ವಾಟ್ಸಾಪ್‌ ಚಾಟ್‌ಗಳನ್ನು ಆಂಡ್ರಾಯ್ಡ್‌ನಿಂದ ಐಫೋನ್‌ಗೆ ವರ್ಗಾಯಿಸುವುದು ಇನ್ನು ಸುಲಭ!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಬಳಸುವ ಪ್ರತಿಯೊಬ್ಬರೂ ಕೂಡ ವಾಟ್ಸಾಪ್‌ ಬಳಸುವುದು ಸಾಮಾನ್ಯವಾಗಿಬಿಟ್ಟಿದೆ. ಟೆಕ್ಸ್ಟ್‌ ಮೆಸೇಜ್‌, ವಾಯ್ಸ್‌ ನೋಟ್‌, ವೀಡಿಯೊ ಕಾಲ್‌ ಎಲ್ಲದಕ್ಕೂ ಕೂಡ ವಾಟ್ಸಾಪ್‌ ಅನ್ನೇ ಹೆಚ್ಚಿನ ಜನ ಬಳಸುತ್ತಿದ್ದಾರೆ. ಇದೇ ಕಾರಣಕ್ಕೆ ವಾಟ್ಸಾಪ್‌ ಕೂಡ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ವಾಟ್ಸಾಪ್‌ ತನ್ನ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಿದ್ದು, ಇದರಲ್ಲಿ ಬಳಕೆದಾರರು ತಮ್ಮ ಚಾಟ್‌ಗಳನ್ನು ಆಂಡ್ರಾಯ್ಡ್‌ ಫೋನ್‌ನಿಂದ ಐಫೋನ್‌ಗೆ ವರ್ಗಾಯಿಸಲು ಅನುಮತಿಸಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬಳಕೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಿದೆ. ಈ ಅಪ್ಡೇಟ್‌ ಮೂಲಕ ಬಳಕೆದಾರರು ತಮ್ಮ ಚಾಟ್‌ಗಳನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಂದ ಆಪಲ್‌ನ ಐಫೋನ್‌ಗಳಿಗೆ ವರ್ಗಾಯಿಸಲು ಅನುಮತಿಸುತ್ತದೆ. 'ಮೂವ್‌ ಟು ಐಒಎಸ್‌' ಅಪ್ಲಿಕೇಶನ್‌ನ ಭಾಗವಾಗಿ ಈ ಫೀಚರ್ಸ್‌ ಲಭ್ಯವಾಗಲಿದೆ. ಹೊಸ ಐಫೋನ್ ಸೆಟ್‌ ಮಾಡುವ ಸಮಯದಲ್ಲಿ ಈ ಆಯ್ಕೆಯನ್ನು ಪಡೆಯಲಿದ್ದಾರೆ. ಹಾಗಾದ್ರೆ ವಾಟ್ಸಾಪ್‌ನ ಹೊಸ ಅಪ್ಡೇಟ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ತನ್ನ ಹೊಸ ಅಪ್ಡೇಟ್‌ನಲ್ಲಿ ಚಾಟ್‌ ಟ್ರಾನ್ಸ್‌ಫರ್‌ ಮಾಡುವುದಕ್ಕೆ ಹೊಸ ಅವಕಾಶ ನೀಡಿದೆ. ಇದರಿಂದ ಆಂಡ್ರಾಯ್ಡ್‌ ಬಳಕೆದಾರರು ಐಫೋನ್‌ಗೆ ಸುಲಭವಾಗಿ ಚಾಟ್‌ ಟ್ರಾನ್ಸ್‌ಫರ್‌ ಮಾಡಬಹುದಾಗಿದೆ. ಇನ್ನು ಆಫಲ್‌ ಐಫೋನ್‌ ಬಳಕೆದಾರರು ಈ ಹೊಸ ಅಪ್ಡೇಟ್‌ ಅನ್ನು ಬಳಸಲು ತಮ್ಮ ಫೋನ್‌ಗಳನ್ನು ಬ್ಯಾಕಪ್ ಮತ್ತು ಫ್ಯಾಕ್ಟರಿ ರೀಸೆಟ್ ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ ನಿಮ್ಮ ಚಾಟ್ ಹಿಸ್ಟರಿ , ಫೋಟೋಗಳು, ವೀಡಿಯೊಗಳು ಮತ್ತು ಧ್ವನಿ ಸಂದೇಶಗಳನ್ನು ಆಂಡ್ರಾಯ್ಡ್‌ ಮತ್ತು ಐಫೋನ್‌ ನಡುವೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ನಿರ್ವಹಿಸುವ ಮೂಲಕ ವರ್ಗಾಯಿಸುತ್ತೇವೆ ಎಂದು ಮೆಟಾ ಕಂಪೆನಿ ಸಿಇಒ ಮಾರ್ಕ್‌ ಜುಕರ್‌ ಬರ್ಗ್‌ ಹೇಳಿದ್ದಾರೆ.

