ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿರುವ ಈ ಫೀಚರ್‌ ಬಳಕೆದಾರರಿಗೆ ಅತ್ಯಂತ ಉಪಯುಕ್ತ ಎನಿಸಲಿದೆ!

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ಹೊಸ ಫೀಚರ್ಸ್‌ಗಳನ್ನುಪರಿಚಯಿಸುತ್ತಾ ಬಂದಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ಫೀಚರ್ಸ್‌ಗಳನ್ನು ಕಾಲಕಾಲಕ್ಕೆ ಅಪ್ಡೇಟ್‌ ಮಾಡುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಆನ್‌ಲೈನ್‌ ಸ್ಟೇಟಸ್‌ಗೆ ಸಂಬಂಧಿಸಿದ ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಈ ಹೊಸ ಫೀಚರ್‌ ಬಳಕೆದಾರರು ತಮ್ಮ ಆನ್‌ಲೈನ್ ಸ್ಟೇಟಸ್‌ ಅನ್ನು ಇತರರಿಂದ ಹೈಡ್‌ ಮಾಡಲು ಅನುಮತಿಸಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬಳಕೆದಾರರಿಗೆ ಆನ್‌ಲೈನ್‌ ಸ್ಟೇಟಸ್‌ ಹೈಡ್‌ ಮಾಡುವುದಕ್ಕೆ ಹೊಸ ಫೀಚರ್‌ ಪರಿಚಯಿಸಲು ಮುಂದಾಗಿದೆ. ಇದರಿಂದ ನೀವು ಯಾರಿಂದ ನಿಮ್ಮ ಆನ್‌ಲೈನ್‌ ಸ್ಟೇಟಸ್‌ ಮರೆ ಮಾಡಲು ಬಯಸುತ್ತಿರೋ ಅವರಿಗೆ ಮಾತ್ರ ನಿಮ್ಮ ಆನ್‌ಲೈನ್‌ ಸ್ಟೇಟಸ್‌ ಹೈಡ್‌ ಆಗಲಿದೆ. ನೀವು ಹೈಡ್‌ ಮಾಡದ ಕಂಟ್ಯಾಕ್ಟ್‌ಗಳಿಗೆ ನಿಮ್ಮ ಆನ್‌ಲೈನ್‌ ಸ್ಟೇಟಸ್‌ ಅನ್ನು ನೋಡುವುದಕ್ಕೆ ಸಾದ್ಯವಾಗಲಿದೆ. ಹಾಗಾದ್ರೆ ವಾಟ್ಸಾಪ್‌ ಪರಿಚಯಿಸಲಿರುವ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಹೊಸದಾಗಿ ಆನ್‌ಲೈನ್‌ ಸ್ಟೇಟಸ್‌ ಹೈಡ್‌ ಮಾಡುವ ಆಯ್ಕೆ ನೀಡಲು ಮುಂದಾಗಿದೆ. ಈ ಆಯ್ಕೆಯನ್ನು ಗೂಗಲ್‌ ಪ್ಲೇ ಬೀಟಾ ಪ್ರೋಗ್ರಾಂಗೆ ಸೈನ್ ಅಪ್ ಮಾಡಿದ ಮತ್ತು ಆಂಡ್ರಾಯ್ಡ್‌ 2,22,20.9 ಬೀಟಾಗೆ ಅಪ್ಡೇಟ್‌ ಮಾಡಿದ ಬಳಕೆದಾರರಿಗೆ ಇದು ಲಭ್ಯವಿದೆ. ಇನ್ನು ಈ ಹೊಸ ಫೀಚರ್ಸ್‌ ಅನ್ನು ನೋಡುವುದಕ್ಕೆ ಬೀಟಾ ಪ್ರೋಗ್ರಾಂ ಬಳಕೆದಾರರು ವಾಟ್ಸಾಪ್‌ ಸೆಟ್ಟಿಂಗ್ಸ್‌ ತೆರೆದು 'ಅಕೌಂಟ್‌' ಅಡಿಯಲ್ಲಿ 'ಪ್ರೈವೆಸಿ' ವಿಭಾಗಕ್ಕೆ ಹೋಗಬೇಕಾಗುತ್ತದೆ. ಇದರಲ್ಲಿ 'ಲಾಸ್ಟ್ ಸೀನ್ ಅಂಡ್ ಆನ್‌ಲೈನ್' ಆಯ್ಕೆಯನ್ನು ಪರಿಶೀಲಿಸಬೇಕಾಗುತ್ತದೆ.

