ವಾಟ್ಸಾಪ್‌ ಲೊಕೇಶನ್‌ ಶೇರ್‌ ಫೀಚರ್ಸ್‌ ಅನ್ನು ಹೇಗೆಲ್ಲಾ ಬಳಸಬಹುದು ಗೊತ್ತಾ?

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಹಲವು ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇನ್ನು ವಾಟ್ಸಾಪ್‌ ಒಳಗೊಂಡಿರುವ ಅನೇಕ ಫೀಚರ್ಸ್‌ಗಳಲ್ಲಿ ವಾಟ್ಸಾಪ್‌ ಲೊಕೇಶನ್‌ ಶೇರ್‌ ಫೀಚರ್ಸ್‌ ಸಾಕಷ್ಟು ಅನುಕೂಲಕರವಾಗಿದೆ. ವಾಟ್ಸಾಪ್‌ ಲೊಕೇಶನ್‌ ಶೇರ್‌ ಮೂಲಕ ನಿಮ್ಮ ಸ್ನೇಹಿತರು, ಇಲ್ಲವೆ ಅವಶಕ್ಯತೆ ಇರುವವರಿಗೆ ನೀವು ಎಲ್ಲಿದ್ದೀರಿ ಎಂದು ತಿಳಿಸಲು ಸಹಾಯ ಮಾಡಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಲೊಕೇಶನ್‌ ಶೇರ್‌ ಮೂಲಕ ನೀವು ಎಲ್ಲಿದ್ದೀರಿ ಅನ್ನೊದನ್ನ ನಿಮ್ಮ ಸ್ನೇಹಿತರಿಗೆ ಸುಲಭವಾಗಿ ತಿಳಿಸಬಹುದು. ಅಲ್ಲದೆ ನೀವು ಕೂಡ ನಿಮ್ಮ ಸ್ನೇಹಿತರು ಇರುವ ಸ್ಥಳಕ್ಕೆ ಪ್ರಯಾಣ ಮಾಡುತ್ತಿದ್ದು, ದಾರಿ ತಿಳಿಯದೆ ಹೋದರೆ ಅವರಿಂದ ವಾಟ್ಸಾಪ್‌ ಲೊಕೇಶನ್‌ ಕಳುಹಿಸಿಕೊಳ್ಳುವ ಮೂಲಕ, ಯಾರ ಸಹಾಯವಿಲ್ಲದೆ ಅಂದುಕೊಂಡ ಸ್ಥಳವನ್ನು ತಲುಪಲು ಇದು ಸಹಾಯಕಾರಿಯಾಗಿದೆ. ಆದರೂ ಕೆಲವರಿಗೆ ವಾಟ್ಸಾಪ್‌ ಲೊಕೇಶನ್‌ ಬಳಸುವಾದ ಗೊಂದಲ ಇದೆ. ಆದರಿಂದ ವಾಟ್ಸಾಪ್‌ನಲ್ಲಿ ಯಾವಾಗ ಯಾವ ಮಾದರಿಯ ಲೊಕೇಶನ್‌ ಶೇರ್‌ ಬಳಸಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಲೊಕೇಶನ್‌ ಶೇರ್‌ ಫೀಚರ್ಸ್‌ ವಿಶೇಷ

