ವಾಟ್ಸ್‌ಆಪ್‌ ಪೇಮೆಂಟ್ ಮಾಡುತ್ತಿರುವವರಿಗೆ ಇದು ಶಾಕಿಂಗ್ ಸುದ್ದಿ!!

|

ಭಾರತದ ಜನಪ್ರಿಯ ಮೆಸೇಂಜಿಂಗ್ ಆಪ್ ವಾಟ್ಸ್‌ಆಪ್‌ನಲ್ಲಿ ಇದೀಗ ಬಂದಿರುವ ಬಹುನಿರೀಕ್ಷಿತ 'ವಾಟ್ಸ್‌ಆಪ್ ಪೇಮೆಂಟ್' ಫೀಚರ್ ಬಳಕೆದಾರರಿಗೆ ಫೇಸ್‌ಬುಕ್ ಸಂಸ್ಥೆ ಮತ್ತೊಂದು ಶಾಕ್ ನೀಡಿದೆ. ತಾನು ಒದಗಿಸುತ್ತಿರುವ ಪಾವತಿ ಸೇವೆಗಳ ಸೀಮಿತ ಮಾಹಿತಿಯನ್ನು ತನ್ನ ಮಾತೃಸಂಸ್ಥೆ ಫೇಸ್‌ಬುಕ್‌ ಜತೆ ಹಂಚಿಕೊಳ್ಳಲಾಗುತ್ತಿದೆ ಎಂದು ವಾಟ್ಸ್‌ಆಪ್‌ ತಿಳಿಸಿದೆ.

ವಾಟ್ಸ್ಆಪ್ ಬಳಕೆದಾರರು ಪಾವತಿ ಸೇವೆಯನ್ನು ಬಳಸಿಕೊಂಡಾಗ, ಹಣ ಕಳುಹಿಸುವವರು ಮತ್ತು ಪಡೆದುಕೊಳ್ಳುವವರ ನಡುವೆ ಅಗತ್ಯ ಸಂಪರ್ಕವನ್ನು ಆಪ್ ಸೃಷ್ಟಿಸುತ್ತದೆ. ಇದಕ್ಕಾಗಿ ಇಲ್ಲಿ ಫೇಸ್‌ಬುಕ್‌ ಮೂಲಸೌಕರ್ಯವನ್ನು ಬಳಸಿಕೊಳ್ಳಲಾಗುತ್ತದೆ ಎಂದು ವಾಟ್ಸ್‌ಆಪ್‌ ಸಂಸ್ಥೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿರುವುದು ಸ್ವಲ್ಪ ಅನುಮಾನಕ್ಕೆ ಕಾರಣವಾಗಿದೆ.

ವಾಟ್ಸ್‌ಆಪ್‌ ಪೇಮೆಂಟ್ ಮಾಡುತ್ತಿರುವವರಿಗೆ ಇದು ಶಾಕಿಂಗ್ ಸುದ್ದಿ!!

ಭಾರತದಲ್ಲಿರುವ ಫೇಸ್‌ಬುಕ್‌ ಬಳಕೆದಾರರ ಮಾಹಿತಿಯ ಸುರಕ್ಷತೆಯ ಬಗ್ಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಹೆಚ್ಚು ಕಳವಳಗೊಂಡಿದ್ದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಹಾಗಾದರೆ, ವಾಟ್ಸ್‌ಆಪ್ ಆಪ್ ಬಳಕೆದಾರರು ಪೇಮೆಂಟ್ ಸೇವೆ ಬಳಸಿದರೆ ಯಾವೆಲ್ಲಾ ಮಾಹಿತಿ ಫೇಸ್‌ಬುಕ್ ಜೊತೆ ಹಂಚಿಕೆಯಾಗುತ್ತದೆ ಎಂಬುದನ್ನು ಮುಂದೆ ತಿಳಿಯಿರಿ.

ಫೇಸ್‌ಬುಕ್ ಜೊತೆ ಮಾಹಿತಿ ಹಂಚಿಕೆ!

ಫೇಸ್‌ಬುಕ್ ಜೊತೆ ಮಾಹಿತಿ ಹಂಚಿಕೆ!