ಎವೆರಿವನ್‌

ಇನ್ನು ಲಾಸ್ಟ್‌ ಸೀನ್‌ ಆಂಡ್‌ ಆನ್‌ಲೈನ್‌ ಫೀಚರ್‌ನಲ್ಲಿ ಬಳಕೆದಾರರಿಗೆ ಎರಡು ಆಯ್ಕೆಗಳನ್ನು ನೀಡಲಾಗಿದೆ. ಇವುಗಳನ್ನು ‘ಎವೆರಿವನ್‌' ಮತ್ತು 'ಸೇಮ್ ಅಸ ಲಾಸ್ಟ್ ಸೀನ್' ಎಂದು ಹೆಸರಿಸಲಾಗಿದೆ. ಎವೆರಿವನ್‌ ಆಯ್ಕೆಯ ಮೂಲಕ ನೀವು ಆನ್‌ಲೈನ್‌ನಲ್ಲಿ ಇದ್ದೀರಾ ಇಲ್ಲವೆ ಅನ್ನೊದನ್ನ ಎಲ್ಲರೂ ಕೂಡ ನೋಡಬಹುದು. ಆದರೆ ಎರಡನೆಯ ಆಯ್ಕೆಯಲ್ಲಿ ನೀವು ಆನ್‌ಲೈನ್‌ನಲ್ಲಿದ್ದೀರಾ ಎಂದು ಕೊನೆಯದಾಗಿ ನೋಡಿರುವವರನ್ನು ಮಾತ್ರ ನೋಡಲು ಸಾಧ್ಯವಾಗುತ್ತದೆ.

ವಾಟ್ಸಾಪ್

ವಾಟ್ಸಾಪ್ ಪ್ರಸ್ತುತ ಈ ಫೀಚರ್‌ ಅನ್ನು ಬೀಟಾ ವರ್ಷನ್‌ನಲ್ಲಿ ಮಾತ್ರ ಪರೀಕ್ಷಿಸುತ್ತಿದೆ. ಇದು ಬಳಕೆದಾರರಿಗೆ ಉಪಯೋಗಿಸುವುದಕ್ಕೆ ಸೂಕ್ತವಾಗಿದೆ ಎಂದು ಪರೀಕ್ಷೆಯಲ್ಲಿ ತಿಳಿದು ಬಂದರೆ ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಭ್ಯವಾಗಲಿದೆ. ಸದ್ಯ ಇತರ ಬೀಟಾ ಪರೀಕ್ಷಕರಿಗೆ ಈ ಅಪ್ಡೇಟ್‌ ಅನ್ನು ಯಾವಾಗ ಪರಿಚಯಿಸಲಾಗುತ್ತದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನು ಇದಲ್ಲದೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ ಹಲವು ಪ್ರಮುಖ ಫೀಚರ್ಸ್‌ಗಳನ್ನು ಪರಿಚಯಿಸಲು ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಕೆಲವು ಪ್ರಮುಖ ಫೀಚರ್ಸ್‌ಗಳ ವಿಶೇಷ ಇಲ್ಲಿದೆ.