ವಾಟ್ಸಾಪ್ ಲೊಕೇಶನ್‌ ಶೇರ್‌ ಫೀಚರ್ಸ್‌ ವಿಶೇಷ

ವಾಟ್ಸಾಪ್‌ನಲ್ಲಿ ಲೊಕೇಶನ್‌ ಶೇರ್‌ ಅನ್ನು ಎರಡು ರೂಪಗಳಲ್ಲಿ ಮಾಡಬಹುದು. ಮೊದಲನೆಯದು ಕರೆಂಟ್‌ ಲೊಕೇಶನ್‌ ಶೇರ್‌ ಆಯ್ಕೆ ಇದರಲ್ಲಿ ಬಳಕೆದಾರರು ತಮ್ಮ ಪ್ರಸ್ತುತ ಸ್ಥಳವನ್ನು ವೈಯಕ್ತಿಕ ಸಂಪರ್ಕದೊಂದಿಗೆ ಅಥವಾ ಗುಂಪಿನಲ್ಲಿ ಒಂದು ಬಾರಿ ಹಂಚಿಕೊಳ್ಳಬಹುದು. ಆದರೆ ಇನ್ನೊಂದು ಲೈವ್ ಸ್ಥಳ ಹಂಚಿಕೆ ಆಯ್ಕೆಯಾಗಿದ್ದು, ಬಳಕೆದಾರರು ತಮ್ಮ ಸ್ಥಳವನ್ನು ಪೂರ್ವಭಾವಿಯಾಗಿ ನಿರಂತರವಾಗಿ ಹಂಚಿಕೊಳ್ಳಬಹುದಾಗಿದೆ. ಇನ್ನು ವಾಟ್ಸಾಪ್‌ನಲ್ಲಿ ಲೊಕೇಶನ್‌ ಶೇರ್‌ ಮಾಡುವುದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ವಾಟ್ಸಾಪ್‌ನಲ್ಲಿ ನಿಮ್ಮ ಕರೆಂಟ್‌ ಲೊಕೇಶನ್‌ ಅನ್ನು ಶೇರ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ನಿಮ್ಮ ಕರೆಂಟ್‌ ಲೊಕೇಶನ್‌ ಅನ್ನು ಶೇರ್‌ ಮಾಡುವುದು ಹೇಗೆ?

ಹಂತ:1 ನಿಮ್ಮ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ.
ಹಂತ:2 ನೀವು ಸ್ಥಳವನ್ನು ಕಳುಹಿಸಲು ಬಯಸುವ ನಿರ್ದಿಷ್ಟ ವ್ಯಕ್ತಿಯ ಚಾಟ್‌ ತೆರೆಯಿರಿ.
ಹಂತ:3 ನೀವು ಟೈಪ್ ಮಾಡುವ ಪೆಟ್ಟಿಗೆಯಲ್ಲಿ, ಪೇಪರ್‌ಕ್ಲಿಪ್ ಚಿತ್ರದ ಮೇಲೆ ಕ್ಲಿಕ್ ಮಾಡಿ(ಕ್ಯಾಮೆರಾದ ಚಿತ್ರದ ಪಕ್ಕದಲ್ಲಿ).
ಹಂತ:4 ನಂತರ ಲೊಕೇಶನ್‌ ಆಯ್ಕೆಯನ್ನು ಟ್ಯಾಪ್ ಮಾಡಿ. ಪಾಪ್ಅಪ್ ನಂತರ ನಿಮ್ಮ ಕರೆಂಟ್‌ ಲೊಕೇಶನ್‌ ಹಂಚಿಕೊಳ್ಳಲು ನಿಮ್ಮನ್ನು ಕೇಳುತ್ತದೆ.
ಹಂತ:5 ಈಗ, ನಿಮ್ಮ ಕರೆಂಟ್‌ ಲೊಕೇಶನ್‌ ಸೆಂಡ್‌ ಆಯ್ಕೆಯನ್ನು ಟ್ಯಾಪ್ ಮಾಡಿ.

