ಏನಿದು ವಾಟ್ಸಾಪ್‌ 'ಆನ್‌ಲೈನ್‌ ಪ್ರೆಸೆನ್ಸ್‌' ಫೀಚರ್ಸ್‌! ಕಾರ್ಯವೈಖರಿ ಹೇಗಿದೆ?

|

ಪ್ರಸ್ತುತ ದಿನಗಳಲ್ಲಿ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದುವ ಮೂಲಕ ಮುಂಚೂಣಿಯಲ್ಲಿದೆ. ಅದರಂತೆ ವಾಟ್ಸಾಪ್‌ ಕೂಡ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ವಾಟ್ಸಾಪ್‌ ಕಮ್ಯೂನಿಟಿ, ಇನ್‌ಚಾಟ್‌ ಪೋಲ್‌, ಗ್ರೂಪ್‌ ಮಿತಿ ಹೆಚ್ಚಳದಂತಹ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರ ನಡುವೆ ಹೊಸದಾಗಿ ಆನ್‌ಲೈನ್‌ ಪ್ರೆಸೆನ್ಸ್‌ ಎಂಬ ಹೊಸ ಫೀಚರ್ಸ್‌ ಸೇರ್ಪಡೆ ಮಾಡಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಆನ್‌ಲೈನ್‌ ಪ್ರೆಸೆನ್ಸ್‌ ಎನ್ನುವ ಹೊಸ ಫೀಚರ್ಸ್‌ ಪರಿಚಯಿಸಿದೆ. ಈ ಹೊಸ ಫೀಚರ್ಸ್‌ ಬಳಕೆದಾರರಿಗೆ ಆನ್‌ಲೈನ್‌ ಸ್ಟೇಟಸ್‌ ಅನ್ನು ಹೈಡ್‌ ಮಾಡಲು ಸಹಾಯ ಮಾಡಲಿದೆ. ಇದರಿಂದ ನೀವು ನಿಮ್ಮ ಕಂಟ್ಯಾಕ್ಟ್‌ಗಳಿಗೆ ತಿಳಿಯದೆಯೆ ಆನ್‌ಲೈನ್‌ ಸ್ಟೇಟಸ್‌ ಮರೆಮಾಡಲು ಸಾದ್ಯವಾಗಲಿದೆ. ಹಾಗಾದ್ರೆ ವಾಟ್ಸಾಪ್‌ನ ಹೊಸ ಆನ್‌ಲೈನ್‌ ಪ್ರೆಸೆನ್ಸ್‌ ಫೀಚರ್ಸ್‌ ವಿಶೇಷತೆ ಏನು? ಇದನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆನ್‌ಲೈನ್‌

ವಾಟ್ಸಾಪ್‌ನ ಆನ್‌ಲೈನ್‌ ಸ್ಟೆಟಸ್‌ ಪ್ರೆಸೆನ್ಸ್‌ ಫೀಚರ್ಸ್‌ ಸಾಕಷ್ಟು ಅನುಕೂಲಕರವಾಗಿದೆ. ಹೆಸರೇ ಸೂಚಿಸುವಂತೆ ಆನ್‌ಲೈನ್ ಸ್ಟೆಟಸ್‌ ಪ್ರಸೆನ್ಸ್‌ ಫೀಚರ್ಸ್‌ ಬಳಕೆದಾರರು ತಮ್ಮ ಆನ್‌ಲೈನ್ ಸ್ಟೇಟಸ್‌ ಅನ್ನು ಆಯ್ದ ಸಂಪರ್ಕಗಳಿಂದ ಮರೆಮಾಡಲು ಸಹಾಯ ಮಾಡಲಿದೆ. ಇದರಿಂದ ನೀವು ನಿಮ್ಮ ಆನ್‌ಲೈನ್ ಸ್ಟೇಟಸ್ ಅನ್ನು ಯಾರು ನೋಡುತ್ತಾರೆ ಎಂಬುದನ್ನು ನಿರ್ಧರಿಸಲು ಸಾದ್ಯವಾಗಲಿದೆ. ಇದರ ಮೂಲಕ ನೀವು ನಿಮ್ಮ ಎಲ್ಲಾ ಸಂಪರ್ಕಗಳಿಗೆ ಆನ್‌ಲೈನ್‌ ಸ್ಟೇಟಸ್‌ನಲ್ಲಿರುವುದನ್ನು ತಿಳಿಯದಂತೆ ಮಾಡಿ ಕೆಲವು ನಿರ್ದಿಷ್ಟ ಜನರೊಂದಿಗೆ ಮಾತ್ರ ಚಾಟ್ ಮಾಡುವುದಕ್ಕೆ ಅವಕಾಶ ನೀಡಲಿದೆ.

