ಬಹುದಿನಗಳ ಸಮಸ್ಯೆಯನ್ನು ಪರಿಹರಿಸಲು ಹೊಸ ಪ್ಲಾನ್‌ ಮಾಡಿದ ವಾಟ್ಸಾಪ್‌!

|

ಮೆಟಾ ಒಡೆತನದ ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಕಾಲಕಾಲಕ್ಕೆ ಅನುಗುಣವಾಗಿ ಹೊಸ ಅಪ್ಡೇಟ್‌ಗಳನ್ನು ನೀಡುತ್ತಲೇ ಬಂದಿದೆ. ಇದೇ ಕಾರಣಕ್ಕೆ ವಾಟ್ಸಾಪ್‌ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಪಡೆದುಕೊಂಡಿದೆ. ಇನ್ನು ವಾಟ್ಸಾಪ್‌ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದಾಗಲೂ ಕೆಲವು ಬಳಕೆದಾರರಿಗೆ ತಿಳಿಯುವುದೇ ಇಲ್ಲ. ಇದರಿಂದ ಕೆಲವೊಮ್ಮ ಬಳಕೆದಾರರು ಗೊಂದಲಕ್ಕೆ ಒಳಗಾಗುವುದು ಕೂಡ ಉಂಟೂ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಕಾಲಕ್ಕೆ ತಕ್ಕಂತೆ ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುತ್ತಲೇ ಬಂದಿದೆ. ಕೆಲವೊಮ್ಮೆ ಈ ಹೊಸ ಫೀಚರ್ಸ್‌ಗಳನ್ನು ಟ್ರ್ಯಾಕ್ ಮಾಡಲು ಸಾದ್ಯವಾಗುವುದೇ ಇಲ್ಲ. ಇದೀಗ ವಾಟ್ಸಾಪ್‌ ಈ ರೀತಿಯ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಮುಂದಾಗಿದೆ. ಇದಕ್ಕಾಗಿಯೇ ವಾಟ್ಸಾಪ್‌ ಹೊಸ ಚಾಟ್‌ಬಾಟ್ ಅನ್ನು ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ. ಈ ಹೊಸ ಚಾಟ್‌ಬಾಟ್‌ ನಿಮ್ಮ ವಾಟ್ಸಾಪ್‌ಗೆ ಹೊಸ ಫೀಚರ್ಸ್‌ ಸೇರ್ಪಡೆ ಆದಾಗ ಮಾಹಿತಿ ನೀಡಲಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಹೊಸ ಚಾಟ್‌ಬಾಟ್‌ ಮೂಲಕ ಯಾವುದೇ ಹೊಸ ಫೀಚರ್ಸ್‌ ಸೇರ್ಪಡೆ ಯಾದರೂ ಮೊದಲಿಗೆ ಮಾಹಿತಿ ನೀಡಲಿದೆ. ಈ ಹೊಸ ಚಾಟ್‌ಬಾಟ್‌ ಇನ್ನಯ ಆರಭೀಕ ಅಭಿವದ್ಧಿಯ ಹಂತದಲ್ಲಿದೆ ಎನ್ನಲಾಗಿದೆ. ಚಾಟ್‌ಬಾಟ್‌ನ ಸಹಾಯದಿಂದ ಹೊಸ ಫೀಚರ್ಸ್‌ ಹಾಗೂ ಅದರ ವಿಶೇಷತೆ ಏನು? ಅದರ ಕಾರ್ಯವೈಖರಿ ಹೇಗಿರಲಿದೆ ಎಂಬೆಲ್ಲಾ ಮಾಹಿತಿಯನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಹಾಗಾದ್ರೆ ವಾಟ್ಸಾಪ್‌ನ ಹೊಸ ಚಾಟ್‌ಬಾಟ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌ನ

ವಾಟ್ಸಾಪ್‌ನ ಹೊಸ ಫೀಚರ್ಸ್‌ಗಳನ್ನು ಟ್ರ್ಯಾಕ್‌ ಮಾಡುವ WABetaInfo ಪ್ರಕಾರ ವಾಟ್ಸಾಪ್‌ ಹೊಸ ಚಾಟ್‌ಬಾಟ್‌ ಪರಿಚಯಿಸಲಿದೆ. ಪ್ರಸ್ತುತ ವಾಟ್ಸಾಪ್‌ನ ಅಧಿಕೃತ ಚಾಟ್‌ಬಾಟ್ ಇನ್ನು ಅಭಿವೃದ್ಧಿಯ ಆರಂಭಿಕ ಹಂತದಲ್ಲಿದೆ ಎನ್ನಲಾಗಿದೆ. ಆದರೆ ವಾಬೇಟಾಇನ್ಫೊ ಹಂಚಿಕೊಂಡ ಸ್ಕ್ರೀನ್‌ಶಾಟ್‌ನಲ್ಲಿ ಹೊಸ ಪರಿಶೀಲಿಸಿದ ಚಾಟ್‌ಬಾಟ್ ಅನ್ನು ಕಾಣಬಹುದಾಗಿದೆ. ಈ ಚಾಟ್‌ಬಾಟ್‌ನ ಸಹಾಯದಿಂದ ಸಂಭಾಷಣೆಯ ಪಟ್ಟಿಯಲ್ಲಿ ಜನರು ಹೊಸ ಫೀಚರ್ಸ್‌ಗಳ ಬಗ್ಗೆ ಮೊದಲು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಅಲ್ಲದೆ ಸಲಹೆಗಳು ಮತ್ತು ತಂತ್ರಗಳನ್ನು ಪಡೆದುಕೊಳ್ಳುತ್ತಾರೆ ಮತ್ತು ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದು ಹೇಳಲಾಗಿದೆ.

ವಾಟ್ಸಾಪ್‌

ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬ್ಯುಸಿನೆಸ್‌ ಅಕೌಂಟ್‌ಗಳನ್ನು ಮಾತ್ರ ಪರಿಶೀಲಿಸುತ್ತದೆ ಎನ್ನಲಾಗಿದೆ. ಆದರೆ ಅವುಗಳಿಗೆ ಭಿನ್ನವಾಗಿ, ಈ ಚಾಟ್‌ಬಾಟ್‌ಗೆ ರಿಪ್ಲೆ ಮಾಡುವುದಕ್ಕೆ ನಿಮಗೆ ಅವಕಾಶವಿಲ್ಲ. ಇದು ಓನ್ಲಿ ರೀಡ್‌ ಅಕೌಂಟ್‌ ಆಗಿದ್ದು, ಆದ್ದರಿಂದ ಯಾವಾಗಲೂ ಏಕಮುಖ ಸಂವಹನ ಇರುತ್ತದೆ. ಅಂದರೆ ಹೊಸ ಚಾಟ್‌ಬಾಟ್‌ನಲ್ಲಿ ನೀವು ಯಾವುದೇ ರೀತಿಯ ರಿಪ್ಲೆ ಮಾಡುವುದಕ್ಕೆ ಅವಕಾಶವಿಲ್ಲ. ಬದಲಿಗೆ ಚಾಟ್‌ಬಾಟ್‌ನಲ್ಲಿ ಬರುವ ಸಂದೇಶಗಳನ್ನು ಮಾತ್ರ ನೀವು ಓದಬಹುದಾಗಿದೆ. ಇತರ ವಿವರಗಳ ಬಗ್ಗೆ ಬಳಕೆದಾರರಿಗೆ ತಿಳಿಸುವುದು ಚಾಟ್‌ಬಾಟ್‌ನ ಉದ್ದೇಶವಾಗಿರುವುದರಿಂದ ರಿಪ್ಲೆ ಮಾಡುವ ಅವಕಾಶ ನೀಡಲಾಗಿಲ್ಲ ಎನ್ನಲಾಗಿದೆ.

ವಾಟ್ಸಾಪ್‌ನ

ಇನ್ನು ವಾಟ್ಸಾಪ್‌ನ ಹೊಸ ಚಾಟ್‌ಬಾಟ್‌ ಚಾಟ್‌ನಲ್ಲಿ ಕಳುಹಿಸಲಾದ ಎಲ್ಲಾ ಸಂದೇಶಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿರುತ್ತವೆ. ರಿಪ್ಲೆ ಮಾಡುವುದಕ್ಕೆ ಅವಕಾಶವಿಲ್ಲದೆ ರುವುದರಿಂದ ಇದರಿಂದ ನಿಮಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಅಲ್ಲದೆ ಸಂದೇಶಗಳು ಒಂದೇ ಬಾರಿಗೆ ಅನೇಕ ಬಳಕೆದಾರರಿಗೆ ಬರುವುದರಿಂದ ಇದು ಯಾವುದೇ ವ್ಯತ್ಯಾಸವನ್ನು ಮಾಡುವುದಿಲ್ಲ. ಒಂದು ವೇಳೆ ನೀವು ವಾಟ್ಸಾಪ್‌ ಚಾಟ್‌ಬಾಟ್‌ನಿಂದ ಸಂದೇಶಗಳನ್ನು ಸ್ವಿಕರಿಸಲು ಬಯಸಿದಿದ್ದರೆ ಚಾಟ್‌ಬಾಟ್‌ ಅಕೌಂಟ್‌ ಅನ್ನು ಬ್ಲಾಕ್‌ ಮಾಡುವುದಕ್ಕೆ ಅವಕಾಶವಿದೆ.