ಆಂಡ್ರಾಯ್ಡ್

ಇನ್ನು ಇಲ್ಲಿಯತನಕ ಆಂಡ್ರಾಯ್ಡ್ ಮತ್ತು ಐಫೋನ್‌ಗಳ ನಡುವೆ ವಾಟ್ಸಾಪ್‌ ಡೇಟಾವನ್ನು ಟ್ರಾನ್ಸ್‌ಫರ್‌ ಮಾಡಲು ಯಾವುದೇ ಮಾರ್ಗವಿರಲಿಲ್ಲ. ಇದಕ್ಕಾಗಿ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಬೇಕಾಗಿತ್ತು. ಇನ್ನು ಈ ಅಪ್ಲಿಕೇಶನ್‌ಗಳ ವಿಶ್ವಾಸಾರ್ಹತೆಗೆ ಸೂಕ್ತವಲ್ಲ. ಸದ್ಯ ಇದೀಗ ವಾಟ್ಸಾಪ್‌ ಸೇರಿರುವ ಹೊಸ ಫೀಚರ್ಸ್‌ ನೀವು ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಬಳಸುವುದನ್ನು ತಡೆಯಲಿದೆ. ಈ ಫೀಚರ್ಸ್‌ ಪ್ರಸ್ತುತ ಬೀಟಾ ವರ್ಷನ್‌ನಲ್ಲಿದ್ದು, ಒಂದು ವಾರದೊಳಗೆ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ ಎನ್ನಲಾಗಿದೆ.

ವಾಟ್ಸಾಪ್‌ ಚಾಟ್‌ಗಳನ್ನು ಆಂಡ್ರಾಯ್ಡ್‌ನಿಂದ ಐಫೋನ್‌ಗೆ ವರ್ಗಾಯಿಸುವುದು ಹೇಗೆ?

ವಾಟ್ಸಾಪ್‌ ಚಾಟ್‌ಗಳನ್ನು ಆಂಡ್ರಾಯ್ಡ್‌ನಿಂದ ಐಫೋನ್‌ಗೆ ವರ್ಗಾಯಿಸುವುದು ಹೇಗೆ?