ಲೊಕೇಶನ್‌

ಇನ್ನು ನೀವು ಕೆಲವೊಮ್ಮೆ ನಿಖರವಾದ ಮನೆ ಬಾಗಿಲನ್ನು ತಲುಪುವ ಸಂದರ್ಭ ಬರಬಹುದು. ಇಂತಹ ಸನ್ನಿವೇಶದಲ್ಲಿ ನೀವು ಲೈವ್‌ ಲೊಕೇಶನ್‌ ಕಳುಹಿಸಿಕೊಡುವಂತೆ ಕೇಳುವುದು ಉತ್ತಮ. ಏಕೆಂದರೆ ಲೈವ್‌ ಲೊಕೇಶನ್‌ ಅನ್ನು ಸೆಂಡ್‌ ಮಾಡಿದ್ದರೆ ನೀವು ತಲುಪಬೇಕಾದ ಸ್ಥಳ ಮಾರ್ಗದ ವಿವರವನ್ನು ಹಂತಹಂವಾಗಿ ತಿಳಿದುಕೊಳ್ಳಬಹುದಾಗಿರುತ್ತದೆ. ಇದಕ್ಕಾಗಿ ಹೆಚ್ಚಿನ ಮಂದಿ ಲೈವ್‌ ಲೊಕೇಶನ್‌ ಅನ್ನು ಸಹ ಕಳುಹಿಸುತ್ತಾರೆ. ಇನ್ನು ನೀವು ಕೂಡ ನಿಮ್ಮ ಸ್ನೇಹಿತರಿಗೆ ವಾಟ್ಸಾಪ್‌ ಲೈವ್‌ ಲೊಕೇಶನ್‌ ಶೇರ್‌ ಮಾಡೊಕೆ ಕೆಳಗಿನ ಹಂತಗಳನ್ನು ಅನುಸರಿಸಿ.

ವಾಟ್ಸಾಪ್‌ನಲ್ಲಿ ನಿಮ್ಮ ಲೈವ್ ಲೊಕೇಶನ್‌ ಅನ್ನು ಶೇರ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ನಿಮ್ಮ ಲೈವ್ ಲೊಕೇಶನ್‌ ಅನ್ನು ಶೇರ್‌ ಮಾಡುವುದು ಹೇಗೆ?

ಹಂತ:1 ನಿಮ್ಮ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ.
ಹಂತ:2 ನೀವು ಸ್ಥಳವನ್ನು ಕಳುಹಿಸಲು ಬಯಸುವ ನಿರ್ದಿಷ್ಟ ವ್ಯಕ್ತಿಯ ಚಾಟ್‌ ತೆರೆಯಿರಿ.
ಹಂತ:3 ನೀವು ಟೈಪ್ ಮಾಡುವ ಪೆಟ್ಟಿಗೆಯಲ್ಲಿ, ಪೇಪರ್‌ಕ್ಲಿಪ್ ಚಿತ್ರದ ಮೇಲೆ ಕ್ಲಿಕ್ ಮಾಡಿ(ಕ್ಯಾಮೆರಾದ ಚಿತ್ರದ ಪಕ್ಕದಲ್ಲಿ).
ಹಂತ:4 ನಂತರ ಲೊಕೇಶನ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 ಈಗ, ಶೇರ್‌ ಲೈವ್ ಲೊಕೇಶನ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:6 ಸಮಯದ ಚೌಕಟ್ಟನ್ನು ಆರಿಸಿ, 15 ನಿಮಿಷಗಳು, 1 ಗಂಟೆ ಅಥವಾ 8 ಗಂಟೆಗಳು.
ಹಂತ:7 ಶೀರ್ಷಿಕೆ ಸೇರಿಸಿ ಮತ್ತು ಸೆಂಡ್‌ ಬಟನ್ ಟ್ಯಾಪ್ ಮಾಡಿ.
ಹಂತ:8 ನಂತರ ಶೇರ್‌ ಸ್ಟಾಪ್‌ ಬಟನ್‌ನಲ್ಲಿ ಲೈವ್‌ ಲೊಕೇಶನ್‌ ಶೇರ್‌ ಅನ್ನು ಹಂಚಿಕೆಯನ್ನು ನಿಲ್ಲಿಸಬಹುದು.

Best Mobiles in India

English summary
Whatsapp location share feature ensures you get to your destination with as little effort as possible and takes the uncertainty out of the journey.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X