ಬೀಟಾ

ಪ್ರಸ್ತುತ ವಾಟ್ಸಾಪ್‌ನ ಹೊಸ ಚಾಟ್‌ಬಾಟ್‌ ಇನ್ನೂ ಬೀಟಾದಲ್ಲಿದೆ. ಆದ್ದರಿಂದ ಬೀಟಾ ಪ್ರೋಗ್ರಾಂಗೆ ಸೇರಿರುವ ಕೆಲವು ಆಯ್ದ ಬಳಕೆದಾರರಿಗೆ ಇದು ಲಭ್ಯವಾಗಲಿದೆ. ಆದರೆ ವಾಟ್ಸಾಪ್‌ ಇದನ್ನು ಎಲ್ಲಾ ಬಳಕೆದಾರರಿಗೆ ಯಾವಾಗ ಲಭ್ಯವಾಗುವಂತೆ ಮಾಡಲಿದೆ ಅನ್ನೊದು ಇನ್ನು ಬಹಿರಂಗವಾಗಿಲ್ಲ. ಇನ್ನು ವಾಟ್ಸಾಪ್‌ನ ಹೊಸ ಚಾಟ್‌ಬಾಟ್‌ ಫಿಚರ್ಸ್‌ ಈಗಾಗಲೇ ಟೆಲಿಗ್ರಾಮ್‌ ಮತ್ತು ಸಿಗ್ನಲ್‌ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿದೆ. ಇದೇ ಮಾದರಿಯಲ್ಲಿಯೇ ವಾಟ್ಸಾಪ್‌ ಚಾಟ್‌ಬಾಟ್‌ ಕೂಡ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಇತ್ತೀಚಿಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ದಿಷ್ಟ ಜನರನ್ನು ಹೈಡ್‌ ಮಾಡುವ ಅವಕಾಶ ನೀಡಿದೆ. ಅದರಂತೆ ಆನ್‌ಲೈನ್‌ನಲ್ಲಿ ನಿಮ್ಮ ಪ್ರೈವೆಸಿಯನ್ನು ಇನ್ನಷ್ಟು ಸೆಕ್ಯುರ್‌ ಮಾಡುವುದಕ್ಕೆ ವಾಟ್ಸಾಪ್‌ ಮುಂದಾಗಿದೆ. ಇದಕ್ಕಾಗಿ ಹೊಸ ಪ್ರೈವೆಸಿ ಕಂಟ್ರೋಲ್‌ ಸೆಟ್ಟಿಂಗ್‌ಗಳಿಗೆ ಹೊಸ ಆಯ್ಕೆಗಳನ್ನು ಹೊರತರುತ್ತಿದ್ದೇವೆ ಎಂದು ವಾಟ್ಸಾಪ್‌ ಹೇಳಿಕೊಂಡಿದೆ. ಇದರಿಂದ ನೀವು ನಿಮ್ಮ ಕಂಟ್ಯಾಕ್ಟ್‌ ಲಿಸ್ಟ್‌ನಿಂದ ನಿಮ್ಮ ಪ್ರೊಫೈಲ್ ಫೋಟೋ ಮತ್ತು ಲಾಸ್ಟ್‌ ಸೀನ್‌ ಸ್ಟೇಟಸ್‌ ಅನ್ನು ಯಾರು ನೋಡಬಹುದು ಅನ್ನೊದನ್ನ ನೀವು ಆಯ್ಕೆ ಮಾಡಬಹುದು.