ಹಂತ:1 ಆಂಡ್ರಾಯ್ಡ್‌ ಫೋನ್‌ನಲ್ಲಿ ಮೂವ್‌ ಟು ಐಒಎಸ್‌ ಅಪ್ಲಿಕೇಶನ್ ತೆರೆಯಬೇಕು.
ಹಂತ:2 ನಂತರ ಆನ್-ಸ್ಕ್ರೀನ್ ಪ್ರಾಂಪ್ಟ್‌ನಲ್ಲಿ ಬರುವ ಮಾಹಿತಿಯನ್ನು ಅನುಸರಿಸಬೇಕು.
ಹಂತ:3 ಇದೀಗ ನಿಮ್ಮ ಐಫೋನ್‌ನಲ್ಲಿ ಕೋಡ್ ಅನ್ನು ಪ್ರದರ್ಶಿಸಲಾಗುತ್ತದೆ.
ಹಂತ:4 ಇದನ್ನು ಪ್ರಾಂಪ್ಟ್ ಮಾಡಿದಾಗ, ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ಕೋಡ್ ಅನ್ನು ನಮೂದಿಸಿ.
ಹಂತ:5 ಈಗ ಕಂಟಿನ್ಯೂ ಟ್ಯಾಪ್ ಮಾಡಿ ಮತ್ತು ಆನ್-ಸ್ಕ್ರೀನ್ ಪ್ರಾಂಪ್ಟ್‌ಗಳನ್ನು ಅನುಸರಿಸಿ.
ಹಂತ:6 ನಂತರ ಟ್ರಾನ್ಸಫರ್‌ ಡೇಟಾ ಸ್ಕ್ರೀನ್‌ನಲ್ಲಿ ವಾಟ್ಸಾಪ್‌ ಆಯ್ಕೆಮಾಡಿ.
ಹಂತ:7 ಈಗ ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ 'ಸ್ಟಾರ್ಟ್‌' ಟ್ಯಾಪ್ ಮಾಡಿ
ಹಂತ:8 ನಂತರ ನೀವು ಟ್ರಾನ್ಸಫರ್‌ ಮಾಡಬೇಕಾದ ವಾಟ್ಸಾಪ್‌ ಡೇಟಾವನ್ನು ಆಯ್ಕೆ ಮಾಡಿ
ಹಂತ:9 ಡೇಟಾವನ್ನು ಸಿದ್ದಪಡಿಸಿದ ನಂತರ ನಿಮ್ಮ ಆಂಡ್ರಾಯ್ಡ್‌ ಫೋನ್‌ನಿಂದ ನೀವು ಸೈನ್ ಔಟ್ ಆಗುತ್ತೀರಿ.
ಹಂತ:10 ಈಗ ನಿಮ್ಮ iOS ಅಪ್ಲಿಕೇಶನ್‌ಗೆ ಸರಿಸಲು ಹಿಂತಿರುಗಲು 'ನೆಕ್ಸ್ಟ್‌' ಟ್ಯಾಪ್ ಮಾಡಿ.
ಹಂತ:11 ನಿಮ್ಮ ಆಂಡ್ರಾಯ್ಡ್‌ ಫೋನ್‌ನಿಂದ ನಿಮ್ಮ ಐಫೋನ್‌ಗೆ ಡೇಟಾವನ್ನು ವರ್ಗಾಯಿಸಲು 'ಕಂಟಿನ್ಯೂ' ಟ್ಯಾಪ್ ಮಾಡಿ.
ಹಂತ:12 ಇದೀಗ ವರ್ಗಾವಣೆ ಪೂರ್ಣಗೊಂಡಿದೆ ಎಂದು ಖಚಿತಪಡಿಸಲು iOS ನಲ್ಲಿ ನಿರೀಕ್ಷಿಸಿ.
ಹಂತ:13 ನಂತರ ಆಪ್ ಸ್ಟೋರ್‌ನಿಂದ ವಾಟ್ಸಾಪ್‌ನ ಹೊಸ ಆವೃತ್ತಿಯನ್ನು ಇನ್‌ಸ್ಟಾಲ್‌ ಮಾಡಿರಿ.
ಹಂತ:14 ಇದೀಗ ವಾಟ್ಸಾಪ್‌ ತೆರೆಯಿರಿ ಮತ್ತು ನಿಮ್ಮ ಹಳೆಯ ಡಿವೈಸ್‌ನಲ್ಲಿ ಬಳಸಿದ ಫೋನ್ ಸಂಖ್ಯೆಯನ್ನು ಬಳಸಿಕೊಂಡು ಲಾಗ್ ಇನ್ ಮಾಡಿ.
ಹಂತ:15 ನಂತರ ಕಾಣುವ ಪ್ರಾಂಪ್ಟ್‌ನಲ್ಲಿ ಸ್ಟಾರ್ಟ್‌ ಟ್ಯಾಪ್‌ ಮಾಡಿ ಮತ್ತು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅನುಮತಿಸಿ.
ಹಂತ:16 ಇದೀಗ ನೀವು ನಿಮ್ಮ ಹೊಸ ಡಿವೈಸ್‌ನಲ್ಲಿ ನಿಮ್ಮ ಹಳೆ ಡಿವೈಸ್‌ನಲ್ಲಿದ್ದ ಚಾಟ್‌ಗಳನ್ನು ಕಾಣಬಹುದಾಗಿದೆ.

