ವಾಟ್ಸಾಪ್‌ನ ಜನಪ್ರಿಯ ಫೀಚರ್ಸ್‌ ಇನ್ಮುಂದೆ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಅಲಭ್ಯ!

|

ವಾಟ್ಸಾಪ್‌ ತನ್ನ ಡೆಸ್ಕ್‌ಟಾಪ್‌ ಆವೃತ್ತಿಯ ಬಳಕೆದಾರರಿಗೆ ಬಿಗ್‌ ಶಾಕ್‌ ನೀಡಿದೆ. ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಫೀಚರ್ಸ್‌ಗಳಲ್ಲಿ ಒಂದಾಗಿರುವ ವ್ಯೂ ಒನ್ಸ್‌ ಫೀಚರ್ಸ್‌ ಇನ್ಮುಂದೆ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಲಭ್ಯವಿರುವುದಿಲ್ಲ ಎಂದು ಹೇಳಿದೆ. ಒಂದು ವೇಳೆ ನೀವು ವ್ಯೂ ಒನ್ಸ್‌ ಸಂದೇಶವನ್ನು ಸ್ವೀಕರಿಸಿದರೆ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ನಲ್ಲಿ ತೆರೆಯುವುದಿಲ್ಲ ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಆದರಿಂದ ನೀವು ವ್ಯೂ ಒನ್ಸ್‌ ಸಂದೇಶವನ್ನು ಕೇವಲ ಮೊಬೈಲ್‌ ಆವೃತ್ತಿಯಲ್ಲಿ ಮಾತ್ರ ನೋಡಲು ಸಾಧ್ಯವಾಗಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನ ಜನಪ್ರಿಯ ಫೀಚರ್ಸ್‌ ವ್ಯೂ ಒನ್ಸ್‌ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಬೆಂಬಲಿಸುವುದಿಲ್ಲ ಎಂದು ಮೆಟಾ ಕಂಪೆನಿ ಹೇಳಿದೆ. ಆದರೆ ಬೀಟಾ ಅಲ್ಲದ ಬಳಕೆದಾರರು ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿ ವ್ಯೂ ಒನ್ಸ್‌ ಫೀಚರ್ಸ್‌ ಅನ್ನು ಈಗಲೂ ಕೂಡ ಪ್ರವೇಶಿಸಬಹುದಾಗಿದೆ. ಆದರೆ ಶೀಘ್ರದಲ್ಲೇ ಈ ಫೀಚರ್ಸ್‌ ಅನ್ನು ಡೆಸ್ಕ್‌ಟಾಪ್‌ ಆವೃತ್ತಿಯಿಂದ ತೆಗೆದುಹಾಕುವುದಾಗಿ ವಾಟ್ಸಾಪ್‌ ಹೇಳಿಕೊಂಡಿದೆ. ಹಾಗಾದ್ರೆ ವ್ಯೂ ಒನ್ಸ್‌ ಫೀಚರ್ಸ್‌ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಯಾಕೆ ಕಾರ್ಯನಿರ್ವಹಿಸುವುದಿಲ್ಲ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವ್ಯೂ ಒನ್ಸ್‌ ಫೀಚರ್ಸ್‌ ಬಳಕೆದಾರರ ನೆಚ್ಚಿನ ಆಯ್ಕೆಗಳಲ್ಲಿ ಒಂದೆನಿಸಿಕೊಂಡಿದೆ. ವ್ಯೂ ಒನ್ಸ್‌ ಮೂಲಕ ಸಂದೇಶ ಕಳುಹಿಸಿದರೆ ಸಂದೇಶವನ್ನು ಒ್ಮಮೆ ನೋಡಿದ ನಂತರ ಅದು ತಕ್ಷಣವೇ ಕಣ್ಮರೆಯಾಗಲಿದೆ. ಆದರೆ ಈ ಫೀಚರ್ಸ್‌ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಇನ್ಮುಂದೆ ಕಾರ್ಯನಿರ್ವಹಿಸುವುದಿಲ್ಲ. ಏಕೆಂದರೆ ವ್ಯೂ ಒನ್ಸ್‌ ಫೀಚರ್ಸ್‌ನಲ್ಲಿ ಸ್ಕ್ರೀನ್‌ಶಾಟ್‌ ಅನ್ನು ನಿರ್ಬಂಧಿಸುವ ಯಾವುದೇ ಆಯ್ಕೆಯನ್ನು ನೀಡಿಲ್ಲ. ಆದರಿಂದ ಇದನ್ನು ಡೆಸ್ಕ್‌ಟಾಪ್‌ನಿಂದ ತೆಗೆದುಹಾಕಿರುವ ಸಾಧ್ಯತೆಯಿದೆ.

