ವಾಟ್ಸಾಪ್‌ನ ಈ ಬಹುನಿರೀಕ್ಷಿತ ಫೀಚರ್ಸ್‌ ಇದೀಗ ಎಲ್ಲರಿಗೂ ಲಭ್ಯ!

|

ಮೆಟಾ ಒಡೆತನದ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಬಹಳ ದಿನಗಳಿಂದ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ವಾಯ್ಸ್ ಮೆಸೇಜ್ ಪ್ರಿವ್ಯೂ ಇದೀಗ ವಾಟ್ಸಾಪ್‌ ಪ್ಲಾಟ್‌ಫಾರ್ಮ್‌ ಸೇರಿದೆ. ಇನ್ನು ಈ ಫೀಚರ್ಸ್‌ ಬಳಕೆದಾರರು ವಾಯ್ಸ್‌ ಮೆಸೇಜ್‌ ಕಳುಹಿಸುವ ಮೊದಲು ವಾಯ್ಸ್ ಮೆಸೇಜ್ ಗಳನ್ನು ಕೇಳಲು ಅನುವು ಮಾಡಿಕೊಡುತ್ತದೆ. ಇದರಿಂದ ವಾಯ್ಸ್‌ ಮೆಸೇಜ್‌ ಕಳುಹಿಸುವವರು ತಾವು ಸೆಂಡ್‌ ಮಾಡುವ ವಾಯ್ಸ್‌ ಮೆಸೇಜ್‌ ಸರಿ ಇದೆಯಾ ಅನ್ನೊದನ್ನ ಪರಿಶೀಲಿಸಬಹುದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಾಯ್ಸ್ ಮೆಸೇಜ್ ಪ್ರಿವ್ಯೂ ಫೀಚರ್ಸ್‌ ಪರಿಚಯಿಸಿದೆ. ಈ ಮೂಲಕ ಬಳಕೆದಾರರಿಗೆ ವಾಯ್ಸ್‌ ಮೆಸೇಜ್‌ನಲ್ಲಿ ಹೊಸ ಅನುಭವ ನೀಡಲು ಮುಂದಾಗಿದೆ. ಟೆಕ್ಸ್ಟ್‌ ಮೆಸೇಜ್‌ಗಿಂತ ವಾಯ್ಸ್‌ ಮೆಸೇಜ್‌ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಇದೇ ಕಾರಣಕ್ಕೆ ವಾಯ್ಸ್‌ ಮೆಸೇಜ್‌ನಲ್ಲಿ ಹೊಸ ಹೊಸ ಬದಲಾವಣೆಗಳಿಗೆ ವಾಟ್ಸಾಪ್‌ ಮುಂದಾಗಿದೆ. ಹಾಗಾದ್ರೆ ವಾಯ್ಸ್ ಮೆಸೇಜ್ ಪ್ರಿವ್ಯೂ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ತನ್ನ ವಾಯ್ಸ್‌ ಮೆಸೇಜ್‌ನಲ್ಲಿ ವಾಯ್ಸ್ ಮೆಸೇಜ್ ಪ್ರಿವ್ಯೂ ಫೀಚರ್ಸ್‌ ಪರಿಚಯಿಸಿದೆ. ಇದು ನಿಮ್ಮ ವಾಯ್ಸ್‌ ಮೆಸೇಜ್‌ ಅನ್ನು ಕಳುಹಿಸುವುದಕ್ಕು ಮೊದಲು ಪ್ರಿವ್ಯೂ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದರಿಂದ ನೀವು ನಿಮ್ಮ ಸಂದೇಶವನ್ನು ಸರಿಯಾಗಿ ಕಳುಹಿಸಿದ್ದೀರಾ ಇಲ್ಲವೇ ಅನ್ನೊದನ್ನ ಪರಿಶೀಲಿಸಲು ಅವಕಾಶ ನೀಡಲಿದೆ. ಇದರಿಂದ ನೀವು ಟೆಕ್ಸ್ಟ್‌ ಮೆಸೇಜ್‌ ಮಾಡುವುದಕ್ಕಿಂತ ಪರಿಣಾಮಕಾರಿಯಾಗಿ ವಾಯ್ಸ್‌ಮೆಸೇಜ್‌ ಅನ್ನು ಮಾಡುವುದಕ್ಕೆ ಸಾಧ್ಯವಾಗಲಿದೆ. ಇದರಿಂದ ಕರೆಗಿಂತ ಭಿನ್ನವಾಗಿ, ನಿಮಗೆ ಸಂದೇಶವನ್ನು ನೀಡುವ ಸ್ವಾತಂತ್ರ್ಯವನ್ನು ನೀಡಲಿದೆ.

ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಪ್ರಿವ್ಯೂ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಪ್ರಿವ್ಯೂ ಮಾಡುವುದು ಹೇಗೆ?

ಹಂತ:1 ಮೊದಲಿಗೆ ವಾಟ್ಸಾಪ್‌ನಲ್ಲಿ ವೈಯಕ್ತಿಕ ಅಥವಾ ಗ್ರೂಪ್‌ ಚಾಟ್ ತೆರೆಯಿರಿ.
ಹಂತ:2 ಮೈಕ್ರೊಫೋನ್ ಅನ್ನು ಟ್ಯಾಪ್‌ಮಾಡಿ ಮತ್ತು ಹ್ಯಾಂಡ್ಸ್-ಫ್ರೀ ರೆಕಾರ್ಡಿಂಗ್ ಅನ್ನು ಲಾಕ್ ಮಾಡಲು ಅದನ್ನು ಮೇಲಕ್ಕೆ ಸ್ಲೈಡ್ ಮಾಡಿ.
ಹಂತ:3 ಇದೀಗ ಮಾತನಾಡಲು ಪ್ರಾರಂಭಿಸಿ.
ಹಂತ:4 ನಿಮ್ಮ ವಾಯ್ಸ್‌ ರೆಕಾರ್ಡ್‌ ಮುಗಿದ ನಂತರ, ಸ್ಟಾಪ್‌ ಟ್ಯಾಪ್ ಮಾಡಿ.
ಹಂತ:5 ನಿಮ್ಮ ರೆಕಾರ್ಡಿಂಗ್ ಕೇಳಲು ಪ್ಲೇ ಟ್ಯಾಪ್ ಮಾಡಿ. ಇದರಲ್ಲಿ ಟೈಮ್‌ಸ್ಟ್ಯಾಂಪ್‌ನಿಂದ ಅದನ್ನು ಪ್ಲೇ ಮಾಡಲು ನೀವು ರೆಕಾರ್ಡಿಂಗ್‌ನ ಯಾವುದೇ ಭಾಗವನ್ನು ಟ್ಯಾಪ್ ಮಾಡಬಹುದು.
ಹಂತ:6 ನಂತರ ನಿಮ್ಮ ವಾಯ್ಸ್‌ ಮೆಸೇಜ್‌ ಧ್ವನಿ ಸಂದೇಶವನ್ನು ಡಿಲೀಟ್‌ ಮಾಡಲು ಟ್ರಾಶ್‌ ಕ್ಯಾನ್ ಅನ್ನು ಟ್ಯಾಪ್ ಮಾಡಿ ಅಥವಾ ಅದನ್ನು ಸೆಂಡ್‌ ಮಾಡಲು ಸೆಂಡ್‌ ಟ್ಯಾಪ್ ಮಾಡಿ.

ವಾಯ್ಸ್‌ ಮೆಸೇಜ್‌ ಪ್ಲೇಬ್ಯಾಕ್ ಅನ್ನು ಸ್ಪೀಡ್‌ ಮಾಡುವುದು ಹೇಗೆ?

ವಾಯ್ಸ್‌ ಮೆಸೇಜ್‌ ಪ್ಲೇಬ್ಯಾಕ್ ಅನ್ನು ಸ್ಪೀಡ್‌ ಮಾಡುವುದು ಹೇಗೆ?