ಆಂಡ್ರಾಯ್ಡ್‌

ಪ್ರಸ್ತುತ ಆಂಡ್ರಾಯ್ಡ್‌ 5 ಅಥವಾ ಅದಕ್ಕೂ ಮೇಲಿನ ಆವೃತ್ತು ಹಾಗೂ iOS 15.5 ಅಥವಾ ನಂತರದ ಆವೃತ್ತಿಯ ಡಿವೈಸ್‌ ಬಳಸುವವರು ಈ ಹೊಸ ಫೀಚರ್ಸ್‌ ಬಳಸಬಹುದಾಗಿದೆ. ಇದಲ್ಲದೆ ಬಳಕೆದಾರರು ತಮ್ಮ ಫೋನ್‌ಗಳು ಚಾರ್ಜಿಂಗ್‌ ಮತ್ತು ವೈ-ಫೈ ನೆಟ್‌ವರ್ಕ್‌ ಕನೆಕ್ಟ್‌ ಆಗಿವೆ ಅನ್ನೊದನ್ನ ಖಚಿತಪಡಿಸುವ ಕೆಲವು ಬೇಸಿಕ್‌ ಪ್ರಾಕ್ಟಿಸ್‌ ಅನ್ನು ಅನುಸರಿಸಬೇಕಾಗುತ್ತದೆ. ಇನ್ನು ಈ ಎರಡೂ ಫೋನ್‌ಗಳು ಒಂದೇ ವೈ-ಫೈ ನೆಟ್‌ವರ್ಕ್‌ನಲ್ಲಿ ಇಲ್ಲದಿದ್ದರೆ, ಬಳಕೆದಾರರು ತಮ್ಮ ಆಂಡ್ರಾಯ್ಡ್ ಡಿವೈಸ್‌ಅನ್ನು ಐಫೋನ್‌ನ ಹಾಟ್‌ಸ್ಪಾಟ್‌ಗೆ ಸಂಪರ್ಕಿಸಬೇಕಾಗುತ್ತದೆ. ಜೊತೆಗೆ ಡೇಟಾ ವರ್ಗಾವಣೆಯನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಲಾಗಿದೆ. ಪ್ಲಾಟ್‌ಫಾರ್ಮ್ ಯಾವುದೇ ಚಾಟ್‌ಗಳು ಅಥವಾ ಡೇಟಾವನ್ನು ನೋಡಲು ಸಾಧ್ಯವಾಗುವುದಿಲ್ಲ ಎಂದು ವಾಟ್ಸಾಪ್‌ ಹೇಳಿಕೊಂಡಿದೆ. ಬಳಕೆದಾರರು ತಮ್ಮ ವಾಟ್ಸಾಪ್‌ ಖಾತೆಯನ್ನು ಡಿಲೀಟ್‌ ಮಾಡದ ಹೊರತು ಆಂಡ್ರಾಯ್ಡ್‌ ಫೋನ್‌ನಲ್ಲಿರುವ ಡೇಟಾ ಡಿಲೀಟ್‌ ಆಗುವುದಿಲ್ಲ.

ಐಫೋನ್‌ನಿಂದ ಆಂಡ್ರಾಯ್ಡ್‌ ಡಿವೈಸ್‌ಗೆ ವಾಟ್ಸಾಪ್ ಚಾಟ್‌ಗಳನ್ನು ಟ್ರಾನ್ಸ್‌ಫರ್ ಮಾಡುವುದು ಹೇಗೆ ?

ಐಫೋನ್‌ನಿಂದ ಆಂಡ್ರಾಯ್ಡ್‌ ಡಿವೈಸ್‌ಗೆ ವಾಟ್ಸಾಪ್ ಚಾಟ್‌ಗಳನ್ನು ಟ್ರಾನ್ಸ್‌ಫರ್ ಮಾಡುವುದು ಹೇಗೆ ?

ಹಂತ:1 ಮೊದಲಿಗೆ ನೀವು ನಿಮ್ಮ ಹೊಸ ಆಂಡ್ರಾಯ್ಡ್ ಫೋನ್‌ನಲ್ಲಿ ಬ್ಯಾಕ್‌ಅಪ್‌ ಪಡೆಯಬೇಕಿರುವ ವಾಟ್ಸಾಪ್ ಚಾಟ್‌ ತೆರೆಯಿರಿ.
ಹಂತ:2 ನಂತರ More ಬಟನ್ ಟ್ಯಾಪ್ ಮಾಡಿ ಮತ್ತು Export Chat ಆಯ್ಕೆಯನ್ನು ಆರಿಸಿ.
ಹಂತ:3 ಈಗ ಮೇಲ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಮತ್ತು ಮೇಲ್ ಕಳುಹಿಸಲು ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ.
ಹಂತ:4 ನಿಮ್ಮ ಹೊಸ ಆಂಡ್ರಾಯ್ಡ್‌ ಫೋನ್‌ಗೆ ವರ್ಗಾಯಿಸಲು ನೀವು ಬಯಸುವ ಎಲ್ಲಾ ಚಾಟ್‌ಗಳಿಗಾಗಿ ಈ ಪ್ರಕ್ರಿಯೆಯನ್ನು ಬಳಸಿ.

ಈ ಮೂಲಕ ನಿಮ್ಮ ಐಫೋನ್‌ನಿಂದ ವಾಟ್ಸಾಪ್‌ ಚಾಟ್‌ಗಳನ್ನ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗೆ ಟ್ರಾನ್ಸಫರ್‌ ಮಾಡಬಹುದಾಗಿದೆ.

Most Read Articles
Best Mobiles in India

English summary
WhatsApp's new update lets users transfer chats from Android to iPhone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X