ಹೊಸ ಸರ್ವೇ ಫೀಚರ್ಸ್‌ ಪರಿಚಯಿಸಲು ವಾಟ್ಸಾಪ್‌ ಸಿದ್ಧತೆ! ವರದಿ

|

ಮೆಟಾ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ತನ್ನ ವಿಶೇಷ ಫೀಚರ್ಸ್‌ಗಳ ಮೂಲಕ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಸರ್ವೇ ಫೀಚರ್ಸ್‌ ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇದು ಬಳಕೆದಾರರಿಗೆ ಚಾಟ್‌ ಸ್ವರೂಪದಲ್ಲಿ ಫೀಡ್‌ಬ್ಯಾಕ್‌ ನೀಡಲು ಅನುಮತಿಸಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸರ್ವೇ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಬಳಕೆದಾರರ ಫಿಡ್‌ಬ್ಯಾಕ್‌ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎನ್ನಲಾಗಿದೆ. ಈ ಹೊಸ ಫೀಚರ್ಸ್‌ ಮೂಲಭೂತವಾಗಿ ಗೌಪ್ಯತೆಯ ಅಂಶಕ್ಕೆ ಧಕ್ಕೆಯಾಗದಂತೆ ತನ್ನ ಬಳಕೆದಾರರ ಫಿಡ್‌ಬ್ಯಾಕ್‌ ಪಡೆಯಲಿದೆ ಎನ್ನಲಾಗಿದೆ. ಇದರ ಮೂಲಕ ಜನರು ಲಿಂಕ್ ಮಾಡಲಾದ ಡಿವೈಸ್‌ಗಳಲ್ಲಿ ಒಂದರಿಂದ ಟೆಕ್ಸ್ಟ್‌ಗಳನ್ನು ಬರೆಯಲು ಸಾಧ್ಯವಾಗುತ್ತದೆ.ಹಾಗಾದ್ರೆ ವಾಟ್ಸಾಪ್‌ ಸರ್ವೇ ಫೀಚರ್ಸ್‌ ವಿಶೇಷತೆ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಸರ್ವೇ ಫೀಚರ್ಸ್‌ ಮೂಲಭೂತವಾಗಿ ಚಾಟ್‌ ಮಾದರಿಯಲ್ಲಿ ಕಾಣಲಿದೆ. ವಾಟ್ಸಾಪ್‌ ಬಳಕೆದಾರರು ಇದರಲ್ಲಿ ತಮ್ಮ ಫೀಡ್‌ಬ್ಯಾಕ್‌ ಅನ್ನು ನೀಡಲು ಸಾಧ್ಯವಾಗಲಿದೆ. ಇನ್ನು ಈ ಸರ್ವೇ ಮೂಲಕ ಬಳಕೆದಾರರ ಅನುಭವವನ್ನು ತಿಳಿದುಕೊಳ್ಳಲು ಅವಕಾಶ ಸಿಗಲಿದೆ. ಬಳಕೆದಾರರು ಈ ಸರ್ವೇಯಲ್ಲಿ ಭಾಗವಹಿಸಲೇಬೇಕೆಂಬ ಕಂಡಿಷನ್‌ ಇಲ್ಲ. ನೀವು ಸರ್ವೇಯಲ್ಲಿ ಭಾಗವಹಿಸದೆ ಇರುವುದಕ್ಕೂ ಕೂಡ ಅವಕಾಶವಿದೆ. ಇನ್ನು ಸರ್ವೇಯಲ್ಲಿ ಬಳಕೆದಾರರು ಭಾಗವಹಿಸುವ ಮೊದಲು ವಾಟ್ಸಾಪ್ ಒಪ್ಪಿಗೆಯನ್ನು ಸರ್ಚ್‌ ಮಾಡಲಿದೆ ಎಂದು ಹೇಳಲಾಗಿದೆ. ನೀವು ನೀಡುವ ಫೀಡ್‌ಬ್ಯಾಕ್‌ ಅನ್ನು ಗೌಪ್ಯವಾಗಿಡುವುದಾಗಿ ವಾಟ್ಸಾಪ್‌ ಹೇಳಿದೆ.

