ಶೀಘ್ರದಲ್ಲೇ ವಾಟ್ಸಾಪ್‌ ಗ್ರೂಪ್‌ನಲ್ಲಿ ಲಭ್ಯವಾಗಲಿದೆ ಹೊಸ ಫೀಚರ್ಸ್‌!

|

ಮೆಟಾ ಒಡೆತನದ ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ವಾಟ್ಸಾಪ್‌ ಗ್ರೂಪ್‌ಗಳಿಗಾಗಿ ಎರಡು ಹೊಸ ಫೀಚರ್ಸ್‌ಗಳನ್ನು ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ. ವಾಟ್ಸಾಪ್‌ ಇತ್ತೀಚೆಗೆ ಗ್ರೂಪ್ ಅಡ್ಮಿನ್‌ಗಳಿಗೆ ವಿಶೇಷ ಅಧಿಕಾರವನ್ನು ನೀಡಿದ್ದು, ಚಾಟ್‌ನಲ್ಲಿರುವ ಯಾವುದೇ ಸಂದೇಶವನ್ನು ಡಿಲೀಟ್‌ ಮಾಡಲು ಅನುಮತಿಸುತ್ತದೆ. ವಾಟ್ಸಾಪ್‌ ಇದೀಗ ಬಳಕೆದಾರರನ್ನು ಸೈಲೆಂಟ್‌ ಆಗಿ ಗ್ರೂಪ್‌ನಿಂದ ಎಕ್ಸಿಟ್‌ ಆಗುವುದಕ್ಕೆ ಅವಕಾಶ ನೀಡಲು ಮುಂದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬಳಕೆದಾರರಿಗೆ ಗ್ರೂಪ್‌ಗಳಲ್ಲಿ ಅನುಕೂಲವಾಗುವಂತಹ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ವಾಟ್ಸಾಪ್‌ ಗ್ರೂಪ್‌ನಿಂದ ನೀವು ಎಕ್ಸಿಟ್‌ ಆದರೆ ಇನ್ಮುಂದೆ ಯಾರಿಗೂ ತಿಳಿಯದಂತೆ ಮಾಡುವುದಕ್ಕೆ ಈ ಫೀಚರ್ಸ್‌ ಸಹಾಯ ಮಾಡಲಿದೆ. ಪ್ರಸ್ತುತ ನೀವು ವಾಟ್ಸಾಪ್‌ ಗ್ರೂಪ್‌ನಿಂದ ಎಕ್ಸಿಟ್‌ ಆದರೆ ಗ್ರೂಪ್‌ನಲ್ಲಿರುವವರಿಗೆ ಯಾರು ತೊರೆದಿದ್ದಾರೆ ಅನ್ನೊದು ತಿಳಿಯುತ್ತದೆ. ಆದರೆ ಇನ್ಮುಂದೆ ಆದು ತಿಳಿಯದಂತೆ ಮಾಡುವುದಕ್ಕೆ ವಾಟ್ಸಾಪ್‌ ಮುಂದಾಗಿದೆ. ಹಾಗಾದ್ರೆ ವಾಟ್ಸಾಪ್‌ನ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಗ್ರೂಪ್‌ನಲ್ಲಿರುವ ಬಳಕೆದಾರರು ಶೀಘ್ರದಲ್ಲೇ ಹೊಸ ಫೀಚರ್ಸ್‌ ಪಡೆಯಲಿದ್ದಾರೆ. ಈ ಫೀಚರ್ಸ್‌ ಮೂಲಕ ವಾಟ್ಸಾಪ್‌ ಗ್ರೂಪ್‌ನಿಂದ ಸೈಲೆಂಟ್‌ ಆಗಿ ಎಕ್ಸಿಟ್‌ ಆಗುವುದಕ್ಕೆ ಸಾಧ್ಯವಾಗಲಿದೆ. ಇದಲ್ಲದೆ ವಾಟ್ಸಾಪ್‌ "ವ್ಯೂ ಪಾಸ್ಟ್ ಪಾರ್ಟಿಸಿಪೇನ್ಟ್ಸ್" ಎಂಬ ಹೊಸ ಫೀಚರ್ಸ್‌ ಅಭಿವೃದ್ದಿಪಡಿಸುತ್ತಿದೆ. ಇದರಿಂದ ವಾಟ್ಸಾಪ್‌ ಗ್ರೂಪ್‌ನಲ್ಲಿ ಈ ಹಿಂದೆ ಯಾರೆಲ್ಲಾ ಇದ್ದರೂ ಅನ್ನೊದನ್ನ ವೀಕ್ಷಿಸಲು ಅನುಮತಿಸುತ್ತದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಗ್ರೂಪ್‌ ಅನ್ನು ಸೈಲೆಂಟ್‌ ಆಗಿ ತೊರೆಯುವುದಕ್ಕೆ ಅವಕಾಶ ನೀಡುವ ಫೀಚರ್ಸ್‌ನಿಂದ ಸಾಕಷ್ಟು ಅನುಕೂಲವಾಗಲಿದೆ. ಏಖೆಂದರೆ ನೀವು ಗ್ರೂಪ್‌ನಿಂದ ಎಕ್ಸಿಟ್‌ ಆಗಿರುವುದು ಯಾರಿಗೂ ಯಾವುದೇ ಅಧಿಸೂಚನೆ ಮೂಲಕ ತಿಳಿಯುವುದಿಲ್ಲ. ಆದರೆ ಈ ವ್ಯೂ ಪಾಸ್ಟ್ ಪಾರ್ಟಿಸಿಪೇನ್ಟ್ಸ್ ಫೀಚರ್ಸ್‌ ಮೂಲಕ ಹಿಂದೆ ಯಾರು ಚಾಟ್ ಅನ್ನು ತೊರೆದಿದ್ದಾರೆ ಎಂಬುದನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಈ ಫೀಚರ್ಸ್‌ ಅಡ್ಮಿನ್‌ಗಳಿಗೆ ಮಾತ್ರ ಇರಲಿದೆಯಾ ಅನ್ನೊದು ಇನ್ನು ಬಹಿರಂಗವಾಗಿಲ್ಲ.