ಬಳಕೆದಾರರು ಪಾವತಿ ಸೇವೆಯನ್ನು ಬಳಸಿಕೊಂಡಾಗ, ಹಣ ಕಳುಹಿಸುವವರು ಮತ್ತು ಪಡೆದುಕೊಳ್ಳುವವರ ನಡುವೆ ಅಗತ್ಯ ಸಂಪರ್ಕವನ್ನು ಆಪ್ ಸೃಷ್ಟಿಸುವುಕ್ಕಾಗಿ ಇಲ್ಲಿ ಫೇಸ್‌ಬುಕ್‌ ಮೂಲಸೌಕರ್ಯವನ್ನು ಬಳಸಿಕೊಳ್ಳಲಾಗುತ್ತದೆ ಎಂದು ವಾಟ್ಸ್‌ಆಪ್‌ ತಿಳಿಸಿದೆ. ಈ ದತ್ತಾಂಶವನ್ನು ವಾಣಿಜ್ಯ ಉದ್ದೇಶಗಳಿಗೆ ಫೇಸ್‌ಬುಕ್‌ ಬಳಸಿಕೊಳ್ಳುತ್ತಿಲ್ಲ ಎಂದು ಹೇಳಿದೆ.

ತಂತ್ರಜ್ಞಾನ ಸಚಿವಾಲಯ ಕಳವಳ!

ತಂತ್ರಜ್ಞಾನ ಸಚಿವಾಲಯ ಕಳವಳ!

ವಾಟ್ಸ್ಆಪ್‌ ಪಾವತಿ ಸೇವೆಯು ನಿಯಮಗಳಿಗೆ ಬದ್ಧವಾಗಿದೆಯೇ ಮತ್ತು ಅದು ಫೇಸ್‌ಬುಕ್‌ ಜತೆಗೆ ಮಾಹಿತಿ ಹಂಚಿಕೆ ಮಾಡುತ್ತಿದೆಯೇ ಎಂಬುದನ್ನು ಪರಿಶೀಲಿಸುವಂತೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎನ್‌ಪಿಸಿಐಗೆ ತಿಳಿಸಿತ್ತು .ಕೇಂಬ್ರಿಜ್‌ ಅನಲಿಟಿಕಾ, ಫೇಸ್‌ಬುಕ್‌ ಮಾಹಿತಿಯನ್ನು ಅಕ್ರಮವಾಗಿ ಬಳಸಿಕೊಂಡಿರುವುದು ಇದಕ್ಕೆ ಕಾರಣವಾಗಿತ್ತು.

ಗ್ರಾಹಕರಿಗೆ ನೆರವಾಗುವುದಕ್ಕಾಗಿ!

ಗ್ರಾಹಕರಿಗೆ ನೆರವಾಗುವುದಕ್ಕಾಗಿ!

ವಾಟ್ಸ್ಆಪ್ ಪಾವತಿಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಬ್ಯಾಂಕುಗಳು ಮತ್ತು ರಾಷ್ಟ್ರೀಯ ಪಾವತಿ ನಿಗಮಕ್ಕೆ (ಎನ್‌ಪಿಸಿಐ) ತಲುಪಿಸುವ ಕೆಲಸವನ್ನಷ್ಟೇ ಮಾಡುತ್ತಿದೆ. ಕೆಲವೊಮ್ಮೆ, ಗ್ರಾಹಕರಿಗೆ ನೆರವಾಗುವುದಕ್ಕಾಗಿ ಮತ್ತು ಪಾವತಿಯನ್ನು ಸುರಕ್ಷಿತವಾಗಿಸಲು ಈ ಮಾಹಿತಿಯನ್ನು ಫೇಸ್‌ಬುಕ್ ಬಳಕೆ ಮಾಡುತ್ತಿದೆ ಎಂದು ವಾಟ್ಸ್‌ಆಪ್‌ ಹೇಳಿದೆ.

ಮಾಹಿತಿ ಹಂಚಿಕೆಗೆ ಮಿತಿಯಿದೆ!

ಮಾಹಿತಿ ಹಂಚಿಕೆಗೆ ಮಿತಿಯಿದೆ!