ವಾಟ್ಸಾಪ್‌

ಇದಲ್ಲದೆ ಭವಿಷ್ಯದಲ್ಲಿ ವಾಟ್ಸಾಪ್‌ ನಿಮಗೆ ಹೊಸ ಸಮೀಕ್ಷೆಗಳನ್ನು ಕಳುಹಿಸದಂತೆ ಬ್ಯಾನ್‌ ಮಾಡುವ ಅವಕಾಶ ಕೂಡ ಬಳಕೆದಾರರಿಗಿದೆ. ಸರ್ವೇಯನ್ನು ಪರಿಶೀಲಿಸಿದ ವಾಟ್ಸಾಪ್‌ ಖಾತೆಯ ಮೂಲಕ ಕಳುಹಿಸಲಾಗುತ್ತದೆ. ಇದು ಗ್ರೀನ್‌ ಟಿಕ್‌ನೊಂದಿಗೆ ಬರಲಿದೆ. ನೀವು ಸರ್ವೇಗೆ ಪ್ರತಿಕ್ರಿಯೆಸಿದರೆ ಗೌಪ್ಯವಾಗಿ ಮಾಹಿತಿಯನ್ನು ಶೇಖರಿಸಲಾಗುತ್ತದೆ. ಒಂದು ವೇಳೆ ನೀವು ಸರ್ವೇಗೆ ಫಿಡ್‌ಬ್ಯಾಕ್‌ ನೀಡದಿದ್ದರೂ ಇದು ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿದೆ. ಬಳಕೆದಾರರ ಒಟ್ಟಾರೆ ಅನುಭವವನ್ನು ಹೆಚ್ಚಿಸುವ ಸಲುವಾಗಿ ವಾಟ್ಸಾಪ್‌ ಈ ಸರ್ವೇ ನಡೆಸಲಿದೆ ಎನ್ನಲಾಗಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸ್ನೀಕಿ 'ಸ್ಟೆಲ್ತ್ ಮೋಡ್' ಫೀಚರ್ಸ್‌ ನಲ್ಲಿ ಕಾರ್ಯನಿರ್ವಹಿಸುತ್ತಿದೆ. ವಾಟ್ಸಾಪ್‌ ಸೇರಲಿರುವ ಸ್ನೀಕಿ 'ಸ್ಟೆಲ್ತ್ ಮೋಡ್' ಆನ್‌ಲೈನ್‌ನಂತೆ ನೋಡದೆ ಅಪ್ಲಿಕೇಶನ್ ಅನ್ನು ಬಳಸಲು ನಿಮಗೆ ಅನುಮತಿಸುತ್ತದೆ. ಈ ಫೀಚರ್ಸ್‌ ನಿಮ್ಮ 'ಲಾಸ್ಟ್‌ ಸೀನ್‌' ಸ್ಟೇಟಸ್‌ ಅನ್ನು ಮಾತ್ರವಲ್ಲದೆ ನಿಮ್ಮ 'ಆನ್‌ಲೈನ್' ಆಕ್ಟಿವಿಟಿಯನ್ನು ಕೂಡ ಹೈಡ್‌ ಮಾಡಲು ಅವಕಾಶ ನೀಡಲಿದೆ. ಇದರೊಂದಿಗೆ ಇನ್ನು ಅನೇಕ ಫೀಚರ್ಸ್‌ಗಳು ವಾಟ್ಸಾಪ್‌ ಪ್ಲಾಟ್‌ಫಾರ್ಮ್ ಸೇರಲಿವೆ.