ಫೀಚರ್ಸ್‌

ಇನ್ನು ವ್ಯೂ ಪಾಸ್ಟ್ ಪಾರ್ಟಿಸಿಪೇನ್ಟ್ಸ್ ಫೀಚರ್ಸ್‌ನಲ್ಲಿ ಹಿಂದೆ ಗ್ರೂಪ್‌ ತೊರೆದವರ ಸಂಖ್ಯೆಯನ್ನು ತೋರಿಸಲಿದೆಯಾ ಇಲ್ಲ ಅವರ ಹೆಸರನ್ನು ಮಾತ್ರ ತೋರಿಸಲಿದೆಯಾ ಎಂಬುದು ಕೂಡ ಸ್ಪಷ್ಟವಾಗಿಲ್ಲ. ಸದ್ಯಕ್ಕೆ, ಈ ವೈಶಿಷ್ಟ್ಯಗಳು ವಾಟ್ಸಾಪ್‌ನ ಸ್ಥಿರ ಆವೃತ್ತಿಯನ್ನು ಯಾವಾಗ ಸೇರಲಿವೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ "ಸೈಲೆಂಟ್ ಗ್ರೂಪ್ ಎಕ್ಸಿಟ್" ಫೀಚರ್ಸ್‌ ಅನ್ನು ಇದೀಗ ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಗುರುತಿಸಲಾಗಿದೆ. ಆದರೆ ವ್ಯೂ ಪಾಸ್ಟ್ ಪಾರ್ಟಿಸಿಪೇನ್ಟ್ಸ್ ಫೀಚರ್ಸ್‌ ಆಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ ಕಾಣಿಸಿಕೊಂಡಿದೆ. ಈ ಎರಡು ಫೀಚರ್ಸ್‌ಗಳು ಶೀಘ್ರದಲ್ಲೇ ವಾಟ್ಸಾಪ್‌ನ ಇತರ ಆವೃತ್ತಿಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ರಿಚ್‌-ಪ್ರಿವ್ಯೂ ಎನ್ನುವ ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ನಿಮ್ಮ ಸ್ಟೇಟಸ್‌ನಲ್ಲಿ ವೆಬ್‌ಸೈಟ್ ವಿಳಾಸಗಳನ್ನು ಶೇರ್‌ ಮಾಡುವುದನ್ನು ಉತ್ತಮವಾಗಿ ಕಾಣುವಂತೆ ಮಾಡಲಿದೆ. ಇದರಿಂದ ವಾಟ್ಸಾಪ್‌ ಸ್ಟೇಟಸ್‌ನಲ್ಲಿ ರಿಚ್‌ ಪ್ರಿವ್ಯೂಗಳನ್ನು ಕ್ರಿಯೆಟ್‌ ಮಾಡುವ ಮಾರ್ಗಗಳನ್ನು ಪರೀಕ್ಷಿಸುತ್ತಿದೆ ಎನ್ನಲಾಗಿದೆ. ಇದರ ಮೂಲಕ ವಾಟ್ಸಾಪ್‌ ಸ್ಟೇಟಸ್‌ ಅಪ್ಡೇಟ್‌ನಲ್ಲಿ ನೀವು ವೆಬ್‌ಸೈಟ್‌ ವಿಳಾಸವನ್ನು ಶೇರ್‌ ಮಾಡುವಾಗ ಹೊಸ ಅನುಭವ ನೀಡುವುದಕ್ಕೆ ಮುಂದಾಗಿದೆ. ಇದರಿಂದ ವಾಟ್ಸಾಪ್‌ ಸ್ಟೇಟಸ್‌ನಲ್ಲಿ ವೆಬ್‌ಸೈಟ್‌ ಲಿಂಕ್‌ ಅನ್ನು ಶೇರ್‌ ಮಾಡಿಕೊಂಡರೆ, ನೀವು ನಿಜವಾದ ವಿಳಾಸದ ಪಠ್ಯವನ್ನು ಕಾಣಬಹುದಾಗಿದೆ. ಸದ್ಯ ಬಹಿರಂಗವಾಗಿರುವ ಸ್ಕ್ರೀನ್‌ಶಾಟ್‌ ಪ್ರಕಾರ, ನಾವು ಸರಳ ಪಠ್ಯದ ಬದಲಿಗೆ ವಿಳಾಸದ ವಿವರವಾದ ಲಿಂಕ್ ಅನ್ನು ಕಾಣಬಹುದು. ಈ ಫೀಚರ್ಸ್‌ ಅನ್ನು ಇದೀಗ ವಾಟ್ಸಾಪ್‌ ಅಪ್ಲಿಕೇಶನ್‌ನ ಬೀಟಾ ಆವೃತ್ತಿಯಲ್ಲಿ ಗುರುತಿಸಲಾಗಿದೆ.

Most Read Articles
Best Mobiles in India

English summary
WhatsApp is reportedly testing two more features for groups to improve the experience of users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X