ಭಾರತದಲ್ಲಿ 10 ಕೋಟಿಗೂ ಹೆಚ್ಚು ಜನರು ವಾಟ್ಸ್‌ಆಪ್‌ ಪಾವತಿ ಸೇವೆ ಬಳಸುತ್ತಿದ್ದಾರೆ. ಇವರ ಕೆಲವು ಮಾಹಿತಿಗಳನ್ನಷ್ಟೇ ನಾವು ಫೇಸ್‌ಬುಕ್‌ ಜೊತೆ ವಿನಿಮಯ ಮಾಡಲಾಗುವುದು. ಇಲ್ಲಿ ಒಂದು ಬಾರಿಯ ಪಾಸ್‌ವರ್ಡ್‌ನಂತಹ ಮಾಹಿತಿ ಮತ್ತು ಬ್ಯಾಂಕ್‌ ಖಾತೆ ಸಂಖ್ಯೆ, ಡೆಬಿಟ್‌ ಕಾರ್ಡ್‌ ಸಂಖ್ಯೆಯನ್ನು ಸಂಗ್ರಹಿಸುವುದಿಲ್ಲ ಎಂದು ವಾಟ್ಸ್‌ಆಪ್ ತಿಳಿಸಿದೆ.

ಸುರಕ್ಷತೆ ನಿಮ್ಮ ಕೈಯಲ್ಲಿದೆ.!

ಸುರಕ್ಷತೆ ನಿಮ್ಮ ಕೈಯಲ್ಲಿದೆ.!

ಭಾರತದಲ್ಲಿ ಈಗ ವಾಟ್ಸ್‌ಆಪ್‌ನ ಪಾವತಿ ಸೇವೆಯ ಬೀಟಾ ಆವೃತ್ತಿ ಇದೆ. ಒಟ್ಟು ವಾಟ್ಸ್‌ಆಪ್ ಬಳಕೆದಾರರಲ್ಲಿ 10 ಕೋಟಿಗೂ ಹೆಚ್ಚು ಜನರು ವಾಟ್ಸ್‌ಆಪ್‌ ಪಾವತಿ ಸೇವೆ ಬಳಸುತ್ತಿದ್ದಾರೆ. ಹಾಗಾಗಿ, ವಾಟ್ಸ್‌ಆಪ್ ಪೇಮೆಂಟ್ ಸೇವೆಯನ್ನು ನೀವು ಕೂಡ ಬಳಸುತ್ತಿದ್ದರೆ ಈ ಬಗ್ಗೆ ಸ್ವಲ್ಪ ಯೋಚಿಸಬೇಕಾಗುತ್ತದೆ. ಏಕೆಂದರೆ, ಈಗ ಯಾರನ್ನೂ ಸಹ ನಂಬುವಂತಿಲ್ಲ.!!

How to send WhatsApp Payments invitation to others - GIZBOT KANNADA
ನಿಮ್ಮ ಸ್ಮಾರ್ಟ್‌ಫೋನ್ ಹೆಚ್ಚು ದಿನ ಬಾಳಿಕೆ ಬರಬೇಕೆ?...ಇಲ್ಲಿವೆ 5 ದಾರಿ!!

ನಿಮ್ಮ ಸ್ಮಾರ್ಟ್‌ಫೋನ್ ಹೆಚ್ಚು ದಿನ ಬಾಳಿಕೆ ಬರಬೇಕೆ?...ಇಲ್ಲಿವೆ 5 ದಾರಿ!!

ಒಂದು ಸ್ಮಾರ್ಟ್‌ಫೋನ್ ಖರೀದಿಸಿದ ಆರು ತಿಂಗಳಿನಲ್ಲಿಯೇ ಅದರ ಆಯಸ್ಸು ಶೇ 80 ರಷ್ಟು ಮುಗಿಯುತ್ತಿದೆ ಎಂಬ ಶಾಕಿಂಗ್ ವರದಿಗೆ ಬೆಚ್ಚಿಬೀಳದೆ ಇರಲು ಸಾಧ್ಯವಿಲ್ಲ. ಏಕೆಂದರೆ, ಸಾವಿರಾರು ರೂಪಾಯಿ ಹಣತೆತ್ತು ಖರೀದಿಸಿದ ಸ್ಮಾರ್ಟ್‌ಫೋನ್ ಅಷ್ಟು ಬೇಗವೇ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ ಎಂದರೆ ಯಾರಿಗೆ ತಾನೆ ಶಾಕ್ ಆಗೊಲ್ಲಾ ಹೇಳಿ?.