ಹಂತ:1 ನೀವು ಕಳುಹಿಸಿದ ಅಥವಾ ಸ್ವೀಕರಿಸಿದ ವಾಯ್ಸ್‌ ಮೆಸೇಜ್‌ಗಳನ್ನು ಕೇಳಲು ಪ್ಲೇ ಕ್ಲಿಕ್ ಮಾಡಿ.
ಹಂತ:2 ನಂತರ ನಿಮ್ಮ ಮೆಸೇಜ್‌ ಅನ್ನು ಆಲಿಸಿ.
ಹಂತ:3 ಮೆಸೇಜ್‌ ಪ್ಲೇ ಆಗುತ್ತಿರುವಾಗ, ವೇಗವನ್ನು 1.5x ಅಥವಾ 2x ಗೆ ಹೆಚ್ಚಿಸಲು ನೀವು 1x ಐಕಾನ್ ಅನ್ನು ಕ್ಲಿಕ್ ಮಾಡಬಹುದು.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇತ್ತಿಚಿಗೆ ತನ್ನ ಲಾಸ್ಟ್‌ ಸೀನ್‌ ಹಾಗೂ ಆನ್‌ಲೈನ್‌ ಸ್ಟೇಟಸ್‌ ಫೀಚರ್ಸ್‌ನಲ್ಲಿ ಹೊಸ ಮಿತಿಯನ್ನು ಜಾರಿಗೊಳಿಸಿದೆ. ಅದರಂತೆ ನೀವು ಚಾಟ್‌ ಮಾಡದ ನಿಮ್ಮ ಸ್ನೆಹಿತರ ಲಾಸ್ಟ್‌ ಸೀನ್‌ ಹಾಗೂ ಆನ್‌ಲೈನ್‌ ಸ್ಟೇಟಸ್‌ ಅನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳ ಮೂಲಕ ಲಾಸ್ಟ್‌ ಸೀನ್‌ ಲಾಗ್‌ ಟೈಂ ಮೂಲಕ ಡೇಟಾ ಹ್ಯಾಕ್‌ ಮಾಡುವ ಸಾದ್ಯತೆ ಇದೆ ಎನ್ನಲಾಗಿದೆ. ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳು 'ಆನ್‌ಲೈನ್' ಸ್ಟೇಟಸ್‌ ಟೈಂ ಮತ್ತು 'ಲಾಸ್ಟ್‌ ಸೀನ್‌' ಟೈಂ ಅನ್ನು ಲಾಗ್ ಮಾಡಲು ಅಪ್ಲಿಕೇಶನ್‌ನಿಂದ ಡೇಟಾವನ್ನು ಪ್ರವೇಶಿಸಬಹುದು. ಅಂತಹ ಅಪ್ಲಿಕೇಶನ್‌ಗಳು ನಿಮ್ಮ ಡೇಟಾವನ್ನು ಪ್ರವೇಶಿಸುವುದನ್ನು ತಡೆಯಲು ವಾಟ್ಸಾಪ್‌ ಹೊಸ ಸೆಕ್ಯುರಿಟಿ ಫೀಚರ್ಸ್‌ ಪರಿಚಯಿಸಿದೆ. ವಾಟ್ಸಾಪ್‌ನ ಹೊಸ ಕ್ರಮದಿಂದ ನೀವು ಚಾಟ್‌ ಮಾಡದ ವ್ಯಕ್ತಿ ಹಾಗೂ ನೀವು ಇಬ್ಬರೂ ಕೂಡ ಆನ್‌ಲೈನ್‌ನಲ್ಲಿ ಆಕ್ಟಿವ್‌ ಆಗಿದ್ದರೂ ನಿಮಗೆ ಲಾಸ್ಟ್‌ ಸೀನ್‌ ಟೈಂ ಕಾಣುವುದಿಲ್ಲ. ಕೆಲವು ಚಾಟ್ ಹಿಸ್ಟರಿ ಹೊರತು ಬಳಕೆದಾರರು ಅದನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಆನ್‌ಲೈನ್ ಸ್ಟೇಟಸ್ ಕೂಡ ಕಾಣಿಸುವುದಿಲ್ಲ

Best Mobiles in India

English summary
Instant messaging platform WhatsApp has announced a new feature for voice messages that enables users to hear voice messages before sending it.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X