇದರಿಂದ 'ಕೆಪ್ಟ್‌ ಮೆಸೇಜಸ್‌' ಆಯ್ಕೆ ಮಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

ಗ್ರೂಪ್‌ನಿಂದ ಎಕ್ಸಿಟ್‌ ಆದವರು ಯಾರು ಅನ್ನೊದನ್ನ ತಿಳಿಯುವ ಆಯ್ಕೆ

ಗ್ರೂಪ್‌ನಿಂದ ಎಕ್ಸಿಟ್‌ ಆದವರು ಯಾರು ಅನ್ನೊದನ್ನ ತಿಳಿಯುವ ಆಯ್ಕೆ

ವಾಟ್ಸಾಪ್‌ ಗ್ರೂಪ್‌ನಲ್ಲಿ ಈಗಾಗಲೇ ಯಾರೆಲ್ಲಾ ಎಕ್ಸಿಟ್‌ ಆಗಿದ್ದಾರೆ ಅನ್ನೊದನ್ನ ಗ್ರೂಪ್‌ ಸದಸ್ಯರು ತಿಳಿದುಕೊಳ್ಳುವುದಕ್ಕೆ ಈ ಫೀಚರ್ಸ್‌ ಸಹಾಯಕವಾಗಲಿದೆ. ಇದರಿಂದ ಈ ಹಿಂದೆ ವಾಟ್ಸಾಪ್‌ ಗ್ರೂಪ್‌ನಲ್ಲಿ ಯಾರೆಲ್ಲಾ ಇದ್ದರೂ, ಎಕ್ಸಿಟ್‌ ಆದವರು ಯಾರು ಅನ್ನೊದನ್ನ ತಿಳಿಯಬಹುದು. ಈ ಫೀಚರ್ಸ್‌ ಇನ್ನು ಅಭಿವೃದ್ಧಿಯ ಹಂತದಲ್ಲಿದ್ದು, ಶೀಘ್ರದಲ್ಲೇ ಲಭ್ಯವಾಗುವ ಸಾದ್ಯತೆ ಇದೆ.

ಹೊಸ ಚಾಟ್‌ಬಾಟ್‌

ಹೊಸ ಚಾಟ್‌ಬಾಟ್‌

ವಾಟ್ಸಾಪ್‌ ಶೀಘ್ರದಲ್ಲೇ ಹೊಸ ಚಾಟ್‌ಬಾಟ್‌ ಪರಿಚಯಿಸಲಿದೆ. ಇದರಿಂದ ವಾಟ್ಸಾಪ್‌ ಸೇರಲಿರುವ ಹೊಸ ಫೀಚರ್ಸ್‌ಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಪ್ರಸ್ತುತ ವಾಟ್ಸಾಪ್‌ನ ಅಧಿಕೃತ ಚಾಟ್‌ಬಾಟ್ ಇನ್ನು ಅಭಿವೃದ್ಧಿಯ ಆರಂಭಿಕ ಹಂತದಲ್ಲಿದೆ ಎನ್ನಲಾಗಿದೆ. ಆದರೆ ವಾಬೇಟಾಇನ್ಫೊ ಹಂಚಿಕೊಂಡ ಸ್ಕ್ರೀನ್‌ಶಾಟ್‌ನಲ್ಲಿ ಹೊಸ ಪರಿಶೀಲಿಸಿದ ಚಾಟ್‌ಬಾಟ್ ಅನ್ನು ಕಾಣಬಹುದಾಗಿದೆ. ಈ ಚಾಟ್‌ಬಾಟ್‌ನ ಸಹಾಯದಿಂದ ಸಂಭಾಷಣೆಯ ಪಟ್ಟಿಯಲ್ಲಿ ಜನರು ಹೊಸ ಫೀಚರ್ಸ್‌ಗಳ ಬಗ್ಗೆ ಮೊದಲು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಅಲ್ಲದೆ ಸಲಹೆಗಳು ಮತ್ತು ತಂತ್ರಗಳನ್ನು ಪಡೆದುಕೊಳ್ಳುತ್ತಾರೆ ಮತ್ತು ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದು ಹೇಳಲಾಗಿದೆ.

ಗ್ರೂಪ್‌ ಅಡ್ಮಿನ್‌ಗಳಿಗೆ ಹೊಸ ಆಯ್ಕೆ

ಗ್ರೂಪ್‌ ಅಡ್ಮಿನ್‌ಗಳಿಗೆ ಹೊಸ ಆಯ್ಕೆ

ವಾಟ್ಸಾಪ್‌ನ ಹೊಸ ಫೀಚರ್ಸ್‌ಗಳನ್ನು ಟ್ರ್ಯಾಕ್‌ ಮಾಡುವ WABetaInfo ವರದಿಯ ಪ್ರಕಾರ, ಗ್ರೂಪ್ ಅಡ್ಮಿನ್‌ಗಳನ್ನು ಉತ್ತಮ ರೀತಿಯಲ್ಲಿ ಮಾಡರೇಟ್ ಮಾಡಲು ಈ ಫೀಚರ್ಸ್‌ ಅನ್ನು ಪರಿಚಯಿಸಲಾಗ್ತಿದೆ. ಈ ಫೀಚರ್ಸ್‌ ವಿಶ್ವದ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. ಇದರಿಂದ ಗ್ರೂಪ್‌ ಅಡ್ಮಿನ್‌ ಸಂದೇಶವನ್ನು ಅಳಿಸಿದಾಗ ಗುಂಪಿನ ಎಲ್ಲಾ ಸದಸ್ಯರಿಗೂ ತೋರಿಸುತ್ತದೆ. ಸದ್ಯ ಈ ಫೀಚರ್ಸ್‌ ಅನ್ನು ವಾಟ್ಸಾಪ್‌ ಅಧಿಕೃತವಾಗಿ ವೈಶಿಷ್ಟ್ಯವನ್ನು ಘೋಷಿಸದಿದ್ದರೂ, ಬೀಟಾ ಪರೀಕ್ಷಕರಿಗೆ ಶೀಘ್ರದಲ್ಲೇ ಲಭ್ಯವಾಗುವ ಸಾದ್ಯತೆಯಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಇತ್ತೀಚೆಗೆ ಡಿಲೀಟ್‌ ಫಾರ್‌ ಎವರಿಒನ್‌ ಟೈಂ ಲಿಮಿಟ್‌ ಅನ್ನು 2 ದಿನಗಳು ಮತ್ತು 12 ಗಂಟೆಗಳವರೆಗೆ ನವೀಕರಿಸಿದೆ. ಈ ಹಿಂದೆ, ವಾಟ್ಸಾಪ್ ಬಳಕೆದಾರರಿಗೆ ಸುಮಾರು ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಹಳೆಯ ಸಂದೇಶಗಳನ್ನು ಡಿಲೀಟ್‌ ಮಾಡಲು ಅವಕಾಶ ನೀಡಿತ್ತು. ಇದೀಗ ಸಂದೇಶಗಳನ್ನು ಕಳುಹಿಸಿದ ಎರಡು ದಿನಗಳ ನಂತರ ಅವುಗಳನ್ನು ಡಿಲೀಟ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ. ಇದರಿಂದ ನೀವು ತಪ್ಪು ಸಂದೇಶ ಕಳುಹಿಸಿದ ಎರಡು ದಿನದ ಒಳಗೆ ಕೂಡ ಡಿಲೀಟ್‌ ಮಾಡಬಹುದಾಗಿದೆ.

Best Mobiles in India

English summary
WhatsApp is reportedly working on a bunch of security features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X