ವಾಟ್ಸಾಪ್‌

ವಾಟ್ಸಾಪ್‌ನ ಹೊಸ ಫೀಚರ್ಸ್‌ಗಳನ್ನು ಟ್ರ್ಯಾಕ್‌ ಮಾಡುವ ವಾಬೇಟಾ ಇನ್ಫೋ ಪ್ರಕಾರ ವ್ಯೂ ಒನ್ಸ್‌ ಸಂದೇಶವನ್ನು ಡೆಸ್ಕ್‌ಟಾಪ್‌ನಲ್ಲಿ ವೀಕ್ಷಿಸಲು ಸಾಧ್ಯವಿಲ್ಲ. ಇದು ವಾಟ್ಸಾಪ್‌ ವೆಬ್/ಡೆಸ್ಕ್‌ಟಾಪ್ (ಎಲೆಕ್ಟ್ರಾನ್ ಆವೃತ್ತಿ), ವಿಂಡೋಸ್‌ಗಾಗಿ ವಾಟ್ಸಾಪ್‌ ಮತ್ತು ಮ್ಯಾಕ್‌ಒಎಸ್‌ಗಾಗಿ MacOS ಗಾಗಿ WhatsApp ಬೀಟಾವನ್ನು ಒಳಗೊಂಡಿರುತ್ತದೆ. ಬದಲಾವಣೆಗಳು ಅಗತ್ಯವಿದೆ ಇಲ್ಲದಿದ್ದರೆ ಬಳಕೆದಾರರು ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಡೆಸ್ಕ್‌ಟಾಪ್‌ನಲ್ಲಿ ಸಂದೇಶವನ್ನು ಒಮ್ಮೆ ತೆರೆಯುತ್ತಿದ್ದರು, ಆದರಿಂದ ವ್ಯೂ ಒನ್ಸ್‌ ತೆಗೆದುಹಾಕಲಾಗಿದೆ.