ಆನ್‌ಲೈನ್‌

ಆನ್‌ಲೈನ್‌ ಪ್ರೆಸೆನ್ಸ್‌ ಫೀಚರ್ಸ್‌ ನೀವು ಆನ್‌ಲೈನ್‌ನಲ್ಲಿರುವುದನ್ನು ತಿಳಿಸಲಿದೆ. ನೀವು ಆಯ್ಕೆ ಮಾಡಿರುವ ಕೆಲವು ನಿರ್ಧಿಷ್ಟ ಸಂಪರ್ಕಗಳಿಗೆ ನಿಮ್ಮ ಆನ್‌ಲೈನ್‌ ಪೆಸೆನ್ಸ್‌ ಅನ್ನು ತೋರಿಸಲಿದೆ. ಇದರಿಂದ ನೀವು ಸಂವಹನ ನಡೆಸುವುದಕ್ಕೆ ಸಾಧ್ಯವಾಗಲಿದೆ. ಇದರಿಂದ ಅಗತ್ಯ ಸಂಪರ್ಕಗಳಿಗೆ ಮಾತ್ರ ನಿಮ್ಮ ಆನ್‌ಲೈನ್‌ ಪ್ರೆಸೆನ್ಸ್‌ ಕಾಣಲಿದೆ. ಇನ್ನುಳಿದ ಕಂಟ್ಯಾಕ್ಟ್‌ಗಳಿಗೆ ನಿಮ್ಮ ಆನ್‌ಲೈನ್‌ ಪ್ರೆಸೆನ್ಸ್‌ ಕಾಣುವುದಿಲ್ಲ ಎಂದು ಹೇಳಲಾಗಿದೆ.

ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್‌ ಆನ್‌ಲೈನ್‌ ಪ್ರೆಸೆನ್ಸ್‌ ಫೀಚರ್ಸ್‌ ಬಳಸುವುದು ಹೇಗೆ?

ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್‌ ಆನ್‌ಲೈನ್‌ ಪ್ರೆಸೆನ್ಸ್‌ ಫೀಚರ್ಸ್‌ ಬಳಸುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್‌ ತೆರೆಯಿರಿ.
ಹಂತ:2 ಇದರಲ್ಲಿ ಮೋರ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ಇದೀಗ ಸೆಟ್ಟಿಂಗ್ಸ್‌ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ನಂತರ ಪ್ರೈವೆಸಿ ಟ್ಯಾಪ್ ಮಾಡಿ.
ಹಂತ:4 ನಂತರ ಲಾಸ್ಟ್‌ ಸೀನ್‌ ಮತ್ತು ಆನ್‌ಲೈನ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 ಇದಾದ ನಂತರ ನನ್ನ ಸಂಪರ್ಕಗಳನ್ನು ಹೊರತುಪಡಿಸಿ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:6 ಇದೀಗ ನಿಮ್ಮ ಆನ್‌ಲೈನ್ ಸ್ಟೇಟಸ್‌ ಅನ್ನು ಮರೆಮಾಡಲು ಬಯಸುವ ಎಲ್ಲಾ ಸಂಪರ್ಕಗಳನ್ನು ಆಯ್ಕೆಮಾಡಿ.
ಹಂತ:7 ನಂತರ ಮುಗಿದಿದೆ (ಡನ್‌) ಟ್ಯಾಪ್ ಮಾಡಿ.