ವೀಡಿಯೊ ಅವತಾರ್‌ ವೀಡಿಯೊ ಚಾಟ್‌ಗಳಲ್ಲಿ ಅವತಾರಗಳು

ವೀಡಿಯೊ ಅವತಾರ್‌ ವೀಡಿಯೊ ಚಾಟ್‌ಗಳಲ್ಲಿ ಅವತಾರಗಳು

ಈ ಫೀಚರ್ಸ್‌ ಮೂಲಕ ನೀವು ವೀಡಿಯೊ ಕಾಲ್‌ನಲ್ಲಿ ನಿಮ್ಮದೇ ಆದ ಅವತಾರ್‌ ಅನ್ನು ಬಳಸಲು ಸಾಧ್ಯವಾಗಲಿದೆ. ನಿಮ್ಮ ಸ್ವಂತ ಕಾರ್ಟೂನ್ ಪಾತ್ರವನ್ನು ಮಾಡಲು ಈ ಫೀಚರ್ಸ್‌ ನಿಮಗೆ ಅನುಮತಿಸಲಿದೆ.

ಚಾಟ್‌ಗಳನ್ನು ಡಿಲೀಟ್‌ ಮಾಡುವ ಮೊದಲು ಸೇವ್‌ ಮಾಡಿ

ಚಾಟ್‌ಗಳನ್ನು ಡಿಲೀಟ್‌ ಮಾಡುವ ಮೊದಲು ಸೇವ್‌ ಮಾಡಿ

ನೀವು ವಾಟ್ಸಾಪ್‌ ಚಾಟ್‌ ಅನ್ನು ಡಿಲೀಟ್‌ ಮಾಡುವ ಮೊದಲು ಅವುಗಳನ್ನು ಸೇವ್‌ ಮಾಡುವ ಆಯ್ಕೆಯು ಕೂಡ ಸದ್ಯದಲ್ಲೇ ಲಭ್ಯವಾಗಲಿದೆ. ಇದರಿಂದ 'ಕೆಪ್ಟ್‌ ಮೆಸೇಜಸ್‌' ಆಯ್ಕೆ ಮಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

ಗ್ರೂಪ್‌ನಿಂದ ಎಕ್ಸಿಟ್‌ ಆದವರು ಯಾರು ಅನ್ನೊದನ್ನ ತಿಳಿಯುವ ಆಯ್ಕೆ

ಗ್ರೂಪ್‌ನಿಂದ ಎಕ್ಸಿಟ್‌ ಆದವರು ಯಾರು ಅನ್ನೊದನ್ನ ತಿಳಿಯುವ ಆಯ್ಕೆ

ವಾಟ್ಸಾಪ್‌ ಗ್ರೂಪ್‌ನಲ್ಲಿ ಈಗಾಗಲೇ ಯಾರೆಲ್ಲಾ ಎಕ್ಸಿಟ್‌ ಆಗಿದ್ದಾರೆ ಅನ್ನೊದನ್ನ ಗ್ರೂಪ್‌ ಸದಸ್ಯರು ತಿಳಿದುಕೊಳ್ಳುವುದಕ್ಕೆ ಈ ಫೀಚರ್ಸ್‌ ಸಹಾಯಕವಾಗಲಿದೆ. ಇದರಿಂದ ಈ ಹಿಂದೆ ವಾಟ್ಸಾಪ್‌ ಗ್ರೂಪ್‌ನಲ್ಲಿ ಯಾರೆಲ್ಲಾ ಇದ್ದರೂ, ಎಕ್ಸಿಟ್‌ ಆದವರು ಯಾರು ಅನ್ನೊದನ್ನ ತಿಳಿಯಬಹುದು. ಈ ಫೀಚರ್ಸ್‌ ಇನ್ನು ಅಭಿವೃದ್ಧಿಯ ಹಂತದಲ್ಲಿದ್ದು, ಶೀಘ್ರದಲ್ಲೇ ಲಭ್ಯವಾಗುವ ಸಾದ್ಯತೆ ಇದೆ.

Best Mobiles in India

English summary
WhatsApp is working on a new survey feature

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X