ವಾಟ್ಸಾಪ್‌ನಿಂದ ಹೊಸ ಅಪ್ಲಿಕೇಶನ್‌ ಲಾಂಚ್‌! ಹಾಗಾದ್ರೆ ಇದರ ವಿಶೇಷತೆ ಏನು?

|

ಸ್ಮಾರ್ಟ್‌ಫೋನ್‌ ಬಳಸುವ ಬಹುತೇಕ ಮಂದಿ ವಾಟ್ಸಾಪ್‌ ಅನ್ನು ಬಳಕೆ ಮಾಡುವುದು ಸಾಮಾನ್ಯವಾಗಿದೆ. ಮೆಟಾ ಒಡೆತನದ ವಾಟ್ಸಾಪ್‌ ತನ್ನ ವಿಶೇಷ ಫೀಚರ್ಸ್‌ಗಳ ಮೂಲಕ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಜೊತೆಗೆ ಕಾಲಕಾಲಕ್ಕೆ ತಕ್ಕಂತೆ ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುತ್ತಾ ಬಂದಿದೆ. ಅಲ್ಲದೆ ಹೊಸ ಮಾದರಿಯ ಫೀಚರ್ಸ್‌ಗಳಲ್ಲಿ ಕಾರ್ಯನಿರ್ವಹಿಸುವುದು ಕೂಡ ನಡೆಸುತ್ತಿದೆ. ಸದ್ಯ ಇದೀಗ ವಾಟ್ಸಾಪ್‌ ವಿಂಡೋಸ್‌ಗಾಗಿಯೇ ಹೊಸ ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಅನ್ನು ಬಿಡುಗಡೆ ಮಾಡಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ವಿಂಡೋಸ್‌ಗಾಗಿ ಹೊಸ ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಪರಿಚಯಿಸಿದೆ. ಈ ಹಿಂದೆ ಮ್ಯಾಕ್‌ ಮತ್ತು ವಿಂಡೋಸ್‌ ಆಪರೇಟಿಂಗ್‌ ಸಿಸ್ಟಂಗಾಗಿ ವೆಬ್‌ ಆಧಾರಿತ ಅಪ್ಲಿಕೇಶನ್‌ಗಳನ್ನು ಮಾತ್ರ ನೀಡುತ್ತಿತ್ತು. ಇದೀಗ ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಬಳಕೆದಾರಿಗೆ ವಿಶ್ವಾಸಾರ್ಹತೆ ಮತ್ತು ವೇಗವನ್ನು ಹೆಚ್ಚಿಸಲಿದೆ ಎಂದು ಮೆಟಾ ಕಂಪೆನಿ ಹೇಳಿದೆ. ಇದಲ್ಲದೆ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಆಫ್‌ಲೈನ್‌ನಲ್ಲಿದ್ದರೂ ಕೂಡ ವಾಟ್ಸಾಪ್‌ ನೋಟಿಫಿಕೇಶನ್‌ಗಳು ಮತ್ತು ಮೆಸೇಜ್‌ಗಳನ್ನು ಡೆಸ್ಕ್‌ಟಾಪ್‌ನಲ್ಲಿ ಸ್ವಿಕರಿಸಲು ಸಾಧ್ಯವಾಗಲಿದೆ. ಹಾಗಾದ್ರೆ ವಾಟ್ಸಾಪ್‌ನ ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ಪ್ರಸ್ತುತ ವಾಟ್ಸಾಪ್‌ ಅನ್ನು ಡೆಸ್ಕ್‌ಟಾಪ್‌ನಲ್ಲಿ ಬಳಸಬೇಕಾದರೆ ಫೋನ್‌ನಿಂದ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ. ಇದೇ ಮಾದರಿಯನ್ನು ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ನಲ್ಲಿಯೂ ಕೂಡ ಮುಂದುವರೆಸಲಾಗಿದೆ. ಸದ್ಯ Mac ಬಳಕೆದಾರರಿಗಾಗಿ ವಾಟ್ಸಾಪ್‌ನ ನೇಟಿವ್‌ ಡೆಸ್ಕ್‌ಟಾಪ್ ಅಪ್ಲಿಕೇಶನ್ ಅಭಿವೃದ್ಧಿಯ ಹಂತದಲ್ಲಿದೆ. ಅಲ್ಲದೆ ಅಪ್ಲಿಕೇಶನ್‌ನ ಬೀಟಾ ಆವೃತ್ತಿ ಮಾತ್ರ ಲಭ್ಯವಿದೆ. ಆದರೆ ವಾಟ್ಸಾಪ್‌ ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ವಿಂಡೋಸ್ ಬಳಕೆದಾರರಿಗೆ ಲಭ್ಯವಿದೆ ಎಂದು ಹೇಳಲಾಗಿದೆ.

ನೇಟಿವ್‌

ಇನ್ನು ಈ ಹೊಸ ನೇಟಿವ್‌ ಅಪ್ಲಿಕೇಶನ್‌ ಪ್ರಸ್ತುತ ಲೈವ್ ಆಗಿದೆ. ಇದನ್ನು ಮೈಕ್ರೋಸಾಫ್ಟ್‌ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಬಹುದು. ವಿಂಡೋಸ್‌ಗಾಗಿ ವಿನ್ಯಾಸಗೊಳಸಿಲಾಗಿರುವ ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ವಿಶ್ವಾಸಾರ್ಹತೆ ಮತ್ತು ವೇಗವನ್ನು ಹೆಚ್ಚಿಸುತ್ತದೆ ಎಂದು ವಾಟ್ಸಾಪ್‌ ಹೇಳಿಕೊಂಡಿದೆ. ಇದನ್ನು ಡೆಸ್ಕ್‌ಟಾಪ್ ಆಪರೇಟಿಂಗ್ ಸಿಸ್ಟಮ್‌ಗಳಿಗಾಗಿಯೇ ವಿನ್ಯಾಸಗೊಳಿಸಲಾಗಿದೆ ಮತ್ತು ಆಪ್ಟಿಮೈಸ್ ಮಾಡಲಾಗಿದೆ ಎನ್ನಲಾಗಿದೆ.

ವಾಟ್ಸಾಪ್‌

ವಾಟ್ಸಾಪ್‌ನ FAQ ಪೇಜ್‌ ಪ್ರಕಾರ ಬಳಕೆದಾರರು ತಮ್ಮ ಹ್ಯಾಂಡ್‌ಸೆಟ್ ಆಫ್‌ಲೈನ್ ಆಗಿದ್ದರೂ ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ನಲ್ಲಿ ವಾಟ್ಸಾಪ್‌ ನೋಟಿಫಿಕೇಶನ್‌ಗಳನ್ನು ನೋಡಬಹುದು. ಇನ್ನು ಬಳಕೆದಾರರು ವಾಟ್ಸಾಪ್‌ನ ಹೊಸ ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿದ ನಂತರ ಡಸ್ಕ್‌ಟಾಪ್‌ನಲ್ಲಿ ವಾಟ್ಸಾಪ್‌ ತೆರೆಯಬೇಕಾದರೆ ಫೋನ್‌ನಿಂದ ಸ್ಕ್ಯಾನ್‌ ಮಾಡುವ ಪ್ರಕ್ರಿಯೆಯನ್ನು ಈಗಲೂ ಅನುಸರಿಸಬೇಕು. ನಿಮ್ಮ ಫೋನಿನಲ್ಲಿ ವಾಟ್ಸಾಪ್‌ QR ಕೋಡ್ ಸ್ಕ್ಯಾನರ್ ಅನ್ನು ತೆರೆಯಲು ಲಿಂಕ್ ಮಾಡಲಾದ ಡಿವೈಸ್‌ಗಳ ಮೇಲೆ ಕ್ಲಿಕ್ ಮಾಡುವ ಮೂಲಕ ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್‌ ಬಳಸಬಹುದು.

ವಾಟ್ಸಾಪ್‌

ಇನ್ನು MacOS ಗಾಗಿ ವಾಟ್ಸಾಪ್‌ ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ವಿನ್ಯಾಸಗೊಳಿಸುವ ಕೆಲಸ ಇನ್ನು ನಡೆಯುತ್ತಿದೆ. ಪ್ರಸ್ತುತ ಇದು ಇನ್ನು ಅಭಿವೃದ್ಧಿ ಹಂತದಲ್ಲಿದೆ ಎಂದು ಹೇಳಲಾಗಿದೆ. ಆದರೆ ಬೀಟಾ ಪ್ರೋಗ್ರಾಂಗೆ ಸೇರುವ ಮೂಲಕ ಬಳಕೆದಾರರು ಆರಂಭಿಕ ಪ್ರವೇಶವನ್ನು ಪಡೆಯಬಹುದು ಮತ್ತು ಅಪ್ಲಿಕೇಶನ್ ಅನ್ನು ಪರೀಕ್ಷಿಸಬಹುದು ಎಂದು ಕಂಪನಿ ಹೇಳಿದೆ. ಪ್ರಸ್ತುತ, Mac ಬಳಕೆದಾರರು ಬ್ರೌಸರ್‌ನಲ್ಲಿ ವಾಟ್ಸಾಪ್‌ವೆಬ್ ಅನ್ನು ಬಳಸಬಹುದು.

ವಾಟ್ಸಾಪ್‌

ಅಂದರೆ ವಾಟ್ಸಾಪ್‌ ಹೊಸದಾಗಿ ಪರಿಚಯಿಸಿರುವ ವಾಟ್ಸಾಪ್‌ ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ವಾಟ್ಸಾಪ್‌ ವೆಬ್‌ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ. ಇದರ ಲಾಗ್‌ ಇನ್‌ ಕಾರ್ಯಗಳು ಕೂಡ ವಾಟ್ಸಾಪ್‌ ವೆಬ್‌ ಮಾದರಿಯಲ್ಲಿಯೇ ಇರಲಿದೆ. ಆದರೆ ಇದು ಅಪ್ಲಿಕೇಶನ್‌ ಆಗಿರುವುದರಿಂದ ಹೆಚ್ಚು ವಿಶ್ವಾಸಾರ್ಹ ಹಾಗೂ ವೇಗವಾಗಿ ಕಾರ್ಯನಿರ್ವಹಣೆ ಮಾಡಲಿದೆ ಅನ್ನೊದು ವಾಟ್ಸಾಪ್‌ ಪ್ಲಾಟ್‌ಫಾರ್ಮ್‌ನ ಅಭಿಪ್ರಾಯವಾಗಿದೆ. ಇನ್ನು ಈ ಅಪ್ಲಿಕೇಶನ್‌ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಬಹುದು ಅನ್ನೊದು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ.

Best Mobiles in India

English summary
WhatsApp release a native app for Windows PC, beta for macOS

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X