ಸ್ಟೇಟಸ್‌

ಪ್ರಸ್ತುತ ವಾಟ್ಸಾಪ್‌ನಲ್ಲಿ ಬಳಕೆದಾರರು ತಮ್ಮ ಲಾಸ್ಟ್‌ ಸೀನ್‌ ಮತ್ತು ಸ್ಟೇಟಸ್‌ ಅನ್ನು ನಿರ್ದಿಷ್ಟ ಜನರಿಂದ ಮರೆಮಾಡುವ ಆಯ್ಕೆಯನ್ನು ಹೊಂದಿರಲಿಲ್ಲ. ಬಳಕೆದಾರರು "ಎಲ್ಲರೂ", "ನನ್ನ ಸಂಪರ್ಕಗಳು" ಮತ್ತು "ಯಾರೂ ಇಲ್ಲ" ಎನ್ನುವ ಮೂರು ಆಯ್ಕೆಗಳನ್ನು ಮಾತ್ರ ಹೊಂದಿದ್ದರು. ಈಗ ಬಳಕೆದಾರರು "ನನ್ನ ಸಂಪರ್ಕಗಳನ್ನು ಹೊರತುಪಡಿಸಿ" ಆಯ್ಕೆಯನ್ನು ಕೂಡ ಹೊಂದಿದ್ದಾರೆ. ಇದರಿಂದ ನೀವು ಬಯಸದ ನಿರ್ಧಿಚ್ಟ ಕಂಟ್ಯಾಕ್ಟ್‌ಗಳನ್ನು ನಿಮ್ಮ ಸ್ಟೇಟಸ್‌ ನೋಡದಂತೆ ತಡೆಯಬಹುದಾಗಿದೆ.

ವಾಟ್ಸಾಪ್‌

ಇದೀಗ ನೀವು ವಾಟ್ಸಾಪ್‌ ಸ್ಟೇಟಸ್‌ ಅನ್ನು ಪೋಸ್ಟ್ ಮಾಡುವ ಮೊದಲು "ಎಲ್ಲರೂ" ಆಯ್ಕೆಯನ್ನು ಆರಿಸಿದರೆ ನೀವು ಲಾಸ್ಟ್‌ ಸೀನ್‌, ಪ್ರೊಫೈಲ್ ಫೋಟೋ ಅಥವಾ ಸ್ಟೇಟಸ್‌ ಅನ್ನು ಎಲ್ಲಾ ವಾಟ್ಸಾಪ್‌ ಬಳಕೆದಾರರು ನೋಡಬಹುದು.ಒಂದು ವೇಳೆ ನೀವು 'ಮೈ ಕಂಟ್ಯಾಕ್ಟ್ಸ್‌' ಅನ್ನು ಆಯ್ಕೆ ಮಾಡಿದರೆ, ನಿಮ್ಮ ಲಾಸ್ಟ್‌ ಸೀನ್‌, ಪ್ರೊಫೈಲ್ ಫೋಟೋ ಅಥವಾ ಸ್ಟೇಟಸ್‌ ಅನ್ನು ನಿಮ್ಮ ಸಂಪರ್ಕಗಳಿಗೆ ಲಭ್ಯವಿರುತ್ತದೆ. ಅದೇ ರೀತಿ, ನೀವು 'ನನ್ನ ಸಂಪರ್ಕಗಳನ್ನು ಹೊರತುಪಡಿಸಿ, ಆಯ್ಕೆ ಮಾಡಿದರೆ ನಿಮ್ಮ ಲಾಸ್ಟ್‌ ಸೀನ್‌, ಪ್ರೊಫೈಲ್ ಫೋಟೋ, ಅಥವಾ ಸ್ಟೇಟಸ್‌ ಅನ್ನು ನಿಮ್ಮ ಕಂಟ್ಯಾಕ್ಟ್‌ ಲಿಸ್ಟ್‌ನಲ್ಲಿರುವ ಸಂಪರ್ಕಗಳಿಗೆ ಮಾತ್ರ ಲಭ್ಯವಿರುತ್ತದೆ. ಒಂದು ವೇಳೆ ನೀವು 'ಯಾರೂ ಇಲ್ಲ' ಆಯ್ಕೆ ಮಾಡಿದರೆ, ನಿಮ್ಮ ಲಾಸ್ಟ್‌ ಸೀನ್‌, ಪ್ರೊಫೈಲ್ ಫೋಟೋ, ಅಥವಾ ಸ್ಟೇಟಸ್‌ ಯಾರಿಗೂ ಕೂಡ ಕಾಣಿಸುವುದಿಲ್ಲ.

Best Mobiles in India

English summary
WhatsApp testing a new chatbot that will inform you every time a new feature: report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X