ಐಫೋನ್‌ನಲ್ಲಿ ವಾಟ್ಸಾಪ್‌ ಆನ್‌ಲೈನ್‌ ಪ್ರೆಸೆನ್ಸ್‌ ಫೀಚರ್ಸ್‌ ಬಳಸುವುದು ಹೇಗೆ?

ಐಫೋನ್‌ನಲ್ಲಿ ವಾಟ್ಸಾಪ್‌ ಆನ್‌ಲೈನ್‌ ಪ್ರೆಸೆನ್ಸ್‌ ಫೀಚರ್ಸ್‌ ಬಳಸುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಐಫೋನ್‌ನಲ್ಲಿ ವಾಟ್ಸಾಪ್‌ ತೆರೆಯಿರಿ
ಹಂತ:2 ಸೆಟ್ಟಿಂಗ್ಸ್‌ ಟ್ಯಾಬ್ ಅನ್ನು ಟ್ಯಾಪ್ ಮಾಡಿ.
ಹಂತ:3 ಪ್ರೈವೆಸಿ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ಇದೀಗ, ನನ್ನ ಸಂಪರ್ಕಗಳನ್ನು ಹೊರತುಪಡಿಸಿ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 ನಂತರ ನಿಮ್ಮ ಆನ್‌ಲೈನ್ ಸ್ಟೇಟಸ್‌ ಅನ್ನು ಹೈಡ್‌ ಮಾಡಲು ಬಯಸುವ ಎಲ್ಲಾ ಸಂಪರ್ಕಗಳನ್ನು ಆಯ್ಕೆಮಾಡಿ.
ಹಂತ:6 ಮುಗಿದಿದೆ(ಡನ್‌) ಟ್ಯಾಪ್ ಮಾಡಿ.

ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್‌ ಆನ್‌ಲೈನ್ ಸ್ಟೇಟಸ್‌ ಫೀಚರ್ಸ್‌ ಬಳಸುವುದು ಹೇಗೆ?

ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್‌ ಆನ್‌ಲೈನ್ ಸ್ಟೇಟಸ್‌ ಫೀಚರ್ಸ್‌ ಬಳಸುವುದು ಹೇಗೆ?

ಹಂತ:1 ಕಂಪ್ಯೂಟರ್‌ನಲ್ಲಿ ವಾಟ್ಸಾಪ್‌ ಡೆಸ್ಕ್‌ಟಾಪ್ ಅಪ್ಲಿಕೇಶನ್ ತೆರೆಯಿರಿ.
ಹಂತ:2 ಇದೀಗ ಮೆನು ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:3 ನಂತರ ಸೆಟ್ಟಿಂಗ್ಸ್ ಆಯ್ಕೆಗೆ ಹೋಗಿ ಪ್ರೈವೆಸಿ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:4 ಇದರಲ್ಲಿ ನನ್ನ ಸಂಪರ್ಕಗಳನ್ನು ಹೊರತುಪಡಿಸಿ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:5 ನಿಮ್ಮ ಆನ್‌ಲೈನ್ ಸ್ಟೇಟಸ್‌ ಹೈಡ್‌ ಮಾಡಲು ಬಯಸುವ ಎಲ್ಲಾ ಸಂಪರ್ಕಗಳನ್ನು ಆಯ್ಕೆಮಾಡಿ.
ಹಂತ:6 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮುಗಿದಿದೆ ಟ್ಯಾಪ್ ಮಾಡಿ.

Best Mobiles in India

English summary
whatsapp launched another feature called Online Presence.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X