ಡೆಸ್ಕ್‌ಟಾಪ್‌

ಸದ್ಯ ವಾಟ್ಸಾಪ್‌ನ ಬೀಟಾ ಬಳಕೆದಾರರಿಗೆ ಮಾತ್ರ ವಾಟ್ಸಾಪ್‌ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ವ್ಯೂ ಒನ್ಸ್‌ ಸಂದೇಶವನ್ನು ತೆಗೆದುಹಾಕಲಾಗ್ತಿದೆ. ಈ ಬದಲಾವಣೆಗಳು ಇದೇ ನವೆಂಬರ್ 1 ರಿಂದ ಜಾರಿಗೆ ಬಂದಿವೆ. ಆದಾಗ್ಯೂ, ಒಂದು ವೇಳೆ ನೀವು ಬೀಟಾ ಪರೀಕ್ಷಕರಾಗಿಲ್ಲದಿದ್ದರೆ ವ್ಯೂ ಒನ್ಸ್‌ ಫೀಚರ್ಸ್‌ ಅನ್ನು ಪ್ರವೇಶಿಸಲು ಸಾಧ್ಯವಿದೆ. ಆದರೆ ಈ ಬದಲಾವಣೆಗಳು ಶೀಘ್ರದಲ್ಲೇ ಬದಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ತನ್ನ ಡೆಸ್ಕ್‌ಟಾಪ್ ಬಳಕೆದಾರರಿಗೆ ಶೀಘ್ರದಲ್ಲೇ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುವುದಕ್ಕೆ ತಯಾರಿ ನಡೆಸಿದೆ. ಅದರಂತೆ ಬಳಕೆದಾರರಿಗೆ ಹೊಸ ಸೈಡ್‌ಬಾರ್ ಮತ್ತು ಡೆಸ್ಕ್‌ಟಾಪ್‌ನಲ್ಲಿಯೇ ಸ್ಟೇಟಸ್‌ಗೆ ರಿಪ್ಲೇ ಶೀಘ್ರದಲ್ಲೇ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಾಗಲಿದೆ. ಸ್ಟೇಟಸ್ ರಿಪ್ಲೇ ಡೆಸ್ಕ್‌ಟಾಪ್ ಬಳಕೆದಾರರಿಗೆ ವಾಟ್ಸಾಪ್‌ ಅನ್ನು ಅವರ ಕಾಂಟ್ಯಾಕ್ಟ್‌ಗಳ ಮೂಲಕ ಸ್ಟೋರಿಗಳನ್ನು ಪರಿಶೀಲಿಸಲು ಅನುಮತಿಸುತ್ತದೆ. ಜೊತೆಗೆ ಫೋನ್‌ನಲ್ಲಿ ವಾಟ್ಸಾಪ್‌ ಸ್ಟೇಟಸ್‌ಗೆ ರಿಪ್ಲೇ ಮಾಡುವ ಹಾಗೆಯೇ ಅವರಿಗೆ ರಿಪ್ಲೇ ಮಾಡಲು ಅವಕಾಶ ನೀಡುತ್ತವೆ. ಸೈಡ್‌ಬಾರ್ ಸ್ಟೇಟಸ್‌ ಅಪ್‌ಡೇಟ್‌ ಟ್ಯಾಬ್, ಸೆಟ್ಟಿಂಗ್‌ಗಳು ಮತ್ತು ಪ್ರೊಫೈಲ್‌ಗೆ ಆಕ್ಸಸ್‌ ಮಾಡಲು ಅನುಮತಿಸುತ್ತದೆ.

ವಾಟ್ಸಾಪ್‌

ಇದರೊಂದಿಗೆ ವಾಟ್ಸಾಪ್‌ ಸ್ಟೇಟಸ್‌ ಆಯ್ಕೆಯಲ್ಲಿ ಬದಲಾವಣೆ ತರಲಿದ್ದು, ಶೀರ್ಷಿಕೆಯಲ್ಲಿ ಹೈಪರ್‌ಲಿಂಕ್ ಮಾಡುವ URL ಗಳನ್ನು ಸಕ್ರಿಯಗೊಳಿಸುತ್ತದೆ. ಈ ಮೂಲಕ ವಾಟ್ಸಾಪ್‌ ಬಳಕೆದಾರರು ತಮ್ಮ ವೆಬ್‌ಸೈಟ್‌ಗಳು ಮತ್ತು ಪೇಜ್‌ಗಳಿಗೆ URL ಗಳನ್ನು ಶೇರ್ ಮಾಡಲು ಸಾಧ್ಯವಾಗುತ್ತದೆ. ಸ್ಟೇಟಸ್‌ ನೋಡುವವರು ಲಿಂಕ್‌ಗಳ ಮೇಲೆ ಸರಳವಾಗಿ ಕ್ಲಿಕ್ ಮಾಡಿದಾಗ ಪೇಜ್‌ ತೆರೆಯಲಿದೆ.

Best Mobiles in India

English summary
WhatsApp view once message feature will no longer be available to the desktop users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X