ಕೆಪ್ಟ್‌ ಮೆಸೇಜಸ್‌

ಕೆಪ್ಟ್‌ ಮೆಸೇಜಸ್‌

ಇನ್ನು ವಾಟ್ಸಾಪ್‌ ಪರೀಕ್ಷಿಸುತ್ತಿರುವ ಪ್ರಮುಖ ಫೀಚರ್‌ಗಳಲ್ಲಿ ಕೆಪ್ಟ್‌ ಮೆಸೇಜಸ್‌ ಎನ್ನುವ ಫೀಚರ್‌ ಕೂಡ ಸೇರಿದೆ. ಇದರಿಂದ ಡಿಸ್‌ಅಪಿಯರಿಂಗ್‌ ಮೆಸೇಜಸ್‌ ಫೀಚರ್‌ ಬಳಸುವವರಿಗೆ ಸಾಕಷ್ಟು ಅನುಕೂಲವಾಗಲಿದೆ ಎನ್ನಲಾಗಿದೆ. ಈ ಫೀಚರ್‌ ಮೂಲಕ ನೀವು ಡಿಸ್‌ಅಪಿಯರಿಂಗ್‌ ಸಂದೇಶಗಳನ್ನು ಕೂಡ ಉಳಿಸಿಕೊಳ್ಳುವುದಕ್ಕೆ ಸಾದ್ಯವಾಗಲಿದೆ ಎಂದು ವರದಿಯಾಗಿದೆ. ಡಿಸ್‌ಅಪಿಯರಿಂಗ್‌ ಆಕ್ಟಿವ್ ಇದ್ದಾಗಲೂ ಕೆಲವು ಸಂದೇಶಗಳನ್ನು ಉಳಿಸಿಕೊಳ್ಳಲು ಬಯಸಿದರೆ ಏನು ಮಾಡೋದು? ಇದಕ್ಕೆ ಪರಿಹಾರ ನೀಡುವುದಕ್ಕಾಗಿಯೇ ವಾಟ್ಸಾಪ್‌ ಕೆಪ್ಟ್‌ ಮೆಸೇಜಸ್‌ ಫೀಚರ್‌ ಪರಿಚಯಿಸಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಚಾಟ್ ಬಾಕ್ಸ್‌ನ ಮೇಲ್ಭಾಗದಲ್ಲಿ ಈ ಹೊಸ ಐಕಾನ್ ಲಭ್ಯವಾಗಲಿದೆ. ನೀವು ಮೆಸೇಜ್‌ ಅನ್ನು ಲಾಂಗ್‌ ಪ್ರೆಸ್‌ ಮಾಡಿದರೆ ಮಾತ್ರ ಈ ಆಯ್ಕೆ ಕಾಣಲಿದೆ. ಆಗ ಈ ಆಯ್ಕೆಯನ್ನು ಬಳಸಿಕೊಂಡು ಒಬ್ಬರು ಚಾಟ್‌ಗಳನ್ನು ಇರಿಸಿಕೊಳ್ಳಲು ಅಥವಾ ತೆಗೆದುಹಾಕಲು ಸಾಧ್ಯವಾಗುತ್ತದೆ. ಆದರೆ ಡಿಸ್‌ಅಪಿಯರಿಂಗ್‌ ಚಾಟ್‌ಗಳನ್ನು ಉಳಿಸಲು ಬಳಕೆದಾರರು ಕೇವಲ ಒಂದು ಅವಕಾಶವನ್ನು ಮಾತ್ರ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.

ವಾಟ್ಸಾಪ್‌

ಈ ಹೊಸ ಫೀಚರ್‌ ಆಂಡ್ರಾಯ್ಡ್ 2.22.20.3 ಆವೃತ್ತಿಯ ವಾಟ್ಸಾಪ್‌ ಬೀಟಾ ಅಪ್‌ಡೇಟ್‌ನಲ್ಲಿ ಕಾಣಿಸಿಕೊಂಡಿದೆ. ಇದು ಯಾವಾಗ ರೂಲ್‌ಔಟ್‌ ಆಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಪ್ರಸ್ತುತ ಇದು ಇನ್ನು ಕೂಡ ಅಭಿವೃದ್ದಿ ಹಂತದಲ್ಲಿದೆ. ಇದನ್ನು ಪರೀಕ್ಷೆ ಮಾಡುವುದಕ್ಕಾಗಿ ಇದನ್ನು ಮೊದಲು ಬೀಟಾ ಪರೀಕ್ಷಕರಿಗೆ ಬಿಡುಗಡೆ ಮಾಡಲಾಗುತ್ತದೆ. ಒಮ್ಮೆ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಿದ ನಂತರ, ಈ ಫೀಚರ್‌ ಅಪ್ಲಿಕೇಶನ್‌ನ ಸ್ಥಿರ ಆವೃತ್ತಿಯಲ್ಲಿ ಬರುತ್ತದೆ ಎಂದು ಹೇಳಲಾಗಿದೆ.

Best Mobiles in India

English summary
WhatsApp testing a new feature that will let users hide their online status: Report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X