ಹಾಗಾಗಿ, ಮೊಬೈಲ್ ಅನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನು ತಿಳಿದರೆ ಮೊಬೈಲ್ ಬಾಳಿಕೆ ಹೆಚ್ಚು ದಿನ ಬರಲಿದೆ ಎನ್ನುವುದು ನೂರಕ್ಕೆ ನೂರರಷ್ಟು ನಿಜ. ಏಕೆಂದರೆ, ಬಹುತೇಕರ ಮೊಬೈಲ್ ಕಾರ್ಯನಿರ್ವಹಣೆ ನೀಡಿ ಸುಸ್ತಾಗುವುದರ ಒಳಗಾಗಿ ಬಳಕೆದಾರರೆ ಅದರ ಆಯಸ್ಸನ್ನು ಮುಗಿಸುತ್ತಾರೆ ಎಂದರೆ ಮೊಬೈಲ್ ಬಳಕೆಯಲ್ಲಿ ಎಷ್ಟು ಲೋಪವಿದೆ ಎಂದು ತಿಳಿಯಬಹುದು.

ಸ್ಮಾರ್ಟ್‌ಫೋನ್‌ಗಳನ್ನು ನಿರಂತರವಾಗಿ ಬಳಸುವುದರಿಂದ ಅವುಗಳು ಜಡವಾಗುತ್ತವೆ ಮತ್ತು ಅವುಗಳ ಜೀವಿತ ಅವಧಿ ಕಡಿಮೆಯಾಗುತ್ತದೆ. ಇದು ಕೇವಲ ಮೊಬೈಲ್‌ಗೆ ಮಾತ್ರವಲ್ಲದೆ, ಎಲ್ಲಾ ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೂ ಅನ್ವಯಿಸಲಿದೆ! ಹಾಗಾಗಿ, ಮೊಬೈಲ್ ಸೇರಿ ಎಲ್ಲಾ ಗ್ಯಾಜೆಟ್‌ಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಬ್ಯಾಟರಿಗಳ ಸ್ಥಿತಿ ಪರಿಶೀಲಿಸಿ!

ಬ್ಯಾಟರಿಗಳ ಸ್ಥಿತಿ ಪರಿಶೀಲಿಸಿ!

ಯಾವುದೇ ಗ್ಯಾಜೆಟ್‌ನ ಇಡೀ ಸಾಧನದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವ ಬ್ಯಾಟರಿಗಳ ಸ್ಥಿತಿಯನ್ನು ಮೊದಲು ಪರಿಶೀಲಿಸಿಕೊಳ್ಳಿ. ಬ್ಯಾಟರಿ ಸರಿಯಾಗಿ ಕೆಲಸ ಮಾಡದಿದ್ದರೆ ಹೊಸತನ್ನು ಖರೀದಿಸುವುದು ಇಲ್ಲವೇ ದುರಸ್ತಿ ಮಾಡಿಸುವುದು ಸೂಕ್ತ.!

ಸರಿಯಾಗಿ ಚಾರ್ಜ್ ಮಾಡಿ!!

ಸರಿಯಾಗಿ ಚಾರ್ಜ್ ಮಾಡಿ!!

ಹೆಚ್ಚು ಜನರು ಮೊಬೈಲ್ ಅನ್ನು ಸರಿಯಾಗಿ ಸರಿಯಾಗಿ ಚಾರ್ಜ್ ಮಾಡುವುದಿಲ್ಲ. ಇದೇ ಕಾರಣಕ್ಕಾಗಿ ಮೊಬೈಲ್‌ ತನ್ನ ಆಯಸ್ಸನ್ನು ಬೇಗ ಕಳೆದುಕೊಳ್ಳುತ್ತದೆ ಎಂಬುದು ನಿಜ! ಬ್ಯಾಟರಿ ಡೆಡ್ ಆಗುವವರೆಗೂ ಕಾದು ಮೊಬೈಲ್ ಚಾರ್ಜ್ ಮಾಡಿದರೆ ಮೊಬೈಲ್ ಬಿಡಿಭಾಗಗಳ ಮೇಲೆ ಒತ್ತಡ ಉಂಟಾಗಿ ಆಯಸ್ಸನ್ನು ಕಳೆದುಕೊಳ್ಳಲಿವೆ.!!

