ಫೇಸ್‌ಬುಕ್ ಸಹವಾಸ ಬೇಡ ಎಂದ ವಾಟ್ಸ್‌ಆಪ್ CEO: ಕಾರಣ..?

|

ಫೇಸ್‌ಬುಕ್ ವಿವಾದಗಳು ದಿನಕ್ಕೊಂದು ಹೊರ ಬರುತ್ತಿದೆ. ಇದೇ ಹಿನ್ನಲೆಯಲ್ಲಿ ವಾಟ್ಆಪ್ ಸಹ ಸಂಸ್ಥಾಪಕ ಮತ್ತು CEO ಜಾನ್‌ ಕೋಮ್, ಫೇಸ್‌ಬುಕ್ ನಿಲುವುಗಳಿಗೆ ಬೇಸತ್ತು ಫೇಸ್‌ಬುಕ್ ಅನ್ನು ಬಿಟ್ಟು ಹೊರಬರುತ್ತಿದ್ದಾರೆ ಎನ್ನಲಾಗಿದೆ. ಫೇಸ್‌ಬುಕ್ ಬಳಕೆದಾರರ ಗೌಪ್ಯತೆಯನ್ನು ಗೌರವಿಸುತ್ತಿಲ್ಲ ಎನ್ನುವುದೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.

ಫೇಸ್‌ಬುಕ್ ಸಹವಾಸ ಬೇಡ ಎಂದ ವಾಟ್ಸ್‌ಆಪ್ CEO: ಕಾರಣ..?

ಭಾರತದಲ್ಲಿ ಸುಮಾರು 200 ಮಿಲಿಯನ್ ಬಳಕೆದಾರರೊಂದಿಗೆ ವಿಶ್ವದಲ್ಲಿ ಒಂದು ಬಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆಪ್‌ ನನ್ನು ಕೆಲ ವರ್ಷಗಳ ಹಿಂದೆ ಫೇಸ್‌ಬುಕ್ ಖರೀಸಿತ್ತು. ಇತ್ತೀಚಿನ ದಿನಗಳಲ್ಲಿ ವಾಟ್ಸ್‌ಆಪ್ ಕಾರ್ಯ ಚಟುವಟಿಕೆಗೆ ವಿರುದ್ಧವಾದ ನಿಯಮವನ್ನು ಫೇಸ್‌ಬುಕ್ ಜಾರಿಗೆ ತರಲು ಮುಂದಾಗಿರುವುದೇ ಜಾನ್‌ ಕೋಮ್, ಫೇಸ್‌ಬುಕ್ ತೊರೆಯುವುದಕ್ಕೆ ಕಾರಣ ಎನ್ನಲಾಗಿದೆ.

ಫೇಸ್‌ಬುಕ್ ಮಾಲೀಕತ್ವ:

ಫೇಸ್‌ಬುಕ್ ಮಾಲೀಕತ್ವ:

2014ರಲ್ಲಿ 19 ಶತಕೋಟಿ ಡಾಲರ್‌ಗಳಿಗೆ ವಾಟ್ಸ್‌ಆಪ್ ಅನ್ನು ಖರೀದಿಸಿದ ಫೇಸ್‌ ಬುಕ್‌, ಇದುವರೆಗೂ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ತನ್ನ ಒಡೆಡತನದ ಆಪ್‌ಗೊಂಡಿಗೆ ಲಿಂಕ್ ಮಾಡಲು ಯತ್ನಿಸುತ್ತಿದೆ ಎನ್ನಲಾಗಿದೆ.

ಖಾಸಗಿತನಕ್ಕೆ ಧಕ್ಕೆ:

ಖಾಸಗಿತನಕ್ಕೆ ಧಕ್ಕೆ:

ವಾಟ್ಆಪ್ ಸಹ ಸಂಸ್ಥಾಪಕರಲ್ಲಿ ಒಬ್ಬಾರಾಗಿದ್ದ ಜಾನ್‌ ಕೋಮ್, ಬಳಕೆದಾರರ ಖಾಸಗಿತನ ಮತ್ತು ವೈಯಕ್ತಿಕ ಮಾಹಿತಿಗಳ ರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದರೂ ಎನ್ನಲಾಗಿದ್ದು, ಫೇಸ್‌ಬುಕ್ ಈ ವಿಷಯದಲ್ಲಿ ಬದ್ಧತೆ ತೋರಿಸದ ಕಾರಣದಿಂದಾಗಿ ಫೇಸ್‌ಬುಕ್ ಅನ್ನು ಬಿಟ್ಟು ಹೊರಬರುತ್ತಿದ್ದಾರೆ ಎನ್ನುವ ಮಾಹಿತಿ ಇದೆ.

ಗೌಪ್ಯತೆಗೆ ಹಿನ್ನಡೆ:

ಗೌಪ್ಯತೆಗೆ ಹಿನ್ನಡೆ:

ಈಗಾಗಲೇ ಫೇಸ್‌ಬುಕ್ ತನ್ನ ಬಳಕೆದಾರರ ಮಾಹಿತಿಯನ್ನು ಲೀಕ್ ಮಾಡಿ ಸುದ್ದಿಯಾಗಿದ್ದು, ಇದೇ ಸಂದರ್ಭದಲ್ಲಿ ಫೇಸ್‌ಬುಕ್ ನಿಲುವುಗಳಿಗೆ ಬೇಸತ್ತು ಜಾನ್‌ ಕೋಮ್ ಫೇಸ್‌ಬುಕ್ ಬಿಡುತ್ತಿರುವ ಮಾಹಿತಿಯೂ ಫೇಸ್‌ಬುಕ್‌ ಮೇಲೆ ಅನುಮಾನ ಮೂಡುವಂತೆ ಮಾಡಿದೆ.

ವಾಟ್ಸ್‌ಆಪ್ ಅಭದ್ರತೆ:

ವಾಟ್ಸ್‌ಆಪ್ ಅಭದ್ರತೆ:

ವಾಟ್ಸ್‌ಆಪ್ ಇತ್ತೀಚಿನ ದಿನಗಳಲ್ಲಿ ಅಳವಡಿಸಿಕೊಂಡಿರುವ ಎನ್‌ಕ್ರಿಪ್‌ಶನ್‌ ಸೇವೆಯನ್ನು ದುರ್ಬಲಗೊಳಿಸಲು ಫೇಸ್‌ಬುಕ್ ಮುಂದಾಗುತ್ತಿದೆ. ಬಳಕೆದಾರರ ಮಾಹಿತಿಯನ್ನು ಹಂಚಿಕೊಳ್ಳಲು ಒತ್ತಾಡ ಹಾಕುತ್ತಿದೆ ಎನ್ನುವ ಚರ್ಚೆಗೆ ಜಾನ್‌ ಕೋಮ್ ಫೇಸ್‌ಬುಕ್ ಬಿಡುತ್ತಿರುವ ಮಾಹಿತಿಯೂ ಫುಷ್ಠಿ ನೀಡುವಂತೆ ಇದೆ.

ವಿವಾದ:

ವಿವಾದ:

ವಾಟ್ಸ್‌ಆಪ್ ಮತ್ತು ಫೇಸ್‌ಬುಕ್ ನಡುವಿನ ಮಾಹಿತಿ ವಿನಿಮಯ ತಿಕ್ಕಾಟದಿಂದಾಗಿ ಜಾನ್‌ ಕೋಮ್‌ ಫೇಸ್‌ಬುಕ್‌ನಿಂದ ನಿರ್ಗಮಿಸುತ್ತಿದ್ದಾರೆ ಎಂದು ವರದಿಯಾಗಿದೆ.

Best Mobiles in India

English summary
WhatsApp's CEO Is Suddenly Leaving Facebook, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X