ಕಳಪೆ ಬಿಡಿಬಾಗ ಬಳಸಬೇಡಿ.!

ಕಳಪೆ ಬಿಡಿಬಾಗ ಬಳಸಬೇಡಿ.!

ಎಲೆಕ್ಟ್ರಾನಿಕ್ಸ್ ವಸ್ತುಗಳ ಬಿಡಿಬಾಗಗಳು ಹಾಳಾಗುವುದು ಸಹಜ ಆಗಿರುವುದರಿಂದ ಅವುಗಳ ರಿಪ್ಲೇಸ್‌ಗೆ ಕಳಪೆ ಬಿಡಿಬಾಗಗಳನ್ನು ಹಾಕಬೇಡಿ. ಕಳಪೆ ಬಿಡಿಬಾಗಗಳನ್ನು ಬಳಕೆ ಮಾಡುವುದರಿಂದ ನಿಮ್ಮ ಎಲೆಕ್ಟ್ರಾನಿಕ್ ಸಾಧನ ಸಂಪೂರ್ಣವಾಗಿ ಹಾಳಾಗುವುದರಲ್ಲಿ ಎರಡು ಮಾತಿಲ್ಲ.!!

ಸಂಗ್ರಹ ಸಾಮರ್ಥ್ಯ ನೋಡಿ!

ಸಂಗ್ರಹ ಸಾಮರ್ಥ್ಯ ನೋಡಿ!

ನೀವು ಬಳಸುವ ಯಾವುದೇ ಗ್ಯಾಜೆಟ್‌ನ ಸಂಗ್ರಹ ಸಾಮರ್ಥ್ಯದ ಕಡೆಗೆ ಗಮನಹರಿಸುವುದೂ ಒಳ್ಳೆಯದು. ಅವುಗಳಲ್ಲಿ ಶೇಖರವಾಗಿರುವ ಅನಗತ್ಯವಾದ ಅಂಶಗಳನ್ನು ತೆಗೆದುಹಾಕುವುದು ಉತ್ತಮ.ಇನ್ನು ಯಾವತ್ತೂ ನೋಡದ ಫೈಲ್‌ಗಳನ್ನು ಡಿಲೀಟ್ ಮಾಡಿದರೆ ಇನ್ನೂ ಒಳ್ಳೆಯದು.!!

ಧೂಳು ಹಿಡಿಯದಂತೆ ಎಚ್ಚರ ವಹಿಸಿ!

ಧೂಳು ಹಿಡಿಯದಂತೆ ಎಚ್ಚರ ವಹಿಸಿ!

ಸ್ಮಾರ್ಟ್‌ಫೋನ್ ಸೇರಿ ನೀವು ಬಳಸುವ ಯಾವುದೇ ಸಾಧನದ ಕಡೆಗೆ ಸ್ವಲ್ಪ ಪ್ರೀತಿ ತೋರುವುದು ಉತ್ತಮ. ಕಂಪ್ಯೂಟರ್ ಸ್ಕ್ರೀನ್‌ಗಳನ್ನು ಒದ್ದೆ ಬಟ್ಟೆಯಿಂದ ಒರೆಸುವುದು, ಧೂಳು ಹಿಡಿಯದಂತೆ ಎಚ್ಚರ ವಹಿಸುವುದು ಮುಖ್ಯ. ಈ ರೀತಿಯ ಕೆಲಸಗಳನ್ನು ಕನಿಷ್ಠ ಮೂರು ತಿಂಗಳಿಗೊಮ್ಮೆ ಮಾಡಿದರೆ ಅವುಗಳು ವರ್ಷಗಟ್ಟಲೆ ಉತ್ತಮವಾಗಿ ಕೆಲಸ ಮಾಡುತ್ತವೆ.!!

Best Mobiles in India

English summary
WhatsApp has claimed it shares limited data of payment service with its parent firm Facebook and the social media major does not use the information for